logo
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಸಹನಾ ಪ್ರೀತಿ ತನ್ನ ಗಂಡ ಎಂದು ತಿಳಿಯದೇ ಪ್ರಪೋಸ್‌ ಮಾಡಲು ಸಹಾಯ ಮಾಡುವ ಪುಷ್ಪಾ, ಆಕಾಶ್‌ ಒಲವು ಯಾರಿಗೆ?

Brundavana Serial: ಸಹನಾ ಪ್ರೀತಿ ತನ್ನ ಗಂಡ ಎಂದು ತಿಳಿಯದೇ ಪ್ರಪೋಸ್‌ ಮಾಡಲು ಸಹಾಯ ಮಾಡುವ ಪುಷ್ಪಾ, ಆಕಾಶ್‌ ಒಲವು ಯಾರಿಗೆ?

Reshma HT Kannada

Apr 23, 2024 08:53 AM IST

google News

ಸಹನಾ ಪ್ರೀತಿ ತನ್ನ ಗಂಡ ಎಂದು ತಿಳಿಯದೇ ಅವಳಿಗೆ ಸಹಾಯ ಮಾಡುವ ಪುಷ್ಪಾ, ಆಕಾಶ್‌ ಮನಸ್ಸಿನಲ್ಲಿರೋದ್ಯಾರು?

    • Brindavana Kannada Serial Today Episode April 22nd: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ರಸ್ತೆಯಲ್ಲಿ ಆಕಸ್ಮಿಕವಾಗಿ ಎದುರಾಗುವ ಸಹನಾಗೆ ಪ್ರೀತಿ ಪಾಠ ಮಾಡುವ ಪುಷ್ಪಾ. ಆಕಾಶ್‌-ಸಹನಾ ಪ್ರೀತಿಯನ್ನು ದಾಳವಾಗಿರಿಸಿಕೊಂಡು ಬೃಂದಾವನದ ನೆಮ್ಮದಿ ಕೆಡಿಸಲು ಹೊಸ ಪ್ಲಾನ್‌ ಮಾಡುವ ಭಾರ್ಗವಿ, ಕಡಿಮೆಯಾಗಿಲ್ಲ ಸುಧಾಮೂರ್ತಿ ಆತಂಕ.
ಸಹನಾ ಪ್ರೀತಿ ತನ್ನ ಗಂಡ ಎಂದು ತಿಳಿಯದೇ ಅವಳಿಗೆ ಸಹಾಯ ಮಾಡುವ ಪುಷ್ಪಾ, ಆಕಾಶ್‌ ಮನಸ್ಸಿನಲ್ಲಿರೋದ್ಯಾರು?
ಸಹನಾ ಪ್ರೀತಿ ತನ್ನ ಗಂಡ ಎಂದು ತಿಳಿಯದೇ ಅವಳಿಗೆ ಸಹಾಯ ಮಾಡುವ ಪುಷ್ಪಾ, ಆಕಾಶ್‌ ಮನಸ್ಸಿನಲ್ಲಿರೋದ್ಯಾರು?

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 22) ಸಂಚಿಕೆಯಲ್ಲಿ ಮಾರ್ಕೆಟ್‌ಗೆಂದು ಬಂದ ಪುಷ್ಪಾಳ ಮುಂದೆ ಮಿಂಚು ಹಾಗೂ ಸಹನಾ ಬೈಕ್‌ ಸ್ಕಿಡ್‌ ಆಗಿ ಬೀಳುತ್ತಾರೆ. ತಕ್ಷಣಕ್ಕೆ ಅವರ ಬಳಿ ಹೋಗಿ ಅವರನ್ನು ಎತ್ತಿ ಆರೈಕೆ ಮಾಡುತ್ತಾಳೆ ಪುಷ್ಪಾ. ಅವಳನ್ನು ನೋಡಿದ ಸಹನಾ ಪುಷ್ಪಾಳನ್ನು ಗುರುತು ಹಿಡಿಯುತ್ತಾಳೆ. ʼನೀವು ಪುಷ್ಪಾ ಅಲ್ವಾ, ಆವತ್ತು ದೇವಸ್ಥಾನದಲ್ಲಿ ಕಳ್ಳ ನನ್ನ ಸರ ಕದಿಯಲು ಬಂದಾಗ ಕಾಪಾಡಿದ್ದು ನೀವೇ ಅಲ್ವಾ?ʼ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಪುಷ್ಪಾ ʼಹೌದು ಅದು ನಾನೇ, ಅದಿರಲಿ ನಿಮಗೇನು ಪೆಟ್ಟಾಗಿಲ್ಲ ಅಲ್ವಾ, ಏನೂ ತೊಂದ್ರೆ ಇಲ್ಲ ಅಲ್ವಾ?ʼ ಎಂದು ಸಹನಾ ಹಾಗೂ ಮಿಂಚುವಿನ ಉಭಯ ಕುಶಲೋಪರಿ ವಿಚಾರಿಸುತ್ತಿರುವ ಹೊತ್ತಿನಲ್ಲೇ ಸಹನಾಗೆ ತನ್ನ ಕೈಯಲ್ಲಿರುವ ಗಿಫ್ಟ್‌ ಒಡೆದು ಹೋಗಿರುವ ವಿಚಾರ ಗಮನಕ್ಕೆ ಬರುತ್ತದೆ. ಆಕಾಶ್‌ಗೆ ಪ್ರಪೋಸ್‌ ಮಾಡಲೆಂದು ತಂದ ಗಿಫ್ಟ್‌ ಎರಡು ಚೂರಾಗಿದ್ದನ್ನು ನೋಡಿ ಸಹನಾ ಜೀವ ಬಾಯಿಗೆ ಬಂದಂತಾಗುತ್ತದೆ. ಅದನ್ನು ಹಿಡಿದು ಬರುವ ಸಹನಾಳ ಬೇಸರದಿಂದ ತನ್ನ ಪ್ರೀತಿಗೆ ಹೀಗೇಕೆ ಆಗುತ್ತಿದೆ ಎಂದು ಮಿಂಚು-ಪುಷ್ಪಾ ಬಳಿ ಅಳಲು ತೋಡಿಕೊಳ್ಳುತ್ತಾಳೆ. ಆಗ ಪುಷ್ಪಾ ಸಹನಾಗೆ ಪ್ರೀತಿ ಪಾಠ ಮಾಡುತ್ತಾಳೆ.

ಮಗಳ ಪ್ರೀತಿಯನ್ನೇ ದ್ವೇಷಕ್ಕೆ ದಾಳವಾಗಿಸಿಕೊಳ್ಳಲು ಭಾರ್ಗವಿ ತಂತ್ರ

ತನ್ನ ಮಗಳು ಈಗಾಗಲೇ ಮದುವೆಯಾಗಿರುವ ಹುಡುಗ, ಅದರಲ್ಲೂ ಬೃಂದಾವನದ ಕುಡಿಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದ ಮೇಲೂ ಭಾರ್ಗವಿ ಮಗಳ ಪ್ರೀತಿಗೆ ಸಪೋರ್ಟ್‌ ಮಾಡುತ್ತಿರುವುದನ್ನು ನೋಡಿದ ಭಾಸ್ಕರ ʼಇದ್ಯಾಕೆ ಹೀಗೆ?ʼ ಎಂದು ತಲೆ ಕೆಡಿಸಿಕೊಳ್ಳುತ್ತಾನೆ. ಈ ಬಗ್ಗೆ ಚಿಂತಿಸುತ್ತಿರುವಾಗಲೇ ಅಲ್ಲಿಗೆ ಬರುವ ಭಾರ್ಗವಿ ಭಾಸ್ಕರನ ಬಳಿ ತಾನು ಮಗಳ ಪ್ರೀತಿಯನ್ನೇ ದಾಳವಾಗಿಸಿಕೊಂಡು ಬೃಂದಾವನದ ನೆಮ್ಮದಿ ಕೆಡಿಸಲು ಪ್ಲಾನ್‌ ಮಾಡುತ್ತಿರುವ ಬಗ್ಗೆ ಹೇಳುತ್ತಾಳೆ. ತನಗೆ ಮದುವೆಯಾದ ಮೇಲೂ ಆತ ನನ್ನ ಮಗಳು ಪ್ರೀತಿಸುತ್ತಿದ್ದಾನೆ ಎಂದರೆ ಅವನಿಗೆ ಈ ಮದುವೆ ಇಷ್ಟವಿಲ್ಲ, ಜೊತೆಗೆ ಮಗಳ ಪ್ರೀತಿಗಾಗಿ ಅವನು ಮನೆಯವರನ್ನು ಎದುರು ಹಾಕಿಕೊಳ್ಳುತ್ತಾನೆ, ಇದರಿಂದ ನಮಗೆ ಲಾಭ ಎಂದೆಲ್ಲಾ ಏನೇನೋ ಲೆಕ್ಕಾಚಾರ ಹಾಕಿರುವ ಭಾರ್ಗವಿ ಅದನ್ನು ಭಾಸ್ಕರ ಮುಂದೆ ವಿವರಿಸುತ್ತಾಳೆ.

ಎಲ್ಲರೂ ಅಂದುಕೊಂಡಿರುವುದೊಂದು ಆಕಾಶ್‌ ಮನಸ್ಸಲ್ಲಿರುವುದು ಇನ್ನೊಂದು

ಕಾಲೇಜಿಗೆ ಬರುವ ಆಕಾಶ್‌ಗೆ ಸುನಾಮಿ ಎದುರಾಗುತ್ತಾನೆ. ಆಕಾಶ್‌ನನ್ನು ನೋಡಿ ʼಏನಪ್ಪಾ ಇವತ್ತು ತುಂಬಾ ಖುಷಿ ಖುಷಿಯಾಗಿದೀಯಾ, ಏನಾಯ್ತು, ಏನ್‌ ಸಮಾಚಾರʼ ಎಂದು ಪ್ರಶ್ನೆ ಮಾಡ್ತಾನೆ. ಅದಕ್ಕೆ ಆಕಾಶ್‌ ʼಮನಸ್ಸಿಗೆ ಹತ್ತಿರ ಆದೋರು ಜೊತೆನೇ ಇದಾರೆ, ನಮ್‌ ಜೊತೆ ಮಾತಾಡ್ತಾ ಇರ್ತಾರೆ ಅಂದ್ರೆ ಖುಷಿ ಆಗ್ಲೇಬೇಕಲ್ವಾ?ʼ ಎನ್ನುತ್ತಾನೆ. ಪುಷ್ಪಾಳನ್ನೇ ಮನಸ್ಸಿನ ತುಂಬಾ ತುಂಬಿಕೊಂಡಿರುವ ಆಕಾಶ್‌ ಅವಳ ಬಗ್ಗೆ, ತನಗೆ ಅವಳ ಮೇಲಿರುವ ಪ್ರೀತಿ ಬಗ್ಗೆ ಹೇಳುತ್ತಿದ್ದರೆ ಸುನಾಮಿ ಆಕಾಶ್‌ ಹೇಳುತ್ತಿರುವುದು ಸಹನಾ ಬಗ್ಗೆ ಎಂದುಕೊಂಡು ಖುಷಿಪಡುತ್ತಾನೆ. ಸಹನಾ ಪ್ರಪೋಸ್‌ ಮಾಡುವ ವಿಚಾರವನ್ನು ಇನ್‌ಡೈರೆಕ್ಟ್‌ ಆಗಿ ಆಕಾಶ್‌ ಬಳಿ ಹೇಳುತ್ತಾನೆ ಸುನಾಮಿ. ಆದರೆ ಆಕಾಶ್‌ಗೆ ಅವನ ಮಾತಿನ ಒಳಾರ್ಥ ತಿಳಿಯದೇ ಗೊಂದಲಕ್ಕೆ ಸಿಲುಕುತ್ತಾನೆ.

ಅನುಪಮಾ ಮುಂದೆ ಆತಂಕ ವ್ಯಕ್ತಪಡಿಸುವ ಸುಧಾಮೂರ್ತಿ

ಮಗಳು ಅನುಪಮಾ ಮುಂದೆ ಮನ ಮಾತುಗಳನ್ನು ಹಂಚಿಕೊಳ್ಳುವ ಸುಧಾಮೂರ್ತಿ ʼಎಷ್ಟೋ ದಿನಗಳ ನಂತರ ನಾವಿವತ್ತು ನೆಮ್ಮದಿಯಿಂದ ನಿದ್ದೆ ಮಾಡಿದೆ. ಆದರೆ ಆ ಭಾರ್ಗವಿ ಸುಮ್ಮನಿರುತ್ತಾಳೆ ಎಂದು ನನಗೆ ಅನ್ನಿಸುತ್ತಿಲ್ಲ, ಅವಳು ಏನಾದ್ರೂ ಬೇರೆ ಪ್ಲಾನ್‌ ಮಾಡಿ ತೊಂದರೆ ಕೊಡಲು ನೋಡುತ್ತಿರುತ್ತಾಳೆʼಎಂದು ಆತಂಕ ವ್ಯಕ್ತಪಡಿಸುವ ಸುಧಾಮೂರ್ತಿಗೆ ಅನುಪಮಾ ʼನನ್ನ ಮನೆಯಲ್ಲಿ ಒಗ್ಗಟ್ಟು ಇರುವವರೆಗೂ ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನನ್ನ ಮನೆಯಲ್ಲಿ ಯಾರಾದ್ರೂ ಒಬ್ಬರು ಅವಳಿಗೆ ಸಹಾಯ ಮಾಡಿದ್ರೆ ಅವಳು ಅಂದುಕೊಂಡಿದ್ದು ಆಗುತ್ತೆ, ಆದರೆ ಹಾಗೆಲ್ಲಾ ನಮ್ಮಲ್ಲಿ ಯಾರೂ ಮಾಡೊಲ್ಲ, ನೀನು ಧೈರ್ಯ ತಂದ್ಕೊʼ ಎಂದು ತಾಯಿಗೆ ಸಾಮಾಧಾನ ಮಾಡುತ್ತಾಳೆ ಅನುಪಮಾ, ಇತ್ತ ಭಾಸ್ಕರ ಬಳಿ ಆಕಾಶ್‌ನಿಂದ ಬೃಂದಾವನದ ನೆಮ್ಮದಿ ಕಳೆಯುತ್ತೇನೆ ಎಂದು ಶಪಥ ಮಾಡುತ್ತಿರುತ್ತಾಳೆ ಭಾರ್ಗವಿ.

ಸಹನಾ ಪ್ರೀತಿ ತನ್ನ ಗಂಡನೇ ಎಂದು ಅರಿಯದೇ ಸಹಾಯ ಮಾಡುವ ಪುಷ್ಪಾ

ಪ್ರಪೋಸ್‌ ಮಾಡಲು ತಂದ ಪ್ರೀತಿಯ ಗಿಫ್ಟ್‌ ಒಡೆದು ಹೋಗಿದ್ದು ನೋಡಿ ಬೇಸರ ಪಟ್ಟುಕೊಳ್ಳುವ ಸಹನಾಳಿಗೆ ಪ್ರೀತಿಯ ಅರ್ಥ ತಿಳಿಸುತ್ತಾಳೆ ಪುಷ್ಪಾ. ಅಲ್ಲದೇ ಅವಳಿಗೆ ಒಂದು ಬೆಸ್ಟ್‌ ಗಿಫ್ಟ್‌ ಕೊಡಿಸುತ್ತೇನೆ ಎಂದು ಬೇರೆಡೆಗೆ ಕರೆದುಕೊಂಡು ಹೋಗುತ್ತಾಳೆ. ಸಹನಾ ಪ್ರೀತಿ ಮಾಡುತ್ತಿರುವುದು ತನ್ನ ಗಂಡನನ್ನೇ ಎಂದು ತಿಳಿಯದ ಪುಷ್ಪಾ ತಾಳಿ, ಹೂ, ಕುಂಕುಮ, ಅರಸಿನ ಇರುವ ಬಟ್ಟಲನ್ನು ಉಡುಗೊರೆಯಾಗಿ ನೀಡುವಂತೆ ಹೇಳಿ ಅವುಗಳೆಲ್ಲದರ ಅರ್ಥ ತಿಳಿಸಿ, ಪ್ರೀತಿಸಿದವರನ್ನು ಸಾಯುವವರೆಗೂ ನಮ್ಮ ಜೊತೆಗೆ ಇರಿಸಿಕೊಳ್ಳಬೇಕು ಎಂದು ಉಪದೇಶ ಮಾಡುತ್ತಾಳೆ.

ಸಹನಾ ಪ್ರಪೋಸ್‌ ಮಾಡಿದ್ರೆ ಆಕಾಶ್‌ ಒಪ್ತಾನಾ, ತನಗೆ ಮದುವೆಯಾಗಿರುವ ವಿಚಾರವನ್ನು ಈಗಲಾದ್ಲೂ ಸಹನಾ ಮುಂದೆ ಹೇಳ್ತಾನಾ ಆಕಾಶ್‌, ಮೊಮ್ಮಗನಿಂದ ಸುಧಾಮೂರ್ತಿ ಹಾಗೂ ಬೃಂದಾವನದ ನೆಮ್ಮದಿ ಕೆಡಿಸಲು ಯೋಚಿಸುತ್ತಿರುವ ಭಾರ್ಗವಿಗೆ ಈ ವಿಚಾರದಲ್ಲೂ ಸೋಲಾಗುತ್ತಾ ಇದನ್ನೆಲ್ಲಾ ನೋಡಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ