logo
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ಕಿರುತೆರೆಯಲ್ಲಿ ಮರ್ಯಾದಾ ಪುರುಷೋತ್ತಮನ ಜೀವನಗಾಥೆ; ಶ್ರೀಮದ್‌ ರಾಮಾಯಣ ಮಹಾಕಾವ್ಯ ಎಲ್ಲಿ, ಯಾವಾಗಿನಿಂದ ಶುರು?

ಕನ್ನಡ ಕಿರುತೆರೆಯಲ್ಲಿ ಮರ್ಯಾದಾ ಪುರುಷೋತ್ತಮನ ಜೀವನಗಾಥೆ; ಶ್ರೀಮದ್‌ ರಾಮಾಯಣ ಮಹಾಕಾವ್ಯ ಎಲ್ಲಿ, ಯಾವಾಗಿನಿಂದ ಶುರು?

May 15, 2024 02:54 PM IST

google News

ಕನ್ನಡ ಕಿರುತೆರೆಯಲ್ಲಿ ಶ್ರೀಮದ್‌ ರಾಮಾಯಣ ಮಹಾಕಾವ್ಯ; ಎಲ್ಲಿ, ಯಾವಾಗಿನಿಂದ ವೀಕ್ಷಣೆ? ಹೀಗಿದೆ ಮಾಹಿತಿ

    • ಕನ್ನಡ ಕಿರುತೆರೆಯಲ್ಲಿ ಮರ್ಯಾದಾ ಪುರುಷೋತ್ತಮನ ಜೀವನಗಾಥೆಯ ದರ್ಶನವಾಗಲಿದೆ. ಅಂದರೆ, ಶ್ರೀಮದ್‌ ರಾಮಾಯಣ ಮಹಾಕಾವ್ಯ ಧಾರಾವಾಹಿ ಪ್ರಸಾರಕ್ಕೆ ದಿನಾಂಕ ನಿಗದಿಯಾಗಿದೆ. ಹಾಗಾದರೆ ಈ ಸೀರಿಯಲ್ ಎಲ್ಲಿ, ಯಾವಾಗಿನಿಂದ ಶುರು?‌ ಇಲ್ಲಿದೆ ಮಾಹಿತಿ. 
ಕನ್ನಡ ಕಿರುತೆರೆಯಲ್ಲಿ ಶ್ರೀಮದ್‌ ರಾಮಾಯಣ ಮಹಾಕಾವ್ಯ; ಎಲ್ಲಿ, ಯಾವಾಗಿನಿಂದ ವೀಕ್ಷಣೆ? ಹೀಗಿದೆ ಮಾಹಿತಿ
ಕನ್ನಡ ಕಿರುತೆರೆಯಲ್ಲಿ ಶ್ರೀಮದ್‌ ರಾಮಾಯಣ ಮಹಾಕಾವ್ಯ; ಎಲ್ಲಿ, ಯಾವಾಗಿನಿಂದ ವೀಕ್ಷಣೆ? ಹೀಗಿದೆ ಮಾಹಿತಿ

Shrimad Ramayan Serial: ಕೋವಿಡ್‌ ಬಳಿಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಿರುತೆರೆ ಕ್ಷೇತ್ರ ಸ್ಥಗಿತಗೊಂಡಾಗ, ಹಳೇ ಸೀರಿಯಲ್‌ಗಳಿಗೆ ಬಂಗಾರದ ಬೆಲೆ ಬಂದಿತ್ತು. ಕೆಲವು ಸೀರಿಯಲ್‌ಗಳು ಪುನಃ ಪ್ರಸಾರ ಕಂಡರೆ, ಪೌರಾಣಿಕ ಧಾರಾವಾಹಿಗಳು ಬೇರೆ ಬೇರೆ ಭಾಷೆಗಳಿಗೆ ಡಬ್‌ ಆಗಿ ಟೆಲಿಕಾಸ್ಟ್‌ ಆಗಿ ಮೆಚ್ಚುಗೆ ಪಡೆದುಕೊಂಡವು. ಅದಾದ ಮೇಲೆ ಡಬ್ಬಿಂಗ್‌ ಸೀರಿಯಲ್‌ಗಳು ಕನ್ನಡದಲ್ಲೂ ಸರ್ವೇ ಸಾಮಾನ್ಯ ಎನಿಸತೊಡಗಿದವು. ಇಂದಿಗೂ ಕನ್ನಡದ ಹಲವು ವಾಹಿನಿಗಳಲ್ಲಿ ಬೇರೆ ಬೇರೆ ಭಾಷೆಯ ಸೀರಿಯಲ್‌ಗಳು ಡಬ್‌ ಆಗಿ ಪ್ರಸಾರ ಕಾಣುತ್ತಿವೆ. ಈಗ ಆ ಸಾಲಿಗೆ ಉದಯ ಟಿವಿಯಲ್ಲಿ ಹೊಸ ಸೀರಿಯಲ್‌ ಸೇರ್ಪಡೆಯಾಗುತ್ತಿದೆ. ಅದುವೇ ಶ್ರೀಮದ್‌ ರಾಮಾಯಣ!

ಹೌದು, ಕನ್ನಡದ ಮನರಂಜನಾ ವಾಹಿನಿ ಉದಯ ಟಿವಿ ಇದೀಗ ಶ್ರೀಮದ್ ರಾಮಾಯಣ ಧಾರಾವಾಹಿಯನ್ನು ವೀಕ್ಷಕರ ಮುಂದೆ ತರುತ್ತಿದ್ದು, ಅದ್ಭುತ ಕಾವ್ಯವನ್ನು ಹೊಸ ತಲೆಮಾರಿಗೆ ತಲುಪಿಸಲು ಮುಂದಾಗಿದೆ. ಮೇ 20 ರಿಂದ ಸಂಜೆ 6 ಗಂಟೆಗೆ ಶ್ರೀಮದ್‌ ರಾಮಾಯಣ ಸೀರಿಯಲ್ ಪ್ರಸಾರವಾಗಲಿದೆ. ರಾಮಾಯಣ ಭಾರತೀಯ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಅದ್ಭುತ ಕಥೆ. ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿದೆ. ಈಗ ಆ ಕತೆಯನ್ನು ವಿಭಿನ್ನವಾಗಿ ಹೇಳಲು ಬರುತ್ತಿದೆ.

ಉದಯ ಟಿವಿಯಲ್ಲಿ ಮಹಾಕಾವ್ಯ

ರಾಮನ ರಾಜ್ಯ ಪರಿಪಾಲನೆಯು ಇಂದಿಗೂ ಮಾದರಿಯಾಗಿದ್ದು ರಾಮರಾಜ್ಯ ಅನ್ನುವ ಪದ ಈಗಲೂ ಬಳಸಲಾಗುತ್ತಿದೆ. ರಾಮಾಯಣ ರಾಮ ಮತ್ತು ಸೀತೆಯ ಪವಿತ್ರ ಪ್ರೇಮಕಥೆಯೂ ಸಹ ಆಗಿದ್ದು ಅವರ ಧರ್ಮದ ಪಾಲನೆಯ ಮಾರ್ಗದಲ್ಲಿ ಎದುರಿಸಿದ ಅನೇಕ ಸವಾಲುಗಳು ಕುತೂಹಲಕರ. ಪ್ರಾಚೀನ ಭಾರತದ ಅದ್ಭುತ ಕಾವ್ಯ ರಾಮಾಯಣವನ್ನು ಹೊಸ ದೃಷ್ಟಿಕೋನದಿಂದ ʻಶ್ರೀಮದ್ ರಾಮಾಯಣʼ ಧಾರಾವಾಹಿಯನ್ನು ಪ್ರಸಾರ ಮಾಡಲು ಉದಯ ಟಿವಿ ಸಿದ್ಧವಾಗಿದೆ.

ದೃಶ್ಯ ವೈಭವದ ಮೂಲಕ ಆಗಮನ

ರಾಮಾಯಣವನ್ನು ಹೊಸ ಆಯಾಮದಿಂದ ತೋರಿಸುವ ಮೂಲಕ ಉದಯ ಟಿವಿ ಪ್ರೇಕ್ಷಕರಿಗೆ ಒಂದು ಆಧುನಿಕ ಮತ್ತು ಸಮಕಾಲೀನ ಅನುಭವವನ್ನು ನೀಡಲು ಹೊರಟಿದೆ. ದೃಶ್ಯ ವೈಭವದ ಜತೆಗೆ ವೈವಿಧ್ಯಮಯ ಕಲಾವಿದರ ಬಳಗ ಈ ಪೌರಾಣಿಕ ಕಥೆಗೆ ಪಾತ್ರಗಳಾಗಿ ಹೊಸ ಜೀವ ತುಂಬಲಿದೆ. ಇದು ವೀಕ್ಷಕರಿಗೆ ಒಂದು ಅನನ್ಯ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದೆ ಉದಯ ಟಿವಿ.

ಸಾವಿರ ರೂಪಾಯಿ ಗೆಲ್ಲುವ ಅವಕಾಶ

ಇಷ್ಟೇ ಅಲ್ಲ ಶ್ರೀಮದ್ ರಾಮಾಯಣ ಧಾರಾವಾಹಿಯ ವೀಕ್ಷಕರಿಗೆ ವಿಶೇಷ ಬಹುಮಾನವ್ನೂ ಉದಯ ಟಿವಿ ಘೋಷಣೆ ಮಾಡಿದೆ. ಪ್ರತಿ ಸಂಚಿಕೆಯ 250 ವೀಕ್ಷಕರಿಗೆ ಎರಡೂವರೆ ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಉದಯ ಟಿವಿ ನೀಡುತ್ತಿದೆ. ಹಾಗಾದರೆ ಬಹುಮಾನ ಗೆಲ್ಲುವುದು ಹೇಗೆ? ಧಾರಾವಾಹಿ ವೀಕ್ಷಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್ ಕಾಲ್ ಮೂಲಕ ಸರಿ ಉತ್ತರ ನೀಡಿದರೆ ಸಾಕು. ಅದೃಷ್ಟಶಾಲಿ 250 ವೀಕ್ಷಕರಿಗೆ ಪ್ರತಿ ಸಂಚಿಕೆಗೆ ತಲಾ 1000 ರೂ. ನಗದು ಬಹುಮಾನ ಅಂದೇ ಸಂದಾಯವಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ