logo
ಕನ್ನಡ ಸುದ್ದಿ  /  ಮನರಂಜನೆ  /  ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಿಸಬೇಡ, ನಾನು ಖಂಡಿತ ಬರ್ತಿನಿ; ನಿರ್ದೇಶಕ ತರುಣ್‌ ಸುಧೀರ್‌ಗೆ ಮಾತುಕೊಟ್ಟ ದರ್ಶನ್‌

ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಿಸಬೇಡ, ನಾನು ಖಂಡಿತ ಬರ್ತಿನಿ; ನಿರ್ದೇಶಕ ತರುಣ್‌ ಸುಧೀರ್‌ಗೆ ಮಾತುಕೊಟ್ಟ ದರ್ಶನ್‌

Jul 19, 2024 05:17 PM IST

google News

ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಿಸಬೇಡ, ನಾನು ಖಂಡಿತ ಬರ್ತಿನಿ; ನಿರ್ದೇಶಕ ತರುಣ್‌ ಸುಧೀರ್‌ಗೆ ಮಾತುಕೊಟ್ಟ ದರ್ಶನ್‌

    • ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರನ್ನು ಭೇಟಿಯಾಗಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಭೇಟಿ ನೀಡಿದ್ದಾರೆ. ಒಂದಷ್ಟು ಹೊತ್ತು ಮಾತುಕತೆಯೂ ನಡೆದಿದೆ. ಇದೇ ವೇಳೆ ಎರಡು ಪುಸ್ತಕಗಳನ್ನೂ ನೀಡಿ ಮರಳಿದ್ದಾರೆ ತರುಣ್.‌
ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಿಸಬೇಡ, ನಾನು ಖಂಡಿತ ಬರ್ತಿನಿ; ನಿರ್ದೇಶಕ ತರುಣ್‌ ಸುಧೀರ್‌ಗೆ ಮಾತುಕೊಟ್ಟ ದರ್ಶನ್‌
ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಿಸಬೇಡ, ನಾನು ಖಂಡಿತ ಬರ್ತಿನಿ; ನಿರ್ದೇಶಕ ತರುಣ್‌ ಸುಧೀರ್‌ಗೆ ಮಾತುಕೊಟ್ಟ ದರ್ಶನ್‌

Tharun Sudhir on Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್‌ಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದಾರೆ ಹತ್ಯೆ ಪ್ರಕರಣದಲ್ಲಿ ಭಾಗಿಯಾದ 17 ಮಂದಿ. ಇದೀಗ ಇದೇ ದರ್ಶನ್‌ ಅವರನ್ನು ಭೇಟಿಯಾಗಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಾಟೇರ ಸಿನಿಮಾ ನಿರ್ದೇಶಕ ಮತ್ತು ದರ್ಶನ್‌ ಅವರ ಅತ್ಯಾಪ್ತ ತರುಣ್‌ ಸುಧೀರ್‌ ಭೇಟಿ ನೀಡಿದ್ದಾರೆ. ಒಂದಷ್ಟು ಹೊತ್ತು ಮಾತುಕತೆಯೂ ನಡೆದಿದೆ. ಇದೇ ವೇಳೆ ಎರಡು ಪುಸ್ತಕಗಳನ್ನೂ ನೀಡಿ ಮರಳಿದ್ದಾರೆ ತರುಣ್.‌

ಸ್ವಲ್ಪ ಜ್ವರ ಇತ್ತು, ಕಡಿಮೆಯಾಗಿದೆ..

ದರ್ಶನ್ ಸರ್‌ಗೆ ಸ್ವಲ್ಪ ಹುಷಾರಿರಲಿಲ್ಲ, ಈಗ ಪರವಾಗಿಲ್ಲ. ನನ್ನನ್ನು ಕಂಡಾಗೆಲ್ಲಾ ಅವರ ಮುಖದಲ್ಲಿ ಯಾವ ಸ್ಮೈಲ್ ಇರುತ್ತಿತ್ತೋ, ಆಗಲೂ ಅದೇ ಸ್ಮೈಲ್ ಇತ್ತು. ಅವರ ಈ ಪ್ರಕರಣದಿಂದ ಒಳಗೊಳಗೆ ನಾವೂ ವೀಕ್ ಆಗಿದ್ದೇವೆ. ಅಲ್ಲಿದ್ದಷ್ಟು ಹೊತ್ತು ಅವರ ಹೆಲ್ತ್ ಬಗ್ಗೆನೇ ಜಾಸ್ತಿ ಚರ್ಚೆಯಾಯ್ತು. ಏನಿಲ್ಲ ಸ್ವಲ್ಪ ಜ್ವರ ಇತ್ತು, ಈಗ ಬೆಟರ್ ಆಗ್ತಾ ಇದ್ದೀನಿ ಮನೆ. ಏನೂ ತೊಂದರೆ ಇಲ್ಲ. ವರಿ ಬೇಡ' ಎಂದರು. ಇದನ್ನು ಬಿಟ್ಟು ಸಹಜವಾಗಿ ಸಿನಿಮಾ ಇಂಡಸ್ಟ್ರಿ ಮೇಲೆ ಅವರಿಗೆ ಪ್ರೀತಿ ಜಾಸ್ತಿ. ಏನೆಲ್ಲ ನಡೀತಿದೆ ಎಂದು ನನಗೆ ಗೊತ್ತಿದ್ದಿದ್ದನ್ನು ಹೇಳಿದೆ.

ಮದುವೆಗೆ ಬರ್ತೀನಿ, ಡೇಟ್‌ ಚೇಂಜ್‌ ಮಾಡಬೇಡ..

"ನನ್ನ ಮದುವೆ ವಿಷಯ ದರ್ಶನ್ ಅವರಿಗೆ ಈ ಮೊದಲೇ ಗೊತ್ತಿತ್ತು. ಆ ಬಗ್ಗೆ ನನ್ನ ಮನಸಲ್ಲೂ ಒಂದು ರೀತಿ ತೊಳಲಾಟ ಇತ್ತು. ಅದನ್ನು ಅವರ ಮುಂದೆ ಪ್ರಸ್ತಾಪಿಸಿದೆ. ಯಾವುದೇ ಕಾರಣಕ್ಕೂ ಮದುವೆ ಡೇಟ್ ಚೇಂಜ್ ಮಾಡಬೇಡ. ಫಿಕ್ಸ್ ಆಗಿರುವ ಡೇಟ್‌ನಲ್ಲೇ ಮದುವೆ ಮಾಡ್ಕೋಬೇಕು. ನಾನು ಆದಷ್ಟು ಬೇಗ ಬರುತ್ತೇನೆ' ಎಂದು ಹೇಳಿದ್ದಾರೆ. ಅದೇ ರೀತಿ ದರ್ಶನ್‌ ಅವ್ರು ಏನೂ ತಪ್ಪು ಮಾಡಿಲ್ಲ ಅನ್ನೋ ನಂಬಿಕೆಯಲ್ಲಿ ನಾವಿದ್ದೇವೆ. ಅದು ಹಾಗೇ ಆಗಿರಲಿ ಎಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ತರುಣ್ ಸುಧೀರ್.

ಹೊರಗಡೆ ಏನ್‌ ನಡೀತಿದೆ ಅನ್ನೋದನ್ನ ಕೇಳಿದ್ರು..

"ನನ್ನ ಮದುವೆಗೂ ಮುಂಚೆನೇ ಅವರು ಹೊರಗಡೆ ಬರ್ತಾರೆ ಅನ್ನೋ ನಂಬಿಕೆ ಇದೆ. ನಮ್ಮ ಸಿನಿಮಾಗಳ ಬಗ್ಗೆ ಏನೂ ಮಾತಾಡಿಲ್ಲ. ಜನರಲ್ ಆಗಿ ಹೊರಗಡೆ ಏನ್ ಆಗ್ತಿದೆ? ಸಿನಿಮಾರಂಗದಲ್ಲಿ ಏನು ನಡೆಯುತ್ತಿದೆ ಅನ್ನೋ ಬಗ್ಗೆ ಒಂದಷ್ಟು ಕೇಳಿದ್ರು. ಆ ಬಗ್ಗೆ ಮಾತಾಡಿದ್ವಿ. ನೋಡಲು ಸ್ವಲ್ಪ ತೂಕ ಕಮ್ಮಿ ಆಗಿರುವ ರೀತಿಯಲ್ಲಿ ಕಾಣಿಸ್ತಾರೆ. ಇನ್ವಿಟೇಷನ್‌ ಕೊಡಲು ಬಂದಿಲ್ಲ. ಅವರಿಗಾಗಿ ಎರಡು ಪುಸ್ತಕ ತಂದಿದ್ದೆ. ಒಂದು ಫಿಲಾಸಫಿ ರೀತಿಯದ್ದು, ಇನ್ನೊಂದು ಅರ್ಜುನ್‌ ಆನೆ ಕುರಿತ ಅರ್ಜುನ ಪುಸ್ತಕ ನೀಡಿದ್ದೇನೆ ಎಂದಿದ್ದಾರೆ ತರುಣ್.‌

"ನಾನು ಎರಡು ವಾರಗಳಿಂದ ಇಲ್ಲಿಗೆ ಬರಬೇಕು ಎಂದು ತುಂಬ ಪ್ರಯತ್ನಪಡ್ತಾ ಇದ್ದೆ. ಆಗಿರಲಿಲ್ಲ. ಈಗ ಅನುಮತಿ ಸಿಕ್ಕಿತ್ತು, ಹಾಗಾಗಿ ಬಂದೆ. ಸದ್ಯಕ್ಕೆ ಏನೂ ಮಾತನಾಡಲ್ಲ. ಎಲ್ಲವೂ ಕಾನೂನಿನ ಅಡಿಯಲ್ಲಿದೆ. ನಮಗೆ ಅವರು ಏನೂ ತಪ್ಪು ಮಾಡಿಲ್ಲ ಅನ್ನೋ ಭರವಸೆ ಇದೆ. ನೋಡೋಣ ಎಂದಿದ್ದಾರೆ ತರುಣ್‌ ಸುಧೀರ್‌. ಇವರ ಜತೆಗೆ ನಟ ಯಶಸ್‌ ಸೂರ್ಯ ಮತ್ತು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಆಗಮಿಸಿ ದರ್ಶನ್‌ ಅವರನ್ನು ಭೇಟಿಯಾದರು. ಇದಕ್ಕೂ ಮೊದಲು ಸ್ಯಾಂಡಲ್‌ವುಡ್‌ನ ಸಾಕಷ್ಟು ಕಲಾವಿದರು ದರ್ಶನ್‌ ಅವರನ್ನು ಭೇಟಿಯಾಗಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ