logo
ಕನ್ನಡ ಸುದ್ದಿ  /  ಮನರಂಜನೆ  /  ಆಫೀಸ್‌ಗೆ ಹೋಗುವಾಗ ಕಾರಿನ ಬ್ರೇಕ್‌ ಫೇಲ್‌ ಆಯ್ತು, ಭಯದಿಂದ ಪಾರ್ಥ ತತ್ತರ; ಅಮೃತಧಾರೆ ಸೀರಿಯಲ್‌ನಲ್ಲಿ ಭಾವನ ತಮ್ಮನಿಗೆ ಅಪಾಯ

ಆಫೀಸ್‌ಗೆ ಹೋಗುವಾಗ ಕಾರಿನ ಬ್ರೇಕ್‌ ಫೇಲ್‌ ಆಯ್ತು, ಭಯದಿಂದ ಪಾರ್ಥ ತತ್ತರ; ಅಮೃತಧಾರೆ ಸೀರಿಯಲ್‌ನಲ್ಲಿ ಭಾವನ ತಮ್ಮನಿಗೆ ಅಪಾಯ

Praveen Chandra B HT Kannada

Nov 06, 2024 01:18 PM IST

google News

ಅಮೃತಧಾರೆ ಸೀರಿಯಲ್‌ನಲ್ಲಿ ಭಾವನ ತಮ್ಮನಿಗೆ ಅಪಾಯ

    • ಅಮೃತಧಾರೆ ಧಾರಾವಾಹಿಯ ನವೆಂಬರ್‌ 6ರ ಸಂಚಿಕೆಯಲ್ಲಿ ಪಾರ್ಥನ ಕಾರಿನ ಬ್ರೇಕ್‌ ಫೇಲ್‌ ಆಗಿದೆ. ಇನ್ನುಳಿದಂತೆ ಭೂಮಿಕಾಳ ಬಳಿಕ ಗೌತಮ್‌ ಅಮ್ಮ ಮತ್ತು ತಂಗಿಯ ಕುರಿತು ಮಾತನಾಡುತ್ತಾನೆ. ಇನ್ನೊಂದೆಡೆ ಸುಧಾ ಕೂಡ ಅಮ್ಮನ ಮುಂದೆ ಭಾವುಕಳಾಗಿ ಮಾತನಾಡುತ್ತಿದ್ದಾಳೆ.
ಅಮೃತಧಾರೆ ಸೀರಿಯಲ್‌ನಲ್ಲಿ ಭಾವನ ತಮ್ಮನಿಗೆ ಅಪಾಯ
ಅಮೃತಧಾರೆ ಸೀರಿಯಲ್‌ನಲ್ಲಿ ಭಾವನ ತಮ್ಮನಿಗೆ ಅಪಾಯ

ಸುಧಾ ತನ್ನ ಅಮ್ಮನ ಮುಂದೆ ಮಾತನಾಡುತ್ತಿದ್ದಾರೆ. "ಅಮ್ಮ ನಮ್ಮ ಮನೆಗೆ ಯಾಕೆ ಯಾರೂ ಬರುತ್ತಿಲ್ಲ. ನಮಗೆ ನಮ್ಮವರು ಯಾರೂ ಇಲ್ವಮ್ಮ" ಎಂದು ಕೇಳುತ್ತಾರೆ ಸುಧಾ. ಆದರೆ, ಆಕೆಯ ತಾಯಿ ಮೌನವಾಗಿದ್ದಾರೆ. "ನಿನ್ನ ಮೌನದ ಹಿಂದೆ ದೊಡ್ಡ ನೋವಿದೆ. ಆದರೆ, ಆ ನೋವು ಏನೆಂದು ನನಗೆ ಹೇಗೆ ಗೊತ್ತಾಗೋದು" ಎಂದು ಆಲೋಚಿಸುತ್ತಾಳೆ. "ನೀನು ಮಾತನಾಡಲಿ, ಬಿಡಲಿ, ಅಮ್ಮ ಅಂತ ನನಗೆ ನೀನು ಒಬ್ಬಳು ಇದ್ದಿಯಲ್ವ. ಸಾಕು" ಎಂದೆಲ್ಲ ಸುಧಾ ಕನವರಿಸುತ್ತಾಳೆ.

ಇನ್ನೊಂದೆಡೆ ಜೈದೇವ್‌ಗೆ ಚಮಕ್‌ಚಲ್ಲೋ ದಿಯಾಳ ಕಾಲ್‌ ಬರುತ್ತದೆ. ಜೈದೇವ್‌ ಬಾತ್‌ರೂಮ್‌ಗೆ ಹೋಗಿ ಮಾತನಾಡುತ್ತಾನೆ. ಬಾತ್‌ರೂಮ್‌ನಲ್ಲಿ ದಿಯಾಳ ಜತೆ ಪೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಾನೆ. "ಜೀವನದಲ್ಲಿ ಜಿಗುಪ್ಸೆ ಬರುವಂತೆ ಆಗಿದೆ" ಎಂದು ಹೇಳುತ್ತಾನೆ. "ಇದು ಎಷ್ಟು ದಿನ" ಎಂದು ಕೇಳುತ್ತಾಳೆ. "ಸ್ವಲ್ಪ ದಿನ ದಿಯಾ. ಸ್ವಲ್ಪ ದಿನ ತಗ್ಗಿಬಗ್ಗಿ ನಡೆಯುವೆ. ಒಮ್ಮೇ ಇಮೇಜ್‌ ಕ್ರಿಯೆಟ್‌ ಮಾಡಬೇಕು" ಎಂದು ಹೇಳುತ್ತಾನೆ. "ನನಗೆ ನಿಮ್ಮನ್ನು ನೋಡದೆ ಇರಲು ಆಗೋದಿಲ್ಲ. ಒಂದರ್ಧ ಗಂಟೆ ಸಿಗಬೇಕು" ಎಂದು ಹೇಳುತ್ತಾಳೆ. "ಪರಿಸ್ಥಿತಿ ಹಾಗೇ ಇಲ್ಲ. ಸದ್ಯ ಸಿಗಲು ಆಗುತ್ತಿಲ್ಲ" ಎಂದು ಹೇಳುತ್ತಾನೆ. ಹೀಗೆ ಒಂದಿಷ್ಟು ಮಾತನಾಡುತ್ತ ಇರುವಾಗ ಬಾತ್‌ರೂಂ ಹೊರಗೆ ಮಲ್ಲಿ ಬಾಗಿಲು ತಟ್ಟುತ್ತಾಳೆ. "ಅಯ್ಯೋ ನನ್ನ ಗತಿಯೇ, ಬಾತ್‌ರೂಮ್‌ನಲ್ಲಿ ಫೋನ್‌ ಮಾಡಿಕೊಂಡು ಇವಳಿಗೆ ಹೆದರುವಂತೆ ಆಯ್ತಲ್ವ" ಎಂದುಕೊಳ್ಳುತ್ತಾನೆ.

ಗೌತಮ್‌ ಎದ್ದಾಗ ಭೂಮಿಕಾ ಕಾಫಿ ತಂದುಕೊಡುತ್ತಾಳೆ. ಭೂಮಿಕಾ ಹೇಳಿದ ಲಾಲಿ ಹಾಡು ಕೇಳಿ ಗೌತಮ್‌ಗೆ ಚೆನ್ನಾಗಿ ನಿದ್ದೆ ಬಂದಿತ್ತು. "ಬಹಳ ದಿನವಾಗಿತ್ತು ಈ ರೀತಿ ನಿದ್ದೆ ಮಾಡಿ. ಥ್ಯಾಂಕ್ಸ್‌" ಎನ್ನುತ್ತಾರೆ. "ನಿಮ್ಮ ಮಡಿಲಲ್ಲಿ ಲಾಲಿ ಹಾಡಿದ್ರಲ್ವ. ನನ್ನ ಅಮ್ಮನೂ ಹಾಗೆಯೇ ಲಾಲಿ ಹಾಡ್ತ ಇದ್ರು. ನನಗೆ ಅದೇ ನೆನಪಾಯ್ತು" ಎಂದು ಡುಮ್ಮ ಸರ್‌ ಖುಷಿಯಿಂದ ಹೇಳುತ್ತಾರೆ. "ಅಮ್ಮ ಮತ್ತು ತಂಗಿ ಬದುಕಿರುವ ವಿಚಾರ ಯಾರಲ್ಲಿಯೂ ಹೇಳಬೇಡಿ. ನಮ್ಮಲ್ಲಿಯೇ ಇರಲಿ. ಅಪೇಕ್ಷಾ ಮತ್ತು ಮಲ್ಲಿಗೆ ಹೇಳಬೇಡಬೇಡಿ" ಎನ್ನುತ್ತಾನೆ. "ಪೊಲೀಸ್‌ಗೆ ಇನ್‌ಫಾರ್ಮ್‌ ಮಾಡೋದಾದ್ರೆ, ಸೋಷಿಯಲ್‌ ಮೀಡಿಯಾದಲ್ಲಿ ಹೇಳುವುದೂ ತಪ್ಪಾಗುತ್ತದೆ. ಅವರ ಬಗ್ಗೆ ಹೇಳಿದರೂ ತಪ್ಪಾಗುತ್ತದೆ" ಎಂದು ಗೌತಮ್‌ ಹೇಳುತ್ತಾರೆ. ಅದಕ್ಕೆ ಭೂಮಿಕಾ ಒಪ್ಪುತ್ತಾರೆ. "ಇದಕ್ಕಾಗಿ ಪ್ರೈವೇಟ್‌ ಡಿಟೆಕ್ಟಿವ್‌ನ ಹೈರ್‌ ಮಾಡಿದ್ರೆ ಹೇಗೆ" ಎನ್ನುತ್ತಾರೆ ಗೌತಮ್‌. "ಅದೇ ಸರಿ" ಎಂದು ಭೂಮಿಕಾ ಹೇಳುತ್ತಾರೆ.

ಪಾರ್ಥನ ಕಾರಿನ ಬ್ರೇಕ್‌ ಫೈಲ್ಯೂರ್‌

ಪಾರ್ಥ ಮತ್ತು ಅಪೇಕ್ಷಾ ಮಾತನಾಡುತ್ತಿದ್ದಾರೆ. ಪಾರ್ಥ ಆಫೀಸ್‌ಗೆ ಹೊರಡುತ್ತಿದ್ದಾನೆ. ಮೀಟಿಂಗ್‌ ವಿಚಾರಕ್ಕೆ ಒಂದಿಷ್ಟು ಧೈರ್ಯ ತುಂಬುತ್ತಾಳೆ. ಪಾರ್ಥ ಆಫೀಸ್‌ಗೆ ಹೊರಟ ಬಳಿಕ "ನೋಡು ಅಕ್ಕ ಒಂದಿನ ನನ್ನ ಗಂಡನೂ ನಿನ್ನ ಗಂಡನ ಲೆವೆಲ್‌ಗೆ ಬೆಳೆಯುತ್ತಾನೆ" ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾಳೆ. ಪಾರ್ಥನಿಗೆ ಹೊರಗೆ ಜೈದೇವ್‌ ಸಿಗುತ್ತಾನೆ. "ನಾನು ಹೇಳಿದ ಟಿಪ್ಸ್‌ ಫಾಲೋ ಮಾಡು. ಚೆನ್ನಾಗಿ ಮೀಟಿಂಗ್‌ ಮಾಡು" ಎಂದು ಜೈದೇವ್‌ ಹೇಳುತ್ತಾನೆ. "ಥ್ಯಾಂಕ್ಸ್‌ ಫಾರ್‌ ಯುವರ್‌ ಲವ್‌ ಆಂಡ್‌ ಸಪೋರ್ಟ್‌" ಎನ್ನುತ್ತಾನೆ. "ಮನಸ್ಸಿನ ಮೂಲೆಯಲ್ಲಿ ನೀನೇ ಸಿಎಫ್‌ಒ ಆದ್ರೆ ಚೆನ್ನಾಗಿರುತ್ತದೆ. ನಿನ್ನಿಂದ ಏನಾದ್ರೂ ಕಿತ್ಕೋಂಡ್ನ ಅಂತ" ಎಂದು ಪಾರ್ಥ ಹೇಳುತ್ತಾನೆ. "ನೀನು ನನ್ನ ಬ್ರದರ್‌, ಬಾಲ್ಯದಲ್ಲಿ ನಿನಗೆ ನನ್ನ ಚಾಕೋಲೇಟ್‌ ಕೊಡ್ತಾ ಇರಲಿಲ್ವ. ಈ ಹುದ್ದೆಗೆ ನಾನು ಈಗ ರೆಡಿಯಾಗಿಲ್ಲ. ನಾನು ಸರಿಯಾದ ಬಳಿಕ ನನಗೆ ಬೇಕಾದ ಹುದ್ದೆ ದೊರಕುತ್ತದೆ" ಎಂದು ಜೈದೇವ್‌ ಹೇಳಿ ಪಾರ್ಥನ ಕಳುಹಿಸುತ್ತಾನೆ. ಪಾರ್ಥ ಹೋದ ಬಳಿಕ "ನನಗೆ ಈ ಜುಜುಬಿ ಸಿಎಫ್‌ಒ ಪೋಸ್ಟ್‌ ಮೇಲೆ ಆಸೆ ಹೋಯ್ತು ಕಣೋ ಪಾರ್ಥ, ನನ್ನ ಮುಂದಿನ ಗುರಿ ಅದಕ್ಕೂ ಮೇಲೆ, ಹೊಡೆದ್ರೆ ಆನೆಯನ್ನೇ ಹೊಡೆಯಬೇಕು ಎನ್ನುವ ಕ್ಯಾಟಗರಿ ನನ್ನದು. ಅಣ್ಣನ ನಂಬಿಕೆ ಗಳಿಸಿ ಅವನ ಹುದ್ದೆಯನ್ನೇ ಪಡೆಯುವೆ" ಎಂದು ಜೈದೇವ್‌ನ ಸ್ವಗತ ಇರುತ್ತದೆ.

ಆನಂದ್‌ ಖುಷಿಯಲ್ಲಿದ್ದಾನೆ. ಮುಂಬೈನಿಂದ ನಮಗೆ ಪ್ರಾಜೆಕ್ಟ್‌ ಸಿಕ್ಕಿದೆ ಎಂದು ಅಪರ್ಣಾಗೆ ತಿಳಿಸುತ್ತಾನೆ. ಸುಧಾ "ತಿಂಡಿ ರೆಡಿ" ಎಂದಾಗ ಆನಂದ್‌ ಕೂಡ ಕುಳಿತುಕೊಳ್ಳುತ್ತಾನೆ. ಇನ್ನೊಂದೆಡೆ ಪಾರ್ಥ ಕಾರಲ್ಲಿ ಹೋಗುತ್ತಾ ಇದ್ದಾನೆ. ಆ ಸಮಯದಲ್ಲಿ ಅಪೇಕ್ಷಾ ಕಾಲ್‌ ಮಾಡುತ್ತಾಳೆ. ಆಕೆಯ ಜತೆ ಮಾತನಾಡುತ್ತ ಹೋಗುತ್ತಾನೆ. ಇದೇ ಸಮಯದಲ್ಲಿ ಪಾರ್ಥ ಕಾರಿನ ಬ್ರೇಕ್‌ ತುಳಿದಾಗ ಬ್ರೇಕ್‌ ಹಿಡಿಯುತ್ತಿಲ್ಲ. ಕಾರಿನ ಬ್ರೇಕ್‌ ಫೇಲ್‌ ಆಗಿದೆ. ಆತನಿಗೆ ಗಾಬರಿಯಾಗುತ್ತದೆ. ಸೀರಿಯಲ್‌ ಮುಂದುವರೆಯುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ