logo
ಕನ್ನಡ ಸುದ್ದಿ  /  ಮನರಂಜನೆ  /  ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ ಚೈತ್ರಾ ಕುಂದಾಪುರ ಜನ್ಮ ಜಾಲಾಡಿದ ಅಪ್ಪ ಬಾಲಕೃಷ್ಣ ನಾಯ್ಕ್‌

ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ ಚೈತ್ರಾ ಕುಂದಾಪುರ ಜನ್ಮ ಜಾಲಾಡಿದ ಅಪ್ಪ ಬಾಲಕೃಷ್ಣ ನಾಯ್ಕ್‌

Published May 15, 2025 03:09 PM IST

google News

ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ ಚೈತ್ರಾ ಕುಂದಾಪುರ ಜನ್ಮ ಜಾಲಾಡಿದ ಅಪ್ಪ ಬಾಲಕೃಷ್ಣ ನಾಯ್ಕ್‌

  • ಮಗಳು ಚೈತ್ರಾ ಕುಂದಾಪುರ ಅವರ ಜನ್ಮ ಜಾಲಾಡಿದ್ದಾರೆ ಹೆತ್ತ ತಂದೆ ಬಾಲಕೃಷ್ಣ ನಾಯ್ಕ್‌! ʻಹುಟ್ಟಿಸಿದ ಅಪ್ಪ ಬದುಕಿದ್ದರೂ, ನನಗೇ ಮದುವೆಗೆ ಆಕೆ ಆಮಂತ್ರಣ ನೀಡಿಲ್ಲ. ಕೋಟಿ ಕೋಟಿ ನುಂಗಿದ ಇಂತ ಹೆಣ್ಣು ಬೇರೆ ಯಾರ ಮನೆಯಲ್ಲೂ ಹುಟ್ಟಬಾರದುʼ ಎಂದು ಬಾಲಕೃಷ್ಣ ನಾಯ್ಕ್‌ ಗಂಭೀರ ಆರೋಪ ಮಾಡಿದ್ದಾರೆ.
ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ ಚೈತ್ರಾ ಕುಂದಾಪುರ ಜನ್ಮ ಜಾಲಾಡಿದ ಅಪ್ಪ ಬಾಲಕೃಷ್ಣ ನಾಯ್ಕ್‌
ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ ಚೈತ್ರಾ ಕುಂದಾಪುರ ಜನ್ಮ ಜಾಲಾಡಿದ ಅಪ್ಪ ಬಾಲಕೃಷ್ಣ ನಾಯ್ಕ್‌

ಹಿಂದುತ್ವವಾದಿ, ಪ್ರಖರ ಭಾಷಣಗಾರ್ತಿ ಎಂದೇ ಬಿಂಬಿಸಿಕೊಳ್ಳುವ ಚೈತ್ರಾ ಕುಂದಾಪುರ, ಇತ್ತೀಚೆಗಷ್ಟೇ ಬಹುಕಾಲದ ಗೆಳೆಯ ಶ್ರೀಕಾಂತ್‌ ಕಶ್ಯಪ್‌ ಅವರ ಜತೆಗೆ ಬಾಳ ಬಂಧನಕ್ಕೆ ಕಾಲಿಟ್ಟಿದ್ದರು. ಬಿಗ್‌ ಬಾಸ್‌ನ ಹಲವು ಸ್ನೇಹಿತರು ಸೇರಿ ಸಾಕಷ್ಟು ಜನ ಆಗಮಿಸಿ ನವ ಜೋಡಿಗೆ ಶುಭಹಾರೈಸಿದ್ದರು. ಇದೀಗ ಮದುವೆಯಾಗಿ ಕೆಲವೇ ದಿನಗಳು ಕಳೆಯುತ್ತಿದ್ದಂತೆ, ಮಗಳು ಚೈತ್ರಾಳ ಜನ್ಮ ಜಾಲಾಡಿದ್ದಾರೆ ಹೆತ್ತ ತಂದೆ ಬಾಲಕೃಷ್ಣ ನಾಯ್ಕ್‌! ʻಹುಟ್ಟಿಸಿದ ಅಪ್ಪ ಬದುಕಿದ್ದರೂ, ನನಗೇ ಮದುವೆಗೆ ಆಕೆ ಆಮಂತ್ರಣ ನೀಡಿಲ್ಲ. ಕೋಟಿ ಕೋಟಿ ನುಂಗಿದ ಇಂತ ಹೆಣ್ಣು ಬೇರೆ ಯಾರ ಮನೆಯಲ್ಲೂ ಹುಟ್ಟಬಾರದುʼ ಎಂದು ಬಾಲಕೃಷ್ಣ ನಾಯ್ಕ್‌ ದೂರಿದ್ದಾರೆ.

"ಕಳ್ಳರ ಕಳ್ಳರ ಮದುವೆಯ ಬಗ್ಗೆ ಏನನ್ನೂ ಹೇಳಲಾರೆ. ಆ ಶ್ರೀಕಾಂತ್‌ 12 ವರ್ಷಗಳಿಂದ ಅವನು ನಮ್ಮ ಮನೆಯಲ್ಲಿಯೇ ಇದ್ದವ. ಇವಳೂ (ಚೈತ್ರಾ ಕುಂದಾಪುರ) ಕಳ್ಳಿ. ದರೋಡೆ ಮಾಡುವುದು, ದೇಶಕ್ಕೆ ದ್ರೋಹ ಮಾಡುವುದು. ವಂಚನೆ ಮಾಡುವುದು. ಇವರಿಬ್ಬರ ಕಸುಬೇ ಅದು. ಅವಳಿಗಂತೂ ಮಾನ ಮರ್ಯಾದೆ ಇಲ್ಲ. ನಮ್ಮ ಕುಟುಂಬದ ಮಾನ ಮರ್ಯಾದೆ ತೆಗೆದಿದ್ದಾಳೆ. ಅವಳು ಯಾವತ್ತೂ ಉದ್ಧಾರ ಆಗಲ್ಲ. ಅವಳು ಮಾಡುವ ಕೆಲವು ಕೆಲಸಗಳಿಗೆ ನಾನು ಒಪ್ಪಿಗೆ ಕೊಡಲಿಲ್ಲ. ನಾನು ಸತ್ಯ ನ್ಯಾಯದ ಪರವಾಗಿ ಇದ್ದವ."

ʻಕೋಟಿ ಕೋಟಿ ಹಣ ಹೊಡೆದಿದ್ದಾಳೆʼ

"ಬಿಗ್‌ ಬಾಸ್‌ ಅವಕಾಶ ಸಿಕ್ಕಾಗಲೂ ನನಗೆ ಹೇಳಲಿಲ್ಲ. ತಾನೇ ಮನೆಯನ್ನು ನಡೆಸಿಕೊಂಡು ಹೋಗ್ತಿದ್ದೇನೆ ಎಂದು ಕೇಳಿಕೊಂಡು ತಿರುಗಾಡ್ತಾಳೆ. ಈ ಪಾಪಿಗೆ ನಾನು ಯಾವತ್ತೂ ಕ್ಷಮೆ ಕೊಡುವುದಿಲ್ಲ. ಅವಳು ಕ್ರಿಮಿ ಇದ್ದ ಹಾಗೆ. ದೇಶಕ್ಕೆ ಮಾರಕ. ಗೋವಿಂದ ಪೂಜಾರಿ ಹಗರಣದಲ್ಲಿ ಕೋಟಿ ಕೋಟಿ ಹಣ ಹೊಡೆದಿದ್ದಾಳೆ. ಆ ಹಣವನ್ನು ಡಿವೈಡ್‌ ಮಾಡಿ, ಕುಟುಂಬದವರ ಹೆಸರಿಗೆ, ಪಡ್ಡೆ ಹುಡುಗರ ಹೆಸರಲ್ಲಿ ಇಡಿಸಿದ್ದಾಳೆ. ಅದೇ ಡಿಪಾಸಿಟ್‌ ಹಣದ ಮೇಲೆ ಸಾಲ ಪಡೆದು, ಆ ಸಾಲದಿಂದ ಬರುವ ಬಡ್ಡಿಯಲ್ಲಿ ವಂಚನೆ ಮಾಡಿ ತಿಂತಿದ್ದಾಳೆ"

"ದೇಶಕ್ಕೆ ಇವಳು ಮಾದಕ. ಇವಳು ನನ್ನ ಮಗಳು ಅಂತ ಹೇಳೋಕೆ ನನಗೆ ನಾಚಿಕೆ ಆಗುತ್ತಿದೆ. ಇಂಥವರಿಗೆ ಜನ ಸಪೋರ್ಟ್‌ ಮಾಡ್ತಾರಲ್ಲ ಅದೇ ದುರಂತ. ಸುಳ್ಳು ಹೇಳಿಕೆಗೂ ಮನ್ನಣೆ ಕೊಡಬಾರದು. ಸೈನಿಕರಿಗೆ ದುಡ್ಡು ಕೊಡ್ತೀನಿ ಎಂದಿದ್ದಾಳೆ. ಸ್ವಂತ ದುಡ್ಡು, ದುಡಿದ ದುಡ್ಡು ಕೊಟ್ಟಿದ್ದರೆ ನನಗೆ ಸಂತೋಷವಿತ್ತು. ಯಾರದೋ ತಲೆ ಒಡೆದು ಕೊಟ್ಟರೆ ಅದು ಸರೀನಾ. ಗೋವಿಂದ ಪೂಜಾರಿಯ 5 ಕೋಟಿ ಹಣ ಹೊಡೆದಿದ್ದಾಳೆ. ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬಾಳ್ವೆ ಮಾಡುತ್ತಿದ್ದಾಳೆ. ಇವಳಂತೆ ಅಲ್ಲ ಅವಳು"

ʻಮದುವೆಗೂ ನನಗೆ ಕರೆದಿಲ್ಲ, ಕರೆದರೆ ಸತ್ಯ ಹೊರಬರುತ್ತೆʼ

"ನಾನು ಹೋಟೆಲ್‌ನಲ್ಲಿ ದೋಸೆ ಮಾಡಿಕೊಂಡು, ಟೀ ಕಾಫಿ ಮಾಡಿಕೊಂಡು ಇದ್ದವನು. ಒಂದು ತುತ್ತು ಅನ್ನ ಹಾಕುವ ಯೋಗ್ಯತೆ ಇವಳಿಗಿಲ್ಲ. ಕೋಟಿ ಕೋಟಿ ಹಣ ತಂದು ನನ್ನ ಹೆಂಡತಿ ಕೈಗೆ ಕೊಟ್ಟಿದ್ದಾಳೆ. ಅವಳಿಗೂ ಗಂಡ ಬೇಡ. ಮಗಳು ತಪ್ಪು ಮಾಡಿದಾಗ, ಮಗಳೇ ನೀನು ಮಾಡಿದ್ದು ತಪ್ಪು ಅಂತ ಯಾವತ್ತೂ ಹೇಳಲಿಲ್ಲ. ಮಗಳ ಜೊತೆಗೆ ಇವಳೂ ಸಹ ನಾಚಿಗೆಬಿಟ್ಟು ನಿಂತಿದ್ದಾಳೆ. ಬಿಗ್‌ ಬಾಸ್‌ಗೆ ಹೋಗುವಾಗಲೂ ನನಗೆ ಹೇಳಿಲ್ಲ. ಅಪ್ಪ ಬದುಕಿದ್ದರೂ, ಮದುವೆಗೆ ಕರೆದಿಲ್ಲ. ಯಾಕೆ ಕರೆದಿಲ್ಲ ಅಂದರೆ ಅವರಿಗೆ ಮಾನ ಮರ್ಯಾದೆ ಇಲ್ಲವಲ್ಲ. ನನ್ನನ್ನು ಕರೆದರೆ ಇವರು ಮಾಡುವ ಕಳ್ಳ ಕೆಲಸ ಹೊರಗೆ ಬರುತ್ತಲ್ಲ."

ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ

ಅಷ್ಟಕ್ಕೂ ಈ ಮದುವೆಗೆ ನನ್ನ ಒಪ್ಪಿಗೆ ಇಲ್ಲ. ಯಾಕೆಂದ್ರ ಅವನೂ ಕಳ್ಳ. ಇವಳು ಕಳ್ಳಿ. ಕಳ್ಳರು ಕಳ್ಳರೇ ಮದುವೆ ಆಗಿದ್ದಾರೆ. ಯಾರ ತಲೆ ಹೊಡೆಯಬೇಕು ಅನ್ನೋದೆ ಇವರ ಉದ್ದೇಶ. ವಿಡಿಯೋದಲ್ಲಿ ತಂದೆ ಇಲ್ಲದ ಹುಡುಗಿ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾನು ಬದುಕಿದ್ದರೂ ಇಂಥ ಹೇಳಿಕೆ ಕೊಡಲು ಕಾರಣ ಏನು? ನಾನು ಖಂಡಿತ ಅವಳನ್ನು ಕ್ಷಮಿಸುವುದಿಲ್ಲ. ಯಾವ ಕುಟುಂಬದಲ್ಲಿಯೂ ಇಂಥ ಹೆಣ್ಣು ಮಗಳು ಹುಟ್ಟಬಾರದು. ಇವಳು ಹೇಳುವುದೆಲ್ಲವೂ ಸುಳ್ಳೆ. ನಾಚಿಕೆ ಬಿಟ್ಟ ಹೆಣ್ಣಿಗೆ, ತಂದೆಗೆ ಒಂದು ತುತ್ತು ಅನ್ನ ಹಾಕುವ ಯೋಗ್ಯತೆಯೂ ಇಲ್ಲ" ಎಂದು ಬಾಲಕೃಷ್ಣ ನಾಯ್ಕ್‌ ಮಗಳು ಚೈತ್ರಾ ಕುಂದಾಪುರ ಮೇಲೆ ಸರಣಿ ಆರೋಪಗಳನ್ನು ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು