logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಬೆಡ್‌ ಮೇಲೆ ಭೂಮಿ ಗೌತಮ್‌, ಇನ್ಮುಂದೆ ನಿಮ್ಮ ದಾರಿ ನಿಮಗೆ ನನ್ನ ದಾರಿ ನನಗೆ ಎಂದ ಅಪೇಕ್ಷಾ; ಎಲ್ಲರಿದ್ದರೂ ಒಂಟಿಯಾದ ಪಾರ್ಥ

Amruthadhaare: ಬೆಡ್‌ ಮೇಲೆ ಭೂಮಿ ಗೌತಮ್‌, ಇನ್ಮುಂದೆ ನಿಮ್ಮ ದಾರಿ ನಿಮಗೆ ನನ್ನ ದಾರಿ ನನಗೆ ಎಂದ ಅಪೇಕ್ಷಾ; ಎಲ್ಲರಿದ್ದರೂ ಒಂಟಿಯಾದ ಪಾರ್ಥ

Praveen Chandra B HT Kannada

Feb 16, 2024 07:00 AM IST

google News

ಅಮೃತಧಾರೆ ಧಾರಾವಾಹಿ

    • Amruthadhaare Kannada Serial: ಝೀ ಕನ್ನಡದ ಅಮೃತಧಾರೆ ಸೀರಿಯಲ್‌ನ ಗುರುವಾರದ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಪಾರ್ಥನ ನಡುವೆ ಲವ್‌ ಫೈಲ್ಯೂರ್‌ ಮಾತುಕತೆ ನಡೆಯುತ್ತದೆ. ಇನ್ನೊಂದೆಡೆ ಆಕಸ್ಮಿಕವಾಗಿ ಭೂಮಿಕಾ ಮತ್ತು ಗೌತಮ್‌ ಜತೆಯಾಗಿ ಬೆಡ್‌ಮೇಲೆ ಬೀಳುತ್ತಾರೆ. ಪ್ರೇಮಿಗಳ ದಿನದ ಪಾರ್ಟಿಯೂ ನಡೆಯುತ್ತಿದೆ.
ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

ಪಾರ್ಥ ಮತ್ತು ಅಪೇಕ್ಷಾ ಒಂದೆಡೆ ಭೇಟಿಯಾಗಿದ್ದಾರೆ. ಕುಟುಂಬಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡುವ ಕುರಿತು ಮಾತನಾಡುತ್ತಾರೆ. "ನಾವು ಇವಾಗ ಡಿಸಿಷನ್‌ ತೆಗೆದುಕೊಳ್ಳಬೇಕು, ಇಲ್ಲದೆ ಇದ್ದರೆ ಜೀವನಪೂರ್ತಿ ನೋವು ಅನುಭವಿಸ್ತಿವಿ" ಎಂದು ಅಪೇಕ್ಷಾ ಹೇಳುತ್ತಾಳೆ. ನಾವು ಮನೆಯವರನ್ನು ಪ್ರೀತಿಸುತ್ತೇವೆ ಎಂದೆಲ್ಲ ಪಾರ್ಥ ಹೇಳುತ್ತಾನೆ. "ನಿಮ್ಮ ನಿರ್ಧಾರ ಬದಲಾಗೋಲ್ಲ. ಅದಕ್ಕೆ ನಾನು ನನ್ನ ಪ್ರೀತಿನ ನನ್ನ ಮನೆಯವರಿಗೋಷ್ಕರ ತ್ಯಾಗ ಮಾಡ್ತಿನಿ. ನೀವು ಜಸ್ಟ್‌ ಫ್ಯಾಮಿಲಿ ಮೆಂಬರ್‌ ಆಗಿರ್ತಿರಿ. ಲವ್‌ ಫೈಲ್ಯೂರ್‌ ಆಯ್ತೆಂದು ದೇವದಾಸ್‌ ತರಹ ರೀತಿ ಇರಬೇಡಿ. ನೀವು ಫಾರಿನ್‌ ರಿಟರ್ನ್‌ ಚಾಕಲೇಟ್‌ ಬಾಯ್‌. ಸರಿ ನಾನಿನ್ನು ಬರ್ತಿನಿ. ಇನ್ಮುಂದೆ ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ" ಎಂದು ಅಪೇಕ್ಷಾ ಹೇಳಿ ಹೋಗುತ್ತಾಳೆ.

ಮದುವೆ ಸಂಭ್ರಮದಲ್ಲಿ ಕುಟುಂಬ

ಇನ್ನೊಂದೆಡೆ ಅಪೇಕ್ಷಾ ಮನೆಯಲ್ಲಿ ಮದುವೆ ಕುರಿತು ಮಾತನಾಡುತ್ತಿದ್ದಾರೆ. "ನಾನು ಕೆಲಸದಿಂದ ರಿಟೈರ್ಡ್‌ ಆಗಿದ್ದೆ. ಜವಾಬ್ದಾರಿಯಿಂದ ರಿಟೈರ್ಡ್‌ ಆಗಿರ್ಲಿಲ್ಲ" ಎಂದು ಸದಾಶಿವ ಹೇಳುತ್ತಾರೆ. ಬಳಿಕ ಆಮಂತ್ರಣ ಪತ್ರಿಕೆ ಯಾರಿಗೆಲ್ಲ ಕೊಡಬೇಕು ಎಂದು ಮಾತನಾಡುತ್ತಾರೆ. ಇದೇ ರೀತಿ ಜೈದೇವ್‌ ಮನೆಯಲ್ಲೂ ಆಮಂತ್ರಣ ಪತ್ರಿಕೆ, ಮದುವೆ ಪೂರ್ವ ಗಡಿಬಿಡಿ ಇರುತ್ತದೆ. "ಮೊದಲು ಲಗ್ನಪತ್ರಿಕೆ ದೇವಸ್ಥಾನಕ್ಕೆ, ಬೀಗರ ಮನೆಗೆ, ಒಳ್ಳೆಯ ಮನಸ್ಸಿರುವವರಿಗೆ ಮೊದಲು ಕೊಡಬೇಕು" ಎಂದು ಅಜ್ಜಿ ಹೇಳುತ್ತಾರೆ. ಲಗ್ನ ಪತ್ರಿಕೆಯನ್ನು ದೇವಸ್ಥಾನಕ್ಕೆ ಪಾರ್ಥನ ಕೈಯಲ್ಲಿ ಕೊಡು ಎಂದು ಅಜ್ಜಿ ಹೇಳುತ್ತಾರೆ.

ಬಳಿಕ ಗೌತಮ್‌ ಮತ್ತು ಭೂಮಿಕಾ ಸದಾಶಿವರ ಮನೆಗೆ ಬರುತ್ತಾರೆ. "ನಿಮ್ಮ ಮಗಳದ್ದೇ ಮದುವೆ" ಎಂದು ಕರೆಯುತ್ತಾರೆ. ಈ ಸಮಯದಲ್ಲಿ ತಮಾಷೆಯ ಮಾತುಕತೆಗಳು ನಡೆಯುತ್ತವೆ. ಎಲ್ಲರೂ ಫ್ಯಾಮಿಲಿ ಬಾಂಡಿಂಗ್‌ ಕುರಿತು ಮಾತನಾಡುತ್ತಾರೆ.

ಬೆಡ್‌ಮೇಲೆ ಗೌತಮ್‌-ಭೂಮಿಕಾ

ಮತ್ತೆ ಮನೆಗೆ ವಾಪಸ್‌ ಬಂದಾಗ ಭೂಮಿಕಾ ಮತ್ತು ಗೌತಮ್‌ ಪ್ರೇಮ ಸಲ್ಲಾಪ ನಡೆಯುತ್ತದೆ. ಬೆಡ್‌ರೂಂ ಅನ್ನು ಭೂಮಿಕಾ ಕ್ಲೀನ್‌ ಮಾಡ್ತಾ ಇರ್ತಾರೆ. ಆಗ ಗೌತಮ್‌ ಬರುತ್ತಾರೆ. ಗೌತಮ್‌ಗೆ ಅಲರ್ಜಿಯಾಗಿ ಅಕ್ಷಿ ಬರುತ್ತದೆ. ಹಾಗೆ ಅಕ್ಷಿ ಮಾಡುತ್ತಾ ಬೆಡ್‌ಗೆ ಬೀಳುತ್ತಾನೆ. ಭೂಮಿಕಾಳ ಕೈ ಹಿಡಿದುಕೊಂಡ ಕಾರಣ ಭೂಮಿಕಾಳು ಬೀಳುತ್ತಾಳೆ. ಇಬ್ಬರು ಕೆಲವು ಕ್ಷಣ ಬೆಡ್‌ರೂಂನಲ್ಲಿ ಒಬ್ಬರ ಹತ್ತಿರ ಇರುತ್ತಾರೆ. ಅದೇ ಸಮಯಕ್ಕೆ ಸ್ನೇಹಿತ ಬಂದು ಪ್ರಣಯ ಭಂಗವಾಗುತ್ತದೆ. ಒಳಗಡೆ ನಡೆದಿರುವುದಕ್ಕೆ ಟೆನ್ಷನ್‌ ಆಗೋ ಬದಲು ನಗ್ತಾ ಇದ್ದೀರಲ್ವ ಎಂದು ಗೌತಮ್‌ ಹೇಳಿದಾಗ ಭೂಮಿಕಾ ನಗುತ್ತಾಳೆ. ಆ ಕ್ಷಣವನ್ನು ನೆನಪಿಸಿಕೊಂಡು ಖುಷಿ ಪಡುತ್ತಾಳೆ.

ಬಳಿಕ ಗೆಳೆಯನ ಭೇಟಿಯಾಗುತ್ತಾನೆ. ಎಲ್ಲಾ ಅಪರ್ಣಾಗೆ ಹೇಳಿದ್ದೀಯಾ ಎಂದು ಗೌತಮ್‌ ಕೇಳುತ್ತಾರೆ. ಭೂಮಿಕಾರೂ ಬರುತ್ತಾಳೆ. ಆನಂದ್‌ರವರೇ ಏನಾಯ್ತು ಎಂದು ಆನಂದ್‌ ಹೇಳುತ್ತಾನೆ. ಬಳಿಕ ಈ ವಿಷಯದ ಕುರಿತು ಚರ್ಚೆ ನಡೆಯುತ್ತದೆ. ಬಳಿಕ ವ್ಯಾಲೆಂಟಿನ್‌ ಡೇ ಆಚರಿಸುವ ಕುರಿತು ಮಾತನಾಡುತ್ತಾರೆ. ಎಲ್ಲಾ ಜೋಡಿಗಳು ಒಟ್ಟಾಗಿ ಪ್ರೇಮಿಗಳ ದಿನಾಚರಣೆ ಮಾಡುವ ಕುರಿತು ಯೋಜಿಸುತ್ತಾರೆ. ಎಲ್ಲರೂ ವ್ಯಾಲೆಂಟೆನ್‌ ಡೇ ಪಾರ್ಟಿಗೆ ಒಪ್ಪುತ್ತಾರೆ. ಅಲ್ಲಿಗೆ ಬಂದ ಪಾರ್ಥನ ಮುಖದಲ್ಲೊಂದು ನೋವಿನ ಸುಳಿ ಕಾಣಿಸುತ್ತದೆ.

ಪ್ರೇಮಿಗಳ ದಿನದ ಪಾರ್ಟಿ

ಅಳಿಯಂದಿರಿಗೆ ಇಂದೇ ಪ್ರಪೋಸ್‌ ಮಾಡು ಎಂದು ಭೂಮಿಕಾಳಿಗೆ ಅಮ್ಮ ಹೇಳುತ್ತಾಳೆ. "ಅವರು ಇಲ್ಲದೆ ಇರುವಾಗ ಧೈರ್ಯವಾಗಿರ್ತಿನಿ. ಅವರು ಎದುರಿಗೆ ಬಂದಾಗ ಧೈರ್ಯ ಇರೋದಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. ಒಟ್ಟಾರೆ, ಪ್ರೇಮಿಗಳ ದಿನದಂದು ಪ್ರಪೋಸ್‌ ಮಾಡಬೇಕೆಂದು ಅಮ್ಮ ಒತ್ತಾಯಿಸುತ್ತಾಳೆ.

ಬಳಿಕ ವ್ಯಾಲೆಂಟಿನ್‌ ಪಾರ್ಟಿ ಹಾಲ್‌ ಸೀನ್‌ ಆರಂಭವಾಗುತ್ತದೆ. ಒಬ್ಬರೊಬ್ಬರೇ ಆಗಮಿಸುತ್ತಾರೆ. ಮಹಿಮಾ ಜೀವ, ಗೌತಮ್‌ ಭೂಮಿಕಾ ಸೇರಿದಂತೆ ಎಲ್ಲರೂ ಬರುತ್ತಾರೆ. ಅಲ್ಲಿ ಅಪ್ಪಿ ಡಲ್‌ ಆಗಿರ್ತಾಳೆ. ಮದುವೆ ಸಮಯದ ನರ್ವಸ್‌ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದೇ ಸಮಯದಲ್ಲಿ ಪಾರ್ಥ ಆಗಮಿಸುತ್ತಾನೆ. ಪ್ರೀತಿಯ ಕುರಿತು ಮಾತುಗಳಾಗುತ್ತವೆ. ಕೆಲವೊಂದು ಮಾತುಗಳು ಪಾರ್ಥನಿಗೆ ತಟ್ಟುವಂತೆ ಇರುತ್ತದೆ. ಒಟ್ಟಾರೆ ಪ್ರೇಮಿಗಳ ದಿನದ ಪಾರ್ಟಿ ಅಮೃತಧಾರೆಯಲ್ಲಿ ನಡೆಯುತ್ತದೆ. ಭೂಮಿಕಾಳ ಜ್ಯೂಸ್‌ಗೆ ಆಲ್ಕೋಹಾಲ್‌ ಮಿಕ್ಸ್‌ ಮಾಡುವ ಕುರಿತು ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತಾರೆ.

ಅಮೃತಧಾರೆ ಧಾರಾವಾಹಿ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ