logo
ಕನ್ನಡ ಸುದ್ದಿ  /  ಮನರಂಜನೆ  /  Actor Lakshman Passed Away: ಚಿತ್ರರಂಗಕ್ಕೆ ಮತ್ತೊಂದು ಆಘಾತ...ಸ್ಯಾಂಡಲ್‌ವುಡ್‌ ಪೋಷಕ ನಟ ಲಕ್ಷ್ಮಣ್‌ ಹೃದಯಾಘಾತದಿಂದ ನಿಧನ

Actor Lakshman Passed away: ಚಿತ್ರರಂಗಕ್ಕೆ ಮತ್ತೊಂದು ಆಘಾತ...ಸ್ಯಾಂಡಲ್‌ವುಡ್‌ ಪೋಷಕ ನಟ ಲಕ್ಷ್ಮಣ್‌ ಹೃದಯಾಘಾತದಿಂದ ನಿಧನ

HT Kannada Desk HT Kannada

Jan 23, 2023 10:42 AM IST

google News

ಪೋಷಕ ನಟ ಲಕ್ಷ್ಮಣ್‌ ಹೃದಯಾಘಾತದಿಂದ ನಿಧನ

    • ಲಕ್ಷ್ಮಣ್‌, ತಮ್ಮ ವೃತ್ತಿ ಜೀವನದಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಬಹುತೇಕ ಸಿನಿಮಾಗಳಲ್ಲಿ ಅವರು ಖಳನಟನಾಗಿ ಹಾಗೂ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ನಟಿಸಿದ್ದಾರೆ. ಅಂಬರೀಶ್‌ ಅವರ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಲಕ್ಷ್ಮಣ್‌ ಅವರನ್ನು ನೋಡಬಹುದು.
ಪೋಷಕ ನಟ ಲಕ್ಷ್ಮಣ್‌ ಹೃದಯಾಘಾತದಿಂದ ನಿಧನ
ಪೋಷಕ ನಟ ಲಕ್ಷ್ಮಣ್‌ ಹೃದಯಾಘಾತದಿಂದ ನಿಧನ

4 ದಿನಗಳ ಹಿಂದಷ್ಟೇ ಸ್ಯಾಂಡಲ್‌ವುಡ್‌ ಯುವನಟ ಧನುಷ್‌ ನಿಧನರಾಗಿದ್ದರು. ಈ ಬೇಸರ ಇನ್ನೂ ಮರೆಯಾಗುವ ಮುನ್ನವೇ ಕನ್ನಡ ಚಿತ್ರರಂಗ ಮತ್ತೊಬ್ಬ ಹಿರಿಯ ನಟನನ್ನು ಕಳೆದುಕೊಂಡಿದೆ. ಪೋಷಕ ನಟ ಲಕ್ಷ್ಮಣ್‌ ಇಂದು ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮಣ್‌ ಅವರಿಗೆ 74 ವರ್ಷ ವಯಸ್ಸಾಗಿತ್ತು.

ಇಂದು (ಜ.23) ಬೆಳಗ್ಗೆ ಸುಮಾರು 3.30 ಸಮಯದಲ್ಲಿ ಲಕ್ಷ್ಮಣ್‌ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ಲಕ್ಷ್ಮಣ್‌ ಅವರನ್ನು ನಾಗರಬಾವಿಯ ಜಿ.ಎಂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಲಕ್ಷ್ಮಣ್‌ ಕೊನೆಯುಸಿರೆಳೆದಿದ್ದಾರೆ. ವೈದ್ಯರು ಲಕ್ಷ್ಮಣ್‌ ನಿಧನರಾಗಿರುವುದನ್ನು ದೃಢಪಡಿಸಿದ್ದಾರೆ. ಲಕ್ಷ್ಮಣ್‌ ನಿಧನದ ಸುದ್ದಿ ತಿಳಿದ ಸ್ಯಾಂಡಲ್‌ವುಡ್‌ ಮಂದಿ ಆಘಾತ ವ್ಯಕ್ತಪಡಿಸಿದ್ದಾರೆ. ಲಕ್ಷ್ಮಣ್‌ ಅಂತಿಮ ದರ್ಶನ ಪಡೆಯಲು ಗಣ್ಯರು ಲಕ್ಷ್ಮಣ್‌ ನಿವಾಸದತ್ತ ತೆರಳುತ್ತಿದ್ದಾರೆ. ಹಿರಿಯ ನಟ ಶ್ರೀನಿವಾಸ ಮೂರ್ತಿ ಹಾಗೂ ಇನ್ನಿತರರು ಈಗಾಗಲೇ ಲಕ್ಷ್ಮಣ್‌ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಬಹುತೇಕ ಚಿತ್ರಗಳಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿ ಸಿನಿರಸಿಕರನ್ನು ರಂಜಿಸಿದ್ದ ನಟ ಇನ್ನಿಲ್ಲ ಎಂದು ತಿಳಿದು ಚಿತ್ರಪ್ರೇಮಿಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ್‌ ಅಂತಿಮ ದರ್ಶನ ಪಡೆದ ಹಿರಿಯ ನಟ ಶ್ರೀನಿವಾಸ್‌ ಮೂರ್ತಿ

ಲಕ್ಷ್ಮಣ್‌, ತಮ್ಮ ವೃತ್ತಿ ಜೀವನದಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಬಹುತೇಕ ಸಿನಿಮಾಗಳಲ್ಲಿ ಅವರು ಖಳನಟನಾಗಿ ಹಾಗೂ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ನಟಿಸಿದ್ದಾರೆ. ಅಂಬರೀಶ್‌ ಅವರ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಲಕ್ಷ್ಮಣ್‌ ಅವರನ್ನು ನೋಡಬಹುದು. ಲಕ್ಷ್ಮಣ್‌ ಅವರ ತಂದೆ ತಾಯಿಗೆ ಒಟ್ಟು 8 ಮಂದಿ ಮಕ್ಕಳು. ಆರ್ಥಿಕ ಸಮಸ್ಯೆಯಿಂದಾಗಿ ಲಕ್ಷ್ಮಣ್‌, 10ನೇ ತರಗತಿ ನಂತರ ಓದು ಮುಂದುವರೆಸಲು ಸಾಧ್ಯವಾಗಲಿಲ್ಲ. ಓದು ಮುಗಿಸಿ ಫ್ಯಾಕ್ಟರಿಯೊಂದಕ್ಕೆ ಕೆಲಸಕ್ಕೆ ಸೇರಿದ ಅವರು ಡಾ. ರಾಜ್‌ಕುಮಾರ್‌ ಅವರ ಕಟ್ಟಾ ಅಭಿಮಾನಿ. 'ಸತ್ಯ ಹರಿಶ್ಚಂದ್ರ' ಸಿನಿಮಾ ನೋಡಿ ಪ್ರೇರಿತರಾಗಿದ್ದ ಲಕ್ಷ್ಮಣ್‌ ಅವರಿಗೂ ನಟಿಸುವ ಆಸೆ ಉಂಟಾಗಿದೆ. ಜೊತೆಗೆ ಫ್ಯಾಕ್ಟರಿಯಲ್ಲಿ ಏರ್ಪಡಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಲಕ್ಷ್ಮಣ್‌ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಜೊತೆಗೆ ಕಸರತ್ತು ಮಾಡಿ ಬಾಡಿ ಬಿಲ್ಡ್‌ ಮಾಡಿದ್ದರು. ಮುಂದೆ ಇದೇ ಅವರಿಗೆ ಚಿತ್ರರಂಗಕ್ಕೆ ಎಂಟ್ರಿ ನೀಡಲು ಕಾರಣವಾಯ್ತು.

'ಉಷಾ ಸ್ವಯಂವರ' ಎಂಬ ಚಿತ್ರದ ಮೂಲಕ ಲಕ್ಷ್ಮಣ್‌ ನಾಯಕನಾಗಿ ಚಿತ್ರಂಗಕ್ಕೆ ಬಂದರು. ಆದರೆ ನಂತರದ ಸಿನಿಮಾಗಳಲ್ಲಿ ಅವರಿಗೆ ನಾಯಕನ ಪಾತ್ರ ದೊರೆಯಲಿಲ್ಲ. ಎಲ್ಲಾ ಸಿನಿಮಾಗಳಲ್ಲಿ ಅವರು ವಿಲನ್‌ ಪಾತ್ರಗಳಿಗೆ ಫಿಕ್ಸ್‌ ಆದರು. ಅಂಬರೀಶ್‌ ಜೊತೆ 'ಅಂತ' ಚಿತ್ರದಲ್ಲಿ ಲಕ್ಷ್ಮಣ್‌ ಅವರ ಇನ್‌ಸ್ಪೆಕ್ಟರ್‌ ಕುಲವಂತ್‌ ಪಾತ್ರವನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಅದು ಪಾಸಿಟಿವ್‌ ರೋಲ್‌ ಆಗಿತ್ತು. ರೆಬೆಲ್‌ ಸ್ಟಾರ್‌ ಅಂಬರೀಶ್‌, ಡಾ. ವಿಷ್ಣುವರ್ಧನ್‌ ಸೇರಿ ಅನೇಕ ಸ್ಟಾರ್‌ ನಟರೊಂದಿಗೆ ಲಕ್ಷ್ಮಣ್‌ ನಟಿಸಿದ್ದರು. ತಮ್ಮ ಅಭಿನಯದ ಮೂಲಕ ಸಿನಿಪ್ರಿಯರನ್ನು ಸೆಳೆದಿದ್ದ ಲಕ್ಷ್ಮಣ್‌ ಇನ್ನು ನೆನಪು ಮಾತ್ರ. ಲಕ್ಷ್ಮಣ್‌ ನಿಧನಕ್ಕೆ ಕನ್ನಡ ಚಿತ್ರರಂಗ , ಸ್ನೇಹಿತರು, ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ