logo
ಕನ್ನಡ ಸುದ್ದಿ  /  ಮನರಂಜನೆ  /  Bbk 10: ವರ್ತೂರು ಸಂತೋಷ್‌ನ ಮನವೊಲಿಸಲು ‘ಭಾಗ್ಯಲಕ್ಷ್ಮೀ’ಯೇ ಬರಬೇಕಾಯಿತು; ಹಟ ಹಿಡಿದ ಹಳ್ಳಿಕಾರ್‌ ಮುಂದಿನ ನಡೆ ಏನು?

BBK 10: ವರ್ತೂರು ಸಂತೋಷ್‌ನ ಮನವೊಲಿಸಲು ‘ಭಾಗ್ಯಲಕ್ಷ್ಮೀ’ಯೇ ಬರಬೇಕಾಯಿತು; ಹಟ ಹಿಡಿದ ಹಳ್ಳಿಕಾರ್‌ ಮುಂದಿನ ನಡೆ ಏನು?

Nov 13, 2023 10:19 AM IST

google News

BBK 10: ವರ್ತೂರು ಸಂತೋಷ್‌ನ ಮನವೊಲಿಸಲು ‘ಭಾಗ್ಯಲಕ್ಷ್ಮೀ’ಯೇ ಬರಬೇಕಾಯಿತು; ಹಟ ಹಿಡಿದ ಹಳ್ಳಿಕಾರ್‌ ಮುಂದಿನ ನಡೆ ಏನು?

    • ನನಗೆ ಬಿಗ್‌ಬಾಸ್‌ ಮನೆಯಲ್ಲಿ ಇರಲು ಆಗುತ್ತಿಲ್ಲ ಎಂದು ಹಳ್ಳಿಕಾರ್‌ ಒಡೆಯ ವರ್ತೂರು ಸಂತೋಷ್‌ ಹಟ ಹಿಡಿದು ಕೂತಿದ್ದಾರೆ. ಸಂತೋಷ್‌ ಅವರ ನಡೆ ಕಿಚ್ಚನಿಗೂ ಬೇಸರ ತರಿಸಿದೆ. ಇದೀಗ ಹಳ್ಳಿಕಾರನ ಮನವೊಲಿಸಲು ಭಾಗ್ಯಲಕ್ಷ್ಮೀಯ ಆಗಮನವಾಗಿದೆ.  
BBK 10: ವರ್ತೂರು ಸಂತೋಷ್‌ನ ಮನವೊಲಿಸಲು ‘ಭಾಗ್ಯಲಕ್ಷ್ಮೀ’ಯೇ ಬರಬೇಕಾಯಿತು; ಹಟ ಹಿಡಿದ ಹಳ್ಳಿಕಾರ್‌ ಮುಂದಿನ ನಡೆ ಏನು?
BBK 10: ವರ್ತೂರು ಸಂತೋಷ್‌ನ ಮನವೊಲಿಸಲು ‘ಭಾಗ್ಯಲಕ್ಷ್ಮೀ’ಯೇ ಬರಬೇಕಾಯಿತು; ಹಟ ಹಿಡಿದ ಹಳ್ಳಿಕಾರ್‌ ಮುಂದಿನ ನಡೆ ಏನು?

Bigg Boss Kannada 10: ಈ ಹಿಂದೆಯೇ, ನಾನು ಆದಷ್ಟು ಬೇಗ ಬಿಗ್‌ ಬಾಸ್‌ ಮನೆಯಿಂದ ಹೊರಹೋಗಬೇಕು ಎಂದು ಹಲವು ಬಾರಿ ತಮ್ಮ ಆಪ್ತ ವಲಯದ ಬಳಿ ಹೇಳಿಕೊಂಡಿದ್ದರು ವರ್ತೂರು ಸಂತೋಷ್.‌ ಅದರಂತೆ, ಈ ವಾರ ನಾನೇ ಹೋಗುವುದೆಂದೂ ಹೇಳಿಕೊಂಡಿದ್ದರು. ಆದರೆ, ಕಿಚ್ಚನ ಪಂಚಾಯ್ತಿಯಲ್ಲಿ, ಅದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ನಾನು ಹೋಗಲೇಬೇಕು ಎಂದು ಹಟಹಿಡಿದು ಕೂತಿದ್ದಾರೆ ವರ್ತೂರು.

ಹೌದು, ಕಳೆದ ವಾರದ ವೀಕೆಂಡ್ ಎಪಿಸೋಡ್‌ನ ಎಲಿಮಿನೇಷನ್ ಟೈಮಲ್ಲಿ ವರ್ತೂರ್ ಸಂತೋಷ್, ಸುದೀಪ್‌ ಅವರಿಗೆ, ಬಿಗ್‌ಬಾಸ್‌ ಮನೆಯ ಸದಸ್ಯರಿಗೆ, ತಮಗೆ ಓಟ್ ಹಾಕಿದ 34 ಲಕ್ಷಕ್ಕಿಂತ ಅಧಿಕ ಜನರಿಗೆ ಬಿಗ್ ಶಾಕ್ ನೀಡಿದ್ದರು. ‘ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ಶೋದಿಂದ ಹೊರಗೆ ಹೋಗಲು ಬಯಸುತ್ತೇನೆ’ ಎಂದು ಹೇಳಿದರು. ಇದರಿಂದ ಎಲ್ಲರಿಗೂ ಶಾಕ್ ಆಯಿತು.

ಕಿಚ್ಚಕೂಡ, ‘ನೀವು ಜನರ ಪ್ರೀತಿಯ ವಿರುದ್ಧ ಹೋಗ್ತಿದ್ದೀರಾ’ ಎಂದು ಎಚ್ಚರಿಸಿದರು. ಕೊನೆಯಲ್ಲಿ, ‘ಮನೆಯೊಳಗೆ ಇರ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ ನನಗಂತೂ ಡಿಸಪಾಯಿಂಟ್ ಆಗಿದೆ’ ಎಂದು ಹೇಳಿ ಬೇಸರದಿಂದಲೇ ವೇದಿಕೆ ಬಿಟ್ಟು ಹೊರನಡೆದರು. ಇದೀಗ ವರ್ತೂರು ಸಂತೋಷ್ ಅವರನ್ನು ಮನೆಯೊಳಗೆ ಉಳಿದುಕೊಳ್ಳುವಂತೆ ಮನವೊಲಿಸಲು ಇಡೀ ಮನೆಯ ಸದಸ್ಯರೆಲ್ಲರೂ ಪ್ರಯತ್ನಿಸುತ್ತಿದ್ದಾರೆ.

ಇದೇ ಹೊತ್ತಿನಲ್ಲಿ ಬಿಗ್‌ಬಾಸ್‌ ಮನೆಗೆ ಮತ್ತೊಬ್ಬರು ಗೆಸ್ಟ್ ಎಂಟ್ರಿ ಕೊಟ್ಟಿದ್ದಾರೆ! ಬಿಗ್‌ಬಾಸ್ ಮನೆಯ ಬಾಗಿಲು ತೆರೆಯುತ್ತಿದ್ದ ಹಾಗೆಯೇ ಜನಪ್ರಿಯ ಧಾರಾವಾಹಿ ನಟಿ, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ‘ಭಾಗ್ಯಲಕ್ಷ್ಮಿ’ಯ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ ರಾವ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.

ಹಾಗಾದರೆ ಈ ಎಂಟ್ರಿ ದೀಪಾವಳಿ ಸಂಭ್ರಮದ ಭಾಗವೇ? ಸುಷ್ಮಾ ದಿರಿಸೇನೋ ಹಬ್ಬದ ಸಂಭ್ರಮವನ್ನು ಪ್ರತಿನಿಧಿಸುವ ಹಾಗೆಯೇ ಇದೆ. ಆದರೆ ಅವರು ಮನೆಯೊಳಗೆ ತೆರಳಿ ಹೋಗಿದ್ದು ನೇರವಾಗಿ ವರ್ತೂರ್ ಸಂತೋಷ್ ಬಳಿಗೆ. ‘ನಾನು ನಿಮ್ಮ ಅಕ್ಕ ಆಗಿ ಹೇಳ್ತಿದೀನಿ. ನನ್ನಿಂದ ಆಗಲ್ಲ ಅನ್ನೋದನ್ನು ಮನಸಿಂದ ತೆಗೆದುಬಿಡಿ’ ಎಂದು ಪಕ್ಕಕೂತು ಕನ್ವಿನ್ಸ್ ಮಾಡುತ್ತಿರುವುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಬೆಳಗಿನ ಪ್ರೊಮೊದಲ್ಲಿ ಜಾಹೀರಾಗಿದೆ.

ಹಾಗಾದ್ರೆ ಸುಷ್ಮಾ ವಿವೇಕದ ಮಾತುಗಳಿಗೆ ವರ್ತೂರ್ ತಲೆಬಾಗುತ್ತಾರಾ? ಮನೆಯೊಳಗೇ ಉಳಿದುಕೊಳ್ಳಲು ನಿರ್ಧರಿಸುತ್ತಾರಾ? ತಮಗೆ ವೋಟ್ ಮಾಡಿದ ಮೂವತ್ನಾಲ್ಕು ಲಕ್ಷಕ್ಕಿಂತ ಅಧಿಕ ಜನರ ಮನಸ್ಸಿಗೆ ನೆಮ್ಮದಿ ತರುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಜೀಯೋಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ನೇರಪ್ರಸಾರದಲ್ಲಿ ಉತ್ತರ ಸಿಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ