logo
ಕನ್ನಡ ಸುದ್ದಿ  /  ಮನರಂಜನೆ  /  Spandana Vijay:ಸ್ಪಂದನಾ ಮೃತದೇಹ ಇಂದು ರಾತ್ರಿ ಬೆಂಗಳೂರಿಗೆ ಶಿಫ್ಟ್;ಸಾವಿನ ಬಗ್ಗೆ ಊಹಾಪೋಹ ಹಬ್ಬಿಸದಂತೆ ಚಿಕ್ಕಪ್ಪ ಬಿಕೆ ಹರಿಪ್ರಸಾದ್‌ ಮನವಿ

Spandana Vijay:ಸ್ಪಂದನಾ ಮೃತದೇಹ ಇಂದು ರಾತ್ರಿ ಬೆಂಗಳೂರಿಗೆ ಶಿಫ್ಟ್;ಸಾವಿನ ಬಗ್ಗೆ ಊಹಾಪೋಹ ಹಬ್ಬಿಸದಂತೆ ಚಿಕ್ಕಪ್ಪ ಬಿಕೆ ಹರಿಪ್ರಸಾದ್‌ ಮನವಿ

HT Kannada Desk HT Kannada

Aug 08, 2023 12:23 PM IST

google News

ಸ್ಪಂದನಾ ಸಾವಿನ ಬಗ್ಗೆ ಊಹಾ ಪೋಹ ಹಬ್ಬಿಸದಂತೆ ಚಿಕ್ಕಪ್ಪ ಬಿಕೆ ಹರಿಪ್ರಸಾದ್‌ ಮನವಿ

  • ಪುನೀತ್‌ ರಾಜ್‌ಕುಮಾರ್‌, ಹೃದಯಸ್ತಂಭನದಿಂದ ನಿಧನರಾದರು. ಹಾಗೇ ಅವರ ಕುಟುಂಬದಲ್ಲಿ ಈಗ ಸ್ಪಂದನಾಗೆ ಹೃದಯಾಘಾತವಾಗಿದೆ ಎಂಬ ಚರ್ಚೆ, ಊಹಾಪೋಹ ಹರಿದಾಡುತ್ತಿದೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಸ್ಪಂದನಾ ಚಿಕ್ಕಪ್ಪ‌ ಬಿಕೆ ಹರಿಪ್ರಸಾದ್‌ ಮನವಿ ಮಾಡಿದ್ದಾರೆ.

ಸ್ಪಂದನಾ ಸಾವಿನ ಬಗ್ಗೆ ಊಹಾ ಪೋಹ ಹಬ್ಬಿಸದಂತೆ ಚಿಕ್ಕಪ್ಪ ಬಿಕೆ ಹರಿಪ್ರಸಾದ್‌ ಮನವಿ
ಸ್ಪಂದನಾ ಸಾವಿನ ಬಗ್ಗೆ ಊಹಾ ಪೋಹ ಹಬ್ಬಿಸದಂತೆ ಚಿಕ್ಕಪ್ಪ ಬಿಕೆ ಹರಿಪ್ರಸಾದ್‌ ಮನವಿ

ಸ್ಯಾಂಡಲ್‌ವುಡ್‌ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ನೇಹಿತರು, ಕುಟುಂಬದೊಂದಿಗೆ ಬ್ಯಾಂಕಾಕ್‌ ತೆರಳಿದ್ದ ಸ್ಪಂದನಾ, ಭಾನುವಾರ ಸಂಜೆ ಶಾಪಿಂಗ್‌ ಮುಗಿಸಿ ಹೋಟೆಲ್‌ ರೂಮ್‌ಗೆ ತೆರಳಿದ ನಂತರ ನಿದ್ರೆಯಲ್ಲೇ ಅವರಿಗೆ ಹೃದಯಾಘಾತವಾಗಿದೆ. ಈ ನಡುವೆ ಸ್ಪಂದನಾ ಸಾವಿನ ಬಗ್ಗೆ ಯಾವುದೇ ಊಹಾಪೋಹ ಹಬ್ಬಿಸಬೇಡಿ ಎಂದು ಅವರ ಚಿಕ್ಕಪ್ಪ ಮನವಿ ಮಾಡಿದ್ದಾರೆ.

ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಅವರದ್ದು ಅನ್ಯೋನ್ಯ ದಾಂಪತ್ಯ. ಎಷ್ಟೋ ಕಾರ್ಯಕ್ರಮಗಳಲ್ಲಿ, ಬಿಗ್‌ಬಾಸ್‌ನಲ್ಲಿ ವಿಜಯ ರಾಘವೇಂದ್ರ ತಮ್ಮ ಪತ್ನಿ ಬಗ್ಗೆ ಎಷ್ಟು ಪ್ರೀತಿ ಎಂಬುದನ್ನು ತೋರಿಸಿದ್ದರು. ಬಿಗ್‌ ಬಾಸ್‌ನಲ್ಲಿದ್ದಾಗ ಪ್ರೀತಿಯ ಪತ್ನಿಯ ಫೋಟೋ ಮುಂದೆ ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಷ್ಟು ಪ್ರೀತಿಸುತ್ತಿದ್ದ ಪತ್ನಿಯನ್ನು ಕಳೆದುಕೊಂಡ ನೋವನ್ನು ಯಾವ ರೀತಿ ಭರಿಸುತ್ತಾರೋ ಎಂಬುದನ್ನು ನೆನಪಿಸಿಕೊಂಡರೆ ಯಾರಿಗಾದರೂ ಬೇಸರ ಉಂಟಾಗುತ್ತದೆ.

ಊಹಾ ಪೋಹ ಹರಡದಂತೆ ಮನವಿ

ಸ್ಪಂದನಾ ನಿಧನರಾಗುತ್ತಿದ್ದಂತೆ ಅವರ ಸಾವಿನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಸ್ಪಂದನಾಗೆ ಏನಾದರೂ ಆರೋಗ್ಯ ಸಮಸ್ಯೆ ಇತ್ತಾ? ಅವರು ಕಿಟೋ ಡಯೆಟ್‌ ಮಾಡಿದ್ದೇ ಸಾವಿಗೆ ಕಾರಣ ಆಯ್ತಾ? ಪುನೀತ್‌ ರಾಜ್‌ಕುಮಾರ್‌, ಹೃದಯಸ್ತಂಭನದಿಂದ ನಿಧನರಾದರು. ಹಾಗೇ ಅವರ ಕುಟುಂಬದಲ್ಲಿ ಈಗ ಸ್ಪಂದನಾಗೆ ಹೃದಯಾಘಾತವಾಗಿದೆ ಎಂಬ ಚರ್ಚೆ, ಊಹಾಪೋಹ ಹರಿದಾಡುತ್ತಿದೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಸ್ಪಂದನಾ ಚಿಕ್ಕಪ್ಪ‌ ಬಿಕೆ ಹರಿಪ್ರಸಾದ್‌ ಮನವಿ ಮಾಡಿದ್ದಾರೆ. ದಯವಿಟ್ಟು ಮಗಳ ಸಾವಿನ ಬಗ್ಗೆ ಊಹಾ ಪೋಹ ಹಬ್ಬಿಸದೆ ಇರುವಂತೆ ಮನವಿ ಮಾಡಿದ್ದಾರೆ.

ಬ್ಯಾಂಕಾಕ್‌ನಲ್ಲಿ ಸ್ಪಂದನಾ ಮರಣೋತ್ತರ ಪರೀಕ್ಷೆ ಮುಗಿದಿದ್ದು ಮಂಗಳವಾರ ರಾತ್ರಿ ಮೃತದೇಹವನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲಾಗುವುದು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿಕೆ ಶಿವರಾಂ ನಿವಾಸದ ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ವಿಜಯ ರಾಘವೇಂದ್ರ ಹೇಳಿದ ನಂತರ ಸ್ಪಂದನಾ ಅಂತ್ಯಕ್ರಿಯೆಯನ್ನು ಯಾವ ಸ್ಥಳದಲ್ಲಿ ಮಾಡಬೇಕೆಂದು ನಿರ್ಧರಿಸಲಾಗುವುದು ಎಂದು ಆತ್ಮೀಯರು ತಿಳಿಸಿದ್ದಾರೆ.

ಗಣ್ಯರಿಂದ ಸಂತಾಪ

ಸ್ಪಂದನಾ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಿವರಾಜ್‌ಕುಮಾರ್‌ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಬೈರತಿ ರಣಗಲ್‌ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ಅನೇಕ ಗಣ್ಯರು ಸ್ಪಂದನಾ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಟ್ವೀಟ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ