logo
ಕನ್ನಡ ಸುದ್ದಿ  /  ಮನರಂಜನೆ  /  ರೇಣುಕಾಸ್ವಾಮಿ ಕೊಲೆ ಪ್ರಕರಣ: ಗುಪ್ತಾಂಗದ ಫೋಟೋ ಕಳುಹಿಸಿದ ಸಂಗತಿ ದರ್ಶನ್‌ಗೆ ಹೇಳಬೇಡ ಅಂದಿದ್ರಂತೆ ಪವಿತ್ರಾ ಗೌಡ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಗುಪ್ತಾಂಗದ ಫೋಟೋ ಕಳುಹಿಸಿದ ಸಂಗತಿ ದರ್ಶನ್‌ಗೆ ಹೇಳಬೇಡ ಅಂದಿದ್ರಂತೆ ಪವಿತ್ರಾ ಗೌಡ

Praveen Chandra B HT Kannada

Jun 12, 2024 10:48 AM IST

google News

ರೇಣುಕಾಸ್ವಾಮಿ ಕೊಲೆ ಪ್ರಕರಣ

    • Renuka Swamy Chitradurga Murder Case: ರೇಣುಕಾಸ್ವಾಮಿ ಹಲವು ಸಮಯದಿಂದ ಪವಿತ್ರಾ ಗೌಡರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಈ ವಿಚಾರವನ್ನು ಮನೆಯ ಕೆಲಸಗಾರ ಪವನ್‌ಗೆ ಪವಿತ್ರಾ ಗೌಡ ತಿಳಿಸಿದ್ದರಂತೆ. ಈ ವಿಚಾರ ಪವನ್‌ ಮೂಲಕ ದರ್ಶನ್‌ಗೆ ತಿಳಿದು ಈ ಎಲ್ಲಾ ಘಟನೆಗಳಿಗೆ ಕಾರಣವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ
ರೇಣುಕಾಸ್ವಾಮಿ ಕೊಲೆ ಪ್ರಕರಣ (instagram\ pavithra_gowda_7 (All Photos))

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ವಿವಿಧ ಮೂಲಗಳನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿದ ಪ್ರಕಾರ ರೇಣುಕಾಸ್ವಾಮಿ ಹಲವು ಸಮಯದಿಂದ ಪವಿತ್ರಾ ಗೌಡರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಇತ್ತೀಚೆಗೆ ತನ್ನ ಗುಪ್ತಾಂಗದ ಫೋಟೋ ಕಳುಹಿಸಿ "ದರ್ಶನ್‌ಗಿಂತ ನಾನೇನೂ ಕಮ್ಮಿ" ಎನ್ನುವ ಅರ್ಥದಲ್ಲಿ ಎಂದು ಸಂದೇಶ ಕಳುಹಿಸಿದ್ದ ಎಂದು ವರದಿಗಳು ತಿಳಿಸಿವೆ.

ತನ್ನ ಸೋಷಿಯಲ್‌ ಮೀಡಿಯಾಕ್ಕೆ ಬರುತ್ತಿರುವ ಇಂತಹ ಸಂದೇಶಗಳನ್ನು ಆರಂಭದಲ್ಲಿ ಪವಿತ್ರಾ ಗೌಡ ಕಡೆಗಣಿಸಿದ್ದರಂತೆ. ಆದರೆ, ಇದು ವಿಪರೀತವಾದಾಗ ತನ್ನ ಮನೆ ಕೆಲಸ ಮಾಡುವ ಪವನ್‌ಗೆ ಮಾಹಿತಿ ನೀಡಿದ್ದಾರಂತೆ. ಈ ರೀತಿ ನನ್ನ ಅಕೌಂಟ್‌ಗೆ ಮೆಸೆಜ್‌ ಬರ್ತಿದೆ ಎಂಬ ವಿವರ ನೀಡಿದ್ರಂತೆ. ಈ ವಿಚಾರ ತಪ್ಪಿಯೂ ದರ್ಶನ್‌ಗೆ ಹೇಳಬೇಡ, ದರ್ಶನ್‌ಗೆ ಗೊತ್ತಾದ್ದಾರೆ ಅವರು ಸುಮ್ಮನಿರುವುದಿಲ್ಲ ಎಂದಿದ್ರಂತೆ. ಆದರೂ, ಈ ವಿಚಾರವನ್ನು ದರ್ಶನ್‌ ಗಮನಕ್ಕೆ ಪವನ್‌ ತಂದಿದ್ದಾನೆ. ಈ ವಿಚಾರ ನಾವು ನೋಡಿಕೊಳ್ಳುತ್ತೇವೆ ಎಂದು ದರ್ಶನ್‌ಗೆ ಪವನ್‌ ಹೇಳಿದ್ದ ಎಂದು ವರದಿಗಳು ಹೇಳಿವೆ.

ಹತ್ಯೆಗೀಡಾದ ರೇಣುಕಾ ಸ್ವಾಮಿ ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಲು ಆರಂಭಿಸಿದ್ದನಂತೆ. ಆತನ ಅಕೌಂಟ್‌ ಬ್ಲಾಕ್‌ ಮಾಡಿದರೂ ಹೊಸ ಖಾತೆ ತೆರೆದು ಮತ್ತೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಆರಂಭಿಸಿದನಂತೆ. ಕಳೆದ ಶುಕ್ರವಾರ ತನ್ನ ಮರ್ಮಾಂಗದ ಫೋಟೋವನ್ನು ಕಳುಹಿಸಿದ್ದನಂತೆ. ಅಷ್ಟು ಮಾತ್ರವಲ್ಲದೆ ದರ್ಶನ್‌ಗಿಂತ ನಾನೂ ಕಡಿಮೆ ಇಲ್ಲ, ಬಾ ಎಂದೆಲ್ಲ ಸಂದೇಶ ಕಳುಹಿಸಿದ್ದನಂತೆ. ಇಂತಹ ಸಂದೇಶ, ಫೋಟೋಗಳಿಂದ ಪವಿತ್ರಾ ಗೌಡ ಕೋಪಗೊಂಡಿದ್ದರು ಎನ್ನಲಾಗಿದೆ.

ಈ ರೀತಿ ಒಬ್ಬ ಅಶ್ಲೀಲವಾಗಿ ಮೆಸೆಜ್‌, ಫೋಟೋಗಳನ್ನು ಕಳುಹಿಸುತ್ತಾ ಇದ್ದಾನೆ ಎಂದು ತನ್ನ ಮನೆಯ ಕೆಲಸಗಾರ ಪವನ್‌ಗೆ ಪವಿತ್ರಾ ಗೌಡ ಹೇಳಿದ್ದಾರಂತೆ. ಈ ವಿಚಾರವನ್ನು ದರ್ಶನ್‌ ಗಮನಕ್ಕೆ ತರುವುದು ಬೇಡ. ಅವರಿಗೆ ಗೊತ್ತಾದರೆ ಸುಮ್ಮನೆ ಬಿಡಲಾರರು ಎಂದಿದ್ರಂತೆ. ಆದರೂ, ಪವನ್‌ ಈ ವಿಚಾರವನ್ನು ದರ್ಶನ್‌ ಗಮನಕ್ಕೆ ತಂದಿದ್ದಾನೆ. 

ಈ ರೀತಿ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿ ಯಾರು? ಆತನ ಹಿನ್ನೆಲೆ ಏನು ಎಂದೆಲ್ಲ ಹುಡುಕಲು ಆರಂಭಿಸಿದ್ದಾರೆ. ಇದಾದ ಬಳಿಕ ಫೇಕ್‌ ಐಡಿ ಕ್ರಿಯೆಟ್‌ ಮಾಡಿ ರೇಣುಕಾಸ್ವಾಮಿಯ ಮೂಲ ಹುಡುಕಿದ್ದಾರೆ. ಅವನು ಚಿತ್ರದುರ್ಗದವನು ಎಂಬ ವಿಷಯ ಗೊತ್ತಾಗಿದೆ. ಚಿತ್ರದುರ್ಗದ ದರ್ಶನ್‌ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ರಾಘವೇಂದ್ರನಿಗೆ ಈತನ ಕುರಿತು ಮಾಹಿತಿ ನೀಡಲಾಗಿದೆ. ಆತನನ್ನು ಬೆಂಗಳೂರಿಗೆ ಕರೆತನ್ನಿ ಎಂಬ ಸೂಚನೆ ಹೋಗಿದೆ. ಬಳಿಕ ಅಲ್ಲಿಂದ ಆತನನ್ನು ಬೆಂಗಳೂರಿಗೆ ಕರೆತರಲಾಗಿದೆ.

ಇದಾದ ಬಳಿಕ ದರ್ಶನ್‌ ಟೀಮ್‌ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿ ಆತನ ಸಾವಿಗೆ ಕಾರಣವಾಗಿದೆ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ