logo
ಕನ್ನಡ ಸುದ್ದಿ  /  ಮನರಂಜನೆ  /  ಡಾ ವಿಷ್ಣುವರ್ಧನ್‌ ಅವರಿಗೆ ಸಾಹಸಸಿಂಹ ಎಂಬ ಬಿರುದು ತಂದುಕೊಟ್ಟ ಚಿತ್ರ ಯಾವುದು? ಶೂಟಿಂಗ್‌ ಸಮಯದಲ್ಲಿ ಚಿತ್ರತಂಡ ಎದುರಿಸಿದ ಸಮಸ್ಯೆ ಏನು?

ಡಾ ವಿಷ್ಣುವರ್ಧನ್‌ ಅವರಿಗೆ ಸಾಹಸಸಿಂಹ ಎಂಬ ಬಿರುದು ತಂದುಕೊಟ್ಟ ಚಿತ್ರ ಯಾವುದು? ಶೂಟಿಂಗ್‌ ಸಮಯದಲ್ಲಿ ಚಿತ್ರತಂಡ ಎದುರಿಸಿದ ಸಮಸ್ಯೆ ಏನು?

Rakshitha Sowmya HT Kannada

Oct 08, 2024 03:13 PM IST

google News

ಡಾ ವಿಷ್ಣುವರ್ಧನ್‌ ಅವರಿಗೆ ಸಾಹಸಸಿಂಹ ಎಂಬ ಬಿರುದು ಕೊಟ್ಟ ಚಿತ್ರ ಯಾವುದು? ಶೂಟಿಂಗ್‌ ಸಮಯದಲ್ಲಿ ಚಿತ್ರತಂಡ ಎದುರಿಸಿದ ಸಮಸ್ಯೆ ಏನು?

  • 1982ರಲ್ಲಿ ತೆರೆ ಕಂಡ ಸಾಹಸಸಿಂಹ ಸಿನಿಮಾ ಯಶಸ್ಸಿನ ನಂತರ ಡಾ ವಿಷ್ಣುವರ್ಧನ್‌ ಅವರಿಗೆ ಸಾಹಸಸಿಂಹ ಎಂಬ ಹೆಸರು ಬಂತು. ಸಿನಿಮಾ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸಿನಿಮಾ ನಂತರ ವಿಷ್ಣು ಅವರ ಸ್ಟಾರ್‌ಡಮ್‌ ಕೂಡಾ ಹೆಚ್ಚಾಯ್ತು. 

ಡಾ ವಿಷ್ಣುವರ್ಧನ್‌ ಅವರಿಗೆ ಸಾಹಸಸಿಂಹ ಎಂಬ ಬಿರುದು ಕೊಟ್ಟ ಚಿತ್ರ ಯಾವುದು? ಶೂಟಿಂಗ್‌ ಸಮಯದಲ್ಲಿ ಚಿತ್ರತಂಡ ಎದುರಿಸಿದ ಸಮಸ್ಯೆ ಏನು?
ಡಾ ವಿಷ್ಣುವರ್ಧನ್‌ ಅವರಿಗೆ ಸಾಹಸಸಿಂಹ ಎಂಬ ಬಿರುದು ಕೊಟ್ಟ ಚಿತ್ರ ಯಾವುದು? ಶೂಟಿಂಗ್‌ ಸಮಯದಲ್ಲಿ ಚಿತ್ರತಂಡ ಎದುರಿಸಿದ ಸಮಸ್ಯೆ ಏನು?

ಅಭಿನಯ ಭಾರ್ಗವ, ಸಾಹಸ ಸಿಂಹ ಡಾ ವಿಷ್ಣುವರ್ಧನ್‌, ನಮ್ಮನ್ನು ಅಗಲಿ 15 ವರ್ಷಗಳು ಕಳೆದಿವೆ. ವಿಷ್ಣುವರ್ಧನ್‌, ಅವರ ಸಿನಿಮಾಗಳಿಂದ ಮಾತ್ರವಲ್ಲ, ತಮ್ಮ ಸರಳ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದವರು. ಆದ್ದರಿಂದ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ದಾದಾ, ಕರುಣಾಮಯಿ ಎಂದೇ ಕರೆಯುತ್ತಿದ್ದರು.

 ಸಿಂಹ ಎಂಬ ಹೆಸರು ಬಂದಿದ್ದು ಹೇಗೆ?

ಅಂದ ಹಾಗೆ ವಿಷ್ಣುವರ್ಧನ್‌ ಅವರಿಗೆ ಸಾಹಸ ಸಿಂಹ ಎಂಬ ಹೆಸರು ಬಂದಿದ್ದು ಅವರು ನಟಿಸಿರುವ ಸಿನಿಮಾ ಮೂಲಕ. ಸಾಹಸಸಿಂಹ ಸಿನಿಮಾ 10 ಫೆಬ್ರವರಿ 1982 ರಂದು ತೆರೆ ಕಂಡಿತ್ತು. ಶ್ರೀ ಲಕ್ಷ್ಮಿ ಸಿನಿ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರವನ್ನು ಪಾಂಡುರಂಗನ್‌, ರಾಮಲಿಂಗಮ್‌ ಜೊತೆ ಸೇರಿ ನಿರ್ಮಿಸಿದ್ದರು. ಜೋ ಸೈಮನ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸತ್ಯಂ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣುವರ್ಧನ್‌ಗೆ ಕಾಜಲ್‌ ಕಿರಣ್‌ ನಾಯಕಿಯಾಗಿ ನಟಿಸಿದ್ದರು. ಉಳಿದಂತೆ ಚಿತ್ರದಲ್ಲಿ ವಜ್ರಮುನಿ, ಧೀರೇಂದ್ರ ಗೋಪಾಲ್‌, ತೂಗುದೀಪ್‌ ಶ್ರೀನಿವಾಸ್‌, ಶಕ್ತಿ ಪ್ರಸಾದ್‌, ಟೈಗರ್‌ ಪ್ರಭಾಕರ್‌, ಉದಯ್‌ ಕುಮಾರ್‌, ಚೇತನ್‌ ರಾಮಾರಾವ್‌, ನೀಗ್ರೋ ಜಾನಿ ಹಾಗೂ ಇನ್ನಿತರು ನಟಿಸಿದ್ದರು. ಮನು ಅವರು ರಚಿಸಿರುವ ಚಕ್ರವ್ಯೂಹ ಎಂಬ ಪುಸ್ತಕವನ್ನು ಆಧರಿಸಿ ಸಿನಿಮಾ ತಯಾರಿಸಲಾಗಿದೆ.

ದುಷ್ಟರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆ ಹೊಂದಿರುವ ಚಿತ್ರ

ತನ್ನ ತಂದೆ ತಾಯಿಯನ್ನು ಕೊಂದು ತನ್ನ ಮುಖವನ್ನು ವಿರೂಪಗೊಳಿಸಿದ ವಿಲನ್‌ಗಳನ್ನು ಬಾಲಕನೊಬ್ಬ ಸೇಡು ತೀರಿಸಕೊಳ್ಳಲು ಕಾಯುತ್ತಾನೆ. ಅವರನ್ನು ಹಿಡಿಯಲೆಂದಲೇ ಓದಿ ಪೊಲೀಸ್‌ ಇಲಾಖೆಗೆ ಸೇರುತ್ತಾನೆ. ನಾಯಕ ಆ ಖದೀಮರನ್ನು ಹೇಗೆ ಭೇಟಿ ಆಗುತ್ತಾನೆ. ಅವರನ್ನು ಹಿಡಿಯಲು ಏನು ಪ್ಲ್ಯಾನ್‌ ಮಾಡುತ್ತಾನೆ? ತನ್ನ ಜೀವನ ಹಾಳು ಮಾಡಿದವರನ್ನು ಶಿಕ್ಷಿಸುತ್ತಾನಾ ಅನ್ನೋದು ಈ ಸಿನಿಮಾ ಕಥೆ. ಈ ಚಿತ್ರದ ಹಾಡುಗಳು ಇಂದಿಗೂ ಬಹಳ ಫೇಮಸ್‌, ಅದರಲ್ಲೂ ಮರೆಯದ, ನೆನಪನು ನಿನಗಾಗಿ ತಂದೆ ನಾನು ಹಾಡು ನಾಯಕ, ನಾಯಕಿ ಹಾಗೂ ವಿಲನ್ ಇಬ್ಬರಿಗೂ ಸೇರಿ ಹೇಳುವಂತೆ ಸಾಹಿತ್ಯ ರಚಿಸಲಾಗಿದೆ. ಆ ಸಮಯದಲ್ಲಿ ಈ ಚಿತ್ರ 25 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ವಿಷ್ಣು ಅವರ ಸ್ಟಾರ್‌ಡಮ್‌ ಹೆಚ್ಚಿಸುವಲ್ಲಿಯೂ ಈ ಸಿನಿಮಾ ಸಹಾಯ ಮಾಡಿತು. ಈ ಆಕ್ಷನ್‌ ಕ್ರೈಂ ಚಿತ್ರದ ಯಶಸ್ಸಿನ ನಂತರ ವಿಷ್ಣು ಅವರಿಗೆ ಸಾಹಸಸಿಂಹ ಎಂಬ ಹೆಸರು ಬಂತು. 13 ಮೇ 2026 ರಂದು ಈ ಚಿತ್ರವನ್ನು ಹೊಸ ತಂತ್ರಜ್ಞಾನದೊಂದಿಗೆ ರೀ ರಿಲೀಸ್‌ ಮಾಡಿತ್ತು.

ಟನಲ್‌ನಲ್ಲಿ ಕಷ್ಟವಾದರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವಿಷ್ಣು

ಈ ಸಿನಿಮಾ ಕ್ಲೈಮಾಕ್ಸ್‌ ಚಿತ್ರೀಕರಣವನ್ನು ಟನಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ವಿಷ್ಣುವರ್ಧನ್‌, ತಾಂತ್ರಿಕ ತಂಡ ಸೇರಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಆಗ ಚಿತ್ರತಂಡ, ಯಾವುದಾದರೂ ಸ್ಟುಡಿಯೋದಲ್ಲಿ ಸೆಟ್‌ ಆಗಿ ಸಿನಿಮಾ ಮಾಡೋದು ಎಂದು ನಿರ್ಧಿರಿಸದೆ. ಆದರೆ ವಿಷ್ಣುವರ್ಧನ್‌ ಮಾತ್ರ, ಅದಕ್ಕೆ ಒಪ್ಪದೆ ಸಿನಿಮಾ ದೃಶ್ಯಗಳು ನೈಜವಾಗಿ ಬರಲಿ, ಎಷ್ಟೇ ಕಷ್ಟ ಆದರೂ ಇಲ್ಲೇ ಚಿತ್ರೀಕರಣ ಮಾಡೋಣ ಎಂದು ಹೇಳಿದ್ದಾಗಿ ನಿರ್ದೇಶಕ ಜೋ ಸೈಮನ್‌, ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ