logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಈ ಮನೆಯ ಹೇಡಿ ಯಾರು ಎಂದು ಪ್ರಶ್ನಿಸಿದ್ದಕ್ಕೆ ಧರ್ಮ ಅವರನ್ನು ಸೂಚಿಸಿದ ಧನರಾಜ್‌ ಆಚಾರ್; ಆಮೇಲೆ ನಡೆದದ್ದೇ ಬೇರೆ

Bigg Boss Kannada: ಈ ಮನೆಯ ಹೇಡಿ ಯಾರು ಎಂದು ಪ್ರಶ್ನಿಸಿದ್ದಕ್ಕೆ ಧರ್ಮ ಅವರನ್ನು ಸೂಚಿಸಿದ ಧನರಾಜ್‌ ಆಚಾರ್; ಆಮೇಲೆ ನಡೆದದ್ದೇ ಬೇರೆ

Suma Gaonkar HT Kannada

Oct 25, 2024 04:47 PM IST

google News

ಈ ಮನೆಯ ಹೇಡಿ ಧರ್ಮ ಎಂದ ಧನರಾಜ್ ಆಚಾರ್‌

    • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿದಿನವೂ ಒಂದಲ್ಲ ಒಂದು ಕಾರಣಕ್ಕೆ ಗಲಾಟೆ ನಡೆಯುತ್ತಲೇ ಇರುತ್ತದೆ. ಆದರೆ ಇಂದು ರಾಧಾ ಹಿರೇಗೌಡರ್ ಕೇಳಿದ ಪ್ರಶ್ನೆಗೆ ಧನರಾಜ್ ಉತ್ತರ ನೀಡಬೇಕಿತ್ತು. ಈ ಮನೆಯ ಹೇಡಿ ಧರ್ಮ ಎಂದು ಹೇಳಿದ್ದಕ್ಕೆ ಮುಂದೆನಾಯ್ತು ನೋಡಿ. 
ಈ ಮನೆಯ ಹೇಡಿ ಧರ್ಮ ಎಂದ ಧನರಾಜ್ ಆಚಾರ್‌
ಈ ಮನೆಯ ಹೇಡಿ ಧರ್ಮ ಎಂದ ಧನರಾಜ್ ಆಚಾರ್‌ (ಕಲರ್ಸ್‌ ಕನ್ನಡ)

ಬಿಗ್‌ ಬಾಸ್‌ ಸೀಸನ್ 11ರ ಆಟದ ದಿನೇ ದಿನೇ ಕಾವೇರುತ್ತಿದೆ. ಎರಡು ರಾಜಕೀಯ ಪಕ್ಷಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಕಿತ್ತಾಟ ಆಗಲಿ ಎಂದೇ ಬಿಗ್‌ ಬಾಸ್‌ ಟಾಸ್ಕ್ ನೀಡುತ್ತಿದ್ದಾರೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಹೀಗಿರುವಾಗ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡಲು ರಾಧಾ ಹಿರೇಗೌಡರ್‌ ಬಿಗ್ ಬಾಸ್‌ ಮನೆಯೊಳಗಡೆ ಎಂಟ್ರಿ ಕೊಟ್ಟಿದ್ದರು. ಹೀಗಿರುವಾಗ ಅವರು ಕೇಳಿದ ಪ್ರಶ್ನೆಗೆ ಮನೆಯಲ್ಲಿರುವ ಸ್ಪರ್ಧಿಗಳು ಉತ್ತರ ನೀಡಲೇಬೇಕಾಗಿರುತ್ತದೆ. ಒಂದೊಂದು ಪಕ್ಷಕ್ಕೂ ಕೇಳಿದ ಪ್ರಶ್ನೆಗಳಲ್ಲಿ ಸ್ಪರ್ಧಿಗಳು ಸಿಕ್ಕಿಹಾಕಿಕೊಂಡು ಒದ್ದಾಡುವುದು ಕಾಣಿಸುತ್ತದೆ. ಯಾಕೆಂದರೆ ಅಷ್ಟೊಂದು ಖಡಕ್ ಪ್ರಶ್ನೆಗಳನ್ನು ಕೇಳಲಾಗಿದೆ.

ಧನರಾಜ್ ಆಚಾರ್ ಅವರಿಗೆ ಪ್ರಶ್ನೆ ಕೇಳಲಾಗುತ್ತದೆ. ಯಾರು ಈ ಮನೆಯ ಹೇಡಿ ಎಂದು ಪ್ರಶ್ನೆ ಮಾಡಲಾಗುತ್ತದೆ. ಆಗ ಧನರಾಜ್ ಅವರು ಧರ್ಮ ಈ ಮನೆಯ ಹೇಡಿ ಎಂದು ಹೇಳುತ್ತಾರೆ. ಹಾಗಾದ್ರೆ ಅವರು ತಮ್ಮ ಪರವಾಗಿ ತಾವೇ ಧ್ವನಿ ಎತ್ತದ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾರೆ ಎಂದು ರಾಧಾ ಹಿರೇಗೌಡರ್ ಹೇಳುತ್ತಾರೆ. ಅವರು ಆ ಪಾಂಯ್ಟ್‌ನ ಒಪ್ಪಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಆಗ ಮತ್ತೆ ತಮ್ಮನ್ನು ತಾವು ಹೇಡಿ ಎಂದು ಒಪ್ಪಿಕೊಳ್ಳುತ್ತಾರಾ? ಎಂಬ ರೀತಿಯಲ್ಲಿ ಪ್ರಶ್ನೆ ಕೇಳಲಾಗುತ್ತದೆ. ಧರ್ಮ ಅವರಿಗೆ ಕೋಪ ಬರುತ್ತದೆ. ನಾನಲ್ಲ ಈ ಮನೆಯ ಹೇಡಿ ಎಂದು ವಾದಿಸುತ್ತಾರೆ.

ಧರ್ಮ ಕೊಟ್ಟ ಉತ್ತರಕ್ಕೆ ಧನರಾಜ್ ತತ್ತರ

ಇನ್ನು ಅದೇ ಸಂದರ್ಭದಲ್ಲಿ ಧರ್ಮ ಅವರ ಪಕ್ಕ ಕೂತಿರುವ ಐಶ್ವರ್ಯ ಅವರು ನಗುತ್ತಾರೆ. ಯಾರು ಈ ಮನೆಯ ಹೇಡಿ ಎಂದು ಕೇಳಿದ ಪ್ರಶ್ನೆಯಂತೂ ಸಂಚಲನ ಸೃಷ್ಟಿ ಮಾಡಿದೆ. ಆಗ ಧರ್ಮ ಹೇಳುತ್ತಾರೆ ನಾನಂತೂ ಅವರು ಹೇಳಿದ್ದನ್ನ ಒಪ್ಪೋದಿಲ್ಲ. ನಾನು ಇವರ ರೀತಿ ಹೆದರಿಕೊಂಡು ನಾನು ನಾಮಿನೇಟ್‌ ಆದೆ ಅಂತ ಹೆದರಿಕೊಂಡು ಸಾಯುವವನಲ್ಲ ನಾನು ಎಂದು ಹೇಳುತ್ತಾರೆ.

ಒಬ್ರು ಮಾನಸಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವಾಗ ಮೊದಲು ಧ್ವನಿ ಎತ್ತಿದ್ದು ನಾನು. ನೀವೇನ್ರಿ ಮಾತಾಡ್ತಾ ಇದ್ರಿ ಆವಾಗ? ಹೆದರಿಕೊಂಡು ಮೂಲೆ ಸೇರಿದ್ರಿ ಎಂದು ಧರ್ಮ ಹೇಳುತ್ತಾರೆ. ಆಗ ಅವರ ಪಕ್ಷದ ಇತರ ಸದಸ್ಯರು ಹೌದು, ಹೌದು ಎಂದು ಕೂಗುತ್ತಾರೆ. ಈ ರೀತಿಯಾಗಿ ಹೇಡಿ ಯಾರು ಕೇಳಿದ ಒಂದೇ ಒಂದು ಪ್ರಶ್ನೆ ಮನೆಯಲ್ಲಿ ಎಲ್ಲರಲ್ಲೂ ಒಮ್ಮೆ ಸಂಚಲನ ಸೃಷ್ಟಿ ಮಾಡಿದೆ. ಇನ್ನು ಈ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಜನರು ಈ ರೀತಿಯಾಗಿ ಕಾಮೆಂಟ್ ಮಾಡಿದ್ದಾರೆ. ಹೇಡಿ ಯಾರು ಅಂತ ಮೊದಲನೇ ವಾರ ನೋಡಿದೀವಿ ಉಸ್ತುವಾರಿ ಕೊಟ್ಟಾಗ ಹೇಗೆ ಇದ್ದೆ ನೀನು ಅಂತ ಧನರಾಜ್.. ಧರ್ಮ ಹೇಡಿ ಅಲ್ಲ ಬುದ್ದಿವಂತ ಅಷ್ಟೇ ನಿಂಗೆ ಅರ್ಥ ಆಗಿಲ್ಲ ಎಂದು - ಜಗತ್ ಕರ್ಕರಣ ಕಾಮೆಂಟ್ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ