logo
ಕನ್ನಡ ಸುದ್ದಿ  /  ಮನರಂಜನೆ  /  Sonu Srinivas Gowda: ಕಾನೂನು ಬಾಹಿರವಾಗಿ ಬಾಲಕಿಯನ್ನು ದತ್ತು ಪಡೆಯಲು ಮುಂದಾಗಿದ್ದ ಸೋನು ಶ್ರೀನಿವಾಸ್‌ ಗೌಡ ಅರೆಸ್ಟ್‌!

Sonu Srinivas Gowda: ಕಾನೂನು ಬಾಹಿರವಾಗಿ ಬಾಲಕಿಯನ್ನು ದತ್ತು ಪಡೆಯಲು ಮುಂದಾಗಿದ್ದ ಸೋನು ಶ್ರೀನಿವಾಸ್‌ ಗೌಡ ಅರೆಸ್ಟ್‌!

Mar 22, 2024 11:28 AM IST

google News

Sonu Srinivas Gowda: ಕಾನೂನು ಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದಿದ್ದ ಸೋನು ಶ್ರೀನಿವಾಸ್‌ ಗೌಡ ಅರೆಸ್ಟ್‌!

    • ಏಳು ವರ್ಷದ ಮಗುವನ್ನು ದತ್ತು ಪಡೆದಿದ್ದಾಗಿ ಸೋನು ಗೌಡ ಹೇಳಿಕೊಂಡಿದ್ದರು. ಇದು ಕಾನೂನು ಬಾಹಿರ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಸಂರಕ್ಷಣಾಧಿಕಾರಿ ಗೀತಾ, ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೆಜೆ ಆಕ್ಟ್‌ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ, ಸೋನು ಶ್ರೀನಿವಾಸ್‌ ಗೌಡ ಅವರನ್ನು ಬಂಧಿಸಿದ್ದಾರೆ.
Sonu Srinivas Gowda: ಕಾನೂನು ಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದಿದ್ದ ಸೋನು ಶ್ರೀನಿವಾಸ್‌ ಗೌಡ ಅರೆಸ್ಟ್‌!
Sonu Srinivas Gowda: ಕಾನೂನು ಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದಿದ್ದ ಸೋನು ಶ್ರೀನಿವಾಸ್‌ ಗೌಡ ಅರೆಸ್ಟ್‌!

Sonu Srinivas Gowda: ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ವಿಡಿಯೋಗಳ ಮೂಲಕವೇ ದೊಡ್ಡ ಮಟ್ಟದಲ್ಲಿ ಟ್ರೋಲ್‌ ಆಗಿದ್ದರು ಸೋನು ಶ್ರೀನಿವಾಸ್‌ ಗೌಡ. ಜಾಲತಾಣದಲ್ಲಿ ಬೋಲ್ಡ್‌ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತ, ಕಟು ಟೀಕೆಗೆ ಗುರಿಯಾಗುತ್ತ, ಬಗೆಬಗೆ ಕಾಮೆಂಟ್‌ಗಳಿಗೆ ಆಹಾರವಾಗುತ್ತಿದ್ದ ಸೋನು ಶ್ರೀನಿವಾಸ್‌ ಗೌಡ, ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈ ಸಲ ನೇರವಾಗಿ ಜೈಲು ಸೇರಿದ್ದಾರೆ. ಅಚ್ಚರಿ ಎನಿಸಿದರೂ ಇದು ನಿಜ. ಕಾನೂನು ಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸೋನು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ಅಪಾರ್ಟ್‌ಮೆಂಟ್‌ನಲ್ಲಿ ಕಾರನ್ನು ಹೊರತೆಗೆಯುವಾಗ ಸಿಮೆಂಟ್‌ ಪಿಲ್ಲರ್‌ಗೆ ಗುದ್ದಿ ನಜ್ಜುಗುಜ್ಜು ಮಾಡಿ ಸುದ್ದಿಯಾಗಿದ್ದರು. ಈಗ ಬಾಲಕಿಯನ್ನು ದತ್ತು ಪಡೆದುಕೊಂಡ ಆರೋಪ ಎದುರಿಸುತ್ತಿದ್ದು, ಬೆಂಗಳೂರಿನ ಬ್ಯಾಡರಹಳ್ಳಿಯ ಪೊಲೀಸರು ಸೋನು ಶ್ರೀನಿವಾಸ್‌ ಗೌಡ ಅವರನ್ನು ಬಂಧಿಸಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬಾಲಕಿ ಜತೆಗಿನ ಫೋಟೋಗಳನ್ನು ಸೋನು ಶೇರ್‌ ಮಾಡಿದ್ದರು. ಅಷ್ಟೇ ಅಲ್ಲ, ಈಕೆಯನ್ನು ನಾನು ದತ್ತು ಪಡೆಯುವುದಾಗಿಯೂ ಹೇಳಿಕೊಂಡಿದ್ದರು.

ಮಕ್ಕಳನ್ನು ದತ್ತು ಪಡೆಯುವುದಾಗಲಿ, ಬಾಲ್ಯ ವಿವಾಹವಾಗಲಿ ಇದಕ್ಕೆ ಕಾನೂನಿನಲ್ಲಿ ಅದರದೇ ಆದ ಒಂದಷ್ಟು ಕಾಯ್ದೆಗಳಿವೆ. ಅದರ ಅನುಸಾರವಾಗಿಯೇ ಅದು ಪೂರ್ಣಗೊಳ್ಳಬೇಕು. ಆದರೆ, ಅದ್ಯಾವುದರ ಅರಿವೇ ಇಲ್ಲದೆ, ನಾನು ಈ ಪುಟಾಣಿಯನ್ನು ದತ್ತು ಪಡೆಯಲಿದ್ದೇನೆ ಎಂದರೆ ಅದು ಕಾನೂನಿನಲ್ಲಿ ಮಾನ್ಯ ಎನಿಸುವುದಿಲ್ಲ. ಈಗ ಸೋನು ಶ್ರೀನಿವಾಸ್‌ ಗೌಡ ಸಹ ಅದನ್ನೇ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರಿನ ಆಧಾರದ ಮೇಲೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸೋನು ಅವರನ್ನು ವಶಕ್ಕೆ ಪಡೆದಿದ್ದಾರೆ.

ಏಳು ವರ್ಷದ ಮಗುವನ್ನು ದತ್ತು ಪಡೆದಿದ್ದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸೋನು ಗೌಡ ಹೇಳಿಕೊಂಡಿದ್ದರು. ಇದು ಕಾನೂನು ಬಾಹಿರ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಸಂರಕ್ಷಣಾಧಿಕಾರಿ ಗೀತಾ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೆಜೆ ಆಕ್ಟ್‌ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ, ಸೋನು ಶ್ರೀನಿವಾಸ್‌ ಗೌಡ ಅವರನ್ನು ಬಂಧಿಸಿದ್ದಾರೆ.

ಯೂಟ್ಯೂಬ್‌ನಲ್ಲಿ ಬಾಲಕಿ ಜತೆ ವಿಡಿಯೋ

ಸೋನು ಶ್ರೀನಿವಾಸ್‌ ಗೌಡ ತಮ್ಮದೇ ಆದ ಯೂಟ್ಯೂಬ್‌ ಚಾನಲ್‌ ಹೊಂದಿದ್ದಾರೆ. ಅದಲ್ಲಿ 3 ಲಕ್ಷ 37 ಸಾವಿರಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್‌ ಇದ್ದಾರೆ. ಈ ಮೊದಲು ಒಂದಷ್ಟು ವ್ಲಾಗ್‌ ಮಾಡುತ್ತಿದ್ದ ಸೋನು, ಕಳೆದ ಎರಡು ತಿಂಗಳಿಂದ ದತ್ತು ಪಡೆದ ಬಾಲಕಿ ಜತೆಗೆ ನಿತ್ಯ ವಿಡಿಯೋಗಳನ್ನು ಮಾಡಿ ಪೋಸ್ಟ್‌ ಮಾಡುತ್ತಲೇ ಬರುತ್ತಿದ್ದರು. ಈಗಲೂ ಅದು ಮುಂದುವರಿದಿದೆ. ಬಾಲಕಿಯ ಪ್ರತಿ ಕ್ಷಣವನ್ನೂ ಕ್ಯಾಮರಾದಲ್ಲಿ ಶೂಟ್‌ ಮಾಡಿ, ವೀವ್ಸ್‌ ಪಡೆಯುತ್ತಿದ್ದಾರೆ.

ಬಾಲಕಿಯ ದತ್ತು ಬಗ್ಗೆಯೂ ವಿಡಿಯೋದಲ್ಲಿ ಮಾತನಾಡಿರುವ ಸೋನು, ಬಾಲಕಿಯನ್ನು ದತ್ತು ಪಡೆಯಲು ಮೂರು ತಿಂಗಳ ಸಮಯಾವಕಾಶ ಬೇಕು. ಈಗಾಗಲೇ ರಾಯಚೂರಿನ ಅವರ ಕುಟುಂಬದವರ ಜತೆಗೂ ಈ ವಿಚಾರ ಮಾತನಾಡಿದ್ದೇನೆ. ಅವರೂ ಸಹ ಖುಷಿ ವ್ಯಕ್ತಪಡಿಸಿದ್ದಾರೆ. ಆ ಪುಟಾಣಿಯೂ ನನ್ನನ್ನು ಅಷ್ಟೇ ಹಚ್ಚಿಕೊಂಡಿದ್ದಾಳೆ. ಅಮ್ಮನ ಜತೆಗೆ ರಾಯಚೂರಿಗೆ ಹೋಗಿದ್ದ ಆಕೆಯನ್ನು ಮತ್ತೆ ನಾನೇ ಕರೆದುಕೊಂಡು ಬಂದಿದ್ದೆ. ಆಕೆಯನ್ನು ಚೆನ್ನಾಗಿ ಓದಿಸುವ ಗುರಿ ನನ್ನದು" ಎಂದು ಹೇಳಿಕೊಂಡಿದ್ದರು ಸೋನು ಗೌಡ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ