Rakshit Shetty: ಸಪ್ತ ಸಾಗರದಾಚೆ ಎಲ್ಲೋ ಸೈಡ್ B: ಫೇಸ್‌ಬುಕ್ ಗೋಡೆಮೇಲೆ ಮೂಡಿದ ಪಾಸಿಟಿವ್ ಬರಹಗಳು
Nov 18, 2023 09:11 AM IST
Rakshit Shetty: ಸಪ್ತಸಾಗರದಾಚೆ ಎಲ್ಲೋ ಸೈಡ್ B: ಫೇಸ್‌ಬುಕ್ ಗೋಡೆಮೇಲೆ ಹೀಗೊಂದಿಷ್ಟು ಪಾಸಿಟಿವ್ ಬರಹಗಳು
- ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ಬಿಡುಗಡೆ ಆಗಿದೆ. ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್ ರಾವ್ ಅವರ ಈ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡಿದವರು ತಮ್ಮದೇ ಶೈಲಿಯಲ್ಲಿ ಸಿನಿಮಾ ವರ್ಣಿಸುತ್ತಿದ್ದಾರೆ.
Sapta Sagaradaache Ello Side B: ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ಮಾಣದ ಸಪ್ತ ಸಾಗರದಾಚೆ ಎಲ್ಲೋ ಸೈಟ್ ಬಿ ಸಿನಿಮಾ ನ. 17ರಂದು ಕನ್ನಡದ ಜತೆಗೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ನೀಲಿ ಎಳೆಯ ಗುಂಗಿನಲ್ಲಿದ್ದ ನೋಡುಗನಿಗೆ ಕಡುಗೆಂಪು ವರ್ಣದ ಮತ್ತೊಂದು ಮಗ್ಗುಲನ್ನು ಪರಿಚಯಿಸಿದ್ದಾರೆ ನಿರ್ದೇಶಕರು. ಮೊದಲ ಭಾಗದಲ್ಲಿ ಕಂಡ ಪ್ರೀತಿಯಲ್ಲಿನ ತೀವ್ರತೆ, ಎರಡನೇ ಭಾಗದಲ್ಲಿ ಗೋಚರಿಸುವ ರೌದ್ರತೆ, ನೋಡುಗನನ್ನು ಕೊಂಚ ವಿಚಲಿತರನ್ನಾಗಿ ಮಾಡಿದರೂ, ಹೊಸತನದಿಂದ ಕೂಡಿದ ಮೇಕಿಂಗ್ ನೋಡಿಸಿಕೊಂಡು ಹೋಗುತ್ತದೆ.
ನಿರ್ದೇಶಕ ಹೇಮಂತ್ ಎಂ. ರಾವ್ ಅವರ ಈ ಕಲಾಕೃತಿಗೆ ಸಿನಿಮಾ ಪ್ರೇಕ್ಷಕ ಮಾರುಹೋಗಿದ್ದಾನೆ. ಸೋಷಿಯಲ್ ಮೀಡಿಯಾ ವೇದಿಕೆಯ ಗೋಡೆಗಳ ಮೇಲೆ ತರಹೇವಾರಿ ಪದಗುಚ್ಛಗಳಿಂದ ಚಿತ್ರವನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಈ ರೀತಿಯ ಸಿನಿಮಾ ನಾನು ಹಿಂದೆಂದೂ ನೋಡಿಲ್ಲ ಎಂದರೆ, ಇನ್ನು ಕೆಲವರು ಎರಡೂ ಸಿನಿಮಾಗಳನ್ನೂ ಒಂದೇ ಪಾರ್ಟ್‌ನಲ್ಲಿ ರಿಲೀಸ್ ಮಾಡಿದ್ದರೆ, ಅದೊಂದು ಶಾಶ್ವತ ದಾಖಲೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಹೀಗಿವೆ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ಕುರಿತ ಆಯ್ದ ಕೆಲವು ಫೇಸ್‌ಬುಕ್ ಬರಹಗಳು.
- ಭಾವ ತೀವ್ರತೆಯ ಯಾನ
ಸಪ್ತ ಸಾಗರದಾಚೆ ಎಲ್ಲೋ .. Side B ನೋಡಿದ ನಂತರ ನಂಗೆ ಅನ್ಸಿದ್ದು.. ಹೇಮಂತ್ ರಾವ್ side A and Side B ಎರಡು ಸಿನಿಮಾವನ್ನು ಒಂದು ಸಿನಿಮಾ ಮಾಡಿದ್ರೆ ನಿಜಕ್ಕೂ ಇದೊಂದು ಎಲ್ಲಾ ಕಾಲದಲ್ಲಿಯೂ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಸಿನಿಮಾ ಆಗಿರ್ತಿತ್ತು.
Side A ಅಲ್ಲಿ ಪ್ರೀತಿಸುವ ತೀವ್ರತೆ ಮತ್ತು Side B ಅಲ್ಲಿ ಭಗ್ನತೆಯ ತೀವ್ರತೆ ಈ ಎರಡೂ ಭಾವನೆಗಳು ನಮ್ಮ ಮನಸ್ಸನ್ನು ಕದಡಿಸುತ್ತದೆ. ಸಿನಿಮಾ crisp ಆಗಿರ್ಬೇಕಿತ್ತು ಅಂತ ಎರಡು ಭಾಗ ನೋಡಿದಾಗಲೂ ಅನ್ನಿಸಿತ್ತು. ನೀಲಿಯ ಶಾಂತತೆ ಮತ್ತು ಕೆಂಪುವಿನ ಭಾವೋದ್ರಿಕ್ತತೆಯನ್ನು ನಿರ್ದೇಶಕರಾದ ಹೇಮಂತ್ ತುಂಬಾ ಅದ್ಭುತವಾಗಿ ತೋರಿಸಿದ್ದಾರೆ.
Side A ನೋಡಿದಾಗ ರಕ್ಷಿತ್ ಶೆಟ್ಟಿ ಅವರ ಅಭಿನಯ ಇಷ್ಟ ಆಗಿತ್ತು. Side B ಅಲ್ಲಿ ರಕ್ಷಿತ್ ಆ ಪಾತ್ರವನ್ನು ನಿಭಾಯಿಸಿರೋದು ನೋಡಿ ಖುಷಿ ಆಯ್ತು. ಚೈತ್ರಾ (ಸುರಭಿ) ಅವರು icing on the cake. ಎಲ್ಲೋ ನಮ್ಮವರೆ ಅವರ ಜೀವನದಲ್ಲಿ ಆದ ಕತೆಯನ್ನು ಹೇಳ್ತಿದ್ದಾರೆ ಅನ್ನೋ ಅಷ್ಟು ನೈಜವಾಗಿತ್ತು ಎಲ್ಲರ ಅಭಿನಯ..
ಪರಿಸ್ಥಿತಿಯ ಕಾರಣದಿಂದಲೋ ಅಥವಾ ಯಾವುದೋ ಕಾರಣಕ್ಕೋ ಪ್ರೀತಿ ಕಳೆದುಕೊಂಡು, ಬದುಕಿನಲ್ಲಿ ಬಹಳಷ್ಟು ದೂರ ಬಂದಿರೋ ಹುಡುಗರು Side B ನೋಡಿದ ಮೇಲೆ ಒಂದು ಸರಿ 'ನನ್ನ ಹುಡುಗಿ ಖುಷಿಯಾಗಿ ಬದುಕ್ತಿದ್ದಾಳಾ ಅನ್ನೋದನ್ನು ನೋಡ್ಬೇಕು' ಅಂತ ಅನ್ನಿಸೋದಂತೂ ಗ್ಯಾರಂಟಿ.
- ಯೋಗಿತಾ ಆರ್‌ಜೆ
- ಇಲ್ಯಾರು ನಟಿಸಿಲ್ಲ, ಜೀವಿಸಿದ್ದಾರೆ..
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ಬಂದೆ ಉತ್ತಮ ಪ್ರಯತ್ನ ನೋಡಬಹುದು. ಸೈಡ್ ಎ ನೋಡಿದವರಿಗೆ ಮಾತ್ರ ಅರ್ಥವಾಗುತ್ತೆ ಸೈಡ್ ಬಿ (ಅಮೆಜಾನ್ ಪ್ರೈಂನಲ್ಲಿ) ಫಸ್ಟ್ ಪಾರ್ಟ್ ನೋಡಿ ಹೋಗಿ
ಸೈಡ್ ಎ ನಲ್ಲಿದ್ದ ನೀಲಿ ಬಣ್ಣ ಹಾಗೂ ಆ ಸಾಕಷ್ಟು ಮುಗ್ದತೆಗಳು ಇಲ್ಲಿ ಇರಲಿಲ್ಲ, ಸೈಡ್ ಬಿ ಸ್ವಲ್ಪ ಮುಗ್ದತೆಯ ಜೊತೆಗೆ ಹೊಡಿ ಬಡಿ, ರಕ್ತಸಿಕ್ತವಾಗಿದೆ... ಮೊದಲಾರ್ಧ ಅಲ್ಲಲ್ಲಿ ಕೊಂಚ ಸ್ಲೋ ಅನಿಸಿತು.. ಆದರೆ ಕೊಟ್ಟ ಕಾಸಿಗೆ ಮೋಸ ಇಲ್ಲದ ಸಿನಿಮಾ
ಈ ಸಿನಿಮಾ ನೋಡಿದ ಮೇಲೆ ಈ ಚಿತ್ರದ ನಿರ್ದೇಶಕರ ಮೇಲೆ ಅಭಿಮಾನ ಜಾಸ್ತಿಯಾಯ್ತು... ರುಟೀನ್ ಪ್ಯಾಟರ್ನಿಗಿಂತ ಸಾಕಷ್ಟು ವಿಭಿನ್ನ ರೀತಿಯ ನರೇಶನ್, ಡೈರೆಕ್ಷನ್, ಡೈಲಾಗ್ ಡೆಲಿವರಿ, ನಟನಾ ಶೈಲಿ ಸೈಡ್ ಎ ನಲ್ಲೂ ಇತ್ತು ಇಲ್ಲಿಯೂ ಕಾಣ ಸಿಕ್ಕಿತು..
ಸೈಡ್ ಎ ತರಹ ಮನಸ್ಸಲ್ಲಿ ಉಳಿಯುವ ಹಾಡುಗಳು ಇರಲಿಲ್ಲ... ಆದರೆ ಬಿಜಿಎಂ ಮತ್ತಯ ಎಡಿಟಿಂಗ್ ಸಖತ್ತಾಗಿದೆ. ರಕ್ಷಿತ್, ರುಕ್ಮಿಣಿ, ಚೈತ್ರ, ಗೋಪಾಲ್ ದೇಶ್ಪಾಂಡೆ, ರಮೇಶ್ ಇಂದಿರಾ , ಜೆಪಿ ತುಮಿನಾಡು ನಟಿಸಿಲ್ಲ ಇಲ್ಲಿ ಜೀವಿಸಿದ್ದಾರೆ.
ಪ್ರೀತಿಯಲ್ಲಿ ಇರುವವರು, ಪ್ರೀತಿ ಕೈ ತಪ್ಪಿರುವವರು , ಪ್ರೀತಿಸಬೇಕೆಂದು ಕಾಯುತ್ತಿರುವವರು ಈ ಸಿನಿಮಾ ಒಮ್ಮೆ ನೋಡಿ ಇಷ್ಟವಾಗಬಹುದು
-ಸೂರಜ್ ಮಂಗಳೂರು
- ಶಾಶ್ವತ ಕಾಡುವ ಸಿನಿಮಾ
'ನನ್ನ ಪ್ರಕಾರ' ಇದು ಕನ್ನಡ ಸಿನಿಲೋಕದಲ್ಲಿ ಶಾಶ್ವತವಾಗಿ ಕಾಡುವಂತಹ ಸಿನಿಮಾ. ಪ್ರೀತಿ ಅಂದ್ರೆ ನನ್ನ ದೃಷ್ಟಿಕೋನದಲ್ಲಿ ಏನಿತ್ತೋ ಅದೇ ಈ ಸಪ್ತ ಸಾಗರದಾಚೆ ಎಲ್ಲೋ !
-ಪ್ರತಾಪ್
- ಕತ್ತೆ/ ಲೋಫರ್, ನೀಲಿ/ಕೆಂಪು, ಕಡಲು/??
ಇಂತದ್ದೆ ಹಲವು ವ್ಯತ್ಯಾಸಗಳನ್ನು ನೀವು ಸೆಕೆಂಡ್ ಬಿ ನಲ್ಲಿ ಕಾಣ್ತಾ ಹೋಗ್ಬೋದು. ಒಬ್ಬ ಮನುಷ್ಯ ಲೈಫಲ್ಲಿ ಒಮ್ಮೆ ಆಳವಾಗಿ ಪ್ರೀತೀಲಿ ಬಿದ್ದು ಆ ಪ್ರೀತಿ ಸಿಗ್ದೆ ಹೋದ್ರೆ ಮುಂಬರುವ ಎಲ್ಲಾ ಹೃದಯಗಳಲ್ಲೂ ಆ ವ್ಯಕ್ತಿತ್ವವನ್ನೇ ಹುಡುಕುತ್ತಾ ಹೋಗುತ್ತಾನೆ. ಈ ನೆನಪು ಅನ್ನೋದು ಮನುಷ್ಯನ ವಾಸ್ತವವನ್ನು ಹೇಗೆ ಕಿತ್ತು ತಿಂತಾವೆ? ಅನ್ನೋದಕ್ಕೆ ಮನು ಬೆಸ್ಟ್ ಎಕ್ಸಾಂಪಲ್.
ಪ್ರೀತಿ ಸಿಗಲಿಲ್ಲ ಅಂತಾನೊ? ಇಲ್ಲ ನಾನು ಪ್ರೀತ್ಸೋಳು ಮತ್ತೊಬ್ಬನ ಪಾಲು ಆಗ್ಬಾರ್ದು ಅಂತಾನೊ ಆಸಿಡ್ ದಾಳಿ ಮಾಡೋ, ಹೆಣ್ಣಿನ ಚಾರಿತ್ರ್ಯವಧೆ ಮಾಡೋ ಕೀಳು ಮನಸ್ಥಿತಿಯ ಹುಡುಗರಿಗೆ ಈ ಸಿನೆಮಾದಲ್ಲಿನ ಮನು ಪಾತ್ರ ಸ್ಪೂರ್ತಿದಾಯಕ!
ಪುಟ್ಟಿಯ ಅದೇ ಮುಗ್ಧ ಭಾವಗಳು ಮುಂದುವರಿಯುತ್ತವೆ, ಪ್ರಾರಂಭದಲ್ಲೆ ಮನು ಜೀವನಕ್ಕೆ ಕಾಲಿಡೋ ಸುರಭಿ ತನ್ನ ನೇರಮಾತುಗಳಿಂದ, ನೋಟದ ನಶೆಯಿಂದ ಪ್ರೇಕ್ಷಕರ ಮನಸ್ಸು ಕದಿತಾರೆ. ಪುಟ್ಟಿ ಜಾಗವನ್ನು ಸುರಭಿ fulfill ಮಾಡ್ತಾರಾ? ಅನ್ನೋದೆ ಯಕ್ಷಪ್ರಶ್ನೆ.
ಅಸಲಿ ಕಥೆಯನ್ನು ದಯವಿಟ್ಟು ಥಿಯೇಟರ್ ಗೆ ಹೋಗಿ ನೋಡಿ. ಖಳನಾಯಕ ರಮೇಶ್ ಇಂದಿರಾ ವಜ್ರಮುನಿಯವರನ್ನು ನೆನಪು ಮಾಡಿದ್ರು. ಕ್ಲೈಮ್ಯಾಕ್ಸ್ ಅಂತಾ ಸ್ಪೆಷಲ್ ಅನಿಸಲಿಲ್ಲ. ಕನ್‌ಕ್ಲೂಷನ್ ಕೊಡುವ ಬದಲು ಕನ್‌ಫ್ಯೂಸ್ ಮಾಡ್ತಾರೆ. ಆಮೇಲೆ ನಿಧಾನವಾಗಿ ರಿಯಲೈಸ್ ಆಗುತ್ತೆ. ಫಸ್ಟ್ ಡೇ, ಸೆಕೆಂಡ್ ಶೋ! ಇಡೀ #ಸಪ್ತಸಾಗರದಾಚೆಎಲ್ಲೋ ಟೀಮ್ ಗೆ ಅಭಿನಂದನೆಗಳು.