logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ತ್ರಿವಿಕ್ರಂ ಮಾತಿಗೆ ಸಿಟ್ಟಾದ ಮೋಕ್ಷಿತಾ ಪೈ; ಬಿಗ್‌ ಬಾಸ್‌ ಮನೆಯಲ್ಲಿ ಹೊತ್ತಿಕೊಂಡಿದೆ ಅಸಮಾಧಾನದ ಕಿಡಿ

Bigg Boss Kannada: ತ್ರಿವಿಕ್ರಂ ಮಾತಿಗೆ ಸಿಟ್ಟಾದ ಮೋಕ್ಷಿತಾ ಪೈ; ಬಿಗ್‌ ಬಾಸ್‌ ಮನೆಯಲ್ಲಿ ಹೊತ್ತಿಕೊಂಡಿದೆ ಅಸಮಾಧಾನದ ಕಿಡಿ

Suma Gaonkar HT Kannada

Oct 28, 2024 09:51 AM IST

google News

ಉಗ್ರಂ ಮಂಜು ಮಾತು ಕೇಳಿ ತ್ರಿವಿಕ್ರಂ ಹತ್ತಿರ ಜಗಳ ಮಾಡಿದ ಮೋಕ್ಷಿತಾ

    • Bigg Boss Kannada 11: ಉಗ್ರಂ ಮಂಜು ಅವರ ಮಾತು ಕೇಳಿ ಮೋಕ್ಷಿತಾ ತ್ರಿವಿಕ್ರಂ ಹತ್ತಿರ ಜಗಳ ಮಾಡುತ್ತಿದ್ದಾರೆ. ಕೇವಲ ಹತ್ತು ವಾರಗಳ ಕಾಲ ಮಾತ್ರ ಇವರೆಲ್ಲ ಮನೆಯಲ್ಲಿ ಇರೋದು ಅದಾದ ನಂತರ ಇವರ ಅವಶ್ಯಕತೆ ಇಲ್ಲ ಎಂದು ಅವರು ಹೇಳಿರುತ್ತಾರೆ.
 ಉಗ್ರಂ ಮಂಜು ಮಾತು ಕೇಳಿ ತ್ರಿವಿಕ್ರಂ ಹತ್ತಿರ ಜಗಳ ಮಾಡಿದ ಮೋಕ್ಷಿತಾ
ಉಗ್ರಂ ಮಂಜು ಮಾತು ಕೇಳಿ ತ್ರಿವಿಕ್ರಂ ಹತ್ತಿರ ಜಗಳ ಮಾಡಿದ ಮೋಕ್ಷಿತಾ (ಕಲರ್ಸ್‌ ಕನ್ನಡ)

ಬಿಗ್‌ ಬಾಸ್‌ ಸೀಸನ್‌ 11ರ ಸ್ಪರ್ಧಿಗಳು ವಾರದ ಪಂಚಾಯ್ತಿ ನಡೆದ ನಂತರದಲ್ಲಿ ಜಗಳ ಆರಂಭವಾಗಿದೆ. ಮೋಕ್ಷಿತಾ ಹಾಗೂ ತ್ರಿವಿಕ್ರಂ ಜಗಳವಾಡುತ್ತಿದ್ದಾರೆ. ಸೃಜನ್ ಬಂದು ಹೋದಾಗಿನಿಂದ ಪಾರು ಈ ಬಗ್ಗೆ ಮಾತಾಡುತ್ತಾ ಇದ್ದಾಳೆ. ಅದೇನೆಂದರೆ ತ್ರಿವಿಕ್ರಂ ಈ ಮನೆಯಲ್ಲಿ ಮೋಸದ ಆಟ ಆಡುತ್ತಿದ್ದಾರೆ ಎನ್ನುವುದು ಮೋಕ್ಷಿತಾ ವಾದ. ಇದರ ನಡುವೆ ಉಗ್ರಂ ಮಂಜು ಅವರು ಕೆಲ ಮಾತುಗಳನ್ನಾಡಿದ್ದಾರೆ. ತ್ರಿವಿಕ್ರಂ ಹಾಗೂ ಉಗ್ರಂ ಮಂಜು ಆಡಿದ ಮಾತನ್ನು ಮೋಕ್ಷಿತಾ ಹತ್ತಿರ ಹೇಳುತ್ತಾರೆ. ಇವರೆಲ್ಲ ಹತ್ತು ವಾರಗಳ ವರೆಗೆ ಇರ್ತಾರೆ. ಅದಾದ ನಂತರ ಇವರಿಗೆಲ್ಲ ಇಲ್ಲಿ ಕೆಲಸ ಇಲ್ಲ ಎಂದು.

ಆ ಮಾತು ಮೋಕ್ಷಿತಾ ಅವರನ್ನು ಕೆಣಕುತ್ತದೆ. ಇವರೊಬ್ಬರೇ ಇಲ್ಲಿ ಫಿನಾಲೆಗೆ ಹೋಗುವವರು ನಾವೆಲ್ಲಾ ಐದೈದು ವರ್ಷ ಸೀರಿಯಲ್ ಮಾಡಿ ಬಂದವರು ಅಷ್ಟೇ ಎಂದು ಸಿಟ್ಟಿನಿಂದ ಹೇಳುತ್ತಾರೆ. ತ್ರಿವಿಕ್ರಂ ಎದುರೇ ಹೋಗಿ ಛಾಲೆಂಜ್ ಮಾಡುತ್ತಾರೆ. ನೀವ್ ಏನ್ ತಿಳ್ಕೊಂಡಿದಿರಾ ಅದನ್ನೇ ನಾನು ಸುಳ್ ಮಾಡ್ತೀನಿ ಎಂದು ತ್ರಿವಿಕ್ರಂ ಹೇಳುತ್ತಾರೆ. ಆಗ ಮೋಕ್ಷಿತಾ ಅವರಿಗೆ ಇನ್ನಷ್ಟು ಕೋಪ ಬರುತ್ತದೆ. ಈ ಮನೆಯಲ್ಲಿ ಯಾರ್ಯಾರು ಹತ್ ವಾರ್ದೋರು ಅಂತ ನಾನು ನೋಡೇಬಿಡ್ತೀನಿ ಎಂದು ಹೇಳುತ್ತಾರೆ.

ಇವತ್ತಿನಿಂದ ನಿಜವಾದ ಆಟ ಶುರು ಎಂದು ಹೇಳುತ್ತಾರೆ. ನೀವು ಅಂದುಕೊಂಡ ರೀತಿ ನಾವೇನು ಸುಮ್ಮನೆ ಇಲ್ಲಿಗೆ ಬಂದಿಲ್ಲ. ಹತ್ತು ವಾರದ ಮೇಲೆ ಇವರ ಅವಶ್ಯಕತೆನೇ ಈ ಮನೆಲಿಲ್ಲ ಎಂದು ಹೇಳೊದಕ್ಕೆ ನೀವ್ಯಾರು ಎಂದು ಕೇಳುತ್ತಾರೆ ಮೋಕ್ಷಿತಾ.

ನಾನು ಹತ್ತು ವಾರ ಮಾತ್ರ ಇರ್ತೀನಿ ಅಂತ ನಿರ್ಧಾರ ಮಾಡೋಕೆ ಇವರ್ಯಾರು? ಎಂದು ಮೋಕ್ಷಿತಾ ಮತ್ತೆ ಮತ್ತೆ ಪ್ರಶ್ನೆ ಮಾಡುತ್ತಾರೆ. ಆಯ್ತಮ್ಮ ನೀನು ಫಿನಾಲೆಗೆ ಹೋಗಮ್ಮ ಎಂದು ತ್ರಿವಿಕ್ರಂ ಹೇಳುತ್ತಾರೆ. ಯು ಆರ್ ನಥಿಂಗ್ ತಿಳ್ಕೊಂಬಿಡಿ ಎಂದು ಮತ್ತೆ ಮೋಕ್ಷಿತಾ ಪ್ರತ್ಯುತ್ತರ ನೀಡುತ್ತಾರೆ. ತ್ರಿವಿಕ್ರಂ ಸಮಾಧಾನವಾಗೇ ಮಾತಾಡುತ್ತಾ ಇದ್ದಾರೆ. ಆದರೆ ಮೋಕ್ಷಿತಾ ತಮ್ಮ ಕೋಪ ಕಂಟ್ರೋಲ್ ಆಗದೆ ಕೂಗಾಡುತ್ತಿದ್ದಾರೆ. ಯಾಕೆಂದರೆ ತ್ರಿವಿಕ್ರಂ ಮಾತಿನಿಂದ ಅವರಿಗೆ ಅಷ್ಟು ಕೋಪ ಬಂದಿದೆ.

ನೀವು ಗೋಮುಖ ವ್ಯಾಗ್ರನ ಥರ ಆಟ ಆಡ್ತಾ ಇದೀರಾ ಎಂದು ಹೇಳುತ್ತಾರೆ ಮೋಕ್ಷಿತಾ. ಇದೇ ರೀತಿ ಪದೇ ಪದೇ ಅವರಿಬ್ಬರ ನಡುವೆ ಗಲಾಟೆ ಆಗುತ್ತಲೆ ಬಂದಿದೆ. ತ್ರಿವಿಕ್ರಮ ಇನ್ನುವರೆಗೂ ಯಾರ್ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ ಮಾತಾಡೋದೆಲ್ಲ ಮಂಜಣ್ಣ ನೀವು ಮಂಜಣ್ಣನ್ ಮಾತ್ ಕೇಳ್ಕೊಂಡು ಜಗಳ ಮಾಡೋದು ತಪ್ಪು ಮೋಕ್ಷಿತ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ