logo
ಕನ್ನಡ ಸುದ್ದಿ  /  ಮನರಂಜನೆ  /  ಅವನಿಗೆ ನಾನು ಬೇಡ್ವಂತೆ, ಅವಳೇ ಬೇಕಂತೆ; ವರುಣ್‌, ವರ್ಷಾ ಮತ್ತು ಅವಳು! ಪ್ರೀತಿ ತಿರಸ್ಕರಿಸಿದವನಿಗೆ ಸುದೀರ್ಘ ಬರಹ

ಅವನಿಗೆ ನಾನು ಬೇಡ್ವಂತೆ, ಅವಳೇ ಬೇಕಂತೆ; ವರುಣ್‌, ವರ್ಷಾ ಮತ್ತು ಅವಳು! ಪ್ರೀತಿ ತಿರಸ್ಕರಿಸಿದವನಿಗೆ ಸುದೀರ್ಘ ಬರಹ

Sep 13, 2023 09:21 PM IST

google News

ಅವನಿಗೆ ನಾನು ಬೇಡ್ವಂತೆ, ಅವಳೇ ಬೇಕಂತೆ; ವರುಣ್‌, ವರ್ಷಾ ಮತ್ತು ಅವಳು! ಪ್ರೀತಿ ತಿರಸ್ಕರಿಸಿದವನಿಗೆ ಸುದೀರ್ಘ ಬರಹ

    • ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದ ಮತ್ತು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ಜೋಡಿ ನಡುವೆ ಬ್ರೇಕ್‌ಅಪ್‌ ಬಿರುಗಾಳಿ ಎದ್ದಿದೆ. ಈ ವಿಚಾರವಾಗಿ ವರ್ಷಾ ಸುದೀರ್ಘ ಬರಹದ ಪೋಸ್ಟ್‌ ಹಂಚಿಕೊಂಡಿದ್ದಾರೆ. 
ಅವನಿಗೆ ನಾನು ಬೇಡ್ವಂತೆ, ಅವಳೇ ಬೇಕಂತೆ; ವರುಣ್‌, ವರ್ಷಾ ಮತ್ತು ಅವಳು! ಪ್ರೀತಿ ತಿರಸ್ಕರಿಸಿದವನಿಗೆ ಸುದೀರ್ಘ ಬರಹ
ಅವನಿಗೆ ನಾನು ಬೇಡ್ವಂತೆ, ಅವಳೇ ಬೇಕಂತೆ; ವರುಣ್‌, ವರ್ಷಾ ಮತ್ತು ಅವಳು! ಪ್ರೀತಿ ತಿರಸ್ಕರಿಸಿದವನಿಗೆ ಸುದೀರ್ಘ ಬರಹ

Varsha Kaveri Varun Breakup: ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ರೀಲ್ಸ್‌ ಮೂಲಕವೇ ಸಾಕಷ್ಟು ಮಂದಿ ಗುರುತಿಸಿಕೊಂಡಿದ್ದಾರೆ. ಲಕ್ಷ ಲಕ್ಷ ಫಾಲೋವರ್ಸ್‌ ಪಡೆದುಕೊಂಡು ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ. ಅದರ ಆಧಾರದ ಮೇಲೆಯೇ ಕಿರುತೆರೆಯತ್ತಲೂ ಬಂದವರು ಸಾಕಷ್ಟು ಮಂದಿ. ಅದೇ ರೀತಿ ಇನ್‌ಸ್ಟಾಗ್ರಾಂನಲ್ಲಿ ವರುಣ್ ಮತ್ತು ವರ್ಷಾ ಜೋಡಿ‌ ಎಲ್ಲರ ಫೇವರಿಟ್. ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದೂ ಹೇಳಿಕೊಂಡಿದ್ದರು ಇವರಿಬ್ಬರು. ಆದರೆ, ಆ ಪ್ರೇಮದ ಮಹಲು ಇದೀಗ ಕುಸಿದಿದೆ!

ಕಳೆದ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ವರ್ಷಾ ಕಾವೇರಿ ಮತ್ತು ವರುಣ್‌ ಆರಾಧ್ಯ, ರೀಲ್ಸ್‌ ಮೂಲಕವೇ ವೈರಲ್‌ ಆಗಿದ್ದರು. ರೊಮ್ಯಾಂಟಿಕ್‌ ರೀಲ್ಸ್‌ನಿಂದಲೂ ಸುದ್ದಿಯಾಗಿದ್ದರು. ಆದರೆ, ಇತ್ತೀಚಿನ ಕೆಲ ದಿನಗಳಿಂದ ಈ ಜೋಡಿಯ ರೀಲ್ಸ್‌ಗಳೇ ಮಾಯವಾಗಿದ್ದವು. ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರ ಬಗ್ಗೆಯೂ ಹಲವು ಪ್ರಶ್ನೆಗಳು ಮೂಡಿದ್ದವು. ಇದೀಗ ಆ ಪ್ರಶ್ನೆಗೆ ಉತ್ತರವೆಂಬಂತೆ, ವರ್ಷಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬ್ರೇಕಪ್‌ ವಿಚಾರವನ್ನು ಬಹಿರಂಗಪಡಿಸಿ, ಸುದೀರ್ಘ ಪತ್ರ ಬರೆದಿದ್ದಾರೆ.

ನನ್ನ ಮತ್ತು ವರುಣ್ ನಡುವೆ ಮತ್ತೊಬ್ಬಳು ಹುಡುಗಿ ಬಂದಿದ್ದಾಳೆ. ಈ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ವಾಗ್ವಾದಗಳಾಗಿವೆ. ವರುಣ್‌ಗೆ ನಾನು ಬೇಡವಂತೆ, ಆಕೆಯೇ ಬೇಕಂತೆ ಎಂದು ತಮ್ಮ ನೋವನ್ನು ಪತ್ರದ ರೀತಿ ಇನ್‌ಸ್ಟಾಗ್ರಾಂ ಪುಟಕ್ಕಿಳಿಸಿದ್ದಾರೆ. ಹೀಗಿದೆ ವರ್ಷಾ ಕಾವೇರಿ ಪೋಸ್ಟ್‌.

ನಿನ್ನ ಹುಡುಗಿ ಜತೆ ಸಂತೋಷದಿಂದಿರು..

"ಎಲ್ಲರಿಗೂ ನಮಸ್ಕಾರ ಹಲವು ದಿನಗಳಿಂದ ನೀವೆಲ್ಲ ಕೇಳುತ್ತಿದ್ದ ಒಂದೇ ಒಂದು ಸಾಮಾನ್ಯ ಪ್ರಶ್ನೆ ಏನೆಂದರೆ ನನ್ನ ಮತ್ತು ವರುಣ್​ ನಡುವೆ ಏನಾಯಿತೆಂದು. ಆ ವಿಷಯದ ಬಗ್ಗೆ ಮಾತನಾಡಲು ನಾನು ನಿಮ್ಮ ಮುಂದೆ ಬಂದಿದ್ದೇನೆ. ​ ಸುಮಾರು ವರ್ಷಗಳಿಂದ ನಾನು ಮತ್ತು ವರುಣ್ ಪ್ರೀತಿ ಮಾಡುತ್ತಿದ್ದದ್ದು ನಿಮಗೆಲ್ಲ ಗೊತ್ತಿರುವ ವಿಷಯ. ಆದರೆ, ನಿಮಗೆ ಗೊತ್ತಿಲ್ಲದ ವಿಷಯ ಏನೆಂದರೆ ಅವನೂ ಸಹ ​ ನನ್ನನ್ನು ಬಿಟ್ಟು ಬೇರೆ ಹುಡುಗಿಯ ಜತೆಗೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೂ ಆ ಹುಡುಗಿಯ ಹೆಸರನ್ನು ಹೇಳುವುದಕ್ಕೆ ಇಷ್ಟವಿಲ್ಲ. ಏಕೆಂದರೆ, ಇನ್ನೊಬ್ಬರ ಮನೆಯ ಹೆಣ್ಣುಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ.

ಇದೇ ಕಾರಣಕ್ಕೆ ನನ್ನ ಮತ್ತು ವರುಣ್‌ ನಡುವೆ ಮನಸ್ತಾಪಗಳಾಗಿವೆ. ನಾನು ಎಷ್ಟೇ ಹೇಳಿದರೂ, ಆತ ಆ ಹುಡುಗಿಯನ್ನು ಬಿಡುವುದಕ್ಕೆ ಸಿದ್ಧನಿಲ್ಲ. ಹಾಗಾಗಿ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ಎಂದು ಅವನೇ ಹೇಳಿದ್ದಾನೆ. ನಾನು ಆ ಹುಡುಗಿಯ ಜತೆಗೆ ಜೀವನ ನಡೆಸಲು ಬಯಸುತ್ತೇನೆ ಎಂದಿದ್ದಾನೆ. ಅವನ ಆ ಮಾತು ನನ್ನನ್ನು ತುಂಬ ಘಾಸಿಗೊಳಿಸಿತು. ಹಾಗಾಗಿಯೇ ಕಳೆದ ಕೆಲ ತಿಂಗಳಿಂದ ನನ್ನ ಮತ್ತು ವರುಣ್‌ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿಲ್ಲ.

ನಮ್ಮನ್ನು ಪ್ರೀತಿಸುವ ಜನರಿಗೆ ಈ ವಿಚಾರವನ್ನು ಹೇಳದಿದ್ದರೆ ನಾನೇ ಮೋಸ ಮಾಡಿಕೊಂಡಂತೆ ಎಂದು ನನ್ನ ಮನಸಿಗೆ ಅನಿಸಿದೆ. ಇನ್ನು ಮುಂದೆ ನನ್ನ ಮತ್ತು ವರುಣ್​ ನಡುವೆ ಯಾವುದೇ ಪ್ರೀತಿ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿಯ ಜತೆಗೆ ಖುಷಿಯಾಗಿರಲಿ. ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ. ನಾನು ಅವರಿಗಾಗಿ ಜೀವನ ನಡೆಸಲೇಬೇಕು. ಆದುದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ದಯವಿಟ್ಟು ಇದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ನಂಬಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ