ತರುಣ್ ಸುಧೀರ್ - ಸೋನಾಲ್ ಮೊಂತೆರೋ ಜೋಡಿ ನಡುವಿನ ವಯಸ್ಸಿನ ಅಂತರ ಎಷ್ಟು? ತರುಣ್ ನಿರ್ದೇಶಕ ಮಾತ್ರವಲ್ಲ ನಟರೂ ಹೌದು
Jul 22, 2024 05:41 PM IST
ತರುಣ್ ಸುಧೀರ್ - ಸೋನಾಲ್ ಮೊಂತೆರೋ ನಡುವಿನ ವಯಸ್ಸಿನ ಅಂತರ ಎಷ್ಟು?
- Tharun Sudhir sonal monteiro Age: ಮುಂದಿನ ತಿಂಗಳು ಮದುವೆಯಾಗಲಿರುವ ಸ್ಯಾಂಡಲ್‌ವುಡ್ ಜೋಡಿ ತರುಣ್ ಸುಧೀರ್ - ಸೋನಾಲ್ ಮೊಂತೆರೋ ನಡುವಿನ ವಯಸ್ಸು ಎಷ್ಟು? ಇವರಿಬ್ಬರು ನಟಿಸಿದ ಸಿನಿಮಾಗಳು ಯಾವುವು? ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಯಾವುದು? ಇಲ್ಲಿದೆ ಹೆಚ್ಚಿನ ವಿವರ.
ಬೆಂಗಳೂರು: ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಮೊಂತೆರೋ ವಿವಾಹ ಆಗಸ್ಟ್ ತಿಂಗಳಲ್ಲಿ ನಡೆಯಲಿದೆ. ಈಗಾಗಲೇ ಸ್ಯಾಂಡಲ್‌ವುಡ್‌ನ ಈ ನವ ಜೋಡಿ ತಮ್ಮ ವಿವಾಹದ ಕುರಿತು ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಇವರಿಬ್ಬರ ಜೋಡಿ ನೋಡಿದ್ರೆ ಮೇಡ್ ಫಾರ್ ಈಚ್ ಅದರ್ ಅನ್ನೋ ರೀತಿ ಇದೆ ಎಂದರೂ ತಪ್ಪಾಗದು. ತರುಣ್ ಸುಧೀರ್ ಮುಖದಲ್ಲಿ ಇನ್ನೂ ತುಂಟ ಮಗುವಿನ ಕಳೆ ಇದೆ. ಇದೇ ರೀತಿ ಸೋನಾಲ್ ಮೊಂತೆರೋ ಕನ್ನಡದ ಚಂದದ ನಟಿ ಎನ್ನಲು ಅಡ್ಡಿಯಿಲ್ಲ.
ತರುಣ್ ಸುಧೀರ್ ಕೊಂಚ ದಪ್ಪಗೆ ಇರುವ ಕಾರಣ ಗುಂಡುಗುಂಡಗೆ ಅಮೃತಧಾರೆ ಡುಮ್ಮಸರ್‌ನಂತೆ ಕಾಣಿಸುತ್ತಾರೆ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಎಷ್ಟು ವಯಸ್ಸಿನ ಅಂತರ ಇರಬಹುದು ಎನ್ನುವ ಸಹಜ ಕುತೂಹಲ ಒಂದಿಷ್ಟು ಜನರಿಗೆ ಇರಬಹುದು. ಕನ್ನಡದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎಂದೇ ಖ್ಯಾತಿ ಪಡೆದಿದ್ದ ತರುಣ್ ಸುಧೀರ್ ಮುಂದಿನ ತಿಂಗಳು ಮದುವೆಯಾಗುತ್ತಿದ್ದಾರೆ. ಮೂಲಗಳ ಪ್ರಕಾರ ಚೌಕಾ ಸಿನಿಮಾ ನಿರ್ದೇಶಿಸಿದ್ದ ಇವರಿಗೆ ಈಗ 39 ವರ್ಷ ವಯಸ್ಸು. ಚೌಕಾ ಸಿನಿಮಾಕ್ಕೆ ಫಿಲ್ಮ್‌ಫೇರ್ ಅವಾರ್ಡ್ (ಬೆಸ್ಟ್ ಡೈರೆಕ್ಟರ್) ಪಡೆದಿದ್ದರು. ಇದಾದ ಬಳಿಕ ನಟ ದರ್ಶನ್ ಅಭಿನಯಿಸಿದ್ದ ರಾಬರ್ಟ್ ಸಿನಿಮಾದ ನಿರ್ದೇಶನಕ್ಕೆ ಬೆಸ್ಟ್ ಡೈರೆಕ್ಟರ್ ಸೈಮಾ ಅವಾರ್ಡ್ 2022 ಪಡೆದಿದ್ದರು. ತರುಣ್ ನಿರ್ದೇಶನದ ಕಾಟೇರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು.
ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ ಎಂಬ ಖ್ಯಾತಿಯ ತರುಣ್ ಸುಧೀರ್ ಒಳ್ಳೆಯ ನಟ ಕೂಡ. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಸಂಗತಿ ಬಹುತೇಕರಿಗೆ ನೆನಪಿನಲ್ಲಿ ಇರದು. ಗಣೇಶನ ಮದುವೆ ಸಿನಿಮಾದಲ್ಲಿ ಬಾಲಕಲಾವಿದರಾಗಿ ಮಿಂಚಿದ್ದರು. ಇದಾದ ಬಳಿಕ ಎಕ್ಸ್‌ಕ್ಯೂಸ್ ಮೀ, ಚಪ್ಪಾಳೆ, ಕ್ರೈಮ್ ಸ್ಟೋರಿ, ವಿಷ್ಣುಸೇನಾ, ಜೊತೆಜೊತೆಯಲಿ, ವಿದ್ಯಾರ್ಥಿ, ನವಗ್ರಹ, ಹೊಂಗನಸು, ಚೆಲುವೆಯೇ ನಿನ್ನೇ ನೋಡಲು, ಹಗ್ಗದ ಕೊನೆ, ಗಜಕೇಸರಿ, ವ್ರಿತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ತರುಣ್ ಸುಧೀರ್ ವಿವಾಹವಾಗುತ್ತಿರುವ ಸೋನಾಲ್ ಮೊಂತೆರೋ ವಯಸ್ಸು ಎಷ್ಟು ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ಸೋನಾಲ್ ಮೊಂತೆರೊ ಏಜ್ ಎಂದು ಗೂಗಲ್‌ನಲ್ಲಿ ಕೀವರ್ಡ್ಸ್ ಹೆಚ್ಚು ಜನರು ಸರ್ಚ್ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ವರದಿಗಳ ಪ್ರಕಾರ ಸೋನಾಲ್ ಮೊಂತೆರೋ ವಯಸ್ಸು 29. ಅಂದರೆ, ಇವರಿಬ್ಬರ ನಡುವೆ 10 ವರ್ಷ ವಯಸ್ಸಿನ ಅಂತರ ಇದೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ. ಪ್ರೀತಿ ಮಾತ್ರ ನಿಜವಾಗಿಯೂ ಪರಿಗಣನೆಗೆ ಬರೋದು ಅಲ್ವೇ.
ಮಂಗಳೂರು ಮೂಲದ ಸೋನಾಲ್ ಅವರು 2013ರಲ್ಲಿ ಮಿಸ್ ಬ್ಯೂಟಿಫುಲ್ ಸ್ಮೈಲ್ ಕಿರೀಟ ತನ್ನದಾಗಿಸಿಕೊಂಡಿದ್ದರು. 2015ರಲ್ಲಿ ಮಿಸ್ ಕೊಂಕಣ್ ಕಿರೀಟ ತನ್ನದಾಗಿಸಿಕೊಂಡಿದ್ದರು. ತುಳುವಿನ ಎಕ್ಕಸಕ್ಕ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದರು. ಇದಾದ ಬಳಿಕ ಪಿಳಿಬೈಲು ಯಮುನಕ್ಕ ಎಂಬ ತುಳು ಚಿತ್ರದಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಕನ್ನಡ ಚಿತ್ರ ಅಭಿಸಾರಿಕೆ 2018ರಲ್ಲಿ ಬಿಡುಗಡೆಯಾಗಿತ್ತು. ಅದೇ ವರ್ಷ ಎಂಎಲ್‌ಎ ಸಿನಿಮಾವೂ ರಿಲೀಸ್ ಆಗಿತ್ತು.
ಸೋನಲ್ ಮಂತೆರೊ ಬಾಲಿವುಡ್ ಚಿತ್ರವೊಂದರಲ್ಲೂ ನಟಿಸಿದರು. ಸಾಜನ್ ಛಲೆ ಸಸುರಾಲ್ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಗಾಳಿಪಟ 2, ಬುದ್ಧಿವಂತ 2ನಲ್ಲಿ ನಟಿಸಿರು. ಪಂಚತಂತ್ರ ಸಿನಿಮಾದ ಮೂಲಕ ಯೋಗರಾಜ್ ಭಟ್ ಗರಡಿಗೆ ಸೇರಿದರು. ರಾಬರ್ಟ್ ಸಿನಿಮಾದಲ್ಲಿ ನಟಿಸಿದರು. ರಾಬರ್ಟ್ ಸಿನಿಮಾಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ಇದಾದ ಬಳಿಕ ಶಂಭೋ ಶಿವ ಶಂಕರ, ಗರಡಿ, ಸುಗರ್ ಫ್ಯಾಕ್ಟರಿ ಚಿತ್ರಗಳಲ್ಲಿ ನಟಿಸಿದ್ದಾರೆ.