logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ತ್ರಿವಿಕ್ರಂಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ ಎಂದ ಮೋಕ್ಷಿತಾ ಪೈ; ತ್ರಿವಿಕ್ರಂ ರಿಯಾಕ್ಷನ್ ಹೇಗಿತ್ತು ನೋಡಿ

Bigg Boss Kannada: ತ್ರಿವಿಕ್ರಂಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ ಎಂದ ಮೋಕ್ಷಿತಾ ಪೈ; ತ್ರಿವಿಕ್ರಂ ರಿಯಾಕ್ಷನ್ ಹೇಗಿತ್ತು ನೋಡಿ

Suma Gaonkar HT Kannada

Oct 29, 2024 06:13 PM IST

google News

ತ್ರಿವಿಕ್ರಂಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ ಎಂದ ಮೋಕ್ಷಿತಾ ಪೈ

    • ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಆಟ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಈ ವಾರ ತ್ರಿವಿಕ್ರಂ ಮತ್ತು ಮೋಕ್ಷಿತಾ ನಡುವೆ ಮನಸ್ತಾಪಗಳೇ ಹೆಚ್ಚಿದೆ. ವಿಕ್ರಂಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ. 
ತ್ರಿವಿಕ್ರಂಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ ಎಂದ ಮೋಕ್ಷಿತಾ ಪೈ
ತ್ರಿವಿಕ್ರಂಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ ಎಂದ ಮೋಕ್ಷಿತಾ ಪೈ (ಕಲರ್ಸ್‌ ಕನ್ನಡ)

ಹಿಂದಿನ ವಾರ ಬಿಗ್ ಬಾಸ್‌ ಮನೆಗೆಯಲ್ಲಿ ಇಬ್ಬರು ಕ್ಯಾಪ್ಟನ್‌ ಆಗಿದ್ದರು. ತ್ರಿವಿಕ್ರಂ ಮತ್ತು ಐಶ್ವರ್ಯ ಆದರೆ ಈಗ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಬೇಕು. ಇಬ್ಬರಲ್ಲಿ ಕ್ಯಾಪ್ಟನ್ ಆಗಲು ಅರ್ಹತೆ ಇರದ ಒಬ್ಬರ ಹೆಸರನ್ನು ಸೂಚಿಸಬೇಕು ಎಂದು ಹೇಳಲಾಗುತ್ತದೆ. ಆಗ ಕೆಲವರು ಐಶ್ವರ್ಯ ಹೆಸರು ಸೂಚಿಸಿದರೆ ಇನ್ನು ಕೆವರು ತ್ರಿವಿಕ್ರಂ ಹೆಸರನ್ನು ಸೂಚಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಕಾರಣಗಳನ್ನು ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಅವರು ಮೊದಲಿಗೆ ಐಶ್ವರ್ಯ ಈ ಮನೆಯ ಕ್ಯಾಪ್ಟನ್ ಆಗಲು ಅರ್ಹರಲ್ಲ ಎಂದು ಹೇಳುತ್ತಾರೆ. ಅಲ್ಲಿ ತ್ರಿವಿಕ್ರಂ ಹಾಗೂ ಐಶ್ವರ್ಯ ಅವರ ಫೋಟೋವನ್ನು ಇಟ್ಟಿರುತ್ತಾರೆ. ಅವುಗಳನ್ನು ಹರಿದು ಕಸದ ಬುಟ್ಟಿಗೆ ಹಾಕುವಂತೆ ಸೂಚನೆ ನೀಡಿರುತ್ತಾರೆ.

ಗೌತಮಿ ಹಾಗೂ ಮೋಕ್ಷಿತಾ ಮತ್ತು ಉಗ್ರಂ ಮಂಜು ಹಾಗೂ ಧರ್ಮ ಅವರು ತ್ರಿವಿಕ್ರಂ ಹೆಸರನ್ನು ತೆಗೆದುಕೊಂಡಿರುವುದು ಪ್ರೋಮೊದಲ್ಲಿ ಕಾಣಿಸುತ್ತದೆ. ತ್ರಿವಿಕ್ರಂ ತುಂಬಾ ಅಗ್ರಸ್ಸಿವ್ ಆಗಿರ್ತಾರೆ ಎನ್ನುವುದು ಆ ಮನೆಯಲ್ಲಿ ಬಹುತೇಕರ ಅನಿಸಿಕೆಯಾಗಿದೆ. ನಾನು ನೋಡಿಕೊಂಡು ಕುಕ್ಕಿದ್ದೇನೆ ಎಂದು ತ್ರಿವಿಕ್ರಂ ಹೇಳುತ್ತಾರೆ. ಆದರೆ ನಾನು ಆರೀತಿ ಮಾಡಿಲ್ಲ ಎಂದು ಹೇಳುತ್ತಾ ಉಗ್ರಂ ಮಂಜು ಅವರು ತ್ರಿವಿಕ್ರಂ ಫೋಟೋವನ್ನು ಹರಿದು ಹಾಕುತ್ತಾರೆ ಧರ್ಮ ಅವರು ಅಗ್ರೆಷನ್‌ ತುಂಬಾ ಹೆಚ್ಚಾಗಿದೆ ಅವರಿಗೆ ಎಂದು ಹೇಳುತ್ತಾರೆ. ಆಗ ತ್ರಿವಿಕ್ರಂ, ನಿಮ್ಮನ್ನು ನಾನು ಮುಟ್ಟಿಲ್ಲ. ನಿಮಗೆ ನಾನು ಹೊಡೆದಿಲ್ಲ ಎಂದು ಹೇಳುತ್ತಾರೆ.

ಅದಾದ ನಂತರ ಮೋಕ್ಷಿತಾ ಪೈ “ರೂಲ್‌ ಇಸ್‌ ಅ ರೂಲ್‌, ಈವನ್ ಪಾರ್‌ ಅ ಫೂಲ್” ಎಂದು ಹೇಳುತ್ತಾರೆ. ಆಗ ತ್ರಿವಿಕ್ರಂ ಅವರ ಮುಖಭಾವ ಬದಲಾಗಿದ್ದನ್ನು ನಾವು ಕಾಣಬಹುದು. ಕ್ಯಾಪ್ಟನ್ ಆದವರು ಎಲ್ಲರನ್ನೂ ಒಂದೇ ರೀತಿ ಟ್ರೀಟ್ ಮಾಡಬೇಕು ಎಂದು ಹೇಳುತ್ತಾರೆ ಮೋಕ್ಷಿತಾ ಆದರೆ ಅದಕ್ಕೆ ಇಲ್ಲಿ ಮೋಸ ಆಗಿದೆ ಎಂದು ಹೇಳುತ್ತಾರೆ. ಅದಾದ ನಂತರ ತ್ರಿವಿಕ್ರಂಗೆ ಕ್ಯಾಪ್ಟನ್‌ ಆಗುವ ಅರ್ಹತೆ ಇಲ್ಲ ಎಂದು ಹೇಳಿ ಅವರ ಭಾವಚಿತ್ರವನ್ನು ಹರಿದು ಕಸದ ಬುಟ್ಟಿಗೆ ಹಾಕುತ್ತಾರೆ.

ಈ ಹಿಂದೆ ಕೂಡ ಮೋಕ್ಷಿತಾ ಹಾಗೂ ತ್ರಿವಿಕ್ರಂಗೆ ಆಗಾಗ ಜಗಳ ಹಾಗೂ ಅವರಿಬ್ಬರ ನಡುವೆ ಮುನಿಸು ಆಗುತ್ತಲೇ ಇತ್ತು. ಆಗಾಗ ಇದು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ. ಇಬ್ಬರ ಮಧ್ಯ ಒಂದು ಶೀತಲ ಸಮರವಂತು ಇದ್ದೇ ಇದೆ. ಈ ಬಗ್ಗೆ ಜನರೂ ಸಹ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅಯ್ಯಯ್ಯೋ!! ಎಂದು ಹಾಸ್ಯಾಸ್ಪದವಾಗಿ ತ್ರಿವಿಕ್ರಂ ರಿಯಾಕ್ಟ್‌ ಮಾಡಿದ್ದಾರೆ.

ಯಾರ ಪರ ಇದೆ ಜನಾಭಿಪ್ರಾಯ?

ಮೋಕ್ಷ ಅವರೇ ಬಿಗ್ ಬಾಸ್ ಮನೆಯಲ್ಲಿ ಯಾರು ಏನು ಸಾಚಾ ಅಲ್ಲ ಎಲ್ಲರೂ ಎಲ್ಲರೂ ಬಗ್ಗೆ ಮಾತಡುತ್ತಿರ ನೀವು ಹನುಮಂತ ನಿಗೆ ಅವಮಾನ ಮಾಡಲಿಲ್ಲವ.. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಎಲ್ಲಾದರೂ ಇರ್ ಭಾಹುದು ನೀವು ಇಲ್ಲಿ ಬರಬೇಡಿ ಅಂತ ಹೇಳಿಲ್ಲವ.. ಹನುಮಂತ ಪಾಪ ಎಂದು ಪದ್ಮಶ್ರೀ ಕಾಮೆಂಟ್ ಮಾಡಿದ್ದಾರೆ.

ತ್ರಿವಿಕ್ರಂ ಅವರನ್ನು ನೋಡುವಾಗ ಅವರೇ ಈ ಸೀಸನ್‌ನ ವಿನ್ನರ್ ಆಗ್ತಾರೆ ಅಂತ ಅನಿಸುತ್ತೆ ಎಂದು ರಾಕೇಶ್‌ ಆಚಾರ್ ಕಾಮೆಂಟ್ ಮಾಡಿದ್ದಾರೆ.

ಹಲೋ ಮೋಕ್ಷಿತ್ ಸೋಲುವ ಬಿತಿಯಲ್ಲಿ ಇತರ ಮಾತುಗಳು ಬರುತ್ತವೆ ನೀವು ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ ಹೇಳಿಕೆ ಮಾತು ಕೇಳಿ ಧರ್ಮರಾಯ ಕೆಟ್ಟನಂತೆ ಇನ್ನು ನೀನು ಯಾವ ಲೆಕ್ಕಾ ಬಿಡು ಮೋಕ್ಷಿತಾ ಎಂದು ಹನುಮಪ್ಪ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಜನರೆಲ್ಲ ತ್ರಿವಿಕ್ರಂ ಪರ ಇದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ