logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಜನಸಾಗರ; ರಾಜಕೀಯ ಪಕ್ಷಕ್ಕೆ ಧಿಕ್ಕಾರ ಎಂದು ಕೂಗಿರೋದ್ಯಾಕೆ?

Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಜನಸಾಗರ; ರಾಜಕೀಯ ಪಕ್ಷಕ್ಕೆ ಧಿಕ್ಕಾರ ಎಂದು ಕೂಗಿರೋದ್ಯಾಕೆ?

Suma Gaonkar HT Kannada

Oct 25, 2024 12:31 PM IST

google News

ಬಿಗ್‌ ಬಾಸ್‌ ಮನೆಯಲ್ಲಿ ಜನಸಾಗರ

    • ಬಿಗ್‌ ಬಾಸ್‌ ಮನೆಯಲ್ಲಿ ರಾಜಕೀಯ ಪಾರ್ಟಿಗಳ ಚರ್ಚೆ ಜೋರಾಗಿದೆ. ನೇರವಾಗಿ ಓಟಿಂಗ್ ಮಾಡಲು ಜನಸಾಗರವೇ ಹರಿದು ಬಂದಿದೆ. ಯಾರ ಪಕ್ಷ ಗೆಲ್ಲಲಿದೆ? ಯಾರ ಪಕ್ಷ ಸೋಲಲಿದೆ ಎಂಬುದು ಇಂದು ನಿರ್ಧಾರವಾಗಲಿದೆ. 
ಬಿಗ್‌ ಬಾಸ್‌ ಮನೆಯಲ್ಲಿ  ಜನಸಾಗರ
ಬಿಗ್‌ ಬಾಸ್‌ ಮನೆಯಲ್ಲಿ ಜನಸಾಗರ (ಕಲರ್ಸ್‌ ಕನ್ನಡ)

ಬಿಗ್‌ ಬಾಸ್‌ ಮನೆಯಲ್ಲಿ ನೀವು ಯಾವಾಗಲೂ ಇಷ್ಟೊಂದು ಜನರನ್ನು ಕಂಡಿರಲು ಸಾಧ್ಯವಿಲ್ಲ ಅಷ್ಟು ಜನ ಬಿಗ್‌ ಬಾಸ್‌ ಮನೆಯೊಳಗಡೆ ಈ ಬಾರಿ ಬಂದಿದ್ದಾರೆ. ಬಿಗ್‌ ಬಾಸ್‌ ನೀಡಿದ್ದ ಟಾಸ್ಕ್‌ಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷ ಟಾಸ್ಕ್‌ನ ಕೊನೆಯ ಹಂತ ಓಟಿಂಗ್‌ಗೆ ಬಂದು ನಿಂತಿದೆ. ಆ ಪ್ರಕಾರ ಓಟಿಂಗ್‌ ಮಾಡಲು ಮನೆಯೊಳಗಡೆ ಜನರನ್ನೇ ಕಳಿಸಲಾಗಿದೆ. ಮನೆಯ ಗಾರ್ಡನ್‌ ಏರಿಯಾದಲ್ಲಿ ಹಲವಾರು ಜನರು ಬಂದು ಕುಳಿತಿರುವುದನ್ನು ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ. ಮನೆಯ ಸ್ಪರ್ಧಿಗಳೆಲ್ಲ ಈ ರೀತಿ ಆಗಬಹುದು, ಇಷ್ಟೊಂದು ಜನ ಮನೆಯೊಳಗಡೆ ಬರಬಹುದು ಎಂದು ಅಂದುಕೊಂಡಿರಲಿಲ್ಲ. ಆದರೆ ಗಾರ್ಡನ್‌ ಏರಿಯಾದಲ್ಲಿ ಮೊದಲೇ ಕುರ್ಚಿಗಳನ್ನು ಜೋಡಿಸಿ ಇಡಲಾಗಿತ್ತು.

ನಂತರ ಜನರು ಮನೆಯೊಳಗಡೆ ಬಂದಿದ್ದಾರೆ. ಇನ್ನು ರಾಜಕೀಯ ಪಕ್ಷದಲ್ಲಿದ್ದ ಸ್ಪರ್ಧಿಗಳು ತಮ್ಮ ಪಕ್ಷಕ್ಕೆ ಸಂಬಂಧಿಸಿದ ಉಡುಪನ್ನು ಧರಿಸಿ ಹೊರಗಡೆ ಬಂದಿದ್ದಾರೆ. ನಂತರ ಜನರು ಪ್ರಶ್ನೆ ಕೇಳುತ್ತಾರೆ. ರಾಜಕೀಯ ಪಕ್ಷದ ನಾಯಕರು ಹಾಗೂ ಸದಸ್ಯರ ನಡುವೆ ಚರ್ಚೆಗಳಾಗುತ್ತದೆ. ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿರುತ್ತಾರೆ. ಹೀಗಾದ ನಂತರದಲ್ಲಿ ಎಲ್ಲರೂ ಸ್ಪರ್ಧಿಗಳನ್ನು ಮೀಟ್‌ ಮಾಡಿ ಮಾತಾಡುವ ಅವಕಾಶ ಸಿಕ್ಕಿತಲ್ಲ ಎಂದು ಖುಷಿಯಾಗಿದ್ದಾರೆ.

ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ ಪ್ರಶ್ನೆ ಕೇಳುವಾಗ ತುಂಬಾ ದಿನಗಳ ನಂತರ ನನಗೆ ನನ್ನ ಅಮ್ಮ ನೆನಪಾಗ್ತಾ ಇದ್ದಾಳೆ. ನನ್ನ ಅಕ್ಕ ನೆನಪಾಗ್ತಾ ಇದಾಳೆ ಎಂದು ವಿಕ್ರಂ ಹೇಳುತ್ತಾರೆ. ಇನ್ನು ಹನುಮಂತಣ್ಣ ನಿನ್ನ ಪಂಚೆ ಎಲ್ಲೋಯ್ತಣ್ಣೋ? ಎಂದು ಜನರು ಕಾಮಿಡಿಯಾಗಿ ಪ್ರಶ್ನೆ ಮಾಡಿದ್ದಾರೆ. ಅದು ಆ ಕಡೆ ಇದೆ ಈಗೇನು ನಾನು ಆ ಪಂಚೆ ತಗೊಂಡ್‌ ಬಂದೇ ಮಾತಾಡ್ಲಾ? ಎಂದು ಅವರೂ ಕೂಡ ತಮಾಷೆ ಮಾಡುತ್ತಾರೆ.

ಇನ್ನು ತುಕಾಲಿ ಮಾನಸಾ ಅವರಿಗೆ ಜನ ಪ್ರಶ್ನೆ ಮಾಡಿದ್ದೇನೆಂದರೆ ನಿಮ್ಮ ದೊಡ್ಡ ಕಣ್ಣನ್ನು ನೋಡಿ ಇಡೀ ಕರ್ನಾಟಕನೇ ಭಯ ಬಿದ್ದೋಗಿದೆ ಎಂದು ಹೇಳಿದ್ದಾರೆ. ಅದಾದ ನಂತರದಲ್ಲಿ ಅವರು ನಿನ್ ಸಮಸ್ಯೆ ಏನು ಹೇಳಣ್ಣ ಎಂದು ಹೇಳಿದ್ದಾರೆ. ಅದಾದ ನಂತರದಲ್ಲಿ ಹಲವಾರು ಜನ ದಿಕ್ಕಾರ ಕೂಗಿದ್ದಾರೆ. ಈ ರೀತಿಯಾಗಿ ಮನೆಯ ವಾತಾವರಣ ಬದಲಾಗಿದೆ.

ಈ ಹಿಂದೆ ಸ್ಪರ್ಧಿಗಳಲ್ಲಿ ಕಿತ್ತಾಟವಾಗಿತ್ತು. ಆಟದ ಆರಂಭದಲ್ಲಿ ತಿಳಿಸಲಾದಂತೆ ಪ್ರಚಾರವನ್ನು ಮತ್ತೊಂದು ಪಕ್ಷ ಮಾಡದೇ ಇರುವಂತೆ ತಡೆಯಬೇಕಾಗಿರುತ್ತದೆ. ಹೀಗಾದಾಗ ಆಟವನ್ನು ಆಡುತ್ತಾ ಇರುವವರು ಇನ್ನೊಂದು ಪಕ್ಷದವರು ಅಂಟಿಸಿದ ಬಿತ್ತಿ ಪತ್ರವನ್ನು ಹರಿದು ಹಾಕಲು ಆರಂಭಿಸುತ್ತಾರೆ. ಇದರಿಂದ ಎರಡೂ ಪಕ್ಷದ ನಡುವೆ ಘರ್ಷಣೆ ಆರಂಭವಾಗುತ್ತದೆ. ನೀವ್ಯಾಕೆ ನಮ್ಮ ಪತ್ರವನ್ನು ಹರಿದುಹಾಕಬೇಕಿತ್ತು? ನಾವು ನಿಮ್ಮ ಪತ್ರ ಹಾಳು ಮಾಡುತ್ತೇವೆ ಎನ್ನುವ ರೀತಿಯಲ್ಲಿ ಇದು ಆರಂಭವಾಗುತ್ತದೆ. ಕೊನೆ ಕೊನೆಗೆ ಇದು ಹೊಡೆದಾಟವಾಗಿ ಪರಿಣಮಿಸುತ್ತದೆ. ಇದೆಲ್ಲವನ್ನೂ ನೋಡಿಕೊಂಡೇ ಬಿಗ್‌ ಬಾಸ್‌ ಮನೆಗೆ ಜನರು ಬಂದಿರುತ್ತಾರೆ. ಅದಕ್ಕೆ ತಕ್ಕಂತೆ ಇಂದಿನ ಎಪಿಸೋಡ್‌ ಮಜವಾಗಿರಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ