Brundavana Serial: ಮಿತಿ ಮೀರಿದ ಭಾರ್ಗವಿ ಅಟ್ಟಹಾಸ, ಅಪಾಯದಲ್ಲಿ ಸುಧಾಮೂರ್ತಿ ಮೊಮ್ಮಗಳು ಸಿಂಧು; ಕಾಪಾಡಲು ಬಂದೇ ಬಿಟ್ಟ ಸಿದ್ಧಾರ್ಥ್
Apr 16, 2024 08:55 AM IST
ಮಿತಿ ಮೀರಿದ ಭಾರ್ಗವಿ ಅಟ್ಟಹಾಸ, ಅಪಾಯದಲ್ಲಿ ಸುಧಾಮೂರ್ತಿ ಮೊಮ್ಮಗಳು ಸಿಂಧು; ಕಾಪಾಡಲು ಬಂದೇ ಬಿಟ್ಟ ಸಿದ್ಧಾರ್ಥ್
- Brindavana Kannada Serial Today Episode April 15th: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಸಹನಾ ಜೊತೆ ಮಿಸ್ ಬಿಹೇವ್ ಮಾಡಿದ ಕಾರ್ತಿಗೆ ಬುದ್ಧಿ ಕಲಿಸಿದ ಆಕಾಶ್. ಸುಧಾಮೂರ್ತಿ ಮೊಮ್ಮಗಳು ಸಿಂಧುವಿನ ಮಾನ ಕಳೆಯುವ ಯತ್ನದಲ್ಲಿ ಭಾರ್ಗವಿ. ಸಿಂಧು ರಕ್ಷಣೆಗೆ ಹೊರಟ ಪುಷ್ಪಾಗೆ ಎದುರಾದ ಅಗ್ನಿಸಾಕ್ಷಿಯ ಸಿದ್ಧಾರ್ಥ್.
ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್ 15) ಸಂಚಿಕೆಯಲ್ಲಿ ಪುಷ್ಪಾಳ ಮೊನೋ ಆಕ್ಟಿಂಗ್ ಮುಗಿದ ನಂತರ ಅನುಪಮಾ, ಸ್ನೇಹ, ರತ್ನಾ, ನರ್ಮದಾ ಸೇರಿಕೊಂಡು ಪುಷ್ಪಾಳಿಗೆ ಕಿಚಾಯಿಸುತ್ತಾರೆ. ಮೊದಲು ಆಕಾಶ್‌ನನ್ನು ಯಾರಾದ್ರೂ ಕಿಡ್ನಾಪ್ ಮಾಡಿದ್ರೆ ಏನ್ ಮಾಡ್ತೀಯಾ ಎಂದು ಕೇಳುವ ನರ್ಮದಾ, ನಂತರ ನಿನ್ನ ಪ್ರೀತಿ ಅವನನ್ನು ಸದಾ ಕಾಯುತ್ತದೆ. ಅವನಿಗೆ ನಿನ್ನ ಪ್ರೀತಿಯೇ ರಕ್ಷಣೆ ಎಂದು ಧೈರ್ಯ ತುಂಬುತ್ತಾಳೆ. ಅಲ್ಲದೇ ಪುಷ್ಪಾಗೆ ಆಕಾಶ್ ಮೇಲಿರುವ ಪ್ರೀತಿ ಕಂಡು ಮನೆಯವರೆಲ್ಲ ಖುಷಿ ಪಡುತ್ತಾರೆ.
ಸಹನಾ ಜೊತೆ ಕಾರ್ತಿ ಮಿಸ್ ಬಿಹೇವ್
ಆಕಾಶ್‌ಗೆ ಪ್ರಪೋಸ್ ಮಾಡುತ್ತೇನೆ ಎಂದು ಬಂದ ಸಹನಾ ಆಕಾಶ್‌ನನ್ನು ನೋಡುತ್ತಲೇ ಕನಸಿನ ಲೋಕಕ್ಕೆ ಜಾರಿರುತ್ತಾಳೆ. ಕನಸಿನಿಂದ ಎಚ್ಚೆತ್ತುಕೊಂಡಾಗ ನಾನು ಕಂಡಿದ್ದು ಕನಸು, ತಾನು ಆಕಾಶ್‌ಗೆ ಇನ್ನೂ ಪ್ರಪೋಸ್ ಮಾಡಿಲ್ಲ ಎಂಬುದು ಅರಿವಾಗುತ್ತದೆ. ಆ ಹೊತ್ತಿಗೆ ಅಲ್ಲಿಗೆ ಬರುವ ಅವರ ಕ್ಲಾಸ್‌ಮೇಟ್ ಕಾರ್ತಿ ಸಹನಾಳ ಜೊತೆಗೆ ಮಿಸ್ ಬಿಹೇವ್ ಮಾಡುತ್ತಾನೆ. ಅವಳ ಕೈಯಿಂದ ಬೊಕೆ ಕಿತ್ತು ಕಿಸ್ ಮಾಡಲು ಮುಂದಾಗುತ್ತಾನೆ. ಆಗ ಅಲ್ಲೇ ಇದ್ದ ಆಕಾಶ್ ಅವನಿಗೆ ಸರಿಯಾಗಿ ಹೊಡೆದು ಬುದ್ಧಿ ಕಲಿಸುತ್ತಾನೆ.
ಸಿಂಧು ಮಾನ ಕಳೆಯಲು ಭಾರ್ಗವಿ ಯತ್ನ
ಸುಧಾಮೂರ್ತಿ ಮನೆಯ ಮುದ್ದಿನ ಮೊಮ್ಮಗಳು ಸಿಂಧು ತನ್ನ ಫ್ರೆಂಡ್ ಅಕ್ಕನ ನಿಶ್ಚಿತಾರ್ಥ ಎಂದು ಹೋಗಿರುತ್ತಾಳೆ. ಇದನ್ನು ಅರಿತ ಭಾರ್ಗವಿ ತನ್ನ ತಮ್ಮ ಭಾಸ್ಕರನ ಸಹಾಯದಿಂದ ಅವಳನ್ನು ಕಿಡ್ನಾಪ್ ಮಾಡಿ ಆ ಮೂಲಕ ಸುಧಾಮೂರ್ತಿಗೆ ಶಾಕ್ ನೀಡಿ, ಬೃಂದಾವನದ ಮರ್ಯಾದೆ ಕಳೆಯಲು ಪ್ಲಾನ್ ಮಾಡಿರುತ್ತಾಳೆ. ಇದನ್ನೇ ಸುಧಾಮೂರ್ತಿಗೆ ಕಾಲ್ ಮಾಡಿ ಹೇಳುತ್ತಾಳೆ. ಇನ್ನೇನು ಕೇವಲೇ ಗಂಟೆಗಳಲ್ಲಿ ನಿನ್ನ ಮನೆಯ ಮರ್ಯಾದೆ ಹರಾಜಿಗೆ ಬರುತ್ತದೆ, ನಿನ್ನ ಮೊಮ್ಮಗಳನ್ನು ಅದ್ಹೇಗೆ ಕಾಪಾಡಿಕೊಳ್ಳುತ್ತೀಯೋ ಕಾಪಾಡಿಕೊ ಎಂದು ಚಾಲೆಂಜ್ ಮಾಡುತ್ತಾಳೆ.
ಸಹನಾ ಆಕಾಶ್ ಮೇಲೆ ಹೆಚ್ಚುತ್ತಿದೆ ಪ್ರೀತಿಯ ಹುಚ್ಚು
ಇತ್ತ ಕಾರ್ತಿಗೆ ಹೊಡೆದ ಆಕಾಶ್ ನಂತರ ಅವನನ್ನು ಕ್ಲಾಸ್‌ಗೆ ಕರೆದುಕೊಂಡು ಬಂದು ಆರೈಕೆ ಮಾಡುತ್ತಾನೆ, ಅಲ್ಲದೇ ಹೆಣ್ಣುಮಕ್ಕಳನ್ನು ಎಂದಿಗೂ ಬಲವಂತದಿಂದ ಎಂದಿಗೂ ಪಡೆಯಬಾರದು ಹೆಣ್ಣುಮಕ್ಕಳು ತಾನಾಗಿಯೇ ಒಲಿಯಬೇಕು. ಆಗಷ್ಟೇ ಅವರ ಪ್ರೀತಿ ಪಡೆಯಲು ನಾವು ಅರ್ಹರು ಎಂದೆಲ್ಲಾ ಹೇಳಿ ಕಾರ್ತಿಗೆ ಸಹನಾ ಬಳಿ ಸಾರಿ ಕೇಳುವಂತೆ ಮಾಡುತ್ತಾನೆ. ಆಕಾಶ್ ಮಾತು, ವರ್ತನೆ ಕೇಳಿಸಿಕೊಂಡ ಸಹನಾಗೆ ಆಕಾಶ್ ಮೇಲೆ ಪ್ರೀತಿ ಹೆಚ್ಚುತ್ತದೆ. ಇತ್ತ ತರಗತಿಯಲ್ಲಿ ಲೆಕ್ಚರರ್ ಪಾಠ ಮಾಡುತ್ತಿದ್ದರು ಸಹನಾಳ ಗಮನವೆಲ್ಲಾ ಆಕಾಶ್ ಮೇಲೆ ಇರುತ್ತದೆ, ಇದನ್ನು ಗಮನಿಸಿದ ಲೆಕ್ಚರರ್ ಅವಳನ್ನು ನಿಲ್ಲಿಸಿ ಬಯ್ಯುತ್ತಾರೆ. ಆಕಾಶ್ ಪುಷ್ಪಾಳ ಮೇಲೆ ಪ್ರೀತಿ ಬಗ್ಗೆ ಹೇಳಿಕೊಳ್ಳುತ್ತಿದ್ದರೆ ಸಹನಾ ತನಗೇ ಹೇಳಿದ್ದು ಎಂದುಕೊಂಡು ಖುಷಿಪಡುತ್ತಾಳೆ. ಒಟ್ಟಾರೆ ಸಹನಾಗೆ ಆಕಾಶ್ ಮೇಲೆ ಪ್ರೀತಿಯ ಹುಚ್ಚು ಹೆಚ್ಚುತ್ತಿದೆ.
ಪುಷ್ಪಾ-ಸಿದ್ಧಾರ್ಥ್ ಮುಖಾಮುಖಿ
ಇತ್ತ ಸುಧಾಮೂರ್ತಿ ಭಾರ್ಗವಿಯ ಬಳಿ ಫೋನ್‌ನಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡ ಪುಷ್ಪಾ ಸಿಂಧುಗೆ ಏನೋ ಅಪಾಯವಾಗಿದೆ ಎಂಬುದನ್ನು ಅರಿಯುತ್ತಾಳೆ, ಅಲ್ಲದೇ ಭಾರ್ಗವಿ ಯಾರು ಎಂಬುದು ಗೊತ್ತಾಗದೇ ಗೊಂದಲಕ್ಕೆ ಸಿಲುಕುತ್ತಾಳೆ. ಕಾಫಿ ಕೇಳಿ ಪುಷ್ಪಾಳ ಮೇಲೆ ರೇಗುವ ಸುಧಾಮೂರ್ತಿ ಇನ್ನೊಂದು ಕ್ಷಣದಲ್ಲಿ ರೂಮ್‌ನಲ್ಲಿ ಇರುವುದಿಲ್ಲ. ಮನೆಗೆ ರತ್ನಾಳಿಂದ ಸಿಂಧು ಎಲ್ಲಿಗೆ ಹೋಗಿದ್ದು ಎಂಬುದನ್ನು ತಿಳಿದ ಪುಷ್ಪಾ ಅವಳನ್ನು ಹುಡುಕಿ ಹೊರಡುತ್ತಾಳೆ. ಇತ್ತ ಸುಧಾಮೂರ್ತಿ ಭಾರ್ಗವಿ ಮನೆ ಬಾಗಿಲು ತಟ್ಟುತ್ತಾರೆ.
ಸಿಂಧು ಹೋದ ಏರಿಯಾ ಕಡೆ ಹೋದ ಪುಷ್ಪಾಗೆ ಸಿಂಧು ಯಾರದ್ದೋ ಜೊತೆ ಆಟೊದಲ್ಲಿ ಹೋಗುತ್ತಿರುವುದು ಕಾಣಿಸುತ್ತದೆ. ಸಿಂಧುಳನ್ನು ನೋಡಿದ ಪುಷ್ಪಾ ಆಕೆಯ ಹೆಸರು ಕೂಗುತ್ತಾ ಆಟೊ ಹಿಂದೆ ಓಡಿ ಬರುತ್ತಾಳೆ. ಎಷ್ಟೇ ಕರೆದರೂ ಸಿಂಧು ಎಚ್ಚರಗೊಳುವುದಿಲ್ಲ. ರಸ್ತೆಯೊಂದರಲ್ಲಿ ಗೊಂದಲದಲ್ಲಿ ನಿಂತಿದ್ದ ಪುಷ್ಪಾಗೆ ಸಿದ್ಧಾರ್ಥ ಸಿಗುತ್ತಾಳೆ. ಸಿದ್ಧಾರ್ಥ ಬಳಿ ವಿಷಯ ಹೇಳಿಕೊಳ್ಳವ ಪುಷ್ಪಾ ಭಾರ್ಗವಿ ಯಾರು ಎಂದು ಕೇಳುತ್ತಾಳೆ. ಆಗ ಆಕಾಶ್, ಅವಳು ಮನುಷ್ಯ ರೂಪದ ರಾಕ್ಷಸಿ, ಅದಕ್ಕೆ ಅನ್ಸುತ್ತೆ ಸುಧಾಮೂರ್ತಿ ಅಜ್ಜಿ ದಾರಿಯಲ್ಲಿ ನನಗೆ ಸಿಕ್ಕರೂ ಸರಿಯಾಗಿ ಮಾತನಾಡದೇ ಗಡಿಬಿಡಿಯಲ್ಲಿ ಅವಳನ್ನು ಭೇಟಿ ಮಾಡಲು ಹೋಗಿದ್ದಾರೆ ಅನ್ಸುತ್ತೆ ಎಂದು ಹೇಳುತ್ತಾನೆ.
ಸಿಂಧು ಇರುವ ಜಾಗ ಪತ್ತೆ
ಮೊಮ್ಮಗಳನ್ನು ಬಿಡುವಂತೆ ಬೇಡಿಕೊಳ್ಳಲು ಭಾರ್ಗವಿ ಮನೆಗೆ ಬರುವ ಸುಧಾಮೂರ್ತಿ ಸಾಕಷ್ಟು ಅವಮಾನ ಮಾಡುತ್ತಾರೆ ಭಾರ್ಗವಿ-ಭಾಸ್ಕರ. ಅಲ್ಲದೇ ಸಿಂಧು ಪ್ರಾಣಕ್ಕೆ ಅಪಾಯ ಮಾಡುವುದಿಲ್ಲ, ಮಾನ ತೆಗೆಯದೇ ಬಿಡುವುದಿಲ್ಲ ಎಂದು ಹೇಳಿ ಆಕೆ ಮೊದಲೇ ಹೆದರಿಸುತ್ತಾಳೆ. ಇದರಿಂದ ಸುಧಾಮೂರ್ತಿ ನಡುಗಿ ಹೋಗುತ್ತಾರೆ.
ಇತ್ತ ಸಿದ್ಧಾರ್ಥ ಹಾಗೂ ಪುಷ್ಪಾ ಸಿಂಧು ಇದ್ದ ಆಟೊ ಹೋದ ಕಡೆ ಹೊರಡುತ್ತಾರೆ. ಒಂದೆಡೆ ಅದೇ ಆಟೊ ನಿಂತಿದ್ದನ್ನು ನೋಡಿ ಸಿದ್ಧಾರ್ಥಗೆ ಹೇಳುತ್ತಾಳೆ ಪುಷ್ಪಾ. ಕೊನೆಗೆ ಅಲ್ಲೇ ಪಕ್ಕದಲ್ಲೇ ಇದ್ದ ಮನೆಯಲ್ಲಿ ಸಿಂಧುವಿನ ಚಪ್ಪಲಿ ಇರುವುದು ಗಮನಿಸುತ್ತಾಳೆ ಪುಷ್ಪಾ. ಸಿದ್ಧಾರ್ಥ ಪುಷ್ಪಾ ಇಬ್ಬರೂ ಆ ಮನೆಯೊಳಗೆ ಹೋಗಲು ನೋಡುತ್ತಾರೆ.
ಸಿದ್ಧಾರ್ಥ್ ಹಾಗೂ ಪುಷ್ಪಾ ಸಿಂಧುವನ್ನು ಕಾಪಾಡಿ, ಅವಳಿಗೆ ಏನೂ ಆಗದಂತೆ ಕರೆದುಕೊಂಡು ಬರುತ್ತಾರಾ, ಸಿದ್ಧಾರ್ಥ್‌ಗೂ ಸುಧಾಮೂರ್ತಿ ಕುಟುಂಬಕ್ಕೂ ಏನು ಸಂಬಂಧ, ಭಾರ್ಗವಿಯ ಮನೆಯಲ್ಲಿ ಸುಧಾಮೂರ್ತಿ ಮುಂದೇನು ಮಾಡಬಹುದು ಈ ಎಲ್ಲವನ್ನೂ ನೋಡಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.