logo
ಕನ್ನಡ ಸುದ್ದಿ  /  ಮನರಂಜನೆ  /  ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ ಡೇರ್‌ ಡೆವಿಲ್‌ ಮುಸ್ತಾಫಾ; ಸಮಯ, ವಾಹಿನಿಯ ಡೀಟೆಲ್ಸ್‌ ಇಲ್ಲಿದೆ

ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ ಡೇರ್‌ ಡೆವಿಲ್‌ ಮುಸ್ತಾಫಾ; ಸಮಯ, ವಾಹಿನಿಯ ಡೀಟೆಲ್ಸ್‌ ಇಲ್ಲಿದೆ

HT Kannada Desk HT Kannada

Sep 14, 2023 12:08 PM IST

google News

ಸೆಪ್ಟೆಂಬರ್ 17, ಭಾನುವಾರ ಸಂಜೆ 6 ಗಂಟೆಗೆ 'ಡೇರ್ ಡೆವಿಲ್ ಮುಸ್ತಾಫಾ' ಸುವರ್ಣ ವಾಹಿನಿಯಲ್ಲಿ ಪ್ರಸಾರ

  • 'ಡೇರ್ ಡೆವಿಲ್ ಮುಸ್ತಾಫಾ' , ಕಾಲೇಜು ದಿನಗಳನ್ನು ಮೆಲುಕು ಹಾಕುವಂತ ಚಿತ್ರವಾಗಿದ್ದು. ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ, ಹಾಗು ಧರ್ಮಕ್ಕೂ ಮಿಗಿಲಾದದ್ದು ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ಅದ್ಭುತ ಚಿತ್ರವಾಗಿದೆ.

ಸೆಪ್ಟೆಂಬರ್ 17, ಭಾನುವಾರ ಸಂಜೆ 6 ಗಂಟೆಗೆ  'ಡೇರ್ ಡೆವಿಲ್ ಮುಸ್ತಾಫಾ' ಸುವರ್ಣ ವಾಹಿನಿಯಲ್ಲಿ ಪ್ರಸಾರ
ಸೆಪ್ಟೆಂಬರ್ 17, ಭಾನುವಾರ ಸಂಜೆ 6 ಗಂಟೆಗೆ 'ಡೇರ್ ಡೆವಿಲ್ ಮುಸ್ತಾಫಾ' ಸುವರ್ಣ ವಾಹಿನಿಯಲ್ಲಿ ಪ್ರಸಾರ

ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ 'ಡೇರ್‌ ಡೆವಿಲ್‌ ಮುಸ್ತಾಫಾ' ಇದೇ ವರ್ಷ ಮೇ 19ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ನಂತರ ಈ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗಿತ್ತು. ಇದೀಗ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಇನ್ನೂ ಸಿನಿಮಾ ನೋಡದವರು ವೀಕೆಂಡ್‌ನಲ್ಲಿ ಈ ಚಿತ್ರವನ್ನು ಮನೆಯಲ್ಲೇ ಕುಳಿತು ಎಂಜಾಯ್‌ ಮಾಡಬಹುದು.

ಸುವರ್ಣ ವಾಹಿನಿಯಲ್ಲಿ 'ಡೇರ್‌ಡೆವಿಲ್‌ ಮುಸ್ತಾಫಾ'

ಸ್ಟಾರ್ ಸುವರ್ಣ ವಾಹಿನಿಯು ದಿನದಿಂದ ದಿನಕ್ಕೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ 'ಡೇರ್‌ಡೆವಿಲ್‌ ಮುಸ್ತಾಫಾ' ಸಿನಿಮಾವನ್ನು ತನ್ನ ವಾಹಿನಿಯಲ್ಲಿ ಪ್ರಸಾರ ಮಾಡಲು ಸಜ್ಜಾಗಿದೆ. ಸಿನಿಮಾ ಈಗಾಗಲೇ ಜನಮನ್ನಣೆ ಗಳಿಸಿದೆ. ಹೊಸಬರ ಚಿತ್ರವಾದರೂ ಸಿನಿಪ್ರಿಯರು ಸಿನಿಮಾವನ್ನು ಒಪ್ಪಿ ಅಪ್ಪಿದ್ದಾರೆ. ಹಿಂದೂ-ಮುಸ್ಲಿಂ ಭಾವಕ್ಯತೆಯ ಕಥೆ ಇರುವ ಸಿನಿಮಾ ನೋಡಿ ಸಿನಿಪ್ರಿಯರು ಚಪ್ಪಾಳೆ ತಟ್ಟಿದ್ದರು.

ಕರ್ನಾಟಕದ ಚಿಕ್ಕಮಗಳೂರಿನ ಚಿಕ್ಕ ಪಟ್ಟಣವಾದ ಅಬಚೂರಿನಲ್ಲಿ ರಾಮಾನುಜ ಅಯ್ಯಂಗಾರ್ ಮತ್ತು ಅವನ ಗೆಳೆಯರ ಗುಂಪು ಶಾಲೆಯನ್ನು ಮುಗಿಸಿ ಕಾಲೇಜಿಗೆ ಸೇರುತ್ತಾರೆ. ಅದೇ ಕಾಲೇಜಿಗೆ ಕಥಾ ನಾಯಕ ಮುಸ್ತಫಾ ಎಂಟ್ರಿ ಕೊಡುತ್ತಾನೆ. ಅಲ್ಲಿಂದ ಈ ಸಿನಿಮಾ ಕಥೆ ಆರಂಭಗೊಳ್ಳುತ್ತದೆ. ಮುಸ್ತಾಫಾ ಕಾಲೇಜಿಗೆ ಸೇರುವವರೆಗೂ ಎಲ್ಲವೂ ಚೆನ್ನಾಗಿರುತ್ತದೆ. ನಂತರ ಕಾಲೇಜಿನಲ್ಲಿ ಮುಸ್ತಾಫಾ ಹಾಗೂ ರಾಮಾನುಜ ಅಯ್ಯಂಗಾರ್‌ ತಂಡದ ನಡುವೆ ಕಿರಿಕ್ ಶುರುವಾಗುತ್ತದೆ. ಈ ರೀತಿ ಜಗಳ ಆರಂಭವಾಗಲು ಕಾರಣ ಏನು? ನಂತರ ಇದು ಹೇಗೆ ಬಗೆಹರಿಯುತ್ತದೆ. ಮುಸ್ತಾಫಾ ಹೇಗೆ ಎಲ್ಲರ ಪ್ರೀತಿ ಗಳಿಸುತ್ತಾನೆ ಎನ್ನುವುದು ಈ ಚಿತ್ರದ ಕಥೆ.

ಶಶಾಂಕ್‌ ಸೊಗಲ್‌ ನಿರ್ದೇಶನದ ಸಿನಿಮಾ

'ಡೇರ್ ಡೆವಿಲ್ ಮುಸ್ತಾಫಾ' , ಕಾಲೇಜು ದಿನಗಳನ್ನು ಮೆಲುಕು ಹಾಕುವಂತ ಚಿತ್ರವಾಗಿದ್ದು. ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ, ಹಾಗು ಧರ್ಮಕ್ಕೂ ಮಿಗಿಲಾದದ್ದು ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ಅದ್ಭುತ ಚಿತ್ರವಾಗಿದೆ. ಚಿತ್ರದಲ್ಲಿ ಹಾಸ್ಯ ಕೂಡಾ ಇದೆ. ಒಟ್ಟಿನಲ್ಲಿ ಸಿನಿಮಾ ನೋಡುಗರಿಗೆ ಮನರಂಜನೆಯ ಮಹಾ ಮಳೆಯನ್ನೇ ಸುರಿಸುವುದು ಖಂಡಿತ.

'ಡೇರ್ ಡೆವಿಲ್ ಮುಸ್ತಾಫಾ' ಚಿತ್ರವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಅರ್ಪಿಸಿದ್ದಾರೆ. ಸಿನಿಮಾಮರ ಬ್ಯಾನರ್‌ ಅಡಿಯಲ್ಲಿ ಈ ಚಿತ್ರವನ್ನು 100ಕ್ಕೂ ಹೆಚ್ಚು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳು ನಿರ್ಮಿಸಿದ್ದು ಶಶಾಂಕ್‌ ಸೊಗಲ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮುಸ್ತಾಫನಾಗಿ ಶಿಶಿರ್ ಹಾಗೂ ಅಯ್ಯಂಗಾರಿ ಪಾತ್ರದಲ್ಲಿ ಆದಿತ್ಯ ನಟಿಸಿದ್ದಾರೆ. ನಟ ನಾಗಭೂಷಣ್ ಕನ್ನಡ ಪ್ರಾಧ್ಯಾಪಕರಾಗಿ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ಉಮೇಶ್, ಸುಂದರ್ ವೀಣಾ, ಹರಿಣಿ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 17, ಭಾನುವಾರ ಸಂಜೆ 6 ಗಂಟೆಗೆ 'ಡೇರ್ ಡೆವಿಲ್ ಮುಸ್ತಾಫಾ' ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ