logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಜೈದೇವ್‌ಗೆ ಎಚ್ಚರಿಕೆ ನೀಡಿದ ಭೂಮಿಕಾ, ಜಾತಕ ನೋಡಿ ಸುಳ್ಳು ಹೇಳಿದ ಗುರುಗಳು, ಮಹಿಮಾ ಮನೆಯ ಹತ್ತಿರ ಬಂದ ದೀಪಾನ್ಶು

Amruthadhaare: ಜೈದೇವ್‌ಗೆ ಎಚ್ಚರಿಕೆ ನೀಡಿದ ಭೂಮಿಕಾ, ಜಾತಕ ನೋಡಿ ಸುಳ್ಳು ಹೇಳಿದ ಗುರುಗಳು, ಮಹಿಮಾ ಮನೆಯ ಹತ್ತಿರ ಬಂದ ದೀಪಾನ್ಶು

Praveen Chandra B HT Kannada

Apr 03, 2024 07:59 AM IST

google News

Amruthadhaare: ಜೈದೇವ್‌ಗೆ ಎಚ್ಚರಿಕೆ ನೀಡಿದ ಭೂಮಿಕಾ, ಜಾತಕ ನೋಡಿ ಸುಳ್ಳು ಹೇಳಿದ ಗುರುಗಳು

    • Amruthadhaare Serial: ಮಲ್ಲಿ ಕುರಿತು ಸಡನ್‌ ಪ್ರೀತಿ ತೋರಿಸಿದ ಜೈದೇವ್‌ ಬಗ್ಗೆ ಭೂಮಿಕಾ ಅನುಮಾನ ವ್ಯಕ್ತಪಡಿಸುತ್ತಾರೆ. ಇನ್ನೊಂದೆಡೆ ಜ್ಯೋತಿಷಿ ಸುಳ್ಳು ಹೇಳಿ ಗೌತಮ್‌ನನ್ನು ಭಯ ಪಡಿಸುತ್ತಾರೆ. ದೀಪಾನ್ಶು ನೇರವಾಗಿ ಮಹಿಮಾಳ ಅಪಾರ್ಟ್‌ಮೆಂಟ್‌ ಕೆಳಗೆ ಬಂದು ಭೇಟಿಯಾಗಲು ಒತ್ತಡ ಹಾಕುತ್ತಿದ್ದಾನೆ.
Amruthadhaare: ಜೈದೇವ್‌ಗೆ ಎಚ್ಚರಿಕೆ ನೀಡಿದ ಭೂಮಿಕಾ, ಜಾತಕ ನೋಡಿ ಸುಳ್ಳು ಹೇಳಿದ ಗುರುಗಳು
Amruthadhaare: ಜೈದೇವ್‌ಗೆ ಎಚ್ಚರಿಕೆ ನೀಡಿದ ಭೂಮಿಕಾ, ಜಾತಕ ನೋಡಿ ಸುಳ್ಳು ಹೇಳಿದ ಗುರುಗಳು

ಜೈದೇವ್‌ನನ್ನು ಭೂಮಿಕಾ ಭೇಟಿಯಾಗಿ ಮಾತನಾಡುತ್ತಾಳೆ. ನೀವು ನಿಜಕ್ಕೂ ಮಲ್ಲಿ ಜತೆ ಚೆನ್ನಾಗಿದ್ದೀರಾ? ಅಥವಾ ಚೆನ್ನಾಗಿ ಇರೋರ ರೀತಿ ನಾಟಕವಾಡ್ತಾ ಇದ್ದೀರ? ನಿಮ್ಮ ಬಗ್ಗೆ ಗೊತ್ತಿರುವ ಯಾರಿಗಾದರೂ ಹಾಗೆ ಅನಿಸುವುದು ಸಹಜ ಅಲ್ವ? ಎಂದು ಭೂಮಿಕಾ ಪ್ರಶ್ನಿಸುತ್ತಾಳೆ. "ಯಾಕೆ ಹೀಗೆ ಎಲ್ಲಾ ಮಾತಾಡ್ತಿರಾ ಅತ್ತಿಗೆ, ಮಲ್ಲಿ ನಾನು ಪ್ರೀತಿಸಿದ ಹುಡುಗಿ ಅಲ್ವ? ಈಗ ಆಕೆಯ ಮೇಲೆ ಕೋಪ ಇಲ್ಲ" ಎಂದೆಲ್ಲ ಹೇಳುತ್ತಾನೆ. "ಮಲ್ಲಿ ಮೇಲೆ ನನಗೆ ಯಾವುದೇ ಕೋಪ ಇಲ್ಲ. ನಾನು ಬದಲಾಗಿದ್ದೀನಿ" ಎನ್ನುತ್ತಾನೆ. "ಆದರೆ, ಅಮ್ಮನಿಗೆ ಮೈ ಹುಷಾರಿಲ್ಲದ ಸಮಯದಲ್ಲಿ, ಏನೋ ಹಾಗೇ ಇಲ್ಲ ಎನ್ನುವ ರೀತಿ ಮಲ್ಲಿ ಜತೆ ಒಂಥರ ಖುಷಿಯಾಗಿರುವುದನ್ನು ನೋಡಿದರೆ ನಾರ್ಮಲ್‌ ಆಗಿ ಅನಿಸೋದಿಲ್ಲ" ಎನ್ನುತ್ತಾರೆ ಭೂಮಿಕಾ. "ಮದುವೆ ಮನೆಯಲ್ಲಿ ಅಷ್ಟು ಜನರ ಮುಂದೆ ಮಲ್ಲಿ ಕಣ್ಣೀರಿಟ್ಟರೂ ನಿಮ್ಮ ಕಲ್ಲು ಮನಸ್ಸು ಕರಗಿಲ್ಲ. ಈಗ ಬದಲಾಗಿರುವುದು ಮ್ಯಾಜಿಕ್‌ ರೀತಿ ಕಾಣಿಸ್ತಾ ಇದೆ. ಇದು ದೊಡ್ಡ ಪವಾಡ ಅಂದ್ರೂ ತಪ್ಪಾಗೋದಿಲ್ಲ" ಎಂದು ಹೇಳುತ್ತಾರೆ. ತಾನು ಯಾಕೆ ಹಾಗೆ ನಡೆದುಕೊಂಡೆ ಎಂದೆಲ್ಲ ಜೈದೇವ್‌ ಹೇಳುತ್ತಾನೆ. "ನೀವು ಮಲ್ಲಿ ಜತೆ ಚೆನ್ನಾಗಿದ್ರೆ ನನ್ನಷ್ಟು ಖುಷಿ ಪಡುವವರೂ ಯಾರೂ ಇಲ್ಲ. ಆದರೆ, ಎಲ್ಲಾದರೂ ನೀವು ಮಾಡುತ್ತಿರುವುದು ಡ್ರಾಮಾ ಎಂದು ಗೊತ್ತಾದರೆ ಅದನ್ನು ಖಂಡಿತಾ ನಾನೂ ಸಹಿಸೋದಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ನಿಮ್ಮ ಒಳ್ಳೆಯತನ ಮನೆಯ ಯಾವುದೇ ಕೆಟ್ಟದ್ದಕ್ಕೆ ಮುನ್ಸೂಚನೆ ರೀತಿ ಇರುತ್ತದೆ" ಎಂದು ಹೇಳುತ್ತಾರೆ. "ಬೇಸಿಕಲಿ ಅತ್ತಿಗೆ ನಿಮಗೆ ನಾನು ಇಷ್ಟವಿಲ್ಲ. ಅದಕ್ಕೆ ನಿಮಗೆ ನನ್ನ ಬಗ್ಗೆ ಆ ರೀತಿ ಕಾಣಿಸುತ್ತದೆ" ಎಂದು ಹೇಳುತ್ತಾನೆ. "ನಿಮ್ಮಿಂದ ಮಲ್ಲಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ನಾನು ಸಹಿಸೋದಿಲ್ಲ" ಎಂದು ಭೂಮಿಕಾ ಹೇಳುತ್ತಾರೆ.

ಮಹಿಮಾಳಿಗೆ ದೀಪಾನ್ಶು ಟಾರ್ಚರ್‌

ದೀಪಾನ್ಶು ಮಹಿಮಾಳಿಗೆ ಕಾಲ್‌ ಮಾಡುತ್ತಾನೆ. ಈ ರಾತ್ರಿ ಏಕೆ ಕಾಲ್‌ ಮಾಡ್ತಾ ಇದ್ದಾನೆ ಎಂದು ಮಹಿಮಾ ಕಾಲ್‌ ರಿಸೀವ್‌ ಮಾಡುತ್ತಾನೆ. ಆತ ಆಕೆಯ ಅಪಾರ್ಟ್‌ಮೆಂಟ್‌ ಕೆಳಗೆ ಬಂದಿರುತ್ತಾನೆ. "ನೀನು ಕೆಳಗೆ ಬರ್ತಿಯಾ? ಅಥವಾ ನಾನೇ ಮೇಲಕ್ಕೆ ಬರ್ಲಾ" ಎಂದು ಬೆದರಿಸುತ್ತಾನೆ. ಈತ ಬಿಡುತ್ತಿಲ್ಲ ಎಂದು ಫೋನ್‌ ಸ್ವಿಚ್‌ ಆಫ್‌ ಮಾಡುತ್ತಾಳೆ. ಮಹಿಮಾ ಟೆನ್ಷನ್‌ನಲ್ಲಿ ಕುಳಿತುಕೊಂಡಾಗ ಮಾವ ಬರುತ್ತಾರೆ. "ಏನಾದರೂ ಸಮಸ್ಯೆ ಇದ್ದರೆ ನನ್ನಲ್ಲಿ ಹೇಳು" ಎಂದು ಸದಾಶಿವ ಹೇಳುತ್ತಾರೆ. "ನನ್ನ ಮಕ್ಕಳು ನನಗೆ ಏನೇ ಪ್ರಾಬ್ಲಂ ಬಂದರೂ ನನ್ನಲ್ಲಿ ಹೇಳುತ್ತಾರೆ. ಮಕ್ಕಳಿಗೆ ಸಮಂಜಸವಾದ ಉತ್ತರ, ಪರಿಹಾರ ದೊರಕುತ್ತದೆ. ನೀನು ಅದೇ ರೀತಿ ನನ್ನ ನಂಬಬಹುದು" ಎಂದು ಹೇಳುತ್ತಾರೆ. "ನಾನು ಫೈನ್‌" ಎಂದು ಹೇಳುತ್ತಾಳೆ.

ಸುಳ್ಳು ಹೇಳಿದ ಜ್ಯೋತಿಷಿ

ದಿವಾನ್‌ ಮನೆಗೆ ಗುರುಗಳು ಬಂದಿದ್ದಾರೆ. ಇತ್ತೀಚೆಗೆ ನಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ. ಒಂದು ಪ್ರಾಬ್ಲಂ ಮುಗಿದ ಬಳಿಕ ಮತ್ತೊಂದು ಶುರು ಆಗುತ್ತದೆ ಎಂದು ಗೌತಮ್‌ ಹೇಳುತ್ತಾರೆ. "ನಮ್ಮ ಜಾತಕ ಸ್ವಲ್ಪ ನೋಡಿ ಹೇಳಿ" ಎಂದು ಗೌತಮ್‌ ಹೇಳುತ್ತಾರೆ. "ಇದು ಮಲ್ಲಿ ಮತ್ತು ಜೈದೇವ್‌ ಜಾತಕ" ಎಂದು ಮೊದಲು ಕೊಡುತ್ತಾರೆ. "ಈ ಜೋಡಿಯದ್ದು ತುಂಬಾ ವಿಚಿತ್ರವಾದ ಜಾತಕ. ಆರಂಭದಲ್ಲಿ ಸ್ವಲ್ಪ ಆಚೆ ಈಚೆ ಇದ್ದರೂ ಭವಿಷ್ಯದಲ್ಲಿ ಚೆನ್ನಾಗಿ ಇರುತ್ತದೆ. ಎರಡು ಜೀವ ಒಂದು ದೇಹದ ರೀತಿ ಇರುತ್ತದೆ" ಎಂದು ಹೇಳುತ್ತಾರೆ. ಇದೇ ಸಮಯದಲ್ಲಿ ಶಕುಂತಲಾದೇವಿ ಜಾತಕ ನೀಡುತ್ತಾರೆ. "ಜಾತಕ ಅಂದರೆ ಹೀಗೆ ಇರಬೇಕು, ಶ್ರೇಷ್ಠ ಜಾತಕ" ಎಂದು ಶಕುಂತಲಾದೇವಿಯ ಜಾತಕವನ್ನು ಗುರುಗಳು ಹೊಗಳುತ್ತಾರೆ. ನಿಮ್ಮ ಜಾತಕದಲ್ಲಿ ಏನೂ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ. "ಇದು ಮಹಿಮಾ, ಪಾರ್ಥನ ಜಾತಕ" ಎಂದು ನೀಡುತ್ತಾರೆ. ಏನೂ ಸಮಸ್ಯೆ ಇಲ್ಲ ಎನ್ನುತ್ತಾರೆ. ಇದಾದ ಬಳಿಕ ಗೌತಮ್‌ ಮತ್ತು ಭೂಮಿಕಾ ಜಾತಕ ನೀಡುತ್ತಾರೆ. "ಎರಡೂ ಒಳ್ಳೆಯ ಜಾತಕ" ಎನ್ನುತ್ತಾರೆ. ಭೂಮಿಕಾಳ ಜಾತಕವನ್ನು ತುಂಬಾ ಹೊಗಳುತ್ತಾರೆ "ಇವರಿಗೆ ಪುಸ್ತಕದ ಪಾಠ ಗೊತ್ತು, ಜೀವನದ ಪಾಠ ಗೊತ್ತು" ಎನ್ನುತ್ತಾರೆ. ಕುರಿಯನ್ನು ಬಲಿ ಕೊಡುವ ಮೊದಲು ಚೆನ್ನಾಗಿ ಹೊಗಳಬೇಕು ಎಂದು ಶಕುಂತಲಾದೇವಿ ಹೇಳುತ್ತಾರೆ. ಎಲ್ಲರೂ ಹೊರಡುತ್ತಾರೆ. ಗೌತಮ್‌ ಹೊರಡುವ ಮೊದಲು "ಒಂದ್ನಿಮಿಷ, ನಿಮ್ಮಲ್ಲಿ ಸ್ವಲ್ಪ ಮಾತಾಡಬೇಕು" ಎಂದು ಗುರುಗಳು ಹೇಳುತ್ತಾರೆ. "ನಿಮ್ಮ ಮತ್ತು ಶ್ರೀಮತಿ ಜಾತಕದಲ್ಲಿ ಎಲ್ಲಾ ಸರಿ ಇದೆ ಎಂದು ಹೇಳಿದ್ದು ಸುಳ್ಳು" ಎಂದು ಹೇಳುತ್ತಾರೆ. ಈ ಮೂಲಕ ಶಕುಂತಲಾದೇವಿ ಹೇಳಿಕೊಟ್ಟ ಸುಳ್ಳಿನ ಸರಮಾಲೆಯನ್ನು ಹೇಳುತ್ತಾರೆ. ನಿಮ್ಮ ಮತ್ತು ಭೂಮಿಕಾ ಅವರ ಜಾತಕದಲ್ಲಿ ದೋಷ ಇದೆ. ಇಬ್ಬರೂ ಒಂದಾಗಲು ಸಾಧ್ಯವೇ ಇಲ್ಲ. ನೀವಿಬ್ಬರು ಮದುವೆಯೇ ಆಗಬಾರದಿತ್ತು. ನಿಮ್ಮಿಬ್ಬರ ಜಾತಕಗಳು ಒಂದಕ್ಕೊಂದು ವಿರುದ್ಧವಾಗಿದೆ ಎಂದು ಶಾಸ್ತ್ರಿಗಳು ಹೇಳುತ್ತಾರೆ. ಹೊಂದಾಣಿಕೆ ಎನ್ನುವುದು ಎಳ್ಳಷ್ಟು ಇಲ್ಲ. ದೈಹಿಕವಾಗಿ ಇಬ್ರು ದೂರದೂರನೇ ಇರಬೇಕು ಎಂದು ಹೇಳುತ್ತಾರೆ. "ನಿಮ್ಮ ಹೆಂಡತಿಯ ಜಾತಕದ ಪ್ರಕಾರ ನಿಮ್ಮ ಹೆಂಡತಿಯ ಪ್ರಾಣಕ್ಕೆ ಅಪಾಯ. ಹುಟ್ಟುವ ಮಗು ಕೆಡುಕು ಮಾಡಬಹುದು" ಎಂದೆಲ್ಲ ಹೇಳುತ್ತಾರೆ. ಒಟ್ಟಾರೆ ಗೌತಮ್‌ಗೆ ಎಷ್ಟು ಸಾಧ್ಯವೋ ಅಷ್ಟು ಟೆನ್ಷನ್‌ ನೀಡುತ್ತಾರೆ.

ಯಾಕೆ ಆಫೀಸ್‌ಗೆ ಹೋಗಿಲ್ಲ ಎಂದು ಅತ್ತೆ ಕೇಳುತ್ತಾರೆ. ಆಗ ದೀಪಾನ್ಶು ಕಾಲ್‌ ಮಾಡುತ್ತಾನೆ. ಅತ್ತೆಯಲ್ಲಿ ಮಾತನಾಡುತ್ತಾರೆ. ತಕ್ಷಣ ಮಹಿಮಾ ಕಾಲ್‌ ರಿಸೀವ್‌ ಮಾಡುತ್ತಾಳೆ. "ನೀನು ನಿನ್ನ ಮನೆಯವರನ್ನು ಮ್ಯಾನೇಜ್‌ ಮಾಡಬಹುದು. ನನ್ನನ್ನು ಮ್ಯಾನೇಜ್‌ ಮಾಡಲಾರೆ" ಎಂದು ದೀಪಾನ್ಶು ಹೇಳುತ್ತಾನೆ. ಅವನು ರಾತ್ರಿಯಿಂದಲೇ ಇಲ್ಲೇ ಕಾಯುತ್ತ ಇದ್ದೀನಿ ಎಂದು ಹೇಳುತ್ತಾನೆ. ಅನಿವಾರ್ಯವಾಗಿ ಮಹಿಮಾ ಕೆಳಕ್ಕೆ ಹೋಗುತ್ತಾಳೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ