logo
ಕನ್ನಡ ಸುದ್ದಿ  /  ಮನರಂಜನೆ  /  Bbk 10: ‘ಇನ್ನೂ ಬೇಕಾ ಅವ್ನು, ಊಟದಲ್ಲಿ ವಿಷ ಹಾಕಿ ಕೊಲ್ಲಿ ಎಂದ್ರು ನೆಂಟರು!’ ಡ್ರೋಣ್‌ ಪ್ರತಾಪ್‌ ಕಣ್ಣೀರು

BBK 10: ‘ಇನ್ನೂ ಬೇಕಾ ಅವ್ನು, ಊಟದಲ್ಲಿ ವಿಷ ಹಾಕಿ ಕೊಲ್ಲಿ ಎಂದ್ರು ನೆಂಟರು!’ ಡ್ರೋಣ್‌ ಪ್ರತಾಪ್‌ ಕಣ್ಣೀರು

Dec 01, 2023 01:42 PM IST

google News

BBK 10: ‘ಇನ್ನೂ ಬೇಕಾ ಅವ್ನು, ಊಟದಲ್ಲಿ ವಿಷ ಹಾಕಿ ಕೊಲ್ಲಿ ಎಂದ್ರು ನೆಂಟರು!’ ಡ್ರೋಣ್‌ ಪ್ರತಾಪ್‌ ಕಣ್ಣೀರು

    • ಡ್ರೋಣ್‌ ಪ್ರತಾಪ್‌ ತಮ್ಮ ಜೀವನದ ಕೆಟ್ಟ ಗಳಿಗೆಯನ್ನು ನೆನಪು ಮಾಡಿಕೊಂಡಿದ್ದಾರೆ. ಅನುಭವಿಸಿದ ಯಾತನೆ, ಅವರಿವರ ತುಚ್ಯ ಮಾತುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 
BBK 10: ‘ಇನ್ನೂ ಬೇಕಾ ಅವ್ನು, ಊಟದಲ್ಲಿ ವಿಷ ಹಾಕಿ ಕೊಲ್ಲಿ ಎಂದ್ರು ನೆಂಟರು!’ ಡ್ರೋಣ್‌ ಪ್ರತಾಪ್‌ ಕಣ್ಣೀರು
BBK 10: ‘ಇನ್ನೂ ಬೇಕಾ ಅವ್ನು, ಊಟದಲ್ಲಿ ವಿಷ ಹಾಕಿ ಕೊಲ್ಲಿ ಎಂದ್ರು ನೆಂಟರು!’ ಡ್ರೋಣ್‌ ಪ್ರತಾಪ್‌ ಕಣ್ಣೀರು

BBK 10: ಬಿಗ್‌ಬಾಸ್‌ ಸೀಸನ್‌ 10 ಶುರುವಾಗಿ ಏಳು ವಾರಗಳಾದವು. ಕಳೆದ ಏಳು ವಾರಗಳಿಂದ ಹಲವು ಏಳು ಬೀಳು ಕಂಡಿರುವ ಬಿಗ್‌ಬಾಸ್‌, ಇದೀಗ ಮತ್ತಷ್ಟು ರೋಚಕವಾಗಿ ಸಾಗುತ್ತಿದೆ. ಅವಿನಾಶ್‌ ಶೆಟ್ಟಿ ಮತ್ತು ಪವಿ ಪೂವಪ್ಪ ವೈಲ್ಡ್‌ ಕಾರ್ಡ್‌ ರೂಪದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಮನೆ ಮಂದಿಯ ಮನಸ್ಸಿನಲ್ಲಿ ಹುದುಗಿದ ನೋವನ್ನು ಹೊರಗೆಡುವಲು ಬಿಗ್‌ಬಾಸ್‌ ವಿಶೇಷ ಟಾಸ್ಕ್‌ ನೀಡಿದ್ದರು. ಅದರಂತೆ, ಮನಸ್ಸಿನ ನೋವನ್ನು ಕಣ್ಣೀರು ರೂಪದಲ್ಲಿ ಹೊರಹಾಕಿದರು. ಆ ಪೈಕಿ ಡ್ರೋಣ್‌ ಪ್ರತಾಪ್‌ ಅವರೂ ತಮ್ಮ ಕೆಟ್ಟ ದಿನಗಳನ್ನು ನೆನೆದರು.

ಡ್ರೋಣ್‌ ಪ್ರತಾಪ್‌ ಬಗ್ಗೆ ಈಗಾಗಲೇ ಕರುನಾಡಿನ ಜನತೆಗೆ ಗೊತ್ತಿದೆ. ಒಳ್ಳೆಯ ವಿಚಾರಕ್ಕೂ ಸುದ್ದಿಯಾಗಿದ್ದ ಪ್ರತಾಪ್‌, ಕೆಟ್ಟದಾಗಿ ಟ್ರೋಲ್‌ಗೂ ಆಹಾರವಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಕಳೆದ ಮೂರು ವರ್ಷದ ಹಿಂದೆ ಪ್ರತಾಪ್‌ ಬಗ್ಗೆ ತುಂಬ ಕೆಟ್ಟದಾಗಿ ಬಿಂಬಿಸಲಾಗಿತ್ತು. ಆ ಕರಾಳ ದಿನಗಳ ಬಗ್ಗೆ ಬಿಗ್‌ಬಾಸ್‌ನಲ್ಲಿ ಮಾತನಾಡಿದ್ದಾರೆ. ಕಣ್ಣೀರು ಸುರಿಸಿ, ನೋವನ್ನು ತೋಡಿಕೊಂಡಿದ್ದಾರೆ.

ಪ್ರತಾಪ್‌ ಕಂಡಲ್ಲಿ ಗುಂಡಿಕ್ಕಿ..

"ಡ್ರೋನ್‌ ಪ್ರತಾಪ್‌ ದುಡ್ಡು ತೆಗೆದುಕೊಂಡಿದ್ದಾನೆ ಎಂಬ ಪುಕಾರು ಹಬ್ಬಿಸಲಾಯ್ತು. ಜೀವನದಲ್ಲಿ ಒಂದೆರಡು ಮಾತುಗಳನ್ನು ಬಾಯ್ತಪ್ಪಿ ಹೇಳಿದ್ದೇನೆ. ಹೌದು ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಆ ಸಮಯದಲ್ಲಿ ನಾನೂ ಪ್ಯಾನಿಕ್‌ ಆದೆ. ಕರೋನಾ ಸಮಯದಲ್ಲಿ ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಯ್ತು. ಊರೆಲ್ಲ ಪುಕಾರು, ಕಂಡಲ್ಲಿ ಗುಂಡಿಕ್ಕುವ ಆರ್ಡರ್‌ ಕೊಟ್ಟಿದ್ದಾರೆ ಇವರ ಮಗನಿಗೆ ಎಂದು ಅಪ್ಪನ ಮುಂದೆ ಹೇಳಿದ್ರು. ಮನೆಯಿಂದ ಯಾರೂ ಹೊರ ಬಂದಿಲ್ಲ. ಅಮ್ಮ ಬಾಗಿಲು ಹಾಕ್ಕೊಂಡು ತೋಟದ ಕಡೆ ಹೋಗಿದ್ರು. ಆವತ್ತು ನಾನು ಅನುಭವಿಸಿದ ನೋವು ಒಂದೆರಡಲ್ಲ"

ಊಟದಲ್ಲಿ ವಿಷ ಹಾಕಿ ಸಾಯಿಸಿ..

"ಊರೆಲ್ಲ ಸುದ್ದಿ ಹಬ್ಬಿಸ್ತಿದ್ದಾರೆ. ಇವನು ಸುಳ್ಳ, ಕಳ್ಳ ಎಂದೆಲ್ಲ ಮಾತನಾಡಿದ್ರು. ಊಟದಲ್ಲಿ ಊಟ ಹಾಕಿ ಸಾಯಿಸಬೇಕಿತ್ತು. ಯಾಕಿನ್ನೂ ಹಾಗೇ ಬಿಟ್ಟಿದ್ದಾರೆ ಎಂದು ನೆಂಟ್ರು ಆಡಿಕೊಂಡ್ರು. ಇದೆಲ್ಲವನ್ನು ಅಮ್ಮ ನನ್ನ ಮುಂದೆ ಹೇಳಿಕೊಂಡ್ರು. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋದೆ. ಅಲ್ಲೊಂದು ಹೊಟೇಲ್‌ನಲ್ಲಿ ನನ್ನನ್ನು ಕ್ವಾರಂಟೈನ್‌ ಮಾಡಿದ್ರು. ಕಿಟಕಿ ತೆರೆದರೆ, ಸುತ್ತಲೂ ಕ್ಯಾಮರಾ ಇಟ್ಟಿದ್ದಾರೆ. ಫೋಟೋ ತೆಗೀತಿದ್ದಾರೆ"

ನಿಮ್ಮ ತಂಗೀ ಮದುವೆ ಆಗಲ್ಲ ನೋಡ್ತಿರು..

"ಎಲ್ಲವನ್ನೂ ಒಪ್ಪಿಕೋ, ನಿನ್ನ ತಂಗಿಯನ್ನ ಯಾರು ಮದುವೆ ಆಗ್ತಾರೆ? ನಿನ್ನ ತಂಗೀಗೆ ಮದುವೆ ಆಗದೇ ಇರೋ ಹಾಗೆ ಮಾಡ್ತೀನಿ. ನಿಮ್ಮ ಅಮ್ಮ ಹುಚ್ಚಿ ಥರ ರೋಡಲ್ಲಿ ಅಲೀಬೇಕು. ನಿಮ್ಮ ಅಪ್ಪನಿಗೆ ಯಾರೂ ಇರಬಾರದು, ಯಾರೂ ಸಹಾಯ ಮಾಡಬಾರದು ಹಾಗೇ ಮಾಡ್ತಿವಿ. ಮೆಂಟಲ್‌ ಆಸ್ಪತ್ರೆಯಿಂದ ಡಾಕ್ಟರ್‌ನ ಕರೆದುಕೊಂಡು ಬಂದು, ನಾನು ಮೆಂಟಲಿ ಸರಿಯಾಗಿಲ್ಲ ಎಂದು ಬರೆದುಕೊಡು ಎಂದು ತಲೆ ಮೇಲೆ ಕೊಡೆದು ಹಿಂಸೆ ನೀಡಿದ್ರು. ಸ್ಟೇಟ್‌ಮೆಂಟ್‌ ರೆಡಿ ಮಾಡಿಸಿದ್ರು, ಅಮ್ಮ ಅಪ್ಪನನ್ನು ಕರೆಸಿದ್ರು. ನಾನು ಯಾವುದಕ್ಕೂ ಸಹಿ ಹಾಕಲಿಲ್ಲ"

ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಟ ನೋಡಬೇಡಿ..

"ಇವನು ಹೇಳೋದೆಲ್ಲ ಸುಳ್ಳು ಎಂದು ಬಿಂಬಿಸಿದ್ರು. ಮನೆಗೆ ಕಳುಹಿಸಿದ್ರು. ಅದಾದ ಮೇಲೆ ನಾನು ಒಂದಿಡಿ ತಿಂಗಳು ಮನೆಯಿಂದ ಆಚೆ ಬರಲಿಲ್ಲ. ಈ ವೇದಿಕೆ ಮೂಲಕ ನನಗೆ ದೊಡ್ಡ ಬೂಸ್ಟ್‌ ಸಿಕ್ಕಿದೆ. ನಾನು ಈ ಮೂಲಕ ಹೇಳುವುದೇನೆಂದರೆ, ಯಾರ ಬಗ್ಗೆಯೂ ಬಾಯಿ ಬಂದಂತೆ ಮಾತನಾಡಬೇಡಿ. ನಾನು ಯಾರ ವಿಷ್ಯಕ್ಕೂ ಹೋಗಲ್ಲ. ನನ್ನ ತಂಟೆಗೆ ಬರಬೇಡಿ. ಇಲ್ಲದೆ ಇರೋ ಕಥೆಯನ್ನು ಹಬ್ಬಿಸಬೇಡಿ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಟ ನೋಡಬೇಡಿ" ಎಂದು ಪ್ರತಾಪ್‌ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ