logo
ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌ ದಿವಾನ್‌ ಮನೆಯಲ್ಲಿ ಸಂಭ್ರಮವೋ ಸಂಭ್ರಮ, ಸಿಹಿ ಸುದ್ದಿ ಹಂಚಿಕೊಂಡು ಸಿಹಿ ತಿನ್ನೋದೇ ಕೆಲಸ- ಅಮೃತಧಾರೆ ಧಾರಾವಾಹಿ

ಗೌತಮ್‌ ದಿವಾನ್‌ ಮನೆಯಲ್ಲಿ ಸಂಭ್ರಮವೋ ಸಂಭ್ರಮ, ಸಿಹಿ ಸುದ್ದಿ ಹಂಚಿಕೊಂಡು ಸಿಹಿ ತಿನ್ನೋದೇ ಕೆಲಸ- ಅಮೃತಧಾರೆ ಧಾರಾವಾಹಿ

Praveen Chandra B HT Kannada

Oct 22, 2024 09:48 AM IST

google News

ಗೌತಮ್‌ ದಿವಾನ್‌ ಮನೆಯಲ್ಲಿ ಸಂಭ್ರಮ

    • ಅಮೃತಧಾರೆ ಧಾರಾವಾಹಿ (ಜೀ ವಾಹಿನಿ) ಅಕ್ಟೋಬರ್‌ 22ರ ಸಂಚಿಕೆ: ಗೌತಮ್‌ ಮನೆಯಲ್ಲಿ ಎಲ್ಲರೂ ಖುಷಿಯಿಂದ ಇದ್ದಾರೆ. ಕೇಂದ್ರ ಸರಕಾರದಿಂದ ದಿವಾನ್‌ ಕಂಪನಿಗೆ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ದೊರಕಲು ಜೈದೇವ್‌ ಕಾರಣ. ಇನ್ನೊಂದೆಡೆ ಸುಧಾ ಆನಂದ್‌ ಮನೆಗೆ ಕೆಲಸಕ್ಕೆ ಸೇರಿದ್ದಾರೆ.
ಗೌತಮ್‌ ದಿವಾನ್‌ ಮನೆಯಲ್ಲಿ ಸಂಭ್ರಮ
ಗೌತಮ್‌ ದಿವಾನ್‌ ಮನೆಯಲ್ಲಿ ಸಂಭ್ರಮ

ಅಮೃತಧಾರೆ ಧಾರಾವಾಹಿ (ಜೀ ವಾಹಿನಿ) ಅಕ್ಟೋಬರ್‌ 22ರ ಸಂಚಿಕೆ: ಆನಂದ್‌ ಮನೆಗೆ ಸುಧಾ ಆಗಮಿಸಿದ್ದಾಳೆ. "ಮನೆ ಕೆಲಸಕ್ಕೆ ಬರ್ತಿರ" ಎಂದು ಕೇಳುತ್ತಾರೆ. ಈ ಮೂಲಕ ಈಕೆಗೆ ನೆರವು ನೀಡಲು ಉದ್ದೇಶಿಸಿದ್ದಾರೆ. ಐದಾರು ಮನೆಗೆ ಹೋಗುವ ಬದಲು ಇಲ್ಲೇ ಕೆಲಸ ಮಾಡಿಕೊಂಡು ಇರು ಎನ್ನುತ್ತಾರೆ. ಕೆಲಸಕ್ಕೆ ಬರಲು ಸುಧಾ ಒಪ್ಪಿದ್ದಾರೆ. "ತಿಂಗಳಿಗೆ 20 ಸಾವಿರ ಕೊಡ್ತಿನಿ" ಎಂದು ಆನಂದ್‌ ಹೇಳುತ್ತಾರೆ. "ಊಟ ತಿಂಡಿ ಎಲ್ಲಾ ಕೊಡ್ತಿವಿ. ಬೋನಸ್‌ ಕೂಡ ಕೊಡ್ತಿವಿ. ಮನೆಯವರಿಗೆ ಬಟ್ಟೆಬರೆ ಕೊಡ್ತಿವಿ" ಎಂದು ಆನಂದ್‌ ಹೇಳಿದಾಗ ಸುಧಾಗೆ ಅಚ್ಚರಿಯ ಮೇಲೆ ಅಚ್ಚರಿಯಾಗುತ್ತದೆ.

ಗೌತಮ್‌ ದಿವಾನ್‌ ಮನೆಯಲ್ಲಿ ಸಂಭ್ರಮವೋ ಸಂಭ್ರಮ

ಗೌತಮ್‌ ದಿವಾನ್‌ ಖುಷಿಯಾಗಿದ್ದಾರೆ. "ದಿವಾನ್‌ ಕಂಪನಿಗೆ ಕೇಂದ್ರ ಸರಕಾರದ ಪ್ರಶಸ್ತಿ ದೊರಕಿದೆ" ಎಂದು ಗೌತಮ್‌ ಖುಷಿಯಿಂದ ಹೇಳಿದಾಗ ಭೂಮಿಕಾ ಖುಷಿಗೊಳ್ಳುತ್ತಾಳೆ. "ಕಳೆದ ಹತ್ತು ವರ್ಷಗಳಲ್ಲಿ ಸ್ಮಾಲ್‌ಕ್ಯಾಪ್‌ ಕಂಪನಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದಕ್ಕೆ ಕಂಪನಿ ವ್ಯವಹಾರ ಸಚಿವಾಲಯ ಪ್ರಶಸ್ತಿ ನೀಡಿದೆ" ಎಂದು ಹೇಳುತ್ತಾರೆ. ಈ ಸಾಧನೆಯಲ್ಲಿ ಪಾರ್ಥನ ಪಾಲು ಇದೆ ಎಂದು ಗೌತಮ್‌ ಹೇಳುತ್ತಾರೆ. "ಈ ಅವಾರ್ಡ್‌ ಸಿಗಲು ಜೈದೇವ್‌ ಕಾರಣ. ಅವನೇ ಕಂಪನಿಯ ವಿವರವನ್ನು ಸಂಬಂಧ ಪಟ್ಟ ವಿಭಾಗಗಳಿಗೆ ನೀಡಿದ್ದಾನೆ. ಅವನು ನಿಧಾನವಾಗಿ ಬದಲಾಗಿದ್ದಾನೆ ಅನಿಸುತ್ತದೆ" ಎಂದು ಹೇಳುತ್ತಾರೆ. ಆದರೆ, ಇದೆಲ್ಲ ಜೈದೇವ್‌ ನಾಟಕ ಎಂದು ಅವರಿನ್ನೂ ಅರ್ಥ ಮಾಡಿಕೊಂಡಿಲ್ಲ.

ಇದೇ ಸಮಯದಲ್ಲಿ ಪಾರ್ಥನೂ ಅಪೇಕ್ಷಾಗೆ ಸಿಹಿ ಹಂಚುತ್ತಿದ್ದಾನೆ. "ಅತ್ತಿಗೆ ತಂಗಿ" ಎಂದು ಇನ್ಮುಂದೆ ಕರಿಬೇಡಿ ಎಂದು ಹೇಳುತ್ತಾಳೆ. "ಈ ರೀತಿ ಕರೆಯುವುದು ನನಗೆ ಇಷ್ಟವಿಲ್ಲ. ನನಗೆ ಇರಿಟೇಟ್‌ ಮಾಡಬೇಡಿ" ಎನ್ನುತ್ತಾಳೆ. ಈ ಮೂಲಕ ಅಕ್ಕನ ಬಗ್ಗೆ ದ್ವೇಷ ಮುಂದುವರೆಸಿದ್ದಾಳೆ. ಬಳಿಕ ಸಿಹಿ ನೀಡುತ್ತಾನೆ. ಪ್ರಶಸ್ತಿಯ ವಿಚಾರ ಮಾತನಾಡುತ್ತಾರೆ. ಆದರೆ, ಜೈದೇವ್‌ ಕಡೆಯಿಂದ ಬಂದಿರೋದು ಎಂದಾಗ ಕೊಂಕು ನುಡಿತಾಳೆ. "ಈ ಅವಾರ್ಡ್‌ ಏನು ನಿಮ್ಮಿಂದ ಬಂದಿದೆಯ" ಎಂದು ಕೇಳುತ್ತಾಳೆ. "ಇದು ನಮ್ಮ ಕಂಪನಿ" ಎಂದು ಹೇಳುತ್ತಾಳೆ. "ಇಲ್ಲಿ ಭಾವನೇ ಎಲ್ಲಾ. ನೀವು ಸೈಡ್‌ ರೋಲ್‌. ನಿಮ್ಮದು ಎಂಬ ಐಡೆಂಟೆಟಿ ಇಲ್ಲ. ನೀವು ಅಣ್ಣನ ವಿಸಿಟಿಂಗ್‌ ಕಾರ್ಡ್‌ನಲ್ಲಿ ಇದ್ದೀರಿ" ಎಂದು ಹೇಳುತ್ತಾಳೆ.

ಆನಂದ್‌ ಮತ್ತು ಗೌತಮ್‌ ಫೋನ್‌ನಲ್ಲಿ ಮಾತನಾಡುತ್ತಾರೆ. ಆಗ ಸುಧಾಳ ವಿಚಾರ ಹೇಳುತ್ತಾರೆ. ಇದಾದ ಬಳಿಕ ಪ್ರಶಸ್ತಿ ವಿಚಾರದ ಖುಷಿಯನ್ನು ಹಂಚಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಜೈದೇವ್‌ನ ಕಾಲ್‌ ಬಂದ ವಿಚಾರ ಹೇಳುತ್ತಾಳೆ. "ದಿಯಾಳನ್ನು ಅಪ್ಪನ ಊರಿಗೆ ಪಾರ್ಸೆಲ್‌ ಮಾಡಿ ಎಂದು ಕೇಳಿಕೊಂಡ" ಎಂದು ಹೇಳುತ್ತಾರೆ. ಈ ಮೂಲಕ ಜೈದೇವ್‌ ತಾನು ಚೇಂಜ್‌ ಆಗಿದ್ದೇನೆ ಎಂಬ ಸೂಚನೆಯನ್ನು ಕೊಡುತ್ತಾ ಇರುತ್ತಾನೆ. ಇದಾದ ಬಳಿಕ ಗೌತಮ್‌ ಮತ್ತು ಆನಂದ್‌ ಪಾರ್ಟಿ ಮಾಡುವ ಕುರಿತು ಮಾತನಾಡುತ್ತಾರೆ.

ಗೌತಮ್‌ಗೆ ಧನ್ಯ ಕಾಲ್‌ ಮಾಡಿದ್ದು ನೆನಪಾಗುತ್ತದೆ. ಒಮ್ಮೆ ಭೇಟಿಯಾಗಿ ಎಂದು ಹೇಳಿದ್ದು ನೆನಪಾಗುತ್ತದೆ. ಆಕೆಯ ವಾಯ್ಸ್‌ ಮೆಸೆಜ್‌ ಇರುತ್ತದೆ. ಈ ನಂಬರ್‌ ಬ್ಲಾಕ್‌ ಮಾಡುವುದು ಉತ್ತಮ ಎಂದುಕೊಳ್ಳುತ್ತಾನೆ. ಇದಾದ ಬಳಿಕ ಗೌತಮ್‌ ತಮ್ಮ ಪಾರ್ಟಿಯ ಕುರಿತು ಭೂಮಿಕಾ ಪರ್ಮಿಷನ್‌ ಕೇಳುತ್ತಾರೆ. ಈ ಸಮಯದಲ್ಲಿ ಹಿಂದಿನ ಅವಾಂತರಗಳ ನೆನಪಾಗುತ್ತದೆ ಗೌತಮ್‌. ಕುಡಿದ ಮತ್ತಲ್ಲಿ ಎಲ್ಲಾ ಹೊರಗೆ ಹಾಕ್ತಿವಿ, ಹೇಳಬಾರದೆಲ್ಲ ಹೇಳಿ ಬಿಡ್ತಿವಿ, ನೀವು ಅದನ್ನೆಲ್ಲ ಕೇಳಿಸ್ತಾ ಇರ್ತಿರಿ, ಹುರಿದುಂಬಿಸ್ತಾ ಇರ್ತಿರಿ ಎಂದು ಗೌತಮ್‌ ಹೇಳುತ್ತಾರೆ.

ಧನ್ಯಳ ಕಾಲ್‌ ಶಕುಂತಲಾದೇವಿಗೆ ಬರುತ್ತದೆ. "ನಾನು ಬರ್ತಿನಿ. ನಾನು ಅಲ್ಲಿಗೆ ಯಾಕೆ ಬರೋದು ಎಂದು ಕೇಳಿಲ್ಲ ನೀವು. ನಾನು ಅಲ್ಲಿಗೆ ಬರೋದು ನೀವು ತುಂಬಾ ವರ್ಷಗಳ ಹಿಂದೆ ಅರ್ಧಂಬರ್ಧ ಮಾಡಿದ ಕೆಲಸವನ್ನು ನೆನಪಿಸಲು. ನೀವು ಆ ಕೆಲಸ ಆಗಿದೆ ಎಂದುಕೊಂಡಿದ್ದೀರಿ. ಆದರೆ, ಆ ಕೆಲಸ ಆಗಿಲ್ಲ ಎಂದು ನೆನಪಿಸಲು" ಎಂದು ಹೇಳಿ ಧನ್ಯ ಫೋನ್‌ ಕಟ್‌ ಮಾಡುತ್ತಾಳೆ. ಶಕುಂತಲಾಗೆ ಹೊಸ ಟೆನ್ಷನ್‌ ಶುರುವಾಗಿದೆ. ಸೀರಿಯಲ್‌ ಮುಂದುವರೆದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ