logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ದಿಯಾ-ಜೈದೇವ್‌ ಸಂಬಂಧ ನೋಡಿ ಮಲ್ಲಿ ಧಗಧಗ, ಹೋಮ ಕುಂಡದ ಅಗ್ನಿ ನೋಡಿ ಭಾಗ್ಯಮ್ಮಳಿಗೆ ಹಳೆ ನೆನಪಿನ ಭಯ

Amruthadhaare Serial: ದಿಯಾ-ಜೈದೇವ್‌ ಸಂಬಂಧ ನೋಡಿ ಮಲ್ಲಿ ಧಗಧಗ, ಹೋಮ ಕುಂಡದ ಅಗ್ನಿ ನೋಡಿ ಭಾಗ್ಯಮ್ಮಳಿಗೆ ಹಳೆ ನೆನಪಿನ ಭಯ

Praveen Chandra B HT Kannada

Jan 21, 2025 09:08 AM IST

google News

Amruthadhaare Serial: ದಿಯಾ-ಜೈದೇವ್‌ ಸಂಬಂಧ ನೋಡಿ ಮಲ್ಲಿ ಧಗಧಗ

    • ಅಮೃತಧಾರೆ ಧಾರಾವಾಹಿ ನಿನ್ನೆಯ ಸಂಚಿಕೆ: ಅಮೃತಧಾರೆಯ ಜನವರಿ 20ರ ಸಂಚಿಕೆಯಲ್ಲಿ ಮಹತ್ವದ ಘಟನೆಗಳು ನಡೆದಿಲ್ಲ. ಆದರೆ, ಕೆಲವೊಂದು ಸಣ್ಣಪುಟ್ಟ ಘಟನೆಗಳು ಮುಂದೆ ದೊಡ್ಡಮಟ್ಟದ ಯುದ್ಧ ನಡೆಯುವ ಸೂಚನೆ ನೀಡಿವೆ. ವಿಶೇಷವಾಗಿ ಜೈದೇವ್‌-ದಿಯಾಳ ಸಂಬಂಧ ಕಣ್ಣಾರೆ ಕಂಡ ಮಲ್ಲಿ ರೋಷಗೊಂಡಿದ್ದಾಳೆ.
Amruthadhaare Serial: ದಿಯಾ-ಜೈದೇವ್‌ ಸಂಬಂಧ ನೋಡಿ ಮಲ್ಲಿ ಧಗಧಗ
Amruthadhaare Serial: ದಿಯಾ-ಜೈದೇವ್‌ ಸಂಬಂಧ ನೋಡಿ ಮಲ್ಲಿ ಧಗಧಗ

ಅಮೃತಧಾರೆ ಧಾರಾವಾಹಿ ನಿನ್ನೆಯ ಸಂಚಿಕೆ: ಗೃಹ ಪ್ರವೇಶದ ಸಂಭ್ರಮದಲ್ಲಿ ಜೀವ ಎಲ್ಲರಿಗೂ ಉಡುಗೊರೆ ನೀಡುತ್ತಾನೆ. ಪಾರ್ಥ ಮತ್ತು ಅಪೇಕ್ಷಾನಿಗೂ ಇದೇ ರೀತಿ ನೀಡುತ್ತಾನೆ. ತನಗೆ ನೀಡಿದ ಬಟ್ಟೆಯನ್ನು ನೋಡಿ ಪಾರ್ಥ ಖುಷಿ ಪಡುತ್ತಾನೆ. ಆದರೆ, ಅಪೇಕ್ಷಾ ಮಾತ್ರ ಕೊಂಕು ನುಡಿಯುತ್ತಾಳೆ. "ಏನಣ್ಣ ನನ್ನ ಸ್ಟೇಟಸ್‌ ಏನು ಅಂತ ಗೊತ್ತಿಲ್ವ. ಲೋಕಲ್‌ ಸೀರೆಯಂತೆ ಇದೆ. ನಾನು ಹಳೆಯ ಅಪೇಕ್ಷಾ ಅಲ್ವ. ಡಿಸೈನರ್‌ ಸೀರೆ ಉಡೋದು. ಈ ರೀತಿಯ ಗಿಫ್ಟ್‌ ಕೊಡುವುದಕ್ಕಿಂತ ಕೊಡದೆ ಇರುವುದೇ ಉತ್ತಮ" ಎನ್ನುತ್ತಾಳೆ. ಅಪೇಕ್ಷಾಳ ವರ್ತನೆ ಮಹಿಮಾಳಿಗೆ ಅಚ್ಚರಿ ತರುತ್ತದೆ. "ಅಕ್ಕನಿಗೂ ಇದೇ ರೀತಿ ಸೀರೆ ತಂದುಕೊಟ್ಟಿದ್ದೀರಾ, ಆಕೆಗೊಂದು ನನಗೆ ಒಂದು ರೀತಿ ಇರುತ್ತದೆ" ಎಂದೆಲ್ಲ ಮಾತನಾಡುತ್ತಾಳೆ.

ದಿಯಾ-ಜೈದೇವ್‌ ಸಂಬಂಧ ನೋಡಿದ ಮಲ್ಲಿ

ಮಲ್ಲಿ ಜೈದೇವ್‌ನ ಫಾಲೋ ಮಾಡಿಕೊಂಡು ಬಂದಿದ್ದಾಳೆ. ದಿಯಾಳ ಮನೆಯಲ್ಲಿ ಜೈದೇವ್‌ ಇರುವುದನ್ನು ನೋಡಿದ್ದಾಳೆ. ಅಲ್ಲಿ ದಿಯಾ ಮತ್ತು ಜೈದೇವ್‌ ಆಡುವ ಒಂದೊಂದು ಮಾತು ಈಕೆಯ ಹೃದಯವನ್ನು ಚುಚ್ಚುತ್ತಿದೆ. "ನಾನು ಹೇಳಿದ್ದನ್ನು ಮಲ್ಲಿ ನಂಬ್ತಾಳೆ. ಅವಳು ದಡ್ಡಿ" ಎಂದೆಲ್ಲ ದಿಯಾಳ ಮುಂದೆ ತನ್ನ ಬಗ್ಗೆ ಹೇಳುವುದನ್ನು ಕೇಳಿ ಆಕೆಗೆ ತಡೆಯಲಾಗುತ್ತಿಲ್ಲ. "ನೀನು ನನ್ನ ಪಾಲಿಗೆ ಓಯಸಿಸ್‌, ಅವಳು ಕೋಲೆಬಸವ, ಹೆಣ್ಣು ಅಲ್ವಾ, ಕೋಲೆ ಬಸವಿ ಎಂದು ಇರಲಿ" ಎಂದೆಲ್ಲ ಜೈದೇವ್‌ ಹೇಳುತ್ತಾನೆ. ಹೀಗೆ, ಮಲ್ಲಿಗೆ ಕೇಳಲಾಗದ ಮಾತುಗಳೆಲ್ಲ ಕೇಳಿಸುತ್ತವೆ. ಮನೆಗೆ ವಾಪಸ್‌ ಬಂದ ಮಲ್ಲಿಗೆ ಜೈದೇವ್‌ ಮಾಡಿರುವ ನಾಟಕಗಳು ನೆನಪಾಗುತ್ತವೆ. ತನ್ನ ಅಲಂಕಾರ, ಬಳೆ ಎಲ್ಲವನ್ನೂ ತೆಗೆದು ಬಿಸಾಕುತ್ತಾಳೆ.

ಭಾಗ್ಯಮ್ಮಳಿಗೆ ಹಳೆ ನೆನಪಿನ ಭಯ

ಇನ್ನೊಂದೆಡೆ ಗೃಹ ಪ್ರವೇಶದ ಪೂಜೆ ನಡೆಯುತ್ತ ಇರುತ್ತದೆ. ಜೀವ ಮತ್ತು ಮಹಿಮಾ ಪೂಜೆಗೆ ಕುಳಿತಿದ್ದಾರೆ. ಹೋಮದ ಬೆಂಕಿಯನ್ನು ನೋಡುತ್ತ ಭಾಗ್ಯಮ್ಮಳಿಗೆ ಹಳೆಯದು ನನೆಪಾಗುತ್ತದೆ, ಭಯಗೊಳ್ಳುತ್ತಾಳೆ. ಬಳಿಕ ಕೋಣೆಗೆ ಕರೆದುಕೊಂಡು ಆಕೆಯನ್ನು ಸಮಧಾನ ಪಡಿಸುತ್ತಾರೆ. ಈ ಸಮಯದಲ್ಲಿ ಈಕೆಗೆ ಬೆಂಕಿ ಕಂಡರೆ ಭಯ ಏಕೆ ಎಂದು ಎಲ್ಲರೂ ಯೋಚಿಸುತ್ತಾರೆ. ವಿಶೇಷವಾಗಿ ಗೌತಮ್‌ ಯೋಚಿಸುತ್ತಾರೆ. ಇದೇ ಸಮಯದಲ್ಲಿ ಪೂಜೆಯ ನಡುವೆ ಅಪೇಕ್ಷಾ ಎದ್ದು ಹೊರಗೆ ಹೋಗುತ್ತಾಳೆ. ಆಕೆಯನ್ನು ಸಮಾಧಾನ ಮಾಡಲು ಪಾರ್ಥ ಎಂದಿನಂತೆ ಪ್ರಯತ್ನಿಸುತ್ತಾನೆ, ವಿಫಲವಾಗುತ್ತದೆ.

ಅಪೇಕ್ಷಾ ಒಬ್ಬಳೇ ಕಾರಿನಲ್ಲಿ ಬರುತ್ತಾಳೆ. ಈ ಸಮಯದಲ್ಲಿ ಅತ್ತೆ ಶಕುಂತಲಾ ದೇವಿ ಫೋನ್‌ ಮಾಡುತ್ತಾರೆ. ನೀನು ಟೆನ್ಷನ್‌ನಲ್ಲಿ ಏನೆಲ್ಲ ಮಾಡಬೇಡ, ಗಂಡು ಮಕ್ಕಳಂತೆ ಟೆನ್ಷನ್‌ನಿಂದ ಕುಡಿಯಬೇಡ ಎಂದು ಹೇಳುತ್ತಾಳೆ. ಈ ಮೂಲಕ ಅಪೇಕ್ಷಾಳ ಮನಸ್ಸಲ್ಲಿ ಹೊಸ ಐಡಿಯಾ ನೀಡುತ್ತಾಳೆ. "ನಾನು ಏನು ಎಂದು ತೋರಿಸ್ತಿನಿ ಅವರಿಗೆ" ಎಂದು ಅಪೇಕ್ಷಾ ಹೇಳುತ್ತಾಳೆ. ಇನ್ನು ಅಪೇಕ್ಷಾ ಕುಡಿದು ಏನೆಲ್ಲ ಯಡವಟ್ಟು ಮಾಡುತ್ತಾಳೋ ಎನ್ನುವುದು ಇಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ. ಸೀರಿಯಲ್‌ ಮುಂದುವರೆದಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ