logo
ಕನ್ನಡ ಸುದ್ದಿ  /  ಮನರಂಜನೆ  /  Siima Awards 2022: ಅಪ್ಪು ಹಾಡಿದ ಹಾಡನ್ನು ಹಾಡಿ ಭಾವುಕರಾದ ಶಿವಣ್ಣ...ವಿಡಿಯೋ ವೈರಲ್‌

SIIMA Awards 2022: ಅಪ್ಪು ಹಾಡಿದ ಹಾಡನ್ನು ಹಾಡಿ ಭಾವುಕರಾದ ಶಿವಣ್ಣ...ವಿಡಿಯೋ ವೈರಲ್‌

HT Kannada Desk HT Kannada

Sep 11, 2022 05:42 PM IST

google News

ಸೈಮಾ ವೇದಿಕೆಯಲ್ಲಿ ಅಪ್ಪು ನೆನೆದು ಹಾಡು ಹಾಡಿದ ಶಿವಣ್ಣ

    • ವೇದಿಕೆ ಹಿಂದಿನ ದೊಡ್ಡ ಪರದೆಯಲ್ಲಿ ಅಪ್ಪು ಫೋಟೋಗಳು ರಾರಾಜಿಸುತ್ತಿದ್ದವು. ಈ ಸಮಯದಲ್ಲಿ ಶಿವರಾಜ್‌ಕುಮಾರ್‌ ಬಹಳ ಭಾವುಕರಾಗಿದ್ದರು. 'ಭಾಗ್ಯವಂತ' ಚಿತ್ರದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ...ಹಾಡನ್ನು ಬೇಸರದಿಂದಲೇ ಹಾಡಿದ್ದು ಕಂಡುಬಂತು.
ಸೈಮಾ ವೇದಿಕೆಯಲ್ಲಿ ಅಪ್ಪು ನೆನೆದು ಹಾಡು ಹಾಡಿದ ಶಿವಣ್ಣ
ಸೈಮಾ ವೇದಿಕೆಯಲ್ಲಿ ಅಪ್ಪು ನೆನೆದು ಹಾಡು ಹಾಡಿದ ಶಿವಣ್ಣ

ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ 2022ನೇ ಸಾಲಿನ ಸೈಮಾ ಪ್ರಶಸ್ತಿ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದೆ. ವಿವಿಧ ವಿಭಾಗಗಳಲ್ಲಿ ತಂತ್ರಜ್ಞರು, ಕಲಾವಿದರು, ಪೋಷಕ ನಟರು ಹಾಗೂ ಸಿನಿಮಾಗಳಿಗೆ ಪ್ರಶಸ್ತಿ ದೊರೆತಿದೆ.

ಸೈಮಾ ವೇದಿಕೆಯಲ್ಲಿ ಈ ಬಾರಿ ಮಿಸ್‌ ಆಗಿದ್ದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್.‌ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಕಾರ್ಯಕ್ರಮದಲ್ಲಿ ಪುನೀತ್‌ ಅವರನ್ನು ನೆನೆದು ಬಹಳಷ್ಟು ಮಂದಿ ಭಾವುಕರಾದರು. 'ಯುವರತ್ನ' ಚಿತ್ರದ ನಟನೆಗಾಗಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಆದರೆ ಅದನ್ನು ಸ್ವೀಕರಿಸಲು ಅವರೇ ಇರಲಿಲ್ಲ. ಇನ್ನು ಅಪ್ಪು ಅವರನ್ನು ನೆನೆದು ಶಿವರಾಜ್‌ಕುಮಾರ್‌ ಹಾಡಿದ ಹಾಡೊಂದು ಅಲ್ಲಿ ನೆರೆದಿದ್ದವರ , ವಿಡಿಯೋ ನೋಡಿದವರ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ.

ವೇದಿಕೆಯಲ್ಲಿ ಶಿವರಾಜ್‌ಕುಮಾರ್‌ ದಂಪತಿ, ಶಿವಣ್ಣ ಸಹೋದರಿಯರಾದ ಲಕ್ಷ್ಮಿ, ಪೂರ್ಣಿಮಾ, ಯಶ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವೇದಿಕೆ ಹಿಂದಿನ ದೊಡ್ಡ ಪರದೆಯಲ್ಲಿ ಅಪ್ಪು ಫೋಟೋಗಳು ರಾರಾಜಿಸುತ್ತಿದ್ದವು. ಈ ಸಮಯದಲ್ಲಿ ಶಿವರಾಜ್‌ಕುಮಾರ್‌ ಬಹಳ ಭಾವುಕರಾಗಿದ್ದರು. 'ಭಾಗ್ಯವಂತ' ಚಿತ್ರದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ...ಹಾಡನ್ನು ಬೇಸರದಿಂದಲೇ ಹಾಡಿದ್ದು ಕಂಡುಬಂತು. ಹಾಡು ಕೇಳುತ್ತಾ ಎಲ್ಲರೂ ಒಂದು ಕ್ಷಣ ಮೌನಕ್ಕೆ ಜಾರಿದರು. ಇದೀಗ ಈ ವಿಡಿಯೋ ವೈರಲ್‌ ಆಗುತ್ತಿದೆ.

ಬೆಂಗಳೂರಿನಲ್ಲಿ ನಡೆದ ಚೊಚ್ಚಲ SIIMA 2022 ಅವಾರ್ಡ್‌ ಕಾರ್ಯಕ್ರಮ ಮೊದಲ ದಿನವಾದ ಶನಿವಾರ ಹಲವು ವಿಶೇಷತೆಗಳಿಂದ ಕೂಡಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಇಂಡಸ್ಟ್ರಿ ಮಂದಿಯ ಸಮಾಗಮದಿಂದ ಇಡೀ ಕಾರ್ಯಕ್ರಮಕ್ಕೆ ಹಬ್ಬದ ಕಳೆ ಬಂದಿತ್ತು. ಶನಿವಾರ ಕನ್ನಡ ಮತ್ತು ತೆಲುಗು ಎರಡು ಭಾಷೆಗಳ ಅವಾರ್ಡ್‌ ಪಟ್ಟಿ ಪ್ರಕಟಗೊಂಡರೆ ಭಾನುವಾರ ಉಳಿದ ಭಾಷೆಗಳ ಪ್ರಶಸ್ತಿ ಪಟ್ಟಿಯನ್ನು ಘೋಷಿಸಲಾಗಿದೆ. ಈ ಬಾರಿ ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿರುವುದು ಕನ್ನಡ ಸಿನಿಪ್ರಿಯರಿಗೆ ಬಹಳ ಖುಷಿ ನೀಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ