logo
ಕನ್ನಡ ಸುದ್ದಿ  /  ಮನರಂಜನೆ  /  Comedy Videos: ಜಿಮ್‌ ವರ್ಕೌಟ್‌ ಪ್ರಿಯರು ನೋಡಲೇಬೇಕಾದ ಹಾಸ್ಯ, ಕೋಚ್‌ ಸೈಫ್‌ ಅಸ್ಸಾದ್‌ ವಿಡಿಯೋಗಳನ್ನು ನೋಡಿದ್ರೆ ಬಿದ್ದುಬಿದ್ದು ನಗ್ತೀರಾ

Comedy Videos: ಜಿಮ್‌ ವರ್ಕೌಟ್‌ ಪ್ರಿಯರು ನೋಡಲೇಬೇಕಾದ ಹಾಸ್ಯ, ಕೋಚ್‌ ಸೈಫ್‌ ಅಸ್ಸಾದ್‌ ವಿಡಿಯೋಗಳನ್ನು ನೋಡಿದ್ರೆ ಬಿದ್ದುಬಿದ್ದು ನಗ್ತೀರಾ

Praveen Chandra B HT Kannada

Aug 29, 2024 03:59 PM IST

google News

ಕೋಚ್‌ ಸೈಫ್‌ ಅಸ್ಸಾದ್‌ ಜಿಮ್‌ ಕಾಮಿಡಿ ವಿಡಿಯೋಗಳು

    • Funny Workout Videos: ಜಿಮ್‌ ಅಂದ್ರೆ ಕೇವಲ ಡಂಬಲ್ಸ್‌, ಸೈಕ್ಲಿಂಗ್‌, ಥ್ರೆಡ್‌ಮಿಲ್‌, ವೇಟ್‌ ಲಿಫ್ಟಿಂಗ್‌, ವರ್ಕೌಟ್‌ ಮಾತ್ರವಲ್ಲ. ಅಲ್ಲೂ ಫನ್‌ ಇರುತ್ತದೆ. ಜಿಮ್‌ನೊಳಗಿನ ಹಾಸ್ಯ ವಿಡಿಯೋ ನೋಡಲು ಬಯಸುವವರು ಜನಪ್ರಿಯ ಕೋಚ್‌ ಸೈಫ್‌ ಅಸ್ಸಾದ್‌ ವಿಡಿಯೋ ಪರಿಶೀಲಿಸಬಹುದು. ಕೆಲವೊಂದು ವಿಡಿಯೋಗಳನ್ನು ನೋಡಿದ್ರೆ ನೀವು ಬಿದ್ದುಬಿದ್ದು ನಗೋದು ಗ್ಯಾರಂಟಿ.
ಕೋಚ್‌ ಸೈಫ್‌ ಅಸ್ಸಾದ್‌ ಜಿಮ್‌ ಕಾಮಿಡಿ ವಿಡಿಯೋಗಳು
ಕೋಚ್‌ ಸೈಫ್‌ ಅಸ್ಸಾದ್‌ ಜಿಮ್‌ ಕಾಮಿಡಿ ವಿಡಿಯೋಗಳು

Funny workout Videos: ಜಿಮ್‌ಗೆ ಹೋಗಿ ಕಸರತ್ತು ಮಾಡಿ ಬಾಡಿ ಬಿಲ್ಡಿಂಗ್‌ ಮಾಡೋದು ಬಹುತೇಕ ತರುಣರ ಬಯಕೆ. ಇದೇ ಸಮಯದಲ್ಲಿ ತೂಕ ಇಳಿಸಿಕೊಂಡು ಫಿಟ್ಟಾಗಿ ಇರಬೇಕೆಂದು ಯುವತಿಯರೂ ಬಯಸುತ್ತಾರೆ. ಸಿನಿಮಾ ಸೆಲೆಬ್ರೆಟಿಗಳಿಗಂತೂ ಜಿಮ್‌ ಬದುಕಿನ ಅವಿಭಾಜ್ಯ ಅಂಗವೇ ಆಗಿದೆ. ರಶ್ಮಿಕಾ ಮಂದಣ್ಣ, ಅಕ್ಷಯ್‌ ಕುಮಾರ್‌ ಮಾತ್ರವಲ್ಲದೆ ಕನ್ನಡ ಸೀರಿಯಲ್‌ ನಟಿ ರಜಿನಿ, ನಿವೇದಿತಾ ಗೌಡ ಸೇರಿದಂತೆ ಎಲ್ಲರಿಗೂ ಜಿಮ್‌ ಬೇಕೇಬೇಕು. ಕಿಚ್ಚ ಸುದೀಪ್‌, ದುನಿಯಾ ವಿಜಯ್‌, ಗಣೇಶ್‌, ಶಿವರಾಜ್‌ ಕುಮಾರ್‌, ಯಶ್‌ ಮುಂತಾದ ನಟರೂ ಜಿಮ್‌ ತಪ್ಪಿಸಿಕೊಳ್ಳೋದಿಲ್ಲ. ಅಮೃತಧಾರೆ, ಲಕ್ಷ್ಮಿ ಬಾರಮ್ಮ, ಲಕ್ಷ್ಮಿ ನಿವಾಸ, ಅಣ್ಣಯ್ಯ ಸೇರಿದಂತೆ ಯಾವುದೇ ಸೀರಿಯಲ್‌ ಇರಲಿ, ಅಲ್ಲಿನ ಬಹುತೇಕ ಕಲಾವಿದರು ಜಿಮ್‌ಗಳಲ್ಲಿ ಕಾಣಸಿಗುತ್ತಾರೆ. ಸಿನಿಮಾ ಸೆಲೆಬ್ರಿಟಿಗಳು ಮಾತ್ರವಲ್ಲದೆ ಕಾಲೇಜು ತರುಣ ತರುಣಿಯರು ಕ್ಲಾಸ್‌ನಲ್ಲಿ ಸಖತ್‌ ಕಾಣಿಸಬೇಕೆಂದು ಜಿಮ್‌ ಮೆಂಬರ್‌ಶಿಪ್‌ ಪಡೆಯುತ್ತಾರೆ. ಇನ್ನು ಕೆಲವು ತಿಂಗಳಲ್ಲಿ ಮದುವೆ ಇದೆಯೆಂದ್ರೆ ಯುವಕರು ಜಿಮ್‌ಗೆ ಸೇರಿ ಹೊಟ್ಟೆ ಕರಗಿಸಲು ಯತ್ನಿಸುತ್ತಾರೆ. ಒಟ್ಟಾರೆ, ಜಿಮ್‌ ಈಗ ಬಹುತೇಕರಿಗೆ ತಮ್ಮ ದಿನಚರಿಯ ಒಂದು ಭಾಗವಾಗಿದೆ. ಇನ್ನು ಕೆಲವರು ಜಿಮ್‌ಗೆ ಹೋಗದೆ ಮನೆಯಲ್ಲಿಯೇ ಡಂಬಲ್ಸ್‌ ಇತ್ಯಾದಿ ಇಟ್ಟುಕೊಂಡು ಕಸರತ್ತು ಮಾಡಬಹುದು. ಕಠಿಣ ಕೆಲಸ ಮಾಡುವ ಪರಿಶ್ರಮಿಗಳು ನಮಗಿದೇ ಜಿಮ್‌ ಎಂದುಕೊಳ್ಳಬಹುದು. ಜಿಮ್‌ಗೆ ಇರುವ ಬೇಡಿಕೆಯಿಂದಾಗಿ ಬೆಂಗಳೂರಿನಂತಹ ನಗರಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಜಿಮ್‌ಗಳು ಇರುತ್ತವೆ.

ಜಿಮ್‌ ಅಂದ್ಮೆಲೆ ಅಲ್ಲಿ ಕೋಚ್‌ ಇರುತ್ತಾರೆ. ಒಳ್ಳೆಯ ಕೋಚ್‌ ಸಿಕ್ಕರೆ ಅದೃಷ್ಟ. ಇಂತಹ ಕೋಚ್‌ಗಳು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ವರ್ಕೌಟ್‌ ವಿಡಿಯೋಗಳನ್ನು ಹಾಕುತ್ತಾ ಇರುತ್ತಾರೆ. ಇನ್ನಷ್ಟು ಜನ ಜಿಮ್‌ಗೆ ಬರಲಿ ಎನ್ನುವುದು ಅವರ ಉದ್ದೇಶ. ಯೂಟ್ಯೂಬ್‌ಗಳಲ್ಲಿಯೂ ಸಾಕಷ್ಟು ಜಿಮ್‌ ವರ್ಕೌಟ್‌ ವಿಡಿಯೋಗಳು ಸಿಗುತ್ತವೆ. ಆದರೆ, ಜಿಮ್‌ಗೆ ಹೋಗುವವರು, ಬಾಡಿ ಬಿಲ್ಡ್‌ ಮಾಡುವವರು, ತೂಕ ಇಳಿಸಲು ಪ್ರಯತ್ನಿಸುವವರ ಕಣ್ಣಿಗೆ ಸೈಫ್‌ ಅಸ್ಸಾದ್‌ ಎಂಬ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿರಬಹುದು. ಇವರು ಇನ್‌ಸ್ಟಾಗ್ರಾಂನಲ್ಲಿ ಫೇಮಸ್‌. ಇವರು ಟಿಕ್‌ಟಾಕ್‌ ಕಾಲದಲ್ಲಿ ಬೆಳಕಿಗೆ ಬಂದ ಪ್ರತಿಭೆ. ಟಿಕ್‌ಟಾಕ್‌ನಲ್ಲಿ ಹಲವು ಲಕ್ಷ ಫಾಲೋವರ್ಸ್‌ ಹೊಂದಿರುವ ಇವರ ವಿಡಿಯೋಗಳನ್ನು ಭಾರತೀಯರು ಇನ್‌ಸ್ಟಾಗ್ರಾಂನಲ್ಲಿ ನೋಡಬಹುದು. ಈ ಕೋಚ್‌ ಸೈಫ್‌ ಅಸ್ಸಾದ್‌ ಎಂಬವರು ತಮ್ಮ ಸಹವರ್ತಿಯೊಬ್ಬರ ಜತೆಗೆ ಸೇರಿಕೊಂಡು ಮಾಡುವ ವಿಡಿಯೋಗಳು ಸಖತ್‌ ವೈರಲ್‌ ಆಗುತ್ತಿವೆ. ಸೈಫ್‌ ಅಸ್ಸಾದ್‌ ಅವರ ಕೆಲವು ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ. ಕೊನೆಗೆ ಈ ಸೈಫ್‌ ಅಸ್ಸಾದ್‌ ಯಾರೆಂದು ತಿಳಿದುಕೊಳ್ಳೋಣ.

ಕೋಚ್‌ ಸೈಫ್‌ ಅಸ್ಸಾದ್‌ ಕಾಮಿಡಿ ವಿಡಿಯೋಗಳು

ಜಿಮ್‌ಗೆ ಸೇರಿದ ಬಳಿಕ ಸಿಹಿ ತಿನ್ನುವ ಆಸೆ, ಸೋಮಾರಿತನ, ಹೆಚ್ಚು ಭಾರ ಎತ್ತಲು ಹಿಂಜರಿಯುವುದು, ಜಿಮ್‌ನಲ್ಲಿ ಹೇಗೆ ಸೊಂಟ ಭಾಗಿಸಬೇಕೆಂದು ತಿಳಿಸುವುದು, ಇತ್ಯಾದಿ ಜಿಮ್‌ನ ಸಣ್ಣಪುಟ್ಟ ವಿಚಾರಗಳನ್ನೇ ಇವರು ಹಾಸ್ಯವಾಗಿ ಬಳಸಿಕೊಂಡಿದ್ದಾರೆ.

ಕೋಚ್‌ ಸೈಫ್‌ ಅಸ್ಸಾದ್‌ ಹಂಚಿಕೊಳ್ಳುವ ವಿಡಿಯೋಗಳು ಹಲವು ಲಕ್ಷ ವೀಕ್ಷಣೆ ಪಡೆದುಕೊಳ್ಳುತ್ತವೆ. ಇವರಿಬ್ಬರ ಕಸರತ್ತು ನೋಡಿ ನಗು ತಡೆಯಲಾಗುತ್ತಿಲ್ಲ ಎಂದು ಜನರು ಕಾಮೆಂಟ್‌ ಮಾಡುತ್ತಾರೆ.

ಯಾರಿದು ಕೋಚ್‌ ಸೈಫ್‌ ಅಸ್ಸಾದ್‌?

ಈತ ಭಾರತೀಯ ಅಲ್ಲ. ದೂರದ ಪ್ಯಾಲಿಸ್ತೀನ್‌ನ ಬೆತ್‌ಲೇಮ್‌ನ ಫಿಟ್ನೆಸ್‌ ಕೋಚ್‌. ಜನಪ್ರಿಯ ಫಿಟ್ನೆಸ್‌ ತರಬೇತುದಾರರಾಗಿರುವ ಇವರು ತಮ್ಮ ತಂಡದ ಜತೆ ಮಾಡುವ ಹಾಸ್ಯ ವಿಡಿಯೋಗಳ ಮೂಲಕ ಪ್ಯಾಲಿಸ್ತೀನ್‌ ಹೊರಗಡೆಯೂ ಫೇಮಸ್‌ ಆಗಿದ್ದಾರೆ. ವಿಶೇಷವಾಗಿ ಇವರ ಪೋಸ್ಟ್‌ಗಳಿಗೆ ಭಾರತೀಯರ ಕಾಮೆಂಟ್‌ಗಳೂ ಹೆಚ್ಚಿವೆ.

ಜಿಮ್‌ ಅಂದ್ರೆ ಕೇವಲ ಡಂಬಲ್ಸ್‌, ಸೈಕ್ಲಿಂಗ್‌, ಥ್ರೆಡ್‌ಮಿಲ್‌, ವೇಟ್‌ ಲಿಫ್ಟಿಂಗ್‌, ವರ್ಕೌಟ್‌ ಮಾತ್ರವಲ್ಲ. ಅಲ್ಲೂ ಸಾಕಷ್ಟು ಕಾಮಿಡಿ, ಫನ್‌, ಮನರಂಜನೆ ಇರುತ್ತದೆ ಎನ್ನುವುದನ್ನು ಸೈಫ್‌ ಅಸ್ಸಾದ್‌ ವಿಡಿಯೋಗಳು ನೆನಪಿಸುತ್ತದೆ ಅಲ್ಲವೇ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ