logo
ಕನ್ನಡ ಸುದ್ದಿ  /  ಮನರಂಜನೆ  /  Swati Konde: ಸ್ವಾತಿ ಕೊಂಡೆ ಯಾರು? ಮೇಯಳಗನ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಈ ಕನ್ನಡದ ನಟಿ

Swati Konde: ಸ್ವಾತಿ ಕೊಂಡೆ ಯಾರು? ಮೇಯಳಗನ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಈ ಕನ್ನಡದ ನಟಿ

Suma Gaonkar HT Kannada

Nov 02, 2024 05:54 PM IST

google News

ಮೇಯಳಗನ್‌ ಸಿನಿಮಾದಲ್ಲಿ ಅಭಿನಯಿಸಿದ ಕನ್ನಡದ ನಟಿ ಸ್ವಾತಿ ಕೊಂಡೆ

    • ಕನ್ನಡದ ನಟಿ ಸ್ವಾತಿ ಕೊಂಡೆ ಈಗ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಮ ರಾಜ್ಯ, ಕಟ್ಟು ಕಥೆ ಮತ್ತು ಕಮರೊಟ್ಟು ಚೆಕ್‌ ಪೋಸ್ಟ್‌ ಸಿನಿಮಾಗಳಲ್ಲಿ ಅಭಿನಯಿಸಿದ್ದ ಈ ನಟಿ ಈಗ ತಮಿಳು ಚಿತ್ರ ಮೇಯಳಗನ್‌ನಲ್ಲೂ ಅಭಿನಯಿಸಿದ್ದಾರೆ. 
ಮೇಯಳಗನ್‌ ಸಿನಿಮಾದಲ್ಲಿ ಅಭಿನಯಿಸಿದ ಕನ್ನಡದ ನಟಿ ಸ್ವಾತಿ ಕೊಂಡೆ
ಮೇಯಳಗನ್‌ ಸಿನಿಮಾದಲ್ಲಿ ಅಭಿನಯಿಸಿದ ಕನ್ನಡದ ನಟಿ ಸ್ವಾತಿ ಕೊಂಡೆ

ಕನ್ನಡದ ನಟಿ ಸ್ವಾತಿ ಕೊಂಡೆ ಈಗ ಪರಭಾಷೆಗಳಲ್ಲೂ ಹೆಚ್ಚಿನ ಹೆಸರು ಮಾಡುತ್ತಿದ್ದಾರೆ. ಬೇರೆ ಭಾಷೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮತ್ತು ಹೆಸರು ಮಾಡಿದ ಸಿನಿಮಾ ಮೇಯಳಗನ್‌ನಲ್ಲಿ ಅರವಿಂದ ಅವರ ತಂಗಿ ಪಾತ್ರವನ್ನು ಇವರು ಅಭಿನಯಿಸಿದ್ದರು. ತೆರೆಯ ಮೇಲೆ ಹೆಚ್ಚಿನ ಸಮಯ ಇವರು ಇಲ್ಲದೇ ಇದ್ದರೂ ಎಲ್ಲರ ಮನದಲ್ಲಿ ಇವರ ಪಾತ್ರ ಇರುವಂತೆ ಮಾಡಿದವರು ಸ್ವಾತಿ ಕೊಂಡೆ. ಅಣ್ಣ ತಂಗಿ ಭಾಂದವ್ಯ ತೆರೆ ಮೇಲೆ ಎದ್ದು ಕಾಣುವಂತೆ ಮತ್ತು ಪ್ರೇಕ್ಷಕರ ಮನ ಮುಟ್ಟುವಂತೆ ಇವರು ನಟಿಸಿದ್ದಾರೆ. ಇವರು ಕಾಣಿಸಿಕೊಳ್ಳುವುದು ಕೇವಲ ಒಂದೇ ಸೀನ್‌ನಲ್ಲಾದರೂ ಎಲ್ಲರಿಗೂ ಕಣ್ಣೀರು ತರಿಸುವಂತೆ ನಟಿಸಿದ್ದಾರೆ.

ತಮಿಳು ಅಭಿಮಾನಿಗಳಿಂದ ಪ್ರೀತಿಯಿಂದ 'ಪ್ರಿಯಾ' ಎಂದು ಕರೆಯಲ್ಪಡುವ ಸ್ವಾತಿ ಕೊಂಡೆ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಅವರು ತಮಿಳು ಧಾರಾವಾಹಿ 'ಈರಮನ ರೋಜಾವೆ 2' ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇವರು ಕನ್ನಡ ಚಿತ್ರರಂಗದಲ್ಲಿ ಮೊದಲು ಪಾತ್ರ ಮಾಡಿದ್ದರು. ಜಯತೀರ್ಥ ಅವರ ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲೂ ಇವರು ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು. ವೆನಿಲ್ಲಾ ಸಿನಿಮಾದಲ್ಲೂ ಇವರು ಅಭಿನಯಿಸಿದ್ದಾರೆ. ರಾಮ ರಾಜ್ಯ, ಕಟ್ಟು ಕಥೆ ಮತ್ತು ಕಮರೊಟ್ಟು ಚೆಕ್‌ ಪೋಸ್ಟ್‌ ಸಿನಿಮಾದಲ್ಲೂ ಇವರು ಪಾತ್ರ ನಿರ್ವಹಿಸಿದ್ದಾರೆ. ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯಾಗಿದ್ದ ಇವರು ಈಗ ಪರ ಭಾಷೆಗಳಲ್ಲೂ ಮಿಂಚುತ್ತಿದ್ದಾರೆ.

ಇದೀಗ ಓಟಿಟಿಯಲ್ಲಿ ಭಾರೀ ಸದ್ದು ಮಾಡುತ್ತಿರುವ ಮೇಯಳಗನ್ ಸಿನಿಮಾದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸುವ ಆಶಯ ಹೊಂದಿದ್ದಾರೆ. 'ಯಾರಿವಳು' ಧಾರಾವಾಹಿಯಲ್ಲಿ ಮಾಯಾ ಎನ್ನುವ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು ಸ್ವಾತಿ ಕೊಂಡೆ. ಆಂಜನೇಯನ ಪರಮ ಭಕ್ತೆಯಾಗಿ ಕಾಣಿಸಿಕೊಂಡಿದ್ದರು.

ಮೇಯಳಗನ್‌ ಸಿನಿಮಾ

ನೆಟ್‌ಫ್ಲಿಕ್ಸ್‌ ಒಟಿಟಿ ವೇದಿಕೆಗೆ ಬಂದಿರುವ ತಮಿಳಿನ ಮೇಯಳಗನ್ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಹಲವರು ತಮ್ಮ ಬಾಲ್ಯ ನೆನಪಾಯಿತು ಎಂದು ನೆನಪುಗಳನ್ನು ಮೊಗೆಯುತ್ತಿದ್ದಾರೆ. ಸಿ.ಪ್ರೇಮ್‌ಕುಮಾರ್ ನಿರ್ದೇಶಕನ ಫಸ್ಟ್‌ ಕ್ಲಾಸ್ ಎಂದಿರುವ ಹಲವರು, ಛಾಯಾಗ್ರಹಣವೂ ಸೂಪರ್ ಎಂದಿದ್ದಾರೆ. ಹಾಗೆಂದು ಈ ಚಿತ್ರವೂ ಟೀಕೆಗಳಿಂದ ಹೊರತಾಗಿಲ್ಲ. ಇದು ವಾಸ್ತವಕ್ಕೆ ದೂರವಾದ ರೊಮಾಂಟಿಕ್ ಚಿತ್ರ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ