logo
ಕನ್ನಡ ಸುದ್ದಿ  /  ಮನರಂಜನೆ  /  Garadi Song Out: ಗರಡಿ ಮನೆಗಿಳಿದು ಹೊಡಿರೆಲೆ ಹಲಗಿ ಎನ್ನುತ್ತ ಮೈ ಚಳಿ ಬಿಟ್ಟು ಕುಣಿದ ನಿಶ್ವಿಕಾ ನಾಯ್ಡು; ನಟಿಯ ಸಿಕ್ಸ್‌ ಪ್ಯಾಕ್‌ಗೆ ಫಿದಾ

Garadi Song Out: ಗರಡಿ ಮನೆಗಿಳಿದು ಹೊಡಿರೆಲೆ ಹಲಗಿ ಎನ್ನುತ್ತ ಮೈ ಚಳಿ ಬಿಟ್ಟು ಕುಣಿದ ನಿಶ್ವಿಕಾ ನಾಯ್ಡು; ನಟಿಯ ಸಿಕ್ಸ್‌ ಪ್ಯಾಕ್‌ಗೆ ಫಿದಾ

Jun 16, 2023 09:13 AM IST

google News

ಗರಡಿ ಮನೆಗಿಳಿದು ಹೊಡಿರೆಲೆ ಹಲಗಿ ಎನ್ನುತ್ತ ಮೈ ಚಳಿ ಬಿಟ್ಟು ಕುಣಿದ ನಿಶ್ವಿಕಾ ನಾಯ್ಡು; ನಟಿಯ ಸಿಕ್ಸ್‌ ಪ್ಯಾಕ್‌ಗೆ ಫಿದಾ

    • ನಟಿ ನಿಶ್ವಿಕಾ ನಾಯ್ಡು ಗರಡಿ ಸಿನಿಮಾದ ಹಾಡಿನ ಮೂಲಕವೇ ಸದ್ಯ ಸುದ್ದಿಯಲ್ಲಿದ್ದಾರೆ. ಹೊಡಿರೆಲೆ ಹಲಗಿ ಹಾಡಿಗೆ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಹಾಡಿನಲ್ಲಿ ಗ್ಲಾಮರಸ್‌ ಆಗಿಯೇ ಮಿಂಚಿದ್ದಾರೆ. 
ಗರಡಿ ಮನೆಗಿಳಿದು ಹೊಡಿರೆಲೆ ಹಲಗಿ ಎನ್ನುತ್ತ ಮೈ ಚಳಿ ಬಿಟ್ಟು ಕುಣಿದ ನಿಶ್ವಿಕಾ ನಾಯ್ಡು; ನಟಿಯ ಸಿಕ್ಸ್‌ ಪ್ಯಾಕ್‌ಗೆ ಫಿದಾ
ಗರಡಿ ಮನೆಗಿಳಿದು ಹೊಡಿರೆಲೆ ಹಲಗಿ ಎನ್ನುತ್ತ ಮೈ ಚಳಿ ಬಿಟ್ಟು ಕುಣಿದ ನಿಶ್ವಿಕಾ ನಾಯ್ಡು; ನಟಿಯ ಸಿಕ್ಸ್‌ ಪ್ಯಾಕ್‌ಗೆ ಫಿದಾ

Garadi Song Out: ಸ್ಯಾಂಡಲ್‌ವುಡ್‌ ನಟಿ ನಿಶ್ವಿಕಾ ನಾಯ್ಡು ಇದೀಗ ಹೊಡಿರೆಲೆ ಹಲಗಿ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ. ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಗರಡಿ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಆ ಹಾಡಿನಲ್ಲಿ ಕೊಂಚ ಗ್ಲಾಮರಸ್‌ ಅವತಾರದಲ್ಲಿಯೇ ಸೊಂಟ ಬಳುಕಿಸಿದ್ದಾರೆ ನಿಶ್ವಿಕಾ.

ಕೌರವ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಗರಡಿ ಚಿತ್ರದ ಮೊದಲ ಹಾಡು ಹೊಡಿರೆಲೆ ಹಲಗಿ.. ಲಿರಿಕಲ್ ವಿಡಿಯೋ ಇತ್ತೀಚಿಗೆ ಬಿಡುಗಡೆಯಾಯಿತು. ವಿ. ಹರಿಕೃಷ್ಣ ಸಂಗೀತ ನೀಡಿರುವ, ಯೋಗರಾಜ್ ಭಟ್ ಅವರೇ ಸಾಹಿತ್ಯ ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ.

ಈ ಸಿನಿಮಾ ಮತ್ತು ಹಾಡಿನ ಬಗ್ಗೆ ಹೇಳಿಕೊಳ್ಳುವ ನಿರ್ದೇಶಕ ಯೋಗರಾಜ್‌ ಭಟ್‌, "ಜನಸಾಮಾನ್ಯವಾಗಿ ಮಾತನಾಡಬೇಕಾದರೆ ಇವರು, ಅವರ ಗರಡಿಯಲ್ಲಿ ಪಳಗಿದವರು ಅಂತ ಹೇಳುತ್ತಾರೆ. ಗರಡಿ ಎಂದರೆ ಅದೊಂದು ಸಮರ ಕಲೆ. ವ್ಯಾಯಾಮ ಶಾಲೆ.. ಈ ಗರಡಿ ಮನೆಯ ಮುಖ್ಯಸ್ಥ ರಂಗಪ್ಪ. ಆ ಪಾತ್ರದಲ್ಲಿ ಬಿ.ಸಿ. ಪಾಟೀಲ್ ನಟಿಸಿದ್ದಾರೆ. ಆ ಗುರುವಿಗೆ ಸಾಕಷ್ಟು ಶಿಷ್ಯರು. ಅದರಲ್ಲಿ ನಾಯಕ ಸೂರ್ಯ ಕೂಡ ಒಬ್ಬ. ಕಾರಣಾಂತರದಿಂದ ಗುರುವಿಗೆ ಶಿಷ್ಯ ಎದುರು ನಿಲ್ಲುವ ಪರಿಸ್ಥಿತಿ ಬರುತ್ತದೆ. ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ಅಭಿನಯಿಸುತ್ತಿದ್ದಾರೆ"

"ಈ ಹಾಡು ಹುಟ್ಟಲು ನಿರ್ಮಾಪಕರಾದ ಬಿ.ಸಿ. ಪಾಟೀಲ್ ಅವರು ಕಾರಣ. ಅವರು ನನಗೆ ಕರೆ ಮಾಡಿ ಉತ್ತರ ಕರ್ನಾಟಕದಲ್ಲಿ ಹಲಗಿ ಹೊಡೆಯಬೇಕಾದರೆ ಒಂದು ರಾಗ ಬರುತ್ತದೆ. ಅದರ ಮೇಲೆ ಹಾಡು ಮಾಡಿ ಎಂದರು. ಆಗ ಈ ಹಾಡು ಬರೆದೆ. ಮೇಘನಾ ಹಳಿಯಾಳ್ ಅದ್ಭುತವಾಗಿ ಹಾಡಿದ್ದಾರೆ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದರು ಯೋಗರಾಜ್ ಭಟ್

ಇನ್ನು ಗರಡಿ ಚಿತ್ರ ಆರಂಭವಾದ ಬಗ್ಗೆ ತಿಳಿಸಿದ ಬಿ.ಸಿ.ಪಾಟೀಲ್, ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. ಈಗ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ ಕೌಸಲ್ಯ ಸುಪ್ರಜಾ ರಾಮ ನಿರ್ಮಿಸುತ್ತಿದ್ದೇವೆ‌. ಉತ್ತಮ ಕಥೆ ತರುವ ಯುವ ನಿರ್ದೇಶಕರಿಗೂ ನಮ್ಮ ಸಂಸ್ಥೆಯಿಂದ ಅವಕಾಶ ನೀಡಲಾಗುತ್ತದೆ ಎಂದರು.

ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ರಾಘವೇಂದ್ರ, ಧರ್ಮಣ್ಣ, ನಿರ್ಮಾಪಕರಾದ ವನಜಾ ಪಾಟೀಲ್ ಗರಡಿ ಸಿನಿಮಾ ಕುರಿತು ಮಾತನಾಡಿದರು.

ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದೆ. ಆ ಸ್ಪರ್ಧೆಗೆ ಬಿ.ಸಿ. ಪಾಟೀಲ್ ಸರ್ ಜಡ್ಜ್ ಆಗಿ ಆಗಮಿಸಿದ್ದರು. ಮುಂದೆ ಒಳ್ಳೆಯ ನಟಿ ಆಗುತ್ತೀಯಾ ಎಂದು ಆಶೀರ್ವದಿಸಿದ್ದರು. ಇಂದು ಅವರ ನಿರ್ಮಾಣದ ಗರಡಿ ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನಗೆ ನೃತ್ಯ ಎಂದರೆ ಇಷ್ಟ. ಇನ್ನು ಭಟ್ಟರು ಬರೆದಿರುವ ಈ ಹಲಗಿ ಹಾಡಿಗೆ ಹೆಜ್ಜೆ ಹಾಕಿದ್ದು ಮತ್ತಷ್ಟು ಖುಷಿಯಾಗಿದೆ ಎಂಬುದು ನಿಶ್ವಿಕಾ ನಾಯ್ಡು ಮಾತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ