logo
ಕನ್ನಡ ಸುದ್ದಿ  /  ಮನರಂಜನೆ  /  ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ; ಬಿಡುಗಡೆ ಭಾಗ್ಯ ಕಾಣದ ದರ್ಶನ್ ಅಂಡ್‌ ಗ್ಯಾಂಗ್‌,‌ ಆಗಸ್ಟ್‌ 14ರ ವರೆಗೂ ದಾಸನಿಗೆ ಜೈಲೇ ಗತಿ!

ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ; ಬಿಡುಗಡೆ ಭಾಗ್ಯ ಕಾಣದ ದರ್ಶನ್ ಅಂಡ್‌ ಗ್ಯಾಂಗ್‌,‌ ಆಗಸ್ಟ್‌ 14ರ ವರೆಗೂ ದಾಸನಿಗೆ ಜೈಲೇ ಗತಿ!

Aug 01, 2024 04:37 PM IST

google News

ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ; ಬಿಡುಗಡೆ ಭಾಗ್ಯ ಕಾಣದ ದರ್ಶನ್ ಅಂಡ್‌ ಗ್ಯಾಂಗ್‌,‌ ಆಗಸ್ಟ್‌ 14ರ ವರೆಗೂ ಜೈಲೇ ಗತಿ!

    • ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಬಂಧನವಾಗಿರುವ ನಟ ದರ್ಶನ್‌ ಸೇರಿ ಒಟ್ಟು 17 ಮಂದಿಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿದೆ. 
ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ; ಬಿಡುಗಡೆ ಭಾಗ್ಯ ಕಾಣದ ದರ್ಶನ್ ಅಂಡ್‌ ಗ್ಯಾಂಗ್‌,‌ ಆಗಸ್ಟ್‌ 14ರ ವರೆಗೂ ಜೈಲೇ ಗತಿ!
ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ; ಬಿಡುಗಡೆ ಭಾಗ್ಯ ಕಾಣದ ದರ್ಶನ್ ಅಂಡ್‌ ಗ್ಯಾಂಗ್‌,‌ ಆಗಸ್ಟ್‌ 14ರ ವರೆಗೂ ಜೈಲೇ ಗತಿ!

Darshan Arrest in murder case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್‌ ಮತ್ತು ಗ್ಯಾಂಗ್‌ಗೆ ಬಿಡುಗಡೆ ಭಾಗ್ಯ ಸದ್ಯಕ್ಕಿಲ್ಲ. ಜೂನ್‌ ತಿಂಗಳಲ್ಲಿಯೇ ನಟ ದರ್ಶನ್‌ ಸೇರಿ ಒಟ್ಟು 17 ಮಂದಿ ಜೈಲು ಸೇರಿದ್ದರು. ಈ ಪ್ರಕರಣದ ಅರ್ಜಿ ವಿಚಾರಣೆ ಇಂದು (ಆ. 1) ಮತ್ತೆ ನಡೆಯಿತು. ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್‌ ಸೇರಿ ಎಲ್ಲರಿಗೂ ಮತ್ತೆ ಜೈಲೇ ಗತಿಯಾಗಿದೆ. ಅಂದರೆ, ಆಗಸ್ಟ್‌ 14ರ ತನಕ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್‌ ಆದೇಶ ಹೊರಡಿಸಿದೆ.

ನಟ ದರ್ಶನ್‌. ಪವಿತ್ರಾ ಗೌಡ ಸೇರಿ ಕೊಲೆ ಪ್ರಕರಣದ ಎಲ್ಲ 17 ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇನ್ನೇನು ಈ ಸಲವಾದ್ರೂ ನಟ ದರ್ಶನ್‌ ಸೇರಿ ಹಲವರಿಗೆ ಜಾಮೀನು ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಕೊಲೆ ಪ್ರಕರಣವಾದ ಬೆನ್ನಲ್ಲೇ ಅಷ್ಟು ಸುಲಭಕ್ಕೆ ಜಾಮೀನು ಮಂಜೂರಾಗಿಲ್ಲ. ಈ ನಡುವೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್​ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಕೆಯಾಗಿತ್ತು.

ಸರ್ಕಾರಿ ವಕೀಲರು ಹಾಗೂ ನಟ ದರ್ಶನ್ ಪರ ವಕೀಲರ ವಾದ ಮತ್ತು ಪ್ರತಿವಾದಗಳನ್ನು ನ್ಯಾಯಾಧೀಶರು ಆಲಿಸಿದರು. ಬಳಿಕ ಆರೋಪಿಗಳ ಬಂಧನವನ್ನು ವಿಸ್ತರಿಸಿ ಆದೇಶ ಹೊರಡಿಸಿದರು. ಪರಪ್ಪನ ಅಗ್ರಹಾರದಲ್ಲಿ 13, ತುಮಕೂರಿನ ಜೈಲಿನಲ್ಲಿ 4 ಜನ ಆರೋಪಿಗಳನ್ನು ಇರಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಎರಡೂ ಜೈಲಿನಲ್ಲಿದ್ದ ಆರೋಪಿಗಳು ಜಡ್ಜ್‌ ಮುಂದೆ ಬಂದಿದ್ದರು. ವಿಚಾರಣೆ ಬಳಿಕ, ಆಗಸ್ಟ್‌ 14ರ ವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಿ ಕೋರ್ಟ್‌ ತೀರ್ಪು ನೀಡಿದೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಜೂನ್‌ 8ರಂದು ಅಪಹರಿಸಲಾಗಿತ್ತು. ಬಳಿಕ ಅದೇ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ನಟ ದರ್ಶನ್‌ ಅಂಡ್‌ ಗ್ಯಾಂಗ್‌ ಹತ್ಯೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಅದರ ಆಧಾರದ ಮೇಲೆ ಸದ್ಯ ಎಲ್ಲ 17 ಮಂದಿ ಸದ್ಯ ಜೈಲು ಸೇರಿದ್ದಾರೆ.

ದರ್ಶನ್‌ಗೆ ಮನೆಯೂಟ ಏಕೆ ಬೇಡ?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ2 ಆರೋಪಿಯಾಗಿರುವ ನಟ ದರ್ಶನ್‌ ಅವರು ನಿನ್ನೆಯಷ್ಟೇ ಹೈಕೋರ್ಟ್‌ಗೆ ಮನೆಯೂಟ ಬೇಕೆಂದು ವಿನಂತಿಸಿ ಮನವಿ ಸಲ್ಲಿಸಿದ್ದರು. ಇದೀಗ ನಟ ದರ್ಶನ್‌ಗೆ ಯಾವುದೇ ಹೆಚ್ಚುವರಿ ಸೌಕರ್ಯ ನೀಡಬಾರದು ಎಂದು ಹಿರಿಯ ವಕೀಲರೊಬ್ಬರು ಕಾರಾಗೃಹ ಇಲಾಖೆ ಐಜಿಗೆ ಪತ್ರ ಬರೆದಿದ್ದಾರೆ. "ಕಾನೂನಿನಡಿ ದರ್ಶನ್‌ ಓರ್ವ ಸಾಮಾನ್ಯ ವ್ಯಕ್ತಿ. ವಿಐಪಿ ಸ್ಟೇಟ್‌ ಹೊಂದಿರುವ ರಾಜಕಾರಣಿ ಅಲ್ಲ. ಯಾವುದೇ ಶಾಸನಬದ್ಧ ಹುದ್ದೆಯಲ್ಲೂ ಅವರಿಲ್ಲ. ಎಂಎಲ್‌ಎ, ಎಂಎಲ್‌ಸಿ, ಎಂಪಿಯಂತಹ ಹುದ್ದೆಗಳಲ್ಲಿ ಅವರಿಲ್ಲ. ಇವರು ಎಲ್ಲರಂತೆ ಕಾನೂನಿನಡಿ ಸಾಮಾನ್ಯ ವ್ಯಕ್ತಿಯಾಗಿರುವುದರಿಂದ ಇದೇ ರೀತಿ ಅವರನ್ನು ಪರಿಗಣಿಸಬೇಕು" ಎಂದು ಹೈಕೋರ್ಟ್‌ನ ಹಿರಿಯ ವಕೀಲರಾದ ಅಮೃತೇಶ್‌ ಮನವಿ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ