Brundavana Serial: ಆಕಾಶ್ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು; ಕೊನೆಗೂ ಸತ್ಯ ಹೇಳಿಲ್ಲ ಸುನಾಮಿ
May 18, 2024 08:30 AM IST
ಆಕಾಶ್ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆಗೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು
- Brindavana Kannada Serial Today Episode May 17th: ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್ನಲ್ಲಿ ಸುನಾಮಿ-ಆಕಾಶ್ ಇಬ್ಬರೂ ಸುಳ್ಳಿನ ಮೇಲೆ ಸುಳ್ಳು ಹೇಳಿ ಮನೆಯವರನ್ನು ನಂಬಿಸಿದ್ದಾರೆ. ಮಗಳ ಮದುವೆ ಆಕಾಶ್ ಮದುವೆ ಮಾಡಲು ಭಾರ್ಗವಿ ಪ್ಲಾನ್ ಮಾಡ್ತಾ ಇದ್ರೆ, ಆಕಾಶ್ನಿಂದ ಹೇಗಾದ್ರೂ ಹಣ ಪೀಕುವ ನಿರ್ಧಾರ ಮಾಡಿದ್ದಾಳೆ ಗಿರಿಜಾ.
ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 17) ಸಂಚಿಕೆಯಲ್ಲಿ ಆಕಾಶ್ನನ್ನು ಮನೆಯವರ ಎದುರು ತಪ್ಪಿತಸ್ಥನಂತೆ ನಿಲ್ಲಿಸಿದ್ದಾರೆ ಸತ್ಯಮೂರ್ತಿ. ಮನೆಯವರೆಲ್ಲ ಸುನಾಮಿ ಬರುವಿಕೆಗಾಗಿ ಎದುರು ನೋಡುತ್ತಿರುತ್ತಾರೆ. ಸುನಾಮಿ ಬಂದಿದ್ದೆ ತಡ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾರೆ ಸತ್ಯಮೂರ್ತಿ. ನೀನು ಆಕಾಶ್ ಕಾರಿನಲ್ಲಿ ಬಂದು ನನಗೆ ಯಾಮಾರಿಸಿ ಹೋಗಿಲ್ವಾ ಎಂದು ಕೇಳುವ ಸತ್ಯಮೂರ್ತಿ ಅವರ ಪ್ರಶ್ನೆಗೆ ಸುನಾಮಿ ತನಗೆ ಕಾರ್ ಡ್ರೈವಿಂಗ್ ಬರುವುದೇ ಇಲ್ಲ ಎಂದು ಸುಳ್ಳು ಹೇಳುತ್ತಾನೆ. ಜೊತೆಗೆ ನಿನ್ನ ಮಾವನನ್ನು ಮ್ಯಾನೇಜ್ ಮಾಡಿದ್ಯಾ ಕೇಳಿದ್ದೇಕೆ ಅಂದ್ರೆ ಅದಕ್ಕೂ ಕಾಲೇಜ್ ವಾಚ್ಮೆನ್ ಹೆಸರು ತಳುಕು ಹಾಕಿ ಹೊಸ ಕಥೆ ಕಟ್ಟುತ್ತಾರೆ. ಆಕಾಶ್-ಸುನಾಮಿ ಇಬ್ಬರೂ ಸತ್ಯ ಹೇಳದೇ ಇದ್ದಾಗ ಸತ್ಯಮೂರ್ತಿ ಆವತ್ತು ರಾತ್ರಿ ಸುನಾಮಿ ಕುಡಿದು ಬಂದಾಗ ಆಡಿದ ಮಾತುಗಳ ಬಗ್ಗೆ ಕೇಳುತ್ತಾರೆ. ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಸುನಾಮಿ ಮನೆಯಿಂದ ಎಸ್ಕೇಪ್ ಆಗುವ ಪ್ಲಾನ್ ಮಾಡಿ ಆಕಾಶ್ ಬಳಿ ನೀನೇ ಏನಾದ್ರೂ ಹೇಳಿ ಮ್ಯಾನೇಜ್ ಮಾಡು ಎನ್ನುತ್ತಾನೆ, ಕೊನೆಗೆ ಆಕಾಶ್ ಏನೋ ಒಂದು ಸುಳ್ಳು ಹೇಳುತ್ತಾನೆ. ಆಕಾಶ್ ಮಾತಿನ ಎದುರು ಸತ್ಯಮೂರ್ತಿ ಮಾತಿಗೆ ಸಾಕ್ಷಿ ಇಲ್ಲದ ಕಾರಣ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಸಂಬಂಧದಲ್ಲಿ ನಂಬಿಕೆಯೇ ಅಸ್ತ ಅಂತಿದ್ದಾಳೆ ಪುಷ್ಪಾ
ಮನೆಯವರ ಎದುರು ಸುಳ್ಳು ಹೇಳಿದ್ದಕ್ಕೆ ಪಾಶ್ಚಾತ್ತಾಪ ಪಡುತ್ತಾ ಕುಳಿರುತ್ತಾನೆ ಆಕಾಶ್. ಒಂದು ಸುಳ್ಳ ಹೇಳಲು ಹೋಗಿ ಮೇಲಿಂದ ಮೇಲೆ ಸುಳ್ಳು ಹೇಳುವಂತಾಗಿದೆ ಎಂದು ಮನದಲ್ಲೇ ಮಂಡಿಗೆ ತಿನ್ನುತ್ತಿರುತ್ತಾನೆ. ಆಗ ಅಲ್ಲಿಗೆ ಕಾಫಿ ತರುವ ಪುಷ್ಪಾ ಡಲ್ ಇರುವುದನ್ನು ಗಮನಿಸಿದ ಆಕಾಶ್ ʼಯಾಕೆ ಪುಷ್ಪಾ ಡಲ್ ಇದೀಯಾ, ಏನಾದ್ರೂ ಬೇಜಾರಾ?ʼ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಪುಷ್ಪಾ ʼಸತ್ಯಮೂರ್ತಿ ದೊಡ್ಡಪ್ಪ ಎಷ್ಟೇ ಗೊಂದಲ ಮಾಡಿಕೊಂಡ್ರು ಅವರು ಹೇಳುವ ಮಾತು ಸತ್ಯ ಇರುತ್ತದೆ. ನಾನು ನೀವು ಮೋಸ ಮಾಡಿದ್ದೀರಿ ಎಂದು ಹೇಳುತ್ತಿಲ್ಲ. ಯಾಕೆಂದರೆ ಗಂಡ-ಹೆಂಡತಿ ಸಂಬಂಧದಲ್ಲಿ ನಂಬಿಕೆಯೇ ಬುನಾದಿ. ಆದರೆ ಹೆಂಡತಿಗೆ ಗಂಡನ ಮೇಲೆ ಅಥವಾ ಗಂಡನಿಗೆ ಹೆಂಡತಿ ಮೇಲೆ ಒಮ್ಮೆ ನಂಬಿಕೆ ಹೋದ್ರು ಮತ್ತೆ ನಂಬಿಕೆ ಹುಟ್ಟೋದು ತುಂಬಾ ಕಷ್ಟ. ಆದರೆ ನಾನು ನಿಮ್ಮನ್ನು ತುಂಬಾ ನಂಬ್ತಿನಿ, ನೀವು ನನಗೆ ಮೋಸ ಮಾಡುವುದಿಲ್ಲ ಎಂದುಕೊಂಡಿದ್ದೇನೆʼ ಎಂದು ನಂಬಿಕೆಯ ಪಾಠ ಮಾಡುತ್ತಾಳೆ. ಹೆಂಡತಿಯ ಮಾತು ಕೇಳಿದ ಆಕಾಶ್ ಮನಸ್ಸು ಕುಗ್ಗಿ ಹೋಗುತ್ತದೆ.
ಮಗಳಿಗೆ ಮದುವೆ ಮಾಡುವ ಪ್ಲಾನ್ನಲ್ಲಿ ಭಾರ್ಗವಿ
ಭಾಸ್ಕರನಿಗೆ ಕಾಲೇಜಿನಲ್ಲಿ ಹಿಗ್ಗಾಮುಗ್ಗಾ ಹೊಡೆದ ಕಾರಣ ಮೈಯೆಲ್ಲಾ ಗಾಯವಾಗಿರುತ್ತದೆ. ಅದಕ್ಕೆ ಐಸ್ ಮಸಾಜ್ ಮಾಡಿಕೊಳ್ಳುತ್ತಿರುವುದನ್ನು ಕಂಡ ಭಾರ್ಗವಿ ಭಾಸ್ಕರನ ಬಳಿ ಏನಾಗಿದ್ದು ಎಂದು ಸತ್ಯ ಹೇಳು ಜೋರು ಮಾಡುತ್ತಾನೆ. ಆಗ ಭಾರ್ಗವಿ ಎದುರು ಕಾಲೇಜಿನಲ್ಲಾದ ಘಟನೆಗಳನ್ನೆಲ್ಲಾ ವಿವರಿಸುತ್ತಾನೆ ಭಾಸ್ಕರ. ಆಗ ಅವನಿಗೆ ವಾರ್ನಿಂಗ್ ಮಾಡುವ ಭಾರ್ಗವಿ ʼನೀನು ಸುಮ್ಮನೆ ಏನೇನೋ ಮಾಡಲು ಹೋಗಬೇಡ. ಅವರು ಆಲ್ರೆಡಿ ಕ್ಲೋಸ್ ಆಗಿದ್ದಾರೆ. ಆಕಾಶ್ಗೆ ಬೇಡ ಅಂದ್ರು ಸಹನಾ ಹತ್ತಿರ ಆಗ್ತಾ ಇದಾಳೆ. ಅವಳಿಗೆ ಆ ರೀತಿ ನಾನು ತಲೆಕೆಡಿಸಿದ್ದೇನೆ, ಸದ್ಯದಲ್ಲೇ ಅವರಿಬ್ಬರ ಮದುವೆ ಕೂಡ ಮಾಡಿಸ್ತೀನಿʼ ಎಂದು ಹೇಳಿ ಆಕಾಶ್ ನೆಮ್ಮದಿ ಇನ್ನಷ್ಟು ಕೆಡಿಸಲು ಪ್ಲಾನ್ ಮಾಡಿದ್ದನ್ನು ಭಾಸ್ಕರನಿಗೆ ಹೇಳುತ್ತಾಳೆ.
ಆಕಾಶ್ಗೆ ಬ್ಲಾಕ್ಮೇಲ್ ಮಾಡುತ್ತೇನೆ ಎನ್ನುವ ಗಿರಿಜಾ
ಸಾಲಗಾರರಿಗೆ ಕೊಡಲು ಸಂಘದಿಂದ ಎರಡು ಲಕ್ಷ ಸಾಲ ಸಿಗುತ್ತದೆ ಎಂದು ಅಪ್ಪಣ್ಣ ಹೇಳಿ ಹೋದ ಬೆನ್ನಲ್ಲೇ ಮನೆಗೆ ಬರುತ್ತಾಳೆ ಲಲಿತಾ. ಗಿರಿಜಾ ಬಳಿ ನೀನು ಪುಷ್ಪಾಳ ಮನೆಯಿಂದ ದುಡ್ಡು ತಂದಿದ್ರೆ ಇಷ್ಟೆಲ್ಲಾ ಬೇಕಿತ್ತಾ ಎಂದು ಪ್ರಶ್ನೆ ಮಾಡುವ ಲಲಿತಾ ಬಳಿ ಇಷ್ಟು ದಿನ ಆ ಆಕಾಶ್ಗೆ ಹೆದರಿ ಸುಮ್ಮನಾಗಿದ್ದೆ. ಆದರೆ ಇನ್ನು ಮುಂದೆ ಅವನೇ ನನಗೆ ಹಣ ಕೊಡಬೇಕು ಹಾಗೇ ಮಾಡುತ್ತೇನೆ, ಇಷ್ಟು ದಿನ ನನ್ನ ವಿಚಾರ ಇಟ್ಟುಕೊಂಡು ಆಟ ಆಡಿಸ್ದಾ, ಈಗ ನಾನು ಅವನ ವಿಚಾರ ಇಟ್ಟುಕೊಂಡು ಆಟ ಆಡ್ತೀನಿ. ಅವನಲ್ಲೂ ಏನಾದ್ರೂ ವಿಷ್ಯಾ ಇದ್ದೆ ಇರುತ್ತೆ, ಅದನ್ನು ಕಂಡುಹಿಡಿದು ಅವನಿಗೆ ಆಟ ಆಡಿಸ್ತೀನಿʼ ಎಂದು ಪಟ ತೊಡುತ್ತಾಳೆ ಗಿರಿಜಾ.
ಭಾರ್ಗವಿ ಸಹನಾ ಜೊತೆಗೆ ಮದುವೆ ಪ್ಲಾನ್ ಮಾಡ್ತಾ ಇದಾಳೆ, ಇತ್ತ ಗಿರಿಜಾ ಆಕಾಶ್ ಬೆನ್ನು ಬಿಡದ ಬೇತಾಳದಂತೆ ಕಾಡುತ್ತೇನೆ ಅಂತಿದಾಳೆ, ಆ ಕಥೆ ಪುಷ್ಪಾ ನಂಬಿಕೆಯೇ ಬುನಾದಿ ಎಂದು ಮಾತನಾಡುತ್ತಾಳೆ. ಆದ್ರೆ ಆಕಾಶ್ ಸುಳ್ಳಿನ ಕಂತೆಯನ್ನೇ ಸೃಷ್ಟಿಸಿದ್ದಾನೆ. ಈ ಎಲ್ಲದರಿಂದ ಆಕಾಶ್ ಬಾಳು ಏನಾಗುತ್ತೆ, ಬೃಂದಾವನದಲ್ಲಿ ಈ ವಿಷಯ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಾ? ಸತ್ಯಮೂರ್ತಿ ಮಾತು ನಂಬದ್ದಕ್ಕೆ ಮನೆಯವರೆಲ್ಲಾ ಪಶ್ಚಾತ್ತಾಪ ಪಡುವ ದಿನ ಬರುತ್ತಾ ಈ ಎಲ್ಲವನ್ನೂ ಕಾದು ನೋಡಬೇಕು.
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)