Amruthadhaare: ರಾತ್ರಿ ನಿದ್ದೆಯಲ್ಲಿದ್ದ ಗೌತಮ್‌ಗೆ ಬಣ್ಣ ಹಚ್ಚಿದ ಭೂಮಿಕಾ, ಡುಮ್ಮ ಸರ್ ಬಿಡ್ತಾರ? ಒಲವ ಅಮೃತಧಾರೆಯಲ್ಲಿ ಮಿಂದ ಜೋಡಿ
Mar 30, 2024 07:00 AM IST
Amruthadhaare: ರಾತ್ರಿ ನಿದ್ದೆಯಲ್ಲಿದ್ದ ಗೌತಮ್‌ಗೆ ಬಣ್ಣ ಹಚ್ಚಿದ ಭೂಮಿಕಾ
- Amruthadhaare Serial Story: ಅಮೃತಧಾರೆ ಧಾರಾವಾಹಿಯಲ್ಲಿ ಹೋಳಿ ಹಬ್ಬದ ಸಂಭ್ರಮ. ಗೌತಮ್ ಮತ್ತು ಭೂಮಿಕಾ ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. ಗೌತಮ್ ಮಲಗಿದ್ದಾಗ ಭೂಮಿಕ ಬಣ್ಣ ಹಚ್ಚಿದ್ದಾರೆ. ಬರಗಾಲದ ಸಮಯದಲ್ಲಿ ನೀರು ವ್ಯರ್ಥಮಾಡದೆ ಹೋಳಿ ಹಬ್ಬ ಆಚರಿಸಬೇಕೆಂದು ಸದಾಶಿವ ತನ್ನ ಕುಟುಂಬಕ್ಕೆ ಸಲಹೆ ನೀಡಿದ್ದಾರೆ.
ಅಮೃತಧಾರೆ ಸೀರಿಯಲ್‌ನಲ್ಲಿ ಹೋಳಿ ಹಬ್ಬದ ಸಂಭ್ರಮ. ಒಂದಿಷ್ಟು ತಡವಾಗಿಯೇ ಹೋಳಿ ಹಬ್ಬ ಬಂದಿದೆ. ಸೀರಿಯಲ್‌ನಲ್ಲಿ ಸಾರಿ ಕಲರ್ಸ್ ಥೀಮ್‌ನ ಜಾಹೀರಾತು ಇದಕ್ಕೆ ಕಾರಣ ಆಗಿರಬಹುದು. ಭೂಮಿಕಾಳಿಗೆ ಕರೆ ಮಾಡಿದ ಸದಾಶಿವ "ನಾಳೆ ಹೋಳಿ ಹಬ್ಬ, ಅಳಿಯಂದಿರದೊಂದಿಗೆ ಮನೆಗೆ ಬಾ" ಎಂದು ಮಗಳನ್ನು ಕರೆಯುತ್ತಾನೆ. ಇದಾದ ಬಳಿಕ ಗೌತಮ್ ಜತೆ ಹೋಳಿ ಹಬ್ಬದ ಕುರಿತು ಮಾತನಾಡುತ್ತಾಳೆ. ಗೌತಮ್ ಕೂಡ "ನನಗೊಂದು ಗ್ಯಾಂಗ್ ಇತ್ತು. ಎಲ್ಲರಿಗೂ ಬಣ್ಣ ಹಚ್ಚುತ್ತಿದ್ದೆ" ಎಂದು ನೆನಪಿಸಿಕೊಳ್ಳುತ್ತಾರೆ. ಶ್ರೀಮಂತಿಕೆ ಬಂದ ಬಳಿಕ ಎಲ್ಲಾ ಕಳೆದುಕೊಂಡೆ ಎನ್ನುತ್ತಾರೆ. "ನಮ್ಮ ಮನೆಯಲ್ಲೂ ಹೋಳಿಯನ್ನು ಸಖತ್ ಸಂಭ್ರಮದಿಂದ ಆಡುತ್ತ ಇದ್ವಿ" ಎಂದು ಭೂಮಿಕಾ ಕೂಡ ನೆನಪಿಸಿಕೊಳ್ಳುತ್ತಾರೆ. "ನಾನು ಒಂದು ಕ್ಷಣವೂ ಬಣ್ಣ ಹಚ್ಚಿಸಿಕೊಳ್ತಾ ಇರಲಿಲ್ಲ" ಎಂದು ಭೂಮಿಕಾ ಹೇಳುತ್ತಾರೆ. "ನಾನು ಮಲಗಿರುವಾಗ ಮಧ್ಯರಾತ್ರಿ ಬಂದು" ಎಂದು ಗೌತಮ್ ನೆನಪಿಸಿಕೊಂಡು ಬೇಜಾರಾಗ್ತಾರೆ. "ಅಮ್ಮ ಮಧ್ಯರಾತ್ರಿ ನಾನು ಮಲಗಿರುವಾಗ ಬಣ್ಣ ಹಚ್ಚುತ್ತಾ ಇದ್ರು" ಎಂದು ನೆನಪಿಸಿಕೊಳ್ಳುತ್ತಾನೆ. "ಮರುದಿನ ಬೆಳಗ್ಗೆ ಮುಖ ನೋಡಿ ಕೋಪಗೊಂಡು ಮನೆಯಲ್ಲಿರುವ ಎಲ್ಲರಿಗೂ ಬಣ್ಣ ಹಚ್ಚುತ್ತಾ ಇದ್ದೆ" ಎಂದು ನೆನಪಿಸಿಕೊಳ್ತಾರೆ ಗೌತಮ್ ದಿವಾನ್. ಹೀಗೆ ಒಂದಿಷ್ಟು ಮಾತನಾಡುತ್ತಾರೆ. ಅತ್ತೆಗೆ ಚೆಕ್ ಕೊಟ್ಟು ಬರುವ ತನಕ ಮಾತನಾಡುತ್ತಾರೆ.
ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥ ಫೋನ್‌ನಲ್ಲಿ ಮಾತನಾಡುತ್ತಾರೆ. ಒಂದಿಷ್ಟು ಪ್ರೀತಿಮಾತುಗಳು ಇರುತ್ತವೆ. ಇದಾದ ಬಳಿಕ ಔಟಿಂಗ್ ಹೋಗುವ ಕುರಿತು ಪಾರ್ಥ ಮಾತನಾಡುತ್ತಾನೆ. ಅಪ್ಪಿ ನಾಳೆ ಔಟಿಂಗ್‌ಗೆ ಬರಲು ಒಪ್ಪುವುದಿಲ್ಲ.
ಶಕುಂತಲಾದೇವಿ ಮತ್ತು ಆಕೆಯ ಮಗಳು ಮಾತನಾಡುತ್ತ ಇರುತ್ತಾರೆ. ಇನ್ನೂ ಚೆಕ್ ಕೊಟ್ಟಿಲ್ಲ ಎಂದು ಮಗಳು ಹೇಳುತ್ತಾಳೆ. "ಇಷ್ಟು ದಿನ ಚೆಕ್ ಡಿಲೇ ಮಾಡ್ತಾ ಇರಲಿಲ್ಲ, ಈಗ ಪ್ರಯಾರಿಟಿ ಚೇಂಜ್ ಆಯ್ತು" ಎಂದು ಮಾತನಾಡುವಾಗ ಅಲ್ಲಿಗೆ ಭೂಮಿಕಾ ಬಂದು ಚೆಕ್ ಕೊಡುತ್ತಾರೆ. "ಅತ್ತೆ ಗೌತಮ್ ನನ್ನಲ್ಲಿ ಒಂದಿಷ್ಟು ಬ್ಲಾಂಕ್ ಚೆಕ್‌ಗೆ ಸಹಿ ಹಾಕಿ ನೀಡಿದ್ದಾರೆ. ದುಡ್ಡು ಬೇಕಿದ್ದರೆ ನನ್ನಲ್ಲೇ ಕೇಳಿ" ಎನ್ನುತ್ತಾಳೆ. ಇದನ್ನು ಕೇಳಿ ಶಕುಂತಲಾದೇವಿ ಮುಖ ಒಂದು ರೀತಿ ಆಗುತ್ತದೆ. "ನಮಗೆ ಚೆಕ್ ಕೊಡೊಕ್ಕೆ ಇವರ್ಯಾರು? ಇವರೇನು ಮನೆ ಯುಜಮಾನಿನ?" ಎಂದು ಶಕುಂತಲಾ ಮಗಳು ಹೇಳುತ್ತಾಳೆ. "ಅಣ್ಣಾ ಹೇಗೋ ಬ್ಲಾಂಕ್ ಚೆಕ್ ನೀಡಿದ್ದಾನೆ. ಅರುಣ್‌ಗೆ ದುಡ್ಡು ಬೇಕು. ಬೇಕಾದಷ್ಟು ಹಣ ತೆಗೆದುಕೊಳ್ಳಲ್ಲ?" ಎಂದು ಮಗಳು ಕೇಳುತ್ತಾಳೆ. ಬೇಡ ಸ್ವಲ್ಪ ಸ್ವಲ್ಪ ಹಣ ತೆಗೆದುಕೊಳ್ಳೋದೇ ಒಳ್ಳೆಯದು ಎಂದು ಶಕುಂತಲಾ ಹೇಳುತ್ತಾರೆ. "ಸ್ವಲ್ಪ ಸ್ವಲ್ಪ ತೆಗೆದುಕೊಂಡರೆ ಅವನಿಗೆ ಗೊತ್ತಾಗೋದಿಲ್ಲ" ಎಂದು ಹೇಳುತ್ತಾಳೆ. "ಆದರೆ, ಅತ್ತಿಗೆ ಲೆಕ್ಕ ಕೇಳಿದರೆ ಕಷ್ಟ" ಎಂದು ಮಗಳು ಹೇಳುತ್ತಾಳೆ. ಒಟ್ಟಾರೆ ಇವರಿಬ್ಬರ ಹಣದ ಆಟಕ್ಕೆ ಮುಂದಿನ ದಿನಗಳಲ್ಲಿ ಭೂಮಿಕಾ ಬ್ರೇಕ್ ಹಾಕುವುದು ನಿಶ್ಚಿತವಾಗಿದೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಗೌತಮ್ ಮಲಗಿದ್ದಾರೆ. ಭೂಮಿಕಾ ಬಣ್ಣ ತಂದಿದ್ದಾರೆ. ಮಲಗಿದ್ದಾಗ ಆತನ ಮುಖಕ್ಕೆ ಹೋಳಿ ಬಣ್ಣ ಹಾಕುತ್ತಾರೆ. "ನನ್ನ ಅಮ್ಮ ಹೀಗೆ ಮಾಡುತ್ತಿದ್ದರು" ಎಂದು ಗೌತಮ್ ಹೇಳಿದ್ದಕ್ಕೆ ಭೂಮಿಕಾ ಕೂಡ "ಆತನ ಅಮ್ಮನಂತೆ" ಸರ್‌ಪ್ರೈಸ್ ನೀಡುತ್ತಾರೆ. "ಬೆಳಗ್ಗೆ ಎದ್ದು ನೋಡಿದರೆ ನಿಮ್ಮ ಮುಖ ಕೆಂಪಾಗುತ್ತದೆ" ಎಂದುಕೊಳ್ಳುತ್ತಾಳೆ ಭೂಮಿಕಾ. ಬೆಳಗ್ಗೆ ಗೌತಮ್ ಎದ್ದೇಳುತ್ತಾನೆ. ಭೂಮಿಕಾ ಹ್ಯಾಪಿ ಹೋಳಿ ಎನ್ನುತ್ತಾಳೆ. ಕನ್ನಡಿ ನೋಡಿದಾಗ ಮುಖದಲ್ಲಿ ಬಣ್ಣ ಕಾಣಿಸುತ್ತದೆ. "ನಿಮಗೆ ಕೋಪ ಬಂದು ಆಮೇಲೆ ನನಗೆ ಬಣ್ಣ ಹಚ್ಚಬಾರದು" ಎಂದು ಭೂಮಿಕಾ ಹೇಳುತ್ತಾಳೆ. ಹೆಣ್ಣು ಮಕ್ಕಳು ಬೇಡ ಅಂದರೆ ಬೇಕು ಎಂದರ್ಥ ಎಂದು ಆನಂದ್ ಹೇಳಿದ್ದು ನೆನಪಾಗುತ್ತದೆ ಗೌತಮ್‌ಗೆ. ಕಾಫಿ ತರ್ತಿನಿ ಎಂದು ಭೂಮಿಕಾ ಹೋಗುತ್ತಾಳೆ.
ಸದಾಶಿವ ಕುಟುಂಬದಲ್ಲಿ ಎಲ್ಲರೂ ಹೋಳಿ ಹಬ್ಬ ಆಡುತ್ತಾರೆ. ಬಣ್ಣ ಹಚ್ಚಲು ಎಲ್ಲರೂ ಮುಂದಾದಗ ಸದಾಶಿವ "ಹೋಲ್ಡನ್, ನೀರಿಲ್ಲ, ಸ್ವಲ್ಪ ಹಚ್ಚಿ, ನೀರು ವ್ಯರ್ಥ ಮಾಡಬಾರದು" ಎಂಬ ಸಂದೇಶ ಸಾರುತ್ತಾರೆ. ಎಲ್ಲರೂ ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತಾರೆ.
ಜೈದೇವ್ ಖುಷಿಯಲ್ಲಿದ್ದಾನೆ. ಮಲ್ಲಿ ಕಾಫಿ ತಂದುಕೊಡುತ್ತಾಳೆ. ಹ್ಯಾಪಿ ಹೋಳಿ ಎಂದು ಮಲ್ಲಿಯ ಮುಖಕ್ಕೂ ಬಣ್ಣ ಹಚ್ಚುತ್ತಾನೆ. ಅವಳು ಕೂಡ ಜೈದೇವ್‌ಗೆ ಬಣ್ಣ ಹಚ್ಚುತ್ತಾಳೆ. ಒಟ್ಟಾರೆ ಎಲ್ಲವೂ ಸರಿಯಾದಂತೆ ನಟಿಸ್ತಾ ಇದ್ದಾನೆ ಜೈದೇವ್. ಮತ್ತೊಂದು ಕಡೆ ಗೌತಮ್‌ಗೆ ಟೀ ನೀಡಲು ಭೂಮಿಕಾ ಬರುತ್ತಾಳೆ. ಭೂಮಿಕಾ ಎಷ್ಟೇ ತಡೆದರೂ ಗೌತಮ್ ಬಣ್ಣ ಹಚ್ಚುತ್ತಾನೆ.