logo
ಕನ್ನಡ ಸುದ್ದಿ  /  ಮನರಂಜನೆ  /  Vinod Raj: ನಿರ್ಮಾಪಕರು ಸರಿಯಾಗಿದ್ದಿದ್ದರೆ ಈಗಲೂ ನಾನು ಸಿನಿಮಾರಂಗದಲ್ಲಿ ಉಳೀತಿದ್ದೆ; ಕೃಷಿಯಲ್ಲಿ ಖುಷಿ ಕಂಡ ವಿನೋದ್‌ ರಾಜ್‌ ಮಾತು

Vinod Raj: ನಿರ್ಮಾಪಕರು ಸರಿಯಾಗಿದ್ದಿದ್ದರೆ ಈಗಲೂ ನಾನು ಸಿನಿಮಾರಂಗದಲ್ಲಿ ಉಳೀತಿದ್ದೆ; ಕೃಷಿಯಲ್ಲಿ ಖುಷಿ ಕಂಡ ವಿನೋದ್‌ ರಾಜ್‌ ಮಾತು

Jul 01, 2023 11:06 AM IST

google News

ನಿರ್ಮಾಪಕರು ಸರಿಯಾಗಿದ್ದಿದ್ದರೆ ಈಗಲೂ ನಾನು ಸಿನಿಮಾರಂಗದಲ್ಲಿ ಉಳೀತಿದ್ದೆ; ಕೃಷಿಯಲ್ಲಿ ಖುಷಿ ಕಂಡ ವಿನೋದ್‌ ರಾಜ್‌ ಮಾತು

    • ನಟ ವಿನೋದ್‌ ರಾಜ್‌ ಕೃಷಿಯಲ್ಲಿಯೇ ಖುಷಿ ಕಂಡವರು. ಸಿನಿಮಾದಿಂದ ದೂರವೇ ಉಳಿದಿರುವ ಅವರೀಗ, ಮತ್ತೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಂದರೆ, ಆವತ್ತು ದೊಡ್ಡ ನಿರ್ಮಾಪಕರಲ್ಲದಿದ್ದರೂ ಸಣ್ಣ ಪ್ರೊಡ್ಯೂಸರ್‌ ಕೈ ಹಿಡಿದಿದ್ದರೆ, ಈಗಲೂ ನಾವೂ ಚಿತ್ರರಂಗದಲ್ಲಿ ಉಳೀತಿದ್ವಿ ಎಂದಿದ್ದಾರೆ. 
ನಿರ್ಮಾಪಕರು ಸರಿಯಾಗಿದ್ದಿದ್ದರೆ ಈಗಲೂ ನಾನು ಸಿನಿಮಾರಂಗದಲ್ಲಿ ಉಳೀತಿದ್ದೆ; ಕೃಷಿಯಲ್ಲಿ ಖುಷಿ ಕಂಡ ವಿನೋದ್‌ ರಾಜ್‌ ಮಾತು
ನಿರ್ಮಾಪಕರು ಸರಿಯಾಗಿದ್ದಿದ್ದರೆ ಈಗಲೂ ನಾನು ಸಿನಿಮಾರಂಗದಲ್ಲಿ ಉಳೀತಿದ್ದೆ; ಕೃಷಿಯಲ್ಲಿ ಖುಷಿ ಕಂಡ ವಿನೋದ್‌ ರಾಜ್‌ ಮಾತು

Vinod Raj: ಸಿನಿಮಾ ನಟರಾಗಿ ಗುರುತಿಸಿಕೊಂಡು, ಇದೀಗ ಅದರಿಂದ ಬಹುದೂರ ಸರಿದಿರುವ ವಿನೋದ್‌ ರಾಜ್‌, ಕಳೆದ ಕೆಲ ತಿಂಗಳ ಹಿಂದೆ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದರು. ಕುಟುಂಬ, ಮಡದಿ, ಮಕ್ಕಳು ಎಂಬಿತ್ಯಾದಿಯಾಗಿ ಸದ್ದು ಮಾಡಿದ್ದರು. ಆದರೆ, ಇದೇ ವಿನೋದ್‌ಗೆ ಅವರ ಆಪ್ತರು ಮತ್ತೆ ಸಿನಿಮಾಕ್ಕೆ ಬನ್ನಿ ಎಂದು ಸಲಹೆ ನೀಡದ ಉದಾಹರಣೆಗಳು ಸಾಕಷ್ಟಿವೆ. ಅದನ್ನು ಸ್ವತಃ ವಿನೋದ್‌ ಹೇಳಿಕೊಂಡಿದ್ದೂ ಉಂಟು. ಆದರೆ, ಸದ್ಯಕ್ಕೆ ಸಿನಿಮಾದತ್ತ ಆಗಮಿಸುವ ಯಾವ ಆಸೆಯೂ ಅವರಿಗಿಲ್ಲ. ಕೃಷಿಯಲ್ಲಿಯೇ ಖುಷಿ ಕಾಣುತ್ತ ಅಮ್ಮನೊಂದಿಗೆ ಹಳ್ಳಿ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಹೀಗಿರುವ ವಿನೋದ್‌ ರಾಜ್‌ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಒಂದು ವೇಳೆ ನಿರ್ಮಾಪಕರು ಕೈ ಹಿಡಿದಿದ್ದರೆ, ನಾವೂ ಈಗಲೂ ಸಿನಿಮಾರಂಗದಲ್ಲಿಯೇ ಇರುತ್ತಿದ್ದೆವು ಎಂದಿದ್ದಾರೆ. ಹಾಗಂತ 2009ರ ಬಳಿಕ ಇಲ್ಲಿಯವರೆಗೂ ಅವರಿಗೆ ಸಿನಿಮಾ ಅವಕಾಶಗಳು ಬಂದಿಲ್ಲ ಅಂತಿಲ್ಲ. ಹಲವು ಸಿನಿಮಾ ಚಾನ್ಸ್‌ಗಳು ಬಂದರೂ, ಅವುಗಳಿಂದ ದೂರ ಉಳಿಯುವುದಾಗಿ ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ; ಕೃಷಿ! ಹೌದು ನೆಲಮಂಗಲದ ಬಳಿಯ ಜಮೀನಿನ ಕೆಲಸ, ತಮಿಳುನಾಡಿನಲ್ಲಿನ ತೋಟದ ಕೆಲಸಗಳೆಲ್ಲವನ್ನು ವಿನೋದ್‌ವೊಬ್ಬರೇ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಿನಿವುಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ದೊಡ್ಡ ನಿರ್ಮಾಪಕರು ಬೇಕಿರಲಲ್ಲ..

ಇದೆಲ್ಲವನ್ನು ಮಾಡುವುದಕ್ಕೇ ಹೆಚ್ಚಿನ ಸಮಯ ನನಗೆ ಬೇಕು. ಹೀಗಿರುವಾಗ ನನಗೆ ಇದೀಗ ಮತ್ತೆ ಸಿನಿಮಾದತ್ತ ಹೊರಳುವುದಕ್ಕೆ ಮನಸಿಲ್ಲ. ಸಿನಿಮಾಕ್ಕೆ ಪದಾರ್ಪಣೆ ಮಾಡಿದಾಗ ನಮಗೆ ದೊಡ್ಡ ದೊಡ್ಡ ಪ್ರೊಡ್ಯೂಸರ್‌ ಬೇಕಿರಲ್ಲಿಲ್ಲ. ಸಣ್ಣ ಸಣ್ಣ ನಿರ್ಮಾಪಕರು ಸಿಕ್ಕಿದ್ದರೂ, ಈಗಲೂ ನಾನು ಸಿನಿಮಾರಂಗದಲ್ಲಿ ಉಳಿಯುತ್ತಿದ್ದೆ. ಹಾಗಂತ ನಾನ್ಯಾಕೆ ಸಿನಿಮಾ ನಟನಾಗಿ ಉಳಿಯಲಿಲ್ಲ ಎಂಬ ಬೇಸರವಿಲ್ಲ. ಅಮ್ಮಾವ್ರು ಸದಾ ಹೇಳೋರು, ದುಡಿದು ತಿನ್ನಲು ಸಾಕಷ್ಟು ದಾರಿ ಎಂದು. ಅದೇ ಮಾತಿನಂತೆ, ನಾನೀಗ ಕೃಷಿಕನಾಗಿದ್ದೇನೆ.

ಸಾಕಷ್ಟು ಸಿನಿಮಾ ಆಫರ್‌ಗಳು ಬಂದವು. ಆದರೆ, ಮೊದಲಿನಂತೆ ಆಗ್ತಿಲ್ಲ. ಇಲ್ಲಿನ ಕೃಷಿ, ತಮಿಳುನಾಡಿನಲ್ಲಿ ತೋಟದ ಕೆಲಸಗಳಿಗೆ ಹೆಚ್ಚಿನ ಸಮಯ ಕೊಡಬೇಕು. ಅದೇ ಆಗುತ್ತಿಲ್ಲ. ಹಾಗಾಗಿ ಸಿನಿಮಾ ಕಡೆ ಗಮಹರಿಸಿಲ್ಲ. ಯಾವುದೇ ಕೆಲಸ ಮೇಲೂ ಕೀಳು ಎಂದು ನಾವೇ ನಿರ್ಧರಿಸಬಾರದು. ಸಿನಿಮಾ ತುಂಬ ದೊಡ್ಡದು, ವ್ಯವಸಾಯ ಚಿಕ್ಕದು ಎಂದು ಯಾರೂ ಭಾವಿಸಬೇಡಿ. ಹಿಡಿದ ಕೆಲಸದಲ್ಲಿ ಪ್ರಯತ್ನ ಬಿಡಬಾರದು ಎಂದಿದ್ದಾರೆ.

ದರ್ಶನ್‌ ಕಾಟೇರ ಬಗ್ಗೆಯೂ ಪ್ರತಿಕ್ರಿಯೆ..

ಇನ್ನು ನಟ ದರ್ಶನ್‌ ಅವರ ಕಾಟೇರ ಚಿತ್ರದ ಟೀಸರ್‌ ವೀಕ್ಷಿಸಿರುವ ವಿನೋದ್‌ ರಾಜ್‌, ನೋಡುವುದಕ್ಕಿಂತ, ಹೆಚ್ಚಾಗಿ ಬೇರೆಯವರಿಗೆ ಸಿನಿಮಾ ಬಗ್ಗೆ ಕೇಳುತ್ತಿರುತ್ತೇವೆ. ದರ್ಶನ್‌ ವಿಚಾರದಲ್ಲಿ ಹೇಳೋದೇನಿದೆ. ಅವರೊಬ್ಬ ಬಾಕ್ಸ್‌ ಆಫೀಸ್‌ ಕಲೆಕ್ಟರ್‌. ಶಿವಣ್ಣನೂ ಹಾಗೇ. ಪುನೀತ್‌ ಫಿಟ್‌ ಆಗಿರಲು ಹೋಗಿ ಹೀಗೆ ಮಾಡಿಕೊಂಡ್ರು. ತುಂಬ ಬೇಸರ ಆಗುತ್ತೆ. ಇದೆಲ್ಲದರ ಜತೆಗೆ ಸಾಧನೆ ಮಾಡುವವನಿಗೆ ಚಾಲೆಂಜ್‌ ಇರಬೇಕೇ ಹೊರತು ರಿವೇಂಜ್‌ ಇರಬಾರದು. ದ್ವೇಷ ಬೇಡ. ಛಲ ಇರಲಿ ಎಂದು ಹೇಳಿಕೊಂಡಿದ್ದಾರೆ ವಿನೋದ್.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ