logo
ಕನ್ನಡ ಸುದ್ದಿ  /  ಮನರಂಜನೆ  /  Tamanna Body Shaming: ಬಾಡಿ ಶೇಮಿಂಗ್‌ಗೆ ಒಳಗಾದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ...ವಿಡಿಯೋ

Tamanna Body Shaming: ಬಾಡಿ ಶೇಮಿಂಗ್‌ಗೆ ಒಳಗಾದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ...ವಿಡಿಯೋ

HT Kannada Desk HT Kannada

Jan 17, 2023 02:32 PM IST

google News

ಬಾಡಿ ಶೇಮಿಂಗ್‌ ಗುರಿಯಾದ ತಮನ್ನಾ ಭಾಟಿಯಾ

    • ನಟಿಯರು ಸ್ವಲ್ಪ ದಪ್ಪ ಆದರೆ ಸಾಕು , ನಟಿಯರ ಬಣ್ಣ ಬದಲಾದರೆ ಸಾಕು ಬಾಡಿ ಶೇಮಿಂಗ್‌ ಶುರು ಮಾಡುತ್ತಾರೆ. ಇದೀಗ ತಮನ್ನಾ ಕೂಡಾ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದಾರೆ. ಇತ್ತೀಚೆಗೆ ತಮನ್ನಾ ಭಾಟಿಯಾ ಮುಂಬೈನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಬಾಡಿ ಶೇಮಿಂಗ್‌ ಗುರಿಯಾದ ತಮನ್ನಾ ಭಾಟಿಯಾ
ಬಾಡಿ ಶೇಮಿಂಗ್‌ ಗುರಿಯಾದ ತಮನ್ನಾ ಭಾಟಿಯಾ (PC: Voompla Instagram)

ತಮನ್ನಾ ಭಾಟಿಯಾ ತೆಲುಗು ಚಿತ್ರರಂಗದ ಕೆಲವೇ ಕೆಲವು ಬೇಡಿಕೆಯ ನಟಿಯರಲ್ಲಿ ಒಬ್ಬರು. ಈಗ ತಮನ್ನಾ ಹಿಂದಿ ಸಿನಿಮಾಗಳಲ್ಲಿ ಕೂಡಾ ಬ್ಯುಸಿ ಇದ್ದಾರೆ. ತಮನ್ನಾಗೆ ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ತಮನ್ನಾಗೆ ಅಭಿಮಾನಿಗಳು ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ. ಇಂತಹ ಚೆಲುವೆ ತಮನ್ನಾ ಕೂಡಾ ಈಗ ಬಾಡಿ ಶೇಮಿಂಗ್‌ ಗುರಿಯಾಗಿದ್ದಾರೆ.

ಚಿತ್ರರಂಗದಲ್ಲಿ ಬಾಡಿ ಶೇಮಿಂಗ್‌ ಈಗ ಹೆಚ್ಚಾಗಿದೆ. ಅದರಲ್ಲೂ ನಟಿಯರೇ ಹೆಚ್ಚು ಬಾಡಿ ಶೇಮಿಂಗ್‌ ಗುರಿಯಾಗುತ್ತಿದ್ದಾರೆ. ನಟಿಯರು ಸ್ವಲ್ಪ ದಪ್ಪ ಆದರೆ ಸಾಕು , ನಟಿಯರ ಬಣ್ಣ ಬದಲಾದರೆ ಸಾಕು ಬಾಡಿ ಶೇಮಿಂಗ್‌ ಶುರು ಮಾಡುತ್ತಾರೆ. ಇದೀಗ ತಮನ್ನಾ ಕೂಡಾ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದಾರೆ. ಇತ್ತೀಚೆಗೆ ತಮನ್ನಾ ಭಾಟಿಯಾ ಮುಂಬೈನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ, ತಮನ್ನಾ, ಪ್ರೀತಿಸುತ್ತಿದ್ದಾರೆ ಎನ್ನಲಾದ ನಟ ವಿಜಯ್‌ ವರ್ಮಾ ಕೂಡಾ ಆಗಮಿಸಿದ್ದರು. ಇವೆಂಟ್‌ನಲ್ಲಿ ತಮನ್ನಾ ನೀಲಿ ಬಣ್ಣದ ಡೀಪ್‌ ನೆಕ್‌ ಔಟ್‌ಫಿಟ್‌ ಧರಿಸಿ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕೆಲವರು ತಮನ್ನಾ, ಬಾಡಿ ಶೇಮಿಂಗ್‌ ಮಾಡಲು ಆರಂಭಿಸಿದ್ದಾರೆ. ಬಾಡಿ ಶೆಮಿಂಗ್‌ ಮಾಡುವವರನ್ನು ತಮನ್ನಾ ಅಭಿಮಾನಿಗಳು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.

ವಿಜಯ್‌ ವರ್ಮಾ ಜೊತೆ ಹೊಸ ವರ್ಷದ ಪಾರ್ಟಿ ಆಚರಿಸಿದ ತಮನ್ನಾ

ತಮನ್ನಾ ಭಾಟಿಯಾ, ಸ್ಟಾರ್‌ ನಟನೊಂದಿಗೆ ಡೇಟಿಂಗ್‌ ಮಾಡುತ್ತಿದ್ದು ಶೀಘ್ರದಲ್ಲೇ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು. ಆದರೆ ತಮನ್ನಾ ಇದನ್ನು ನಿರಾಕರಿಸಿದ್ದರು. ತಮ್ಮ ಬಗ್ಗೆ ಕೇಳಿಬಂದ ಸುದ್ದಿಯನ್ನು ನಿರಾಕರಿಸಿದ್ದ ತಮನ್ನಾ ಭಾಟಿಯಾ, ''ನಾನು ಮದುವೆ ಆಗುತ್ತಿರುವ ಹುಡುಗ ಯಾರೆಂದು ನೀವೇ ಹೇಳಿ'' ಎಂದಿದ್ದರು. ಆದರೆ ಇದೀಗ ತಮನ್ನಾ, ಖ್ಯಾತ ನಟರೊಬ್ಬರ ಜೊತೆ ಡೇಟಿಂಗ್‌ ಮಾಡುತ್ತಿರುವುದು ಕನ್ಫರ್ಮ್‌ ಆಗಿದೆ. ಮಿಲ್ಕಿ ಬ್ಯೂಟಿ ತಮನ್ನಾ, 'ಡಾರ್ಲಿಂಗ್‌', 'ಗಲ್ಲಿ ಬಾಯ್ಸ್‌' ಚಿತ್ರದ ಮೂಲಕ ಖ್ಯಾತಿ ಪಡೆದಿರುವ ವಿಜಯ್‌ ವರ್ಮಾ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ತಮನ್ನಾ ಹಾಗೂ ವಿಜಯ್‌ ವರ್ಮಾ ಒಟ್ಟಿಗೆ ಕಾಣಿಕೊಂಡಿದ್ದ ವಿಡಿಯೋವೊಂದು ವೈರಲ್‌ ಆಗುತ್ತಿದ್ದು ಇದನ್ನು ನೋಡಿ, ಕೆಲವು ತಮನ್ನಾ ಅಭಿಮಾನಿಗಳ ಹಾರ್ಟ್‌ ಬ್ರೇಕ್‌ ಆಗಿತ್ತು.

ತಮನ್ನಾ ಮತ್ತು ವಿಜಯ್ 2023 ರ ಹೊಸ ವರ್ಷವನ್ನು ಗೋವಾದಲ್ಲಿ ಒಟ್ಟಿಗೆ ಆಚರಿಸಿದ್ದಾರೆ. ಈ ವೇಳೆ ತಮನ್ನಾ ಪಿಂಕ್‌ ಬಣ್ಣದ ಹಾಗೂ ವಿಜಯ್‌ ವರ್ಮಾ ಬಿಳಿ ಬಣ್ಣದ ಸೂಟ್‌ ಧರಿಸಿದ್ದರು. ಮೋಜು ಮಸ್ತಿ ಮಾಡುತ್ತಾ, ಹಿನ್ನೆಲೆ ಸಂಗೀತಕ್ಕೆ ಎಲ್ಲರೂ ಹಾಡಿ ಕುಣಿಯುತ್ತಿದ್ದರೆ, ಮತ್ತೊಂದೆಡೆ ತಮನ್ನಾ ಹಾಗೂ ವಿಜಯ್‌ ವರ್ಮಾ ಇಬ್ಬರೂ ಅಪ್ಪಿಕೊಂಡು ಕಿಸ್‌ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಕ್ಯಾಪ್ಚರ್‌ ಆಗಿತ್ತು. ವಿಡಿಯೋ ಸ್ಟಷ್ಟವಾಗಿ ಕಾಣದಿದ್ದರೂ, ಅದು ತಮನ್ನಾ ಹಾಗೂ ವಿಜಯ್‌ ವರ್ಮಾ ಅನ್ನೋದನ್ನು ಅಲ್ಲಿದ್ದವರು ಕನ್ಫರ್ಮ್‌ ಮಾಡಿದ್ದಾರೆ. ಪಾರ್ಟಿ ನಂತರ ಇಬ್ಬರೂ ಒಂದೇ ಕಾರಿನಲ್ಲಿ ಹತ್ತಿ ಹೋಗಿದ್ದಾರೆ. ಈ ವಿಡಿಯೋ ಇಂದಿಗೂ ವೈರಲ್‌ ಆಗುತ್ತಿದೆ. ತಮನ್ನಾ ಆಗಲೀ, ವಿಜಯ್‌ ವರ್ಮಾ ಆಗಲೀ ಈ ವೈರಲ್‌ ವಿಡಿಯೋ ಬಗ್ಗೆ ಇದುವರೆಗೂ ಪ್ರತಿಕ್ರಿಯಿಸಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ