logo
ಕನ್ನಡ ಸುದ್ದಿ  /  ಮನರಂಜನೆ  /  Samantha Ruth Prabhu: ಬಹುಭಾಷಾ ನಟಿ ಸಮಂತಾ ರುತ್‌ ಪ್ರಭುಗೆ ಪಿತೃ ವಿಯೋಗ; ತಂದೆ ಜೋಸೆಫ್‌ ಪ್ರಭು ನಿಧನ

Samantha Ruth Prabhu: ಬಹುಭಾಷಾ ನಟಿ ಸಮಂತಾ ರುತ್‌ ಪ್ರಭುಗೆ ಪಿತೃ ವಿಯೋಗ; ತಂದೆ ಜೋಸೆಫ್‌ ಪ್ರಭು ನಿಧನ

Nov 29, 2024 06:08 PM IST

google News

ಸಮಂತಾಗೆ ಪಿತೃ ವಿಯೋಗ

    • Samantha Ruth Prabhu Father Dies: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ನಿಧನರಾಗಿದ್ದಾರೆ. ನಟಿ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡು, ಭಾವುಕರಾಗಿದ್ದಾರೆ.
ಸಮಂತಾಗೆ ಪಿತೃ ವಿಯೋಗ
ಸಮಂತಾಗೆ ಪಿತೃ ವಿಯೋಗ

Samantha Ruth Prabhu Father Dies: ಬಹುಭಾಷಾ ನಟಿ ಸಮಂತಾ ರುತ್ ಪ್ರಭು ತಂದೆ ಜೋಸೆಫ್‌ ಪ್ರಭು ಅವರನ್ನು ಕಳೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಒಡೆದ ಹೃದಯದ ಎಮೋಜಿಯುಳ್ಳ ಪೋಸ್ಟ್‌ ಹಂಚಿಕೊಂಡ ಸಮಂತಾ, "ನಾವು ಮತ್ತೆ ಭೇಟಿಯಾಗುವವರೆಗೆ ಅಪ್ಪ" ಎಂದು ಬರೆದುಕೊಂಡಿದ್ದಾರೆ.

 

ಸಮಂತಾ ತಂದೆ ನಿಧನ

ಜೋಸೆಫ್ ಪ್ರಭು ಮತ್ತು ನಿನೆಟ್ ಪ್ರಭು ದಂಪತಿಯ ಮುದ್ದಿನ ಮಗಳಾಗಿ ಸಮಂತಾ ಜನಿಸಿದ್ದರು. ಸಮಂತಾ ತಂದೆ ತೆಲುಗು ಆಂಗ್ಲೋ-ಇಂಡಿಯನ್. ಬಾಲ್ಯದಿಂದಲೂ ಸಮಂತಾ ಪಾಲಿಗೆ ಹೀರೋ ಎಂಬಂತಿದ್ದರು ಜೋಸೆಫ್‌. ಅಪ್ಪನ ಈ ಪ್ರೀತಿ ಮತ್ತು ಕಾಳಜಿ ಕುರಿತು ಆಗ್ಗಾಗೆ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ಮಾಡುತ್ತಿರುತ್ತಾರೆ. ಇದೀಗ ಜೋಸೆಫ್ ಪ್ರಭು ನಿಧನದ ಸುದ್ದಿ ಕೇಳಿ ಸಮಂತಾ ಅಭಿಮಾನಿಗಳು, ಹಿತೈಷಿಗಳು ತಮ್ಮ ಸಂತಾಪ ಸೂಚಿಸುತ್ತಿದ್ದಾರೆ.

ಈ ಹಿಂದೆ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ಸಮಂತಾ, "ನನ್ನ ಅಪ್ಪ ಭಾರತದ ಟಿಪಿಕಲ್‌ ಅಪ್ಪಂದಿರ ಹಾಗೆ ಇದ್ದವರು. ಅವರು ನಮ್ಮನ್ನು ಯಾವಾಗಲೂ ರಕ್ಷಿಸುವ ರೀತಿ ಇರುತ್ತಾರೆ. ಅವರ ಮಾತುಗಳು ನನ್ನನ್ನು ಕೆಲವೊಮ್ಮೆ ಡೌನ್‌ಗ್ರೇಡ್‌ ಮಾಡಿದ್ದುಂಟು. ಅದರ ಹಿಂದೆ ಬಲವಾದ ಕಾರಣ ಇದ್ದವು. ನೀನು ಅಷ್ಟು ಬುದ್ಧಿವಂತೆಯಲ್ಲ ಎನ್ನುತ್ತಿದ್ದರು.  ಆ ಮೂಲಕ ನನ್ನ ಸ್ವಾಭಿಮಾನ ಕೆರಳಿಸಲು ಅಪ್ಪ ಜತೆಗಿರುತ್ತಿದ್ದರು " ಎಂದಿದ್ದಾರೆ.

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರ ವೈವಾಹಿಕ ಸಂಬಂಧ ಅಕ್ಟೋಬರ್ 2021ರಲ್ಲಿ ಕೊನೆಗೊಂಡಿತ್ತು. ಆ ಸಮಯದಲ್ಲಿ ಸಮಂತಾ ತಂದೆ ಜೋಸೆಫ್‌ ಪ್ರಭು ತನ್ನ ಮಗಳು ಮತ್ತು ಮಾಜಿ ಅಳಿಯನ ಫೋಟೋ ಹಂಚಿಕೊಂಡಿದ್ದರು. "ಇವರಿಬ್ಬರು ದೂರವಾಗುವುದನ್ನು ಅರಗಿಸಿಕೊಳ್ಳಲು ನನಗೆ ಸಾಕಷ್ಟು ಸಮಯ ಬೇಕಾಯಿತು. ಇವರಿಬ್ಬರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುವ ಭರವಸೆ ಇದೆ" ಎಂದು ಪೋಸ್ಟ್‌ ಮಾಡಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ