logo
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಬಿಡುಗಡೆ ದಿನ ಜೈಲಿನ ಮುಂದೆ ಹಬ್ಬ ಮಾಡ್ತೀವಿ, 50 ಸಾವಿರ ಜನ ಸೇರ್ತಾರೆ, ಒಂದಿಡೀ ದಿನ ಮೆರವಣಿಗೆ; ನಿರ್ದೇಶಕರ ಮಾತು

ದರ್ಶನ್‌ ಬಿಡುಗಡೆ ದಿನ ಜೈಲಿನ ಮುಂದೆ ಹಬ್ಬ ಮಾಡ್ತೀವಿ, 50 ಸಾವಿರ ಜನ ಸೇರ್ತಾರೆ, ಒಂದಿಡೀ ದಿನ ಮೆರವಣಿಗೆ; ನಿರ್ದೇಶಕರ ಮಾತು

Jul 24, 2024 01:31 PM IST

google News

ದರ್ಶನ್‌ ಬಿಡುಗಡೆ ದಿನ ಜೈಲಿನ ಮುಂದೆ ಹಬ್ಬ ಮಾಡ್ತೀವಿ, 50 ಸಾವಿರ ಜನ ಸೇರ್ತಾರೆ, ಒಂದಿಡೀ ದಿನ ಮೆರವಣಿಗೆ; ನಿರ್ದೇಶಕರ ಮಾತು

    • ನಟ ದರ್ಶನ್‌ ರಿಲೀಸ್‌ ಆಗುವ ದಿನ ಜೈಲಿನ ಮುಂಭಾಗದಲ್ಲಿ ಹಬ್ಬ ಮಾಡಲು ಫ್ಯಾನ್ಸ್‌ ಪ್ಲಾನ್‌ ಮಾಡಿದ್ದಾರೆ. ಏನಿಲ್ಲ ಅಂದರೂ ಆವತ್ತು 50 ಸಾವಿರ ಫ್ಯಾನ್ಸ್‌ ಜಮಾವಣೆ ಆಗಲಿದ್ದಾರೆ. ಒಂದಿಡೀ ದಿನ ಮೆರವಣಿಗೆ ಸಾಗಲಿದೆ ಎಂದಿದ್ದಾರೆ ನಿರ್ದೇಶಕ ಮಹೇಶ್‌ ಕುಮಾರ್‌.
ದರ್ಶನ್‌ ಬಿಡುಗಡೆ ದಿನ ಜೈಲಿನ ಮುಂದೆ ಹಬ್ಬ ಮಾಡ್ತೀವಿ, 50 ಸಾವಿರ ಜನ ಸೇರ್ತಾರೆ, ಒಂದಿಡೀ ದಿನ ಮೆರವಣಿಗೆ; ನಿರ್ದೇಶಕರ ಮಾತು
ದರ್ಶನ್‌ ಬಿಡುಗಡೆ ದಿನ ಜೈಲಿನ ಮುಂದೆ ಹಬ್ಬ ಮಾಡ್ತೀವಿ, 50 ಸಾವಿರ ಜನ ಸೇರ್ತಾರೆ, ಒಂದಿಡೀ ದಿನ ಮೆರವಣಿಗೆ; ನಿರ್ದೇಶಕರ ಮಾತು

Director Mahesh on Darshan: ಪವಿತ್ರಾ ಗೌಡ ಅವರಿಗೆ ಕೆಟ್ಟದಾಗಿ ಸಂದೇಶ ಮತ್ತು ಅಶ್ಲೀಲ ಫೋಟೋ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ ಆರೋಪದಡಿಯಲ್ಲಿ ದರ್ಶನ್‌ ಸೇರಿ 17 ಮಂದಿ ಕಂಬಿ ಹಿಂದಿದ್ದಾರೆ. ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕೋರ್ಟ್‌ನಿಂದಲೂ ಈ ವರೆಗೂ ಜಾಮೀನು ಮಂಜೂರಾಗಿಲ್ಲ. ಆಗಸ್ಟ್‌ 1ರಂದು ಮುಂದಿನ ವಿಚಾರಣೆ ನಡೆಯಲಿದ್ದು, ವರ್ಚುವಲ್‌ ಆಗಿಯೇ ದರ್ಶನ್‌ ಭಾಗವಹಿಸಲಿದ್ದಾರೆ. ಆದರೆ, ಅವರ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಈ ವರೆಗೂ ಸಿಕ್ಕಿಲ್ಲ.

ಹೀಗಿರುವಾಗಲೇ ನಟ ದರ್ಶನ್‌ ಅವರ ಫ್ಯಾನ್ಸ್‌ ವಲಯದಲ್ಲಿ ಮಾತ್ರ ಬೇರೆಯದೇ ಚರ್ಚೆಗಳು ನಡೆಯುತ್ತಿವೆ. ಬಾಸ್‌ ಅವರನ್ನು ಹೇಗೆ ಕರೆದುಕೊಂಡು ಬರಬೇಕು, ಮೆರವಣಿಗೆ ಹೇಗಿರಬೇಕು, ಏನೆಲ್ಲ ಮಾಡಬೇಕು ಎಂದೆಲ್ಲ ಈಗಲೇ ಅವರ ಅಭಿಮಾನಿ ವಲಯದಲ್ಲಿ ಪ್ಲಾನ್‌ಗಳು ಸಿದ್ಧವಾಗುತ್ತಿವೆಯಂತೆ. ಈ ಬಗ್ಗೆ ದರ್ಶನ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ, ಕನ್ನಡದಲ್ಲಿ ಅಯೋಗ್ಯ, ಮದಗಜ, ಸಿನಿಮಾ ನಿರ್ದೇಶನ ಮಾಡಿರುವ ಮಹೇಶ್‌ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದರ್ಶನ್‌ ಬಿಡುಗಡೆ ದಿನ ಜೈಲಿನ ಮುಂದೆ ಹಬ್ಬ ಮಾಡ್ತೀವಿ, 50 ಸಾವಿರ ಜನ ಸೇರ್ತಾರೆ, ಒಂದಿಡೀ ದಿನ ಮೆರವಣಿಗೆ; ನಿರ್ದೇಶಕರ ಮಾತು

ಹುತ್ತದಂತೆ ಬೆಳೆಯುತ್ತೆ ಅವರ ಬಳಗ

ಈ ಬಗ್ಗೆ ನಿರ್ದೇಶಕ ಮಹೇಶ್‌ ಹೇಳಿದ್ದು ಹೀಗೆ, "ನಮ್ಮ ಡಿ ಬಾಸ್‌, ಅವರು ಎಲ್ಲಿಯೇ ಇರಲಿ.. ಹೊರಗಡೆ ಇದ್ದರೂ ಅವರು ಬಾಸ್‌, ಒಳಗಡೆ ಇದ್ದರೂ ಬಾಸ್‌. ಎಲ್ಲಿದ್ದರೂ ಆ ಹವಾ ಇದ್ದೇ ಇರುತ್ತದೆ. ಜೈಲಿನಲ್ಲಿದ್ದರೂ ಆ ಹವಾ ನಡಿಯುತ್ತೆ. ಈ ವರೆಗೂ ಅವರ ಒಬ್ಬ ಅಭಿಮಾನಿಯೂ ಕಡಿಮೆ ಆಗಿಲ್ಲ. ಆಗೋದೂ ಇಲ್ಲ. ಅದೊಂದು ರೀತಿ ಹುತ್ತದಂತೆ ಬೆಳೆಯುತ್ತ ಹೋಗುತ್ತದೆ. ಏಕೆಂದರೆ, ನಾನೇ ಹೊರಗಡೆ ಹೋದಾಗ ಸಾಕಷ್ಟು ಮಂದಿ ಫ್ಯಾನ್ಸ್‌ ಕೇಳ್ತಿರ್ತಾರೆ. ದರ್ಶನ್‌ ಅವ್ರು ಯಾವಾಗ ಬರ್ತಾರೆ, ಅವರ ರಿಲೀಸ್‌ ದಿನ ನಾವೂ ಅವರ ಜತೆಗೆ ಬರ್ತೀವಿ ಅಂತ ಹೇಳ್ತಿದ್ದಾರೆ. ಅವರನ್ನು ವೆಲ್‌ಕಮ್‌ ಮಾಡಲು ಕಾಯ್ತಿದ್ದಾರೆ"

ಬಿಡುಗಡೆ ದಿನ 50 ಸಾವಿರ ಜನ ಸೇರ್ತಾರೆ

"ಯಾರ ಮನಸ್ಸಲ್ಲಿಯೂ ಅವರನ್ನು ಅಪರಾಧಿ ಸ್ಥಾನದಲ್ಲಿ ನೋಡಲು ಸಾಧ್ಯವಿಲ್ಲ. ಅದನ್ನು ತೀರ್ಮಾನ ಮಾಡಲು ಜಡ್ಜ್‌ಗಳಿದ್ದಾರೆ. ಕಾನೂನು ಇದೆ. ನ್ಯಾಯಾಂಗ ತೀರ್ಮಾನ ತೆಗೆದುಕೊಳ್ಳಲಿದೆ. ನನ್ನ ಪ್ರಕಾರ 50 ಸಾವಿರ ಜನಕ್ಕೂ ಅಧಿಕ ಜನ ಜೈಲಿನ ಮುಂಭಾಗದಲ್ಲಿ ಸೇರ್ತಾರೆ. ಅದ್ದೂರಿಯಾಗಿ ವೆಲ್‌ಕಮ್‌ ಮಾಡಿ, ಅವರನ್ನು ಇಡೀ ದಿನ ಮೆರವಣಿಗೆ ಮೂಲಕ ಮನೆಗೆ ತಲುಪಿಸಿ ಬರ್ತಾರೆ. ಆ ದಿನಗಳಿಗಾಗಿ ಸಾಕಷ್ಟು ಜನ ಕಾಯ್ತಿದ್ದಾರೆ. ಆದಷ್ಟು ಬೇಗ ಬಾಸ್‌ ಆಚೆ ಬರಲಿ" ಎಂದಿದ್ದಾರೆ.

ಒಂದಿಡೀ ದಿನ ಮೆರವಣಿಗೆ ನಡೆಯಲಿದೆ..

“ಸಾರಥಿ ಸಮಯದಲ್ಲಿ ಜೈಲಿಂದ ಸಿನಿಮಾ ಥಿಯೇಟರ್‌ಗೆ ಬರಲು ಏನಿಲ್ಲ ಅಂದ್ರೂ ಮೂರು ಗಂಟೆ ತೆಗೆದುಕೊಂಡಿತ್ತು. ಸಾರಥಿ ಸಮಯದಲ್ಲಿ ಅವರನ್ನು ಜೈಲಿಂದ ಕರೆತಂದಾಗ, ಆ ಜಾಗದಲ್ಲಿ ನಾನೂ ಇದ್ದೆ. ಆಗ ನಾನು ಅಸಿಸ್ಟಂಟ್‌ ನಿರ್ದೇಶಕ. ಈಗ ನಿರ್ದೇಶಕ. ಆಗ ಚಿತ್ರಮಂದಿರಕ್ಕೆ ಬರಲು ಎರಡರಿಂದ ಮೂರು ಗಂಟೆ ಬೇಕಾಯ್ತು. ಈ ಸಲ ಬೇಕಿದ್ರೆ ನೀವು ನೋಟ್ ಮಾಡಿಕೊಳ್ಳಿ. ಜೈಲಿಂದ ಮನೆ ತಲುಪೋಕೆ ಒಂದು ದಿನ ಹಿಡಿದೇ ಹಿಡಿಯುತ್ತೆ. ಅಭಿಮಾನಿಗಳ ಎಗ್ಸೈಟ್‌ಮೆಂಟ್‌ ನೋಡ್ತಿದ್ದೆ, ನನ್ನ ಗಮನಕ್ಕೆ ಬಂದಂಗೆ, ಪ್ರತಿ ಊರಿಂದಲೂ ಫ್ಯಾನ್ಸ್‌ ಬರ್ತಾರೆ” ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ