logo
ಕನ್ನಡ ಸುದ್ದಿ  /  ಮನರಂಜನೆ  /  Vijayakanth Death: ತಮಿಳು ನಟ, ರಾಜಕಾರಣಿ, ಡಿಎಂಡಿಕೆ ಸ್ಥಾಪಕ ವಿಜಯಕಾಂತ್‌ ನಿಧನ; ಕಣ್ಣಿರಿಟ್ಟ ಡ್ರಾವಿಡ ಕಳಗಂ ಕಾರ್ಯಕರ್ತರು

Vijayakanth Death: ತಮಿಳು ನಟ, ರಾಜಕಾರಣಿ, ಡಿಎಂಡಿಕೆ ಸ್ಥಾಪಕ ವಿಜಯಕಾಂತ್‌ ನಿಧನ; ಕಣ್ಣಿರಿಟ್ಟ ಡ್ರಾವಿಡ ಕಳಗಂ ಕಾರ್ಯಕರ್ತರು

Praveen Chandra B HT Kannada

Dec 28, 2023 09:45 AM IST

google News

ತಮಿಳು ನಟ, ರಾಜಕಾರಣಿ, ಡಿಎಂಡಿಕೆ ಸ್ಥಾಪಕ ವಿಜಯಕಾಂತ್‌ ನಿಧನ (ಸಂಗ್ರಹ ಚಿತ್ರ)

    • Vijayakanth passes away: ತಮಿಳು ನಟ, ರಾಜಕಾರಣಿ, ಡಿಎಂಡಿಕೆ ಪಕ್ಷದ ಸ್ಥಾಪಕರಾದ ವಿಜಯಕಾಂತ್‌ ಅವರು ಚೆನ್ನೈನಲ್ಲಿ ಇಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೋವಿಡ್‌ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿಧನರಾಗಿದ್ದಾರೆ.
ತಮಿಳು ನಟ, ರಾಜಕಾರಣಿ, ಡಿಎಂಡಿಕೆ ಸ್ಥಾಪಕ ವಿಜಯಕಾಂತ್‌ ನಿಧನ (ಸಂಗ್ರಹ ಚಿತ್ರ)
ತಮಿಳು ನಟ, ರಾಜಕಾರಣಿ, ಡಿಎಂಡಿಕೆ ಸ್ಥಾಪಕ ವಿಜಯಕಾಂತ್‌ ನಿಧನ (ಸಂಗ್ರಹ ಚಿತ್ರ) (HT_PRINT)

ತಮಿಳುನಾಡಿನ ಡಿಎಂಡಿಕೆ ಪಕ್ಷದ ಸ್ಥಾಪಕ, ರಾಜಕಾರಣಿ, ತಮಿಳು ನಟರಾಗಿಯೂ ಜನಪ್ರಿಯತೆ ಪಡೆದಿದ್ದ ವಿಜಯಕಾಂತ್‌ ಅವರು ನಿಧನರಾಗಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ಬಳಿಕ ಉಸಿರಾಟದ ತೊಂದರೆ ಅನುಭವಿಸಿದ್ದ ಇವರಿಗೆ ಚೆನ್ನೈ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ನಟ ವಿಜಯಕಾಂತ್‌ ನಿಧನಕ್ಕೆ ತಮಿಳು ಚಿತ್ರರಂಗ ಆಘಾತ ವ್ಯಕ್ತಪಡಿಸಿದೆ. ಡಿಎಂಡಿಕೆ ಪಕ್ಷದ ಅಭಿಮಾನಿಗಳು, ರಾಜಕಾರಣಿಗಳು, ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.

ವಿಜಯ್‌ಕಾಂತ್‌ ಅವರು ತಮಿಳು ಸಿನಿಮಾ ರಂಗದ ಪ್ರಮುಖ ನಟರಾಗಿ ಜನಪ್ರಿಯತೆ ಪಡೆದಿದ್ದರು. ಸಿನಿಮಾ ಕ್ಷೇತ್ರದಿಂದ ಇವರು ರಾಜಕೀಯ ರಂಗಕ್ಕೆ ಇಳಿದಿದ್ದರು. ಸ್ವಂತ ಡಿಎಂಡಿಕೆ ಪಕ್ಷವನ್ನು ಸ್ಥಾಪಿಸಿ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದರು. ಶಾಸಕರಾಗಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.

ವಿಜಯಕಾಂತ್‌ ನಿಧನ- ಆಸ್ಪತ್ರೆಯಿಂದ ಬುಲೆಟಿನ್‌

ಕೆಲವು ವರ್ಷಗಳ ಹಿಂದೆ ಇವರು ಅನಾರೋಗ್ಯದಿಂದ ನೇರ ರಾಜಕಾರಣದಿಂದ ದೂರ ಉಳಿದಿದ್ದರು. ಚಿಕಿತ್ಸೆಗಾಗಿ ವಿದೇಶಕ್ಕೂ ತೆರಳಿದ್ದರು. ನಿಯಮಿತವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

2020ರಲ್ಲಿಯೇ ಇವರಿಗೆ ಕೋವಿಡ್‌ ಸೋಂಕು ತಗುಲಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು. ಡಿಎಂಡಿಕೆ ಪಕ್ಷದ ಕಚೇರಿಗೆ ಬಂದು ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದರು. ಇತ್ತೀಚೆಗೆ ಮತ್ತೆ ಅನಾರೋಗ್ಯಕ್ಕೆ ಈಡಾದ ಇವರನ್ನು ಚೆನ್ನೈನಲ್ಲಿರುವ ನಂದಂಪಕಂನಲ್ಲಿರುವ ಮಯತ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್‌ 11ರಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದರು.

ಇದಾದ ಬಳಿಕ ಇವರು ಡಿಎಂಡಿಕೆ ಪಕ್ಷದ ಸಾಮಾನ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು. ಆಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿರಲಿಲ್ಲ. ತಮ್ಮ ಪಕ್ಷದ ನಾಯಕನ ಆರೋಗ್ಯ ಸ್ಥಿತಿಯನ್ನು ಕಂಡು ಕಾರ್ಯಕರ್ತರು ಕಣ್ಣೀರು ಹಾಕಿದ್ದರು. ಇದೀಗ ಇವರ ನಿಧನ ವಾರ್ತೆ ತಿಳಿದ ಬಳಿಕ ಪಕ್ಷದ ಕಾರ್ಯಕರ್ತರ ದುಃಖ ಹೇಳತೀರದು. ಈ ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

"ಕ್ಯಾಪ್ಟನ್‌ ವಿಜಯ್‌ಕಾಂತ್‌ ಅವರನ್ನು ನಿತ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆರೋಗ್ಯವಾಗಿದ್ದಾರೆ. ತಪಾಸಣೆ ಮುಗಿದ ಬಳಿಕ ಮನೆಗೆ ಮರಳಲಿದ್ದಾರೆ" ಎಂದು ಡಿಎಂಡಿಕೆ ಪಕ್ಷ ಪ್ರಕಟಣೆಯಲ್ಲಿ ತಿಳಿಸಿತ್ತು. ಇವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗುವ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದರು. ಆದರೆ, ಇಂದು ಬೆಳಗ್ಗೆ ನಿಧನ ಸುದ್ದಿ ಕೇಳಿ ವಿಜಯಕಾಂತ್‌ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವಿಜಯಕಾಂತ್‌ ಅವರ ನೆನಪಿನಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಶೋಕ ಸಂದೇಶಗಳನ್ನು ಹಾಕುತ್ತಿದ್ದಾರೆ. ಸಾಕಷ್ಟು ಜನರು ವಿಜಯ್‌ ಕಾಂತ್‌ ಅವರ ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ