logo
ಕನ್ನಡ ಸುದ್ದಿ  /  ಮನರಂಜನೆ  /  ವರ್ಷಾ ಕಾವೇರಿ ಜತೆಗಿನ ಬ್ರೇಕಪ್‌ ಬಗ್ಗೆ ವರುಣ್‌ ಆರಾಧ್ಯ ಸ್ಪಷ್ಟನೆ; ಆಕೆ ಬಿಟ್ರೂ ಕರ್ಮ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದ ನೆಟ್ಟಿಗರು

ವರ್ಷಾ ಕಾವೇರಿ ಜತೆಗಿನ ಬ್ರೇಕಪ್‌ ಬಗ್ಗೆ ವರುಣ್‌ ಆರಾಧ್ಯ ಸ್ಪಷ್ಟನೆ; ಆಕೆ ಬಿಟ್ರೂ ಕರ್ಮ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದ ನೆಟ್ಟಿಗರು

Sep 14, 2023 05:21 PM IST

google News

ವರ್ಷಾ ಕಾವೇರಿ ಜತೆಗಿನ ಬ್ರೇಕಪ್‌ ಬಗ್ಗೆ ವರುಣ್‌ ಆರಾಧ್ಯ ಸ್ಪಷ್ಟನೆ; ಆಕೆ ಬಿಟ್ರೂ ಕರ್ಮ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದ ನೆಟ್ಟಿಗರು

    • ಸೋಷಿಯಲ್‌ ಮೀಡಿಯಾ ಮೂಲಕ ಮುನ್ನೆಲೆಗೆ ಬಂದ ವರ್ಷಾ ಕಾವೇರಿ ಮತ್ತು ವರುಣ್‌ ಆರಾಧ್ಯ ಜೋಡಿ ನಡುವೆ ಬ್ರೇಕ್‌ಅಪ್‌ ಆಗಿದೆ. ಆ ಬ್ರೇಕ್‌ ಅಪ್‌ ಬಗ್ಗೆ ಇಬ್ಬರೂ ಪ್ರತ್ಯೇಕ ಪೋಸ್ಟ್‌ ಹಂಚಿಕೊಂಡಿದ್ದಾರೆ. 
ವರ್ಷಾ ಕಾವೇರಿ ಜತೆಗಿನ ಬ್ರೇಕಪ್‌ ಬಗ್ಗೆ ವರುಣ್‌ ಆರಾಧ್ಯ ಸ್ಪಷ್ಟನೆ; ಆಕೆ ಬಿಟ್ರೂ ಕರ್ಮ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದ ನೆಟ್ಟಿಗರು
ವರ್ಷಾ ಕಾವೇರಿ ಜತೆಗಿನ ಬ್ರೇಕಪ್‌ ಬಗ್ಗೆ ವರುಣ್‌ ಆರಾಧ್ಯ ಸ್ಪಷ್ಟನೆ; ಆಕೆ ಬಿಟ್ರೂ ಕರ್ಮ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದ ನೆಟ್ಟಿಗರು

Varsha Kaveri Varun Breakup: ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ರೀಲ್ಸ್‌ ಮೂಲಕವೇ ಗಮನ ಸೆಳೆದ ವರ್ಷಾ ಕಾವೇರಿ ಮತ್ತು ವರುಣ್‌ ಆರಾಧ್ಯ ಜೋಡಿ ತಮ್ಮ ಪ್ರೀತಿಗೆ ತಿಲಾಂಜಲಿ ಇಟ್ಟಿದೆ. ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ದೂರ ದೂರವಾಗಿದೆ. ಈ ವಿಚಾರವನ್ನು ಬುಧವಾರವಷ್ಟೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದರು ವರ್ಷಾ. ಮನದೊಳಗಿನ ನೋವನ್ನು ಪತ್ರದ ರೀತಿಯಲ್ಲಿ ಬರೆದುಕೊಂಡು, ವರುಣ್‌ಗೂ ಮತ್ತು ಅವಳ ಹುಡುಗಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದರು. ಇದೀಗ ವರುಣ್‌ ಆರಾಧ್ಯ ಸರದಿ.

ವರ್ಷಾಳ ರೀತಿಯಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯವನ್ನು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿರುವ ವರುಣ್‌, ನನ್ನ ಹಾಗೂ ವರ್ಷಾ ನಡುವಿನ ಬ್ರೇಕಪ್‌ ವಿಚಾರವನ್ನು ಕುಟುಂಬಕ್ಕೆ ಎಳೆದು ತರಬೇಡಿ, ಇಬ್ಬರೂ ಸಮ್ಮತಿಯ ಪಡೆದುಕೊಂಡೇ ದೂರವಾಗಿದ್ದೇವೆ ಎಂದು ವರುಣ್‌ ಬರೆದುಕೊಂಡಿದ್ದಾರೆ. ಹೀಗಿದೆ ವರುಣ್‌ ಹಂಚಿಕೊಂಡ ಪೋಸ್ಟ್‌.

ಇಬ್ಬರ ಸಂಬಂಧ ಅಂತ್ಯ

"ಎಲ್ಲರಿಗೂ ನಮಸ್ಕಾರ ನೀವು ವರ್ಷಾ ಕಾವೇರಿ ಮತ್ತು ನನಗೆ ತೋರಿಸಿದ ಸಪೋರ್ಟ್‌ಗೆ ತುಂಬಾ ವಂದನೆಗಳು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಲಹೆ ಮತ್ತು ದೃಷ್ಟಿಕೋನವಿದೆ, ಹೀಗಾಗಿ ನಮ್ಮ ನಿರ್ಧಾರವನ್ನು ನೀವು ಒಪ್ಪಿಕೊಂಡು ನಮಗೆ ಸಪೋರ್ಟ್ ಮಾಡಬೇಕು. ವರ್ಷಾ ಮತ್ತು ನಾನು ಪರಸ್ಪರ ತೀರ್ಮಾನ ಮಾಡಿಕೊಂಡು ದೂರ ಆಗಿರುವುದು ಇದಕ್ಕೆ ನಮ್ಮ ಸ್ನೇಹಿತರು ಅಥವಾ ನಮ್ಮ ಕುಟುಂಬದವರು ಕಾರಣವಲ್ಲ ಹಾಗೂ ಅವರನ್ನು ಈ ವಿಚಾರದಲ್ಲಿ ಎಳೆಯಬೇಡಿ. ಒಳ್ಳೆಯ ರೀತಿಯಲ್ಲಿ ಸಂಬಂಧ ಶುರು ಮಾಡಿ ಒಳ್ಳೆಯ ರೀತಿಯಲ್ಲಿ ಅಂತ್ಯವಾಡುತ್ತಿದ್ದೀವಿ. ವರ್ಷಾ ಕಾವೇರಿ ಮುಂದಿನ ಕೆಲಸಗಳಿಗೆ ಒಳ್ಳೆಯದಾಗಲಿ ಎಂದು ಹೇಳಲು ಇಷ್ಟ ಪಡುತ್ತೀನಿ. ಇಲ್ಲಿಯತನಕ ನೀವು ನೀಡಿದ ಪ್ರೋತ್ಸಾಹ ಮತ್ತು ಬೆಂಬಲ..ಇನ್ನುಮುಂದೆನೂ ಸದಾ ಇರಲಿ. ಇಂತಿ ನಿಮ್ಮ ಪ್ರೀತಿಯ ವರುಣ್‌ ಆರಾಧ್ಯ" ಎಂದಿದ್ದಾರೆ.

ವರುಣ್‌ ಹೀಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಅವರ ಇನ್‌ಸ್ಟಾಗ್ರಾಂನ ಫಾಲೋವರ್ಸ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗಂಡು ಜಾತಿಗೇ ನೀನು ಅವಮಾನ, ಕರ್ಮ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಕಾಲೆಳೆದಿದ್ದಾರೆ.

ಇತ್ತ ನನ್ನ ಮತ್ತು ವರುಣ್ ನಡುವೆ ಮತ್ತೊಬ್ಬಳು ಹುಡುಗಿ ಬಂದಿದ್ದಾಳೆ. ಈ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ವಾಗ್ವಾದಗಳಾಗಿವೆ. ವರುಣ್‌ಗೆ ನಾನು ಬೇಡವಂತೆ, ಆಕೆಯೇ ಬೇಕಂತೆ ಎಂದು ತಮ್ಮ ನೋವನ್ನು ಪತ್ರದ ರೀತಿ ಇನ್‌ಸ್ಟಾಗ್ರಾಂ ಪುಟಕ್ಕಿಳಿಸಿದ್ದರು ವರ್ಷಾ. ಹೀಗಿದೆ ವರ್ಷಾ ಕಾವೇರಿ ಪೋಸ್ಟ್‌.

ನಿನ್ನ ಹುಡುಗಿ ಜತೆ ಸಂತೋಷದಿಂದಿರು..

"ಎಲ್ಲರಿಗೂ ನಮಸ್ಕಾರ ಹಲವು ದಿನಗಳಿಂದ ನೀವೆಲ್ಲ ಕೇಳುತ್ತಿದ್ದ ಒಂದೇ ಒಂದು ಸಾಮಾನ್ಯ ಪ್ರಶ್ನೆ ಏನೆಂದರೆ ನನ್ನ ಮತ್ತು ವರುಣ್​ ನಡುವೆ ಏನಾಯಿತೆಂದು. ಆ ವಿಷಯದ ಬಗ್ಗೆ ಮಾತನಾಡಲು ನಾನು ನಿಮ್ಮ ಮುಂದೆ ಬಂದಿದ್ದೇನೆ. ​ ಸುಮಾರು ವರ್ಷಗಳಿಂದ ನಾನು ಮತ್ತು ವರುಣ್ ಪ್ರೀತಿ ಮಾಡುತ್ತಿದ್ದದ್ದು ನಿಮಗೆಲ್ಲ ಗೊತ್ತಿರುವ ವಿಷಯ. ಆದರೆ, ನಿಮಗೆ ಗೊತ್ತಿಲ್ಲದ ವಿಷಯ ಏನೆಂದರೆ ಅವನೂ ಸಹ ​ ನನ್ನನ್ನು ಬಿಟ್ಟು ಬೇರೆ ಹುಡುಗಿಯ ಜತೆಗೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೂ ಆ ಹುಡುಗಿಯ ಹೆಸರನ್ನು ಹೇಳುವುದಕ್ಕೆ ಇಷ್ಟವಿಲ್ಲ. ಏಕೆಂದರೆ, ಇನ್ನೊಬ್ಬರ ಮನೆಯ ಹೆಣ್ಣುಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ.

ಇದೇ ಕಾರಣಕ್ಕೆ ನನ್ನ ಮತ್ತು ವರುಣ್‌ ನಡುವೆ ಮನಸ್ತಾಪಗಳಾಗಿವೆ. ನಾನು ಎಷ್ಟೇ ಹೇಳಿದರೂ, ಆತ ಆ ಹುಡುಗಿಯನ್ನು ಬಿಡುವುದಕ್ಕೆ ಸಿದ್ಧನಿಲ್ಲ. ಹಾಗಾಗಿ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ಎಂದು ಅವನೇ ಹೇಳಿದ್ದಾನೆ. ನಾನು ಆ ಹುಡುಗಿಯ ಜತೆಗೆ ಜೀವನ ನಡೆಸಲು ಬಯಸುತ್ತೇನೆ ಎಂದಿದ್ದಾನೆ. ಅವನ ಆ ಮಾತು ನನ್ನನ್ನು ತುಂಬ ಘಾಸಿಗೊಳಿಸಿತು. ಹಾಗಾಗಿಯೇ ಕಳೆದ ಕೆಲ ತಿಂಗಳಿಂದ ನನ್ನ ಮತ್ತು ವರುಣ್‌ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿಲ್ಲ.

ನಮ್ಮನ್ನು ಪ್ರೀತಿಸುವ ಜನರಿಗೆ ಈ ವಿಚಾರವನ್ನು ಹೇಳದಿದ್ದರೆ ನಾನೇ ಮೋಸ ಮಾಡಿಕೊಂಡಂತೆ ಎಂದು ನನ್ನ ಮನಸಿಗೆ ಅನಿಸಿದೆ. ಇನ್ನು ಮುಂದೆ ನನ್ನ ಮತ್ತು ವರುಣ್​ ನಡುವೆ ಯಾವುದೇ ಪ್ರೀತಿ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿಯ ಜತೆಗೆ ಖುಷಿಯಾಗಿರಲಿ. ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ. ನಾನು ಅವರಿಗಾಗಿ ಜೀವನ ನಡೆಸಲೇಬೇಕು. ಆದುದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ದಯವಿಟ್ಟು ಇದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ನಂಬಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ