logo
ಕನ್ನಡ ಸುದ್ದಿ  /  ಮನರಂಜನೆ  /  69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ

69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ

Aug 04, 2024 02:37 PM IST

google News

69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ

    • ಕಳೆದ ವರ್ಷದ ತೆರೆಕಂಡ ಸಿನಿಮಾಗಳಿಗೆ ನೀಡುವ 69ನೇ ಫಿಲಂ ಫೇರ್‌ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕನ್ನಡ ವಿಭಾಗದಲ್ಲಿ ಯಾವೆಲ್ಲ ಚಿತ್ರಗಳಿಗೆ ಪ್ರಶಸ್ತಿ ಸಿಕ್ತು ಎಂಬ ಮಾಹಿತಿ ಇಲ್ಲಿದೆ. 
69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ
69th Filmfare Awards South 2024: ಡೇರ್‌ಡೆವಿಲ್‌ ಮುಸ್ತಫಾ ಅತ್ಯುತ್ತಮ ಚಿತ್ರ, ರಕ್ಷಿತ್‌ ಶೆಟ್ಟಿ, ಸಿರಿ ರವಿಕುಮಾರ್‌ ಅತ್ಯುತ್ತಮ ನಟ, ನಟ

69th Filmfare Awards South: 2024ರ 69ನೇ ಫಿಲಂ ಫೇರ್ ಸೌತ್ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ. ಈ ಸಲದ ಪ್ರಶಸ್ತಿ ವಿಜೇತರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಹೈದರಾಬಾದ್‌ನ JRC ಕನ್ವೆಂನ್ಷನ್‌ ಸೆಂಟರ್‌ನಲ್ಲಿ ಆಗಸ್ಟ್‌ 3ರಂದು ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡದ ಜತೆಗೆ ತಮಿಳು, ತೆಲುಗು ಮತ್ತು ಮಲಯಾಳಂನ ಸ್ಟಾರ್‌ ನಟರು ಕಲರ್‌ಫುಲ್‌ ಇವೆಂಟ್‌ನ ಭಾಗವಾದರು. ಆ ಪೈಕಿ ಕನ್ನಡದ ಯಾವೆಲ್ಲ ಸಿನಿಮಾಗಳಿಗೆ ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ಸಿಕ್ಕಿತು ಎಂಬ ಮಾಹಿತಿ ಇಲ್ಲಿದೆ.

ಫಿಲ್ಮ್‌ಫೇರ್‌ ವಿಜೇತರ ಪಟ್ಟಿ

ಅತ್ಯುತ್ತಮ ಸಿನಿಮಾ: ಡೇರ್​ಡೆವಿಲ್ ಮುಸ್ತಫಾ

ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಚಿತ್ರ: ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ನಟಿ: ಸಿರಿ ರವಿಕುಮಾರ್ (ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ)

ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ (ಚಿತ್ರ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ಪಿಂಕಿ ಎಲ್ಲಿ?

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಮೈಸೂರು ಪೂರ್ಣ (ಚಿತ್ರ: ಆರ್ಕೆಸ್ಟ್ರಾ ಮೈಸೂರು)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ರುಕ್ಮಿಣಿ ವಸಂತ್ (ಚಿತ್ರ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಪೋಷಕ ನಟಿ: ಸುಧಾ ಬೆಳವಾಡಿ (ಚಿತ್ರ: ಕೌಸಲ್ಯ ಸುಪ್ರಜಾ ರಾಮ)

ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ಚಿತ್ರ: ಟಗರು ಪಲ್ಯ)

ಅತ್ಯುತ್ತಮ ಹೊಸ ನಟ: ಶಿಶಿರ್ ಬೈಕಾಡಿ (ಚಿತ್ರ: ಡೇರ್​ಡೆವಿಲ್ ಮುಸ್ತಫ)

ಅತ್ಯುತ್ತಮ ಹೊಸ ನಟಿ: ಅಮೃತಾ ಪ್ರೇಮ್ (ಚಿತ್ರ: ಟಗರು ಪಲ್ಯ)

ಅತ್ಯುತ್ತಮ ಹಾಡುಗಳು: ಚರಣ್ ರಾಜ್ (ಚಿತ್ರ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಸಾಹಿತ್ಯ: ಬಿಆರ್​ ಲಕ್ಷ್ಮಣರಾವ್ (ಯಾವ ಚುಂಬಕ, ಚೌಕಬಾರ)

ಅತ್ಯುತ್ತಮ ಗಾಯಕ: ಕಪಿಲ್ ಕಪಿಲನ್ (ನದಿಯೇ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಲಮಣ್ಣು (ಕಡಲನು ಕಾಣ ಹೊರಟ: ಸಪ್ತ ಸಾಗರದಾಚೆ ಎಲ್ಲೊ)

ಜೀವಮಾನ ಸಾಧನೆ: ಹಿರಿಯ ನಟ ಶ್ರೀನಾಥ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ