logo
ಕನ್ನಡ ಸುದ್ದಿ  /  ಮನರಂಜನೆ  /  Lakshmi Tiffin Room Serial: ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಹಾಸ್ಯ ನಟ ಟೆನ್ನಿಸ್‌ ಕೃಷ್ಣ

Lakshmi Tiffin Room Serial: ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಹಾಸ್ಯ ನಟ ಟೆನ್ನಿಸ್‌ ಕೃಷ್ಣ

Feb 29, 2024 01:16 PM IST

google News

Lakshmi Tiffin Room Serial: ಲಕ್ಷ್ಮಿ ಟಿಫನ್ ರೂಮ್ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಹಾಸ್ಯ ನಟ ಟೆನ್ನಿಸ್‌ ಕೃಷ್ಣ

    • ಸ್ಯಾಂಡಲ್‌ವುಡ್‌ ಕಂಡ ಹಾಸ್ಯನಟ ಟೆನ್ನಿಸ್‌ ಕೃಷ್ಣ ಇದೀಗ ಪೂರ್ಣ ಪ್ರಮಾಣದಲ್ಲಿ ಕಿರುತೆರೆಗೆ ಆಗಮಿಸುತ್ತಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇದೇ ಮಾರ್ಚ್‌ 4ರಿಂದ ಪ್ರಸಾರವಾಗಲಿರುವ ಲಕ್ಷ್ಮಿ ಟಿಫಿನ್‌ ರೂಮ್‌ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿರಲಿದ್ದಾರೆ. 
Lakshmi Tiffin Room Serial: ಲಕ್ಷ್ಮಿ ಟಿಫನ್ ರೂಮ್ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಹಾಸ್ಯ ನಟ ಟೆನ್ನಿಸ್‌ ಕೃಷ್ಣ
Lakshmi Tiffin Room Serial: ಲಕ್ಷ್ಮಿ ಟಿಫನ್ ರೂಮ್ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಹಾಸ್ಯ ನಟ ಟೆನ್ನಿಸ್‌ ಕೃಷ್ಣ

Lakshmi Tiffin Room Serial: ಸ್ಯಾಂಡಲ್‌ವುಡ್‌ನಲ್ಲಿ ಕಳೆದ ಮೂರು ದಶಕಗಳಿಂದ ತಮ್ಮ ನಟನೆಯ ಮೂಲಕವೇ ನಗು ಉಕ್ಕಿಸುವ ಕೆಲಸ ಮಾಡಿದ್ದ ನಟ ಟೆನ್ನಿಸ್‌ ಕೃಷ್ಣ, ಇದೀಗ ಕಿರುತೆರೆ ಕಡೆಗೆ ವಾಲಿದ್ದಾರೆ. ಈ ಮೊದಲು ಕಾವ್ಯಾಂಜಲಿ ಸೀರಿಯಲ್‌ನಲ್ಲಿ ಗೆಸ್ಟ್‌ ಆಗಿ ನಟಿಸಿದ್ದ ಇದೇ ನಟ ಈಗ ಪೂರ್ಣ ಪ್ರಮಾಣದಲ್ಲಿ ಸೀರಿಯಲ್‌ ನಟನೆ ಕಡೆ ಹೊರಳಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಲಕ್ಷ್ಮೀ ಟಿಫನ್‌ ರೂಮ್‌ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಬತ್ತಳಿಕೆಗೆ ಇದೀಗ ಲಕ್ಷ್ಮಿ ಟಿಫನ್ ರೂಮ್ ಎಂಬ ನೂತನ ಧಾರಾವಾಹಿಯ ಸೇರ್ಪಡೆಯಾಗಿದೆ.

ಈಗಾಗಲೇ ಸ್ಟಾರ್‌ ಸುವರ್ಣ ಸೋಷಿಯಲ್‌ ಮೀಡಿಯಾಗಳಲ್ಲಿ ಲಕ್ಷ್ಮಿ ಟಿಫನ್ ರೂಮ್ ಸೀರಿಯಲ್‌ನ ಪ್ರೋಮೋ ನೋಡುಗರ ಗಮನ ಸೆಳೆದಿತ್ತು. ಕುತೂಹಲವನ್ನೂ ಮೂಡಿಸಿತ್ತು. ಈಗ ಈ ಸೀರಿಯಲ್‌, ತನ್ನ ಪ್ರಸಾರದ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಕಾಯುವಿಕೆಗೆ ಬ್ರೇಕ್‌ ಹಾಕಿದೆ. ಹೆಣ್ಣುಮಕ್ಕಳು, ಅಡುಗೆ ಮನೆಗೇ ಸೀಮಿತ ಅನ್ನೋ ಪರಿಕಲ್ಪನೆಯಲ್ಲಿ ಈ ಸೀರಿಯಲ್‌ ಮೂಡಿಬರುತ್ತಿದ್ದು, ಅದರಾಚೆಗೂ ಹೆಣ್ಣು ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ಇಲ್ಲಿ ನೋಡಬಹುಗಿದೆ.

ಸೀರಿಯಲ್‌ ಕಥೆ ಏನು?

ಕಥಾ ನಾಯಕಿ ವರಲಕ್ಷ್ಮಿ ನೇರ ನುಡಿಯನ್ನು ಹೊಂದಿರೋಳು, ಎಂತಹ ಸಂದರ್ಭದಲ್ಲೂ ಈಕೆ ನ್ಯಾಯದ ಪರ ನಿಲ್ಲುವ ಗಟ್ಟಿಗಿತ್ತಿ. ಐಎಎಸ್ ಮಾಡಬೇಕೆಂಬ ಕನಸನ್ನು ಕಂಡಿರುತ್ತಾಳೆ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ, ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಮನಸ್ಥಿತಿಯಿರುವ ಮನೆತನಕ್ಕೆ ಸೊಸೆಯಾಗಿ ಹೋಗುತ್ತಾಳೆ. ಆ ಮನೆಯ ರೀತಿ ರಿವಾಜುಗಳು, ಕಟ್ಟುಪಾಡುಗಳನ್ನು ಭೇಧಿಸಿ ತನ್ನ ಗಂಡನ ಮನೆಯಲ್ಲಿರುವ ಎಲ್ಲಾ ಸವಾಲುಗಳನ್ನು ಎದುರಿಸಿ, ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ? ಈ ಮೂರುಗಂಟಿನ ಬಂಧ, ವರು ಕನಸುಗಳನ್ನು ಕಟ್ಟಿಹಾಕುತ್ತಾ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಹೆಣ್ಣೊಬ್ಬಳು ಕೂಡು ಕುಟುಂಬಕ್ಕೆ ಸೊಸೆಯಾಗಿ ಹೋದಾಗ ತನ್ನ ಕನಸನ್ನು ನನಸಾಗಿಸಲು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನು ಈ ಕಥೆಯಲ್ಲಿ ಅತ್ಯದ್ಭುತವಾಗಿ ತೋರಿಸಲಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಲಕ್ಷ್ಮೀ ಟಿಫನ್‌ ರೂಮ್‌ ಸೀರಿಯಲ್‌ನ ಪ್ರೋಮೋದಲ್ಲಿ "ಕಥಾನಾಯಕಿ ವರಲಕ್ಷ್ಮೀ, ಅಜ್ಜಯ್ಯ ನಾನು ಐಎಎಸ್‌ ಮಾಡಬೇಕೆಂದುಕೊಂಡಿದ್ದೀನಿ.. ಎನ್ನುತ್ತಿದ್ದಂತೆ, ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಓದು ಅವಶ್ಯಕತೆ ಇಲ್ಲ. ಅವಕಾಶವಂತೂ ಮೊದಲೇ ಇಲ್ಲ. ಲಕ್ಷ್ಮೀ ಟಿಫನ್‌ ರೂಮ್‌ ಹೆಣ್ಣುಮಕ್ಕಳು ದೋಸೆ ಕರೆಕ್ಟಾಗಿ ಹಾಕಿದ್ರೆ ಸಾಕು ಎಂದು ಆಕೆಯ ಕೈಯಲ್ಲಿನ ಅಪ್ಲಿಕೇಷನ್‌ ಫಾರ್ಮ್‌ಅನ್ನು ಒಲೆಗೆ ಎಸೆಯುತ್ತಾನೆ ಅಜ್ಜಯ್ಯ. ಇದು ಕನಸುಗಳ ಸಾಕ್ಷಾತ್ಕಾರವೋ ಅಥವಾ ಆಹುತಿಯೋ, ಮುಂದೇನಾಗಲಿದೆ ವರಲಕ್ಷ್ಮಿಯ ಬದುಕು" ಹೀಗೆ ನೋಡಿಸಿಕೊಂಡು ಹೋಗಲಿದೆ ಈ ಸೀರಿಯಲ್.‌

ಟೆನ್ನಿಸ್‌ ಕೃಷ್ಣ ಆಗಮನ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ವಿಶೇಷ ಪಾತ್ರದಲ್ಲಿ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಈ ಹಿರಿಯ ನಟನಿಗೆ ಯಾವ ರೀತಿಯ ಪಾತ್ರ ಸಿಕ್ಕಿರಬಹುದು ಎಂಬ ಕೌತುಕ ಶೀಘ್ರದಲ್ಲಿ ಶುರುವಾಗಲಿದೆ. ಸುನೇತ್ರ ಪಂಡಿತ್, ಅನಂತವೇಲು, ವಚನ್, ಮಧುಮಿತಾ, ವಿಜಯಲತಾ, ಕಾವ್ಯ, ಪ್ರೀತಮ್ ಮಕ್ಕಿಹಾಳಿ, ಭಗತ್ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಪ್ರೀತಿ, ಆಕಾಂಕ್ಷೆಯನ್ನೊಳಗೊಂಡ ವರಲಕ್ಷ್ಮಿಯ ಕಥೆ ಲಕ್ಷ್ಮಿ ಟಿಫನ್ ರೂಮ್ ಇದೇ ಸೋಮವಾರದಿಂದ ಸಂಜೆ 6.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ