logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಶಕುಂತಲಾ, ಜೈದೇವ್‌, ಅಶ್ವಿನಿ ಬ್ಯಾಂಕ್‌ ಕಾರ್ಡ್‌ಗಳೆಲ್ಲ ಬ್ಲಾಕ್‌; ಗೌತಮ್‌ಗೆ ಗೊತ್ತಾಯ್ತು ಭೂಮಿಕಾಳ ಉದ್ದೇಶ

Amruthadhaare: ಶಕುಂತಲಾ, ಜೈದೇವ್‌, ಅಶ್ವಿನಿ ಬ್ಯಾಂಕ್‌ ಕಾರ್ಡ್‌ಗಳೆಲ್ಲ ಬ್ಲಾಕ್‌; ಗೌತಮ್‌ಗೆ ಗೊತ್ತಾಯ್ತು ಭೂಮಿಕಾಳ ಉದ್ದೇಶ

Praveen Chandra B HT Kannada

Jul 01, 2024 09:29 AM IST

google News

Amruthadhaare: ಶಕುಂತಲಾ, ಜೈದೇವ್‌, ಅಶ್ವಿನಿ ಬ್ಯಾಂಕ್‌ ಕಾರ್ಡ್‌ಗಳೆಲ್ಲ ಬ್ಲಾಕ್‌

    • Amruthadhaare serial Yesterday Episode: ಮನೆಯ ಯುಜಮಾನಿಯಾಗಿ ಭೂಮಿಕಾ ಹಣದ ಮಹತ್ವವನ್ನು ಗೌತಮ್‌ಗೆ ತಿಳಿಸುತ್ತಾಳೆ. ಹೆಂಡತಿಯನ್ನು ಗೌರವದಿಂದ ನಡೆಸಿಕೊಂಡರೆ ನಿನ್ನ ಬದುಕು ಚೆನ್ನಾಗಿರುತ್ತದೆ ಎಂದು ಅಜ್ಜಮ್ಮ ಸಲಹೆ ನೀಡುತ್ತಾರೆ. ಶಕುಂತಲಾದೇವಿ, ರಮಾಕಾಂತ, ಜೈದೇವ್‌, ಅಶ್ವಿನಿ ಬ್ಯಾಂಕ್‌ ಕಾರ್ಡ್‌ಗಳೆಲ್ಲ ಲಾಕ್‌ ಆಗಿರುತ್ತವೆ.
Amruthadhaare: ಶಕುಂತಲಾ, ಜೈದೇವ್‌, ಅಶ್ವಿನಿ ಬ್ಯಾಂಕ್‌ ಕಾರ್ಡ್‌ಗಳೆಲ್ಲ ಬ್ಲಾಕ್‌
Amruthadhaare: ಶಕುಂತಲಾ, ಜೈದೇವ್‌, ಅಶ್ವಿನಿ ಬ್ಯಾಂಕ್‌ ಕಾರ್ಡ್‌ಗಳೆಲ್ಲ ಬ್ಲಾಕ್‌

Amruthadhaare serial Yesterday Episode: ನಾನು ಮನೆಯ ಯುಜಮಾನಿಯಷ್ಟೇ. ಈ ಮನೆಯ ಖರ್ಚುಗಳನ್ನು ಲೆಕ್ಕ ಹಿಡಿಯೋದಷ್ಟೇ ನನ್ನ ಕೆಲಸ. ಅದು ನಿಮ್ಮ ದುಡ್ಡು, ಹಗಲು ರಾತ್ರಿ ನೀವು ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣವದು. ನಾನದನ್ನು ಏನೂ ಕೇಳದೆ ವಿಚಾರಿಸದೆ ಹಾಗೆ ತೆಗೆದುಕೊಡಲು ಆಗುತ್ತ?. ಎಲ್ಲದಕ್ಕೂ ಒಂದು ಲೆಕ್ಕಾಚಾರ ಬೇಕಲ್ವ. ನಾನು ಲೆಕ್ಕ ಮಾಡೋ ಕೆಲಸ ಮಾಡಿದೆ ಅಷ್ಟೇ. ಅದು ಬಿಟ್ಟು ಬೇರೆ ಯಾರನ್ನಾದರೂ ಕಂಟ್ರೋಲ್‌ ಮಾಡೋದಾಗ್ಲಿ, ಯುಜಮಾನಿ ಅನ್ನೋ ದೌಲತ್ತು ತೋರಿಸೋದಾಗ್ಲಿ ನಾನು ಮಾಡೋದಿಲ್ಲ" ಎಂದು ಭೂಮಿಕಾ ಹೇಳುತ್ತಾರೆ. "ಈ ರೀತಿ ಮಾಡೋದು ನನ್ನ ಸ್ವಭಾವವಲ್ಲ. ಇಷ್ಟೇನ ನೀವು ನನ್ನ ಅರ್ಥ ಮಾಡಿಕೊಂಡಿರೋದು. ಸುಮ್ಮನೆ ನನ್ನ ಮೇಲೆ ರೇಗಾಡಿಬಿಟ್ರಿ. ನನಗೆ ಎಷ್ಟು ಹರ್ಟ್‌ ಆಯ್ತು ಗೊತ್ತ?" ಎಂದು ಭೂಮಿಕಾ ಕೇಳುತ್ತಾಳೆ. ಅದಕ್ಕೆ ಗೌತಮ್‌ "ನೀವು ಕೂಡ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ" ಎಂದು ಹೇಳುತ್ತಾನೆ.

"ನೀವು ಅದನ್ನೇ ಮಾಡಿದ್ರಲ್ಲ ಭೂಮಿಕಾ. ನನ್ನ ಅರ್ಥನೇ ಮಾಡಿಲ್ಲ. ನಾನು ನಿಮ್ಮನ್ನು ಎಷ್ಟು ಪ್ರೀತಿಸ್ತಿನೋ ಅಷ್ಟೇ ಮನೆಯವರನ್ನು ಪ್ರೀತಿಸ್ತಿನಿ. ನನಗೆ ಜವಾಬ್ದಾರಿ ಇಲ್ಲ ಎಂದಲ್ಲ. ಅವರೆಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ. ಇದು ಅಪ್ಪ ವಹಿಸಿದ ಜವಾಬ್ದಾರಿ" ಎಂದು ಗೌತಮ್‌ ಹೇಳುತ್ತಾರೆ. "ಅಪ್ಪನಿಗೆ ಕೊಟ್ಟ ಮಾತಿಗಾಗಿ ನಾನು ಅವರಿಗೆ ಕೇಳಿದ್ದೆಲ್ಲ ಕೊಡುವೆ. ಕೊಟ್ಟ ಮಾತು ಕಟ್ಟಿ ಹಾಕುತ್ತೆ. ಪ್ರತಿಬಾರಿಯೂ ನನ್ನ ಬಾಯಿಯನ್ನು ತಡೆದು ನಿಲ್ಲಿಸುತ್ತದೆ" ಎಂದು ಗೌತಮ್‌ ಹೇಳುತ್ತಾನೆ. "ಆದರೆ ನಿಮ್ಮ ಜೊತೆ ಹಾಗಲ್ಲ. ನಿಮ್ಮ ಜತೆ ಯಾವ ಬೇಲಿ ಇಲ್ಲ. ಯಾರ ಜತೆಯೂ ಇಲ್ಲದ ಸಲಿಗೆ ಇದೆ. ನನಗೆ ನೀವು ಮತ್ತು ಆನಂದ್‌ ಜತೆ ಮಾತ್ರ ಹೀಗೆ ಇರಲು ಸಾಧ್ಯವಾಗುತ್ತದೆ. ನಿಮ್ಮಿಬ್ಬರಿಗೂ ನನ್ನ ಜೀವನದಲ್ಲಿ ಕೊಟ್ಟಿರುವ ಜಾಗ ಏನೆಂದು ನನಗೆ ಗೊತ್ತು. ನೋಯಿಸುವ ಉದ್ದೇಶದಿಂದ ನಾನೂ ಯಾರಿಗೂ ಏನೂ ಹೇಳೋದಿಲ್ಲ" ಎಂದು ಹೇಳುತ್ತಾರೆ ಗೌತಮ್‌. ಹೀಗೆ ಇಬ್ಬರೂ ಒಬ್ಬರಿಗೊಬ್ಬರು ಸಾರಿ ಕೇಳಿಕೊಂಡು ಸರಿಯಾಗುತ್ತಾರೆ. ಒಬ್ಬರಿಗೊಬ್ಬರು ಮುದ್ದು ಮಾಡುತ್ತ "ಮುದ್ದು ಟೆಡ್ಡಿಬೇರ್‌" ಅನ್ನುತ್ತಾ ಒಲವ ಅಮೃತಧಾರೆಯಾಗುತ್ತದೆ.

ಶಕುಂತಲಾ, ಜೈದೇವ್‌, ಅಶ್ವಿನಿ ಬ್ಯಾಂಕ್‌ ಕಾರ್ಡ್‌ಗಳೆಲ್ಲ ಬ್ಲಾಕ್‌

ಇನ್ನೊಂದೆಡೆ ಮಲ್ಲಿ ಮತ್ತು ಜೈದೇವ್‌ ದಿಯಾಳ ಹುಟ್ಟುಹಬ್ಬದ ಮನೆಯಿಂದ ವಾಪಸ್‌ ಬರುತ್ತಾರೆ. ಜೈದೇವ್‌ ಅಕೌಂಟ್‌ನಲ್ಲಿ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದ ಕಾರಣ ಭೂಮಿಕಾ ಹಣ ನೀಡಿರುತ್ತಾರೆ. ಈ ಮೂಲಕ ಭೂಮಿಕಾ ಎಲ್ಲರ ಅಕೌಂಟ್‌ ಮೇಲೆ ನಿಗಾ ಇಟ್ಟಿದ್ದಾರೆ.

ಅಶ್ವಿನಿ ಓಡೋಡಿ ಬರುತ್ತಾಳೆ. "ಮಾಮ್‌, ನನ್ನ ಯಾವುದೇ ಕಾರ್ಡ್‌ ವರ್ಕ್‌ ಆಗ್ತಾ ಇಲ್ಲ" ಎನ್ನುತ್ತಾಳೆ. ಆಗ ಅಲ್ಲಿಗೆ ರಮಾಕಾಂತ್‌ ಕೂಡ ಬರುತ್ತಾನೆ. "ಆನ್‌ಲೈನ್‌ನಲ್ಲಿ ಎಣ್ಣೆ ಬುಕ್‌ ಮಾಡಲು ಟ್ರೈ ಮಾಡಿದಾಗಲೂ ವರ್ಕ್‌ ಆಗ್ತಾ ಇಲ್ಲ" ಎನ್ನುತ್ತಾನೆ. ಶಕುಂತಲಾ ತನ್ನ ಕಾರ್ಡ್‌ ಕೊಡುತ್ತಾರೆ. ಅದೂ ವರ್ಕ್‌ ಆಗೋದಿಲ್ಲ. "ಇನ್ಮುಂದೆ ನಾನು ಮಾಡೋದನ್ನು ಹೇಳಿ ಮಾಡೋದಿಲ್ಲ. ಮಾಡಿ ತೋರಿಸುವೆ" ಎಂದು ಭೂಮಿಕಾ ಹೇಳಿದ ಮಾತು ನೆನಪಾಗುತ್ತದೆ. "ಇದು ಅತಿಯಾಯ್ತು. ಇದನ್ನು ನೋಡಿ ನಾನು ಸುಮ್ಮನಿರೋಲ್ಲ. ಈಗಲೇ ಗೌತಮ್‌ಗೆ ಹೇಳುವೆ. ಅವಳ ನಾನಾ ಇವತ್ತು ಡಿಸೈಡ್‌ ಆಗಬೇಕು" ಎಂದು ಶಕುಂತಲಾ ಹೇಳುತ್ತಾಳೆ.

ಗೌತಮ್‌ ಮತ್ತು ಭೂಮಿಕಾ ಬೆಡ್‌ರೂಂನಲ್ಲಿ ಸಮಧಾನ ಮಾಡುತ್ತ ಇರುತ್ತಾರೆ. "ನಾನು ಮಿಡಲ್‌ ಕ್ಲಾಸ್‌ ಹೆಣ್ಣು. ಕಂಜೂಸುತನ ಅನಿವಾರ್ಯ. ಖರ್ಚು ಮಾಡುವ ಮೊದಲು ಸಾವಿರಾರು ಬಾರಿ ಯೋಚನೆ ಮಾಡುತ್ತೇವೆ" ಎಂದು ಮಧ್ಯಮ ವರ್ಗದ ಕುರಿತು ಮಾತನಾಡುತ್ತಾರೆ ಭೂಮಿಕಾ. "ದುಡ್ಡು ಅನ್ನೋದು ನಮಗೆ ಮುಖ್ಯ. ಅದಕ್ಕೆ ಸಾಕಷ್ಟು ಬೆಲೆ ಕೊಡ್ತಿವಿ. ಹೀಗಾಗಿ, ನಿಮ್ಮ ಸಂಪಾದನೆ, ದುಂದುವೆಚ್ಚಕ್ಕೆ ಹೋಗಬಾರದು. ಅದು ನಿಮ್ಮ ಶ್ರಮಕ್ಕೆ ಮಾಡಿದ ಅವಮಾನ. ಎಲ್ಲದಕ್ಕೂ ಲೆಕ್ಕ ಇಡಬೇಕು. ಗೌರವ ಇಲ್ಲದ ಕಡೆ ಲಕ್ಷ್ಮಿನೂ ಇರೋದಿಲ್ಲ" ಎಂದು ಭೂಮಿಕಾ ಹೇಳಿದ ಮಾತು ಗೌತಮ್‌ ಮೇಲೆ ಪರಿಣಾಮ ಬೀರುತ್ತದೆ. "ನೀವು ಜೀವನ್‌ಗೆ ಹಣ ಕೊಡುವ ಮೊದಲು ಲೆಕ್ಕ ಹೇಳಿದ್ರಿ. ಯಾಕೆಂದ್ರೆ ಅವನಿಗೆ ಜವಾಬ್ದಾರಿ ಬರಲಿ ಎಂದರ್ಥ. ಇದೇ ರೀತಿ ಇರಬೇಕು" ಎಂದು ಭೂಮಿಕಾ ಹೇಳಿದಾಗ "ಹಂಡ್ರೆಡ್‌ ಪರ್ಸೆಂಟ್‌ ಸರಿ" ಎನ್ನುತ್ತಾನೆ ಗೌತಮ್‌.

ಮಹಿಮಾಳ ಗುಣ ತಿಳಿದುಕೊಂಡ ಮಂದಾಕಿನಿ ಗೆಳತಿಯರು

ಮಹಿಮಾ ಅಡುಗೆ ಮನೆ ಮಾಡುತ್ತಿರುವಾಗ ಮಂದಾಕಿನಿ ಗೆಳತಿಯರು ಬಂದು ನೋಡುತ್ತಾರೆ. ಅತ್ತೆಗೆ ಬಿಸಿ ಗಂಜಿ ಕೊಡಬೇಕು ಕೊಟ್ಟು ಬರ್ತಿನಿ ಎಂದಾಗ ಅಲ್ಲಿಗೆ ಮಂದಾಕಿನಿ ಬರುತ್ತಾಳೆ. ಈಗಲೂ ಕಾಂಪಿಟೇಷನ್‌ ಬಗ್ಗೆಯೇ ಹೆಂಗಳೆಯರು ಮಾತನಾಡುತ್ತಾರೆ. ಆ ಸಮಯದಲ್ಲಿ ಮಹಿಮಾ "ನೀವು ಗಂಜಿ ಕುಡೀತಾ ಇರಿ ನಾನು ಕಾಫಿ ಮಾಡಿಕೊಂಡು ಬರ್ತಿನಿ" ಎನ್ನುತ್ತಾಳೆ. ಇದನ್ನೆಲ್ಲ ನೋಡಿ ಮಂದಾಕಿನಿ ಗೆಳತಿಯರಿಗೆ ಆಶ್ಚರ್ಯವಾಗುತ್ತದೆ. "ನಿನ್ನೆಯಿಂದ ನನಗೆ ಹುಷಾರ್‌ ತಪ್ಪಿದ ಬಳಿಕ ಅವಳೇ ನನ್ನನ್ನು ನೋಡಿಕೊಂಡದ್ದು. ಇನ್ನೇನೂ ಸಾಬೀತುಮಾಡಬೇಕು. ಸೊಸೆಯಾಗಿ ಬರುವವಳು ಆ ಮನೆಗೆ ಬೆಳಕಿಗೆ ಬರುತ್ತಾಳೆ. ಆ ಗುಣ ನನ್ನ ಸೊಸೆಯಲ್ಲಿ ಸ್ವಲ್ಪ ಜಾಸ್ತಿನೇ ಅನಿಸುತ್ತದೆ" ಎಂದು ಹೇಳುತ್ತಾಳೆ. ಈ ಮೂಲಕ ಗೆಳತಿಯರ ಸೊಕ್ಕು ಇಳಿಯುತ್ತದೆ. ಅವರಿಗೂ ಮಹಿಮಾ ಕಾಫಿ ರುಚಿ ಇಷ್ಟವಾಗುತ್ತದೆ. "ನನಗೆ ಎಲ್ಲವೂ ಬಾರದೆ ಇರಬಹುದು. ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಬೇಕು ಎಂದು ಅತ್ತೆ ಹೇಳಿದ್ದಾರೆ. ನನ್ನ ಅತ್ತೆನ ಅಮ್ಮನ ರೀತಿ, ಅವರು ನನ್ನ ಮಗಳ ರೀತಿ ನೋಡುತ್ತಾರೆ" ಎನ್ನುತ್ತಾಳೆ ಮಹಿಮಾ. "ನಾವು ಸೊಸೆಯರನ್ನು ಹೇಗೆ ನೋಡಿಕೊಳ್ಳುತ್ತೇವೆ, ಅದೇ ರೀತಿ ನಮ್ಮನ್ನು ಅವರು ನೋಡಿಕೊಳ್ಳುತ್ತಾರೆ" ಎಂದು ಮಂದಾಕಿನಿ ಹೇಳಿದಾಗ ಅವರಿಗೆಲ್ಲ ಜ್ಞಾನೋದಯವಾಗುತ್ತದೆ.

ಗೌತಮ್‌ ಕುಳಿತಿದ್ದಾನೆ. ಅಲ್ಲಿಗೆ ಅಜ್ಜಮ್ಮ ಬರುತ್ತಾರೆ. "ಹೆಂಡ್ತಿನ ಮಾತನಾಡಿಸಿದ್ಯ. ಎಲ್ಲಾ ತಣ್ಣಗಾಯ್ತ" ಎನ್ನುತ್ತಾರೆ. ನಿಮಗೆ ಹೇಗೆ ಗೊತ್ತಾಯ್ತು ಎಂದು ಗೌತಮ್‌ ಕೇಳುತ್ತಾನೆ. "ನಿಮ್ಮ ಹಾವಭಾವ ನೋಡಿದ್ರೆ ಗೊತ್ತಾಗುತ್ತದೆ" ಎನ್ನುತ್ತಾರೆ. "ಈಗ ನಾನು ಹೇಳುವ ಮಾತು ಗಮನವಿಟ್ಟು ಕೇಳು. ಗಂಡ ಹೆಂಡ್ತಿನ ಬರೀ ಪ್ರೀತಿ ಮಾಡಿದ್ರೆ ಸಾಲದು. ಅವಳನ್ನು ಅರ್ಥ ಮಾಡಿಕೊಳ್ಳಬೇಕು. ಭೂಮಿಕಾ ಎಲ್ಲರ ರೀತಿ ಅಲ್ಲ. ಅವಳು ತಪ್ಪು ಮಾಡುವವಳು ಅಲ್ಲ. ಸರಿಯಾಗಿ ವಿಚಾರ ಮಾಡಿ ನೋಡಿದ್ರೆ ಅವಳು ಮಾಡೋದು ಸರಿಯಾಗಿಯೇ ಇರುತ್ತದೆ. ಇದು ಭವಿಷ್ಯದಲ್ಲಿ ನಿನಗೂ ಅರ್ಥವಾಗುತ್ತದೆ" ಎಂದೆಲ್ಲ ಅಜ್ಜಮ್ಮ ಹೇಳಿದಾಗ ಗೌತಮ್‌ಗೆ ಹೌದೇನಿಸುತ್ತದೆ. "ಅವಳಿಗೆ ಏನೋ ಹೇಳಲು ಹೋಗಬೇಡ. ಎಲ್ಲರ ಮುಂದೆ ಅವಳಿಗೆ ಬಯ್ಯೋದು ಮಾಡಬೇಡ. ಗಂಡ ಹೆಂಡತಿ ಒಬ್ಬರಿಗೊಬ್ಬರು ಮರ್ಯಾದೆ ಕೊಡಬೇಕು" ಎಂದೆಲ್ಲ ಅಜ್ಜಮ್ಮ ಹೇಳುತ್ತಾರೆ. "ನೀನು ಹೆಂಡತಿಗೆ ಬೈಯ್ದಾಗ ನಾನು ಸುಮ್ಮನಿದ್ದೆ. ಯಾಕೆಂದರೆ, ಹಾಗೆ ಮಾಡಿದ್ರೆ ಎಲ್ಲರ ಮರ್ಯಾದೆಗೆ ಕುಂದು ಬರುತ್ತಿತ್ತು. ಒಂದು ಮನೆ ಸಂಸಾರ ಸಂಬಂಧ ಬಂದಾಗ ಇದನ್ನೆಲ್ಲ ಯೋಚನೆ ಮಾಡಬೇಕು" ಎಂದು ಅಜ್ಜಮ್ಮ ಹೇಳುತ್ತಾರೆ. "ಹೆಂಡತಿನ ಗೌರವದಿಂದ ನೋಡಿಕೋ, ಅವಳನ್ನು ಚೆನ್ನಾಗಿ ನೋಡಿಕೊಂಡರೆ ನಿನ್ನ ಜೀವನವನ್ನು ಚೆನ್ನಾಗಿರುತ್ತದೆ. ಪ್ರಪಂಚದಲ್ಲಿ ಗಂಡನ ಮಾತು ಕೇಳಿ ಮನೆ ಹಾಳಾಗಿರಬಹುದು. ಒಳ್ಳೆಯ ಹೆಂಡತಿಯ ಮಾತು ಕೇಳಿ ಮನೆ ಹಾಳಾದ ಉದಾಹರಣೆಯೇ ಇಲ್ಲ" ಎಂದು ಅಜ್ಜಮ್ಮ ಹೇಳುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ ಅಂತೀರಾ? ಮುಂದಿರುವ ವಿಡಿಯೋ ನೋಡಿ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ