Actress Reels: ನಿವೇದಿತಾ ಗೌಡ ಅವರ ಈ ರೀಲ್ಸ್ ವೈರಲ್; ಆನ್‌ಲೈನ್ ಹೇಟರ್‌ಗಳ ಕಾಮೆಂಟ್ ಕಡೆಗಣಿಸಿ ಮುಂದಡಿ ಇಟ್ಟ ದಿಟ್ಟೆ
Jul 31, 2024 11:33 AM IST
Actress Reels: ನಿವೇದಿತಾ ಗೌಡ ಅವರ ಈ ರೀಲ್ಸ್ ವೈರಲ್
- Kannada Actress Viral Reels: ಚಂದನ್ ಶೆಟ್ಟಿ ಜತೆಗೆ ವಿವಾಹ ವಿಚ್ಚೇದನ ಪಡೆದ ಬಳಿಕ ಬಿಗ್‌ಬಾಸ್ ಗೊಂಬೆ, ಕನ್ನಡ ನಟಿ ನಿವೇದಿತಾ ಗೌಡಗೆ ಆನ್‌ಲೈನ್ ಹೇಟರ್ಸ್‌ಗಳ ಉಪಟಳ ಹೆಚ್ಚಾಗಿದೆ. ಇದೇ ಸಮಯದಲ್ಲಿ ಕೀಳುಮಟ್ಟದ ಕಾಮೆಂಟ್‌ಗಳನ್ನು ಕಡೆಗಣಿಸಿ ನಿವೇದಿತಾ ಗೌಡ ಎಂದಿನಂತೆ ಆನ್‌ಲೈನ್‌ನಲ್ಲಿ ವೈರಲ್ ರೀಲ್ಸ್ ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇತ್ತೀಚೆಗೆ ವಿವಾಹ ವಿಚ್ಚೇದನ ತೆಗೆದುಕೊಂಡಿದ್ದರು. ಇದಾದ ಬಳಿಕ ಇವರಿಬ್ಬರೂ ತಮ್ಮ ವೈಯಕ್ತಿಕ ಬದುಕಿಗೆ ಮರಳಿದ್ದಾರೆ. ಇದೇ ಸಮಯದಲ್ಲಿ ಎಂದಿನಂತೆ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಬಿಗ್‌ಬಾಸ್‌ನ ಗೊಂಬೆ ಎಂದೇ ಖ್ಯಾತಿ ಪಡೆದ ನಿವೇದಿತಾ ಗೌಡರಿಗೆ ಡಿವೋರ್ಸ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಆನ್‌ಲೈನ್ ಹೇಟರ್‌ಗಳ ಕಾಟ ಅತಿಯಾಗಿದೆ. ಇದ್ಯಾವುದಕ್ಕೂ ಕ್ಯಾರೇ ಅನ್ನದೇ ಸೋಷಿಯಲ್ ಮೀಡಿಯಾದಲ್ಲಿ ಜನರು ಮಾಡುವ ಟೀಕೆಗಳಿಗೆ ಅಂಜದೆ, ಪ್ರತಿಕ್ರಿಯಿಸದೆ ರೀಲ್ಸ್ ಹಂಚಿಕೊಳ್ಳುತ್ತಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ "ನಟನಟಿಯರ ರೀಲ್ಸ್" ಸರಣಿಯಲ್ಲಿ ಇಂದು ನಿವೇದಿತಾ ಗೌಡರ ರೀಲ್ಸ್ ಸ್ಟೋರಿಗಳನ್ನು ಗಮನಿಸೋಣ.
ಚಿಟ್ಟೆ ರೀಲ್ಸ್
ನಿವೇದಿತಾ ಗೌಡ ಅವರು ಇತ್ತೀಚೆಗೆ ಚಿಟ್ಟೆ ಹಾಡಿನ ರೀಲ್ಸ್ ಹಂಚಿಕೊಂಡಿದ್ದಾರೆ. ಎಂದಿನಂತೆ ಈ ವಿಡಿಯೋಗೆ ಸಾಕಷ್ಟು ನೆಗೆಟಿವ್, ಹೇಟ್ ಕಾಮೆಂಟ್‌ಗಳು ಬಂದಿವೆ. ಇದೇ ಸಮಯದಲ್ಲಿ ಕೆಲವರು ತಮಾಷೆಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ದರ್ಶನ್ ಪ್ರಕರಣ, ಪಟ್ಟಣಗೆರೆ ಶೆಡ್‌ಗೆ ಹೋಲಿಸಿಕೊಂಡು ಒಂದಿಷ್ಟು ಜನರು ಕಾಮೆಂಟ್ ಮಾಡಿದ್ದಾರೆ. "ಕಾಮೆಂಟ್ ಓದಲು ಬಂದವರಿಗೆ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿದೆ" "ಎಲ್ಲಾ ಕಾಮೆಂಟ್ಸ್ ಓದಿ ಆದ್ಮೇಲೆ ಶೆಡ್ ಗೆ ಬನ್ನಿ ಮಟ್ಟನ್ ಬಿರಿಯಾನಿ ಮಾಡಿಟ್ಟಿದ್ದಿವಿ" "ಬನ್ನಿ ಜನರೇ ಕಮೆಂಟ್ ತಜ್ಞರ ಅಭಿಪ್ರಾಯ ಓದೋಣ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಇಂತಹ ಕಾಮೆಂಟ್‌ಗಳ ರಾಶಿಯ ನಡುವೆ "ಬ್ಯೂಟಿಫುಲ್" "ಕ್ಯೂಟ್" ಇತ್ಯಾದಿ ಕಾಮೆಂಟ್‌ಗಳೂ ಇವೆ.
ಫಸ್ಟ್ ಟೈಮ್ ನಿನ್ನ ನೋಡಿದಾಗ
ನಿವೇದಿತಾ ಗೌಡ ಕನ್ನಡ ಹಾಡುಗಳಿಗೆ ಮಾತ್ರವಲ್ಲದೆ ಬಾಲಿವುಡ್ ಮತ್ತು ಹಾಲಿವುಡ್ ಹಾಡುಗಳಿಗೂ ರೀಲ್ಸ್ ಮಾಡುತ್ತಾರೆ.
ನಟಿ ನಿವೇದಿತಾ ಗೌಡರಿಗೆ ಡಿವೋರ್ಸ್‌ಗೂ ಮೊದಲೂ ಸಾಕಷ್ಟು ಜನರು ಕೆಟ್ಟ ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಆದರೆ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಘಟನೆ ಬಳಿಕ ಇವರ ಪೋಸ್ಟ್‌ಗಳಿಗೆ ಪಟ್ಟಣಗೆರೆ ಶೆಡ್‌ನ ಭಯದ ಕಾಮೆಂಟ್‌ಗಳನ್ನು ಮಾಡುವವರು ಹೆಚ್ಚಾಗಿದ್ದಾರೆ. ನಿವೇದಿತಾ ಗೌಡರಿಗೆ ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಜನರ ಕುರಿತು ಈ ಹಿಂದೆಯೇ ನಟ ಚಂದನ್ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದರು.
ಆನ್‌ಲೈನ್ ಹೇಟ್ ಎಂದರೇನು?
ಆನ್‌ಲೈನ್‌ನಲ್ಲಿ ದ್ವೇಷ ಹರಡುವುದನ್ನು ಸಾಮಾನ್ಯವಾಗಿ ಆನ್‌ಲೈನ್ ಹೇಟ್ ಎನ್ನಲಾಗುತ್ತದೆ. ಇದೇ ಸಮಯದಲ್ಲಿ ಮಕ್ಕಳು, ಮಹಿಳೆಯರ ಮೇಲೆ ಕೆಟ್ಟದ್ದಾಗಿ ಕಾಮೆಂಟ್ ಮಾಡುವುದು, ಅವರನ್ನು ಕೀಳಾಗಿ ಕಾಣುವುದು ಕೂಡ ಆನ್‌ಲೈನ್ ಹೇಟ್, ಆನ್‌ಲೈನ್ ಹೆರಾಸ್‌ಮೆಂಟ್ ವ್ಯಾಪ್ತಿಗೆ ಬರುತ್ತದೆ. ಅವಹೇಳನಕಾರಿ ಹೇಳಿಕೆಗಳು, ಬೆದರಿಕೆಗಳು, ಗುರುತು ಆಧಾರಿತ ಅವಮಾನಗಳು, ಅವಹೇಳನಕಾರಿ ಪದಗಳು ಮತ್ತು ನಿಂದನೆಗಳು, ದುರುದ್ದೇಶಪೂರಿತ ಸಂವಹನಗಳು, ಸೈಬರ್ ಬೆದರಿಕೆ, ಸೈಬರ್ ಸ್ಟಾಕಿಂಗ್, ಕಿರುಕುಳ, ವಿಷಯದ ಮೂಲಕ ದ್ವೇಷವನ್ನು ಹುಟ್ಟುಹಾಕುವುದು, ಹಿಂಸೆಗೆ ಪ್ರಚೋದನೆ ಇತ್ಯಾದಿಗಳು ಆನ್‌ಲೈನ್ ಹೇಟ್ ವ್ಯಾಪ್ತಿಗೆ ಬರುತ್ತದೆ. ಇಂತಹವರ ವಿರುದ್ಧ ದೂರು ನೀಡಿದರೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನುಗಳಿವೆ.