ಬೃಂದಾವನ ಸೀರಿಯಲ್: ಬೃಂದಾವನದಲ್ಲಿ ಪೂಜೆ ಸಂಭ್ರಮ; ಶಿವಪೂಜೆಯಲ್ಲಿ ಕರಡಿಯಂತೆ ಎಂಟ್ರಿ ಕೊಡಲಿದ್ದಾಳೆ ಗಿರಿಜಾ
Feb 10, 2024 09:00 AM IST
ಬೃಂದಾವನದಲ್ಲಿ ಪೂಜೆ ಸಂಭ್ರಮ; ಶಿವಪೂಜೆಯಲ್ಲಿ ಕರಡಿಯಂತೆ ಎಂಟ್ರಿ ಕೊಡಲಿದ್ದಾಳೆ ಗಿರಿಜಾ
- Brindavana Kannada Serial Today Episode Feb 9: ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಸುಧಾಮೂರ್ತಿಯವರ ಮನೆಯಲ್ಲಿ ಪೂಜೆ ಸಂಭ್ರಮ ಕಳೆಗಟ್ಟಿರುತ್ತದೆ. ಇತ್ತ ಶಿವಪೂಜೆಯ ಕರಡಿಯಂತೆ ಪುಷ್ಪಾ ಮನೆಯತ್ತ ಹೊರಟಿದ್ದಾಳೆ ಗಿರಿಜಾ. ಆಕಾಶ್ ಮನದ ತುಂಬೆಲ್ಲ ವಧುದಕ್ಷಿಣೆಯದ್ದೇ ಕೋಪ.
ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.9) ಸಂಚಿಕೆಯಲ್ಲಿ ಸುಧಾಮೂರ್ತಿಯವರ ಮನೆಯ ಹೆಂಗಸರೆಲ್ಲಾ ಒಂದೆಡೆ ಸೇರಿ ಅಡುಗೆ ತಯಾರಿಯಲ್ಲಿ ತೊಡಗಿರುತ್ತಾರೆ. ಅವರಿವರ ಕಾಲೆಳೆಯುತ್ತಾ ಪೂಜೆಯ ಅಡುಗೆಯ ಸಿದ್ಧ ಮಾಡುವ ಮಧ್ಯೆಯೂ ಪುಷ್ಪಾ ಬಂದ ಮೇಲೆ ನಾವೆಲ್ಲಾ ಎಷ್ಟು ಆರಾಮಾಗಿದ್ದೇವೆ ಎನ್ನುತ್ತಾ ಪುಷ್ಪಾಳನ್ನು ಹೊಗಳುವುದನ್ನು ಮರೆಯುವುದಿಲ್ಲ.
ಒಗಟಾಗಿ ಮಾತನಾಡುವ ಆಕಾಶ್
ಇತ್ತ ಮನೆಯ ಗಂಡಸರೆಲ್ಲಾ ಪೂಜೆಗೆ ರೆಡಿಯಾಗಿರುತ್ತಾರೆ. ಬಿಳಿ ಪಂಜೆ, ಶರ್ಟ್ ಧರಿಸಿ ಬಂದ ಆಕಾಶ್ ಬಳಿ ಆತನ ದೊಡ್ಡಪ್ಪ ʼಇದ್ಯಾಕೆ ಆಕಾಶ್ ಈ ಬಟ್ಟೆ ಧರಿಸಿದ್ದೀಯಾ, ನೀನು ಪೂಜೆಗೆಂದೇ ಇಷ್ಟಪಟ್ಟು ಬಟ್ಟೆ ಖರೀದಿ ಮಾಡಿದ್ದೆ ಅಲ್ವಾ, ಅದನ್ಯಾಕೆ ಹಾಕಿಲ್ಲʼ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಆಕಾಶ್ ʼನಾವು ಇಷ್ಟಪಟ್ಟಿದೆಲ್ಲಾ ನಮಗೆ ಸಿಗೊಲ್ವಾಲ್ಲ, ಇಷ್ಟಪಟ್ಟಿದೆಲ್ಲಾ ಸಿಗೋಕೆ ಅದೃಷ್ಟ ಮಾಡಿರಬೇಕು. ನಮ್ಮ ಹಣೆಬರಹದಲ್ಲಿ ಏನಿದ್ಯೋ ಅದೇ ಸಿಗೋದುʼ ಅಂತ ಒಗಟಾಗಿ ಮಾತನಾಡುತ್ತಾನೆ. ಇದರಿಂದ ಗೊಂದಲಕ್ಕೆ ಒಳಗಾದ ಆ ಮನೆಯ ಗಂಡಸರು ʼಇದ್ಯಾಕೆ ಹೀಗೆ ಮಾತನಾಡ್ತಾ ಇದೀಯ, ನೀನು ಇಷ್ಟಪಟ್ಟಿದ್ದು ಏನು ಸಿಕ್ಕಿಲ್ಲ?ʼ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸುವ ಮಾವ ಸತ್ಯಮೂರ್ತಿ ಅವನು ಮದುವೆ ಬಗ್ಗೆ ಮಾತನಾಡುತ್ತಿದ್ದಾನೆ ಅನ್ನಿಸುತ್ತಿದೆ ಎಂದು ಆಕಾಶ್ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿಯಲು ನೋಡುತ್ತಾರೆ. ಆಗ ಅಲ್ಲಿದ್ದವರು ಅವನು ಮಾತನಾಡುತ್ತಿರುವುದು ಶರ್ಟ್ ಬಗ್ಗೆ ನೀನು ಏನೇನೋ ಹೇಳಲು ಹೋಗ್ಬೇಡ ಎಂದು ಸತ್ಯಮೂರ್ತಿಯ ಬಾಯಿ ಮುಚ್ಚಿಸುತ್ತಾರೆ.
ಪುಷ್ಪಾಳಿಗೆ ಮಧುಮಗಳ ಅಲಂಕಾರ
ಪೂಜೆಗೆಂದು ನೀಲಿ ಸೀರೆಯುಟ್ಟು ಸರಳವಾಗಿ ಅಲಂಕರಿಸಿಕೊಂಡಿದ್ದ ಪುಷ್ಪಾಳನ್ನು ನೋಡಿದ ಅತ್ತಿಗೆ ಹಾಗೂ ಅತ್ತೆಯಂದಿರು ʼಇದೇನೆ ಪುಷ್ಪಾ ಹೀಗೆ ರೆಡಿಯಾಗಿದ್ದೀಯಾ, ಅದು ಇಷ್ಟು ಸರಳವಾಗಿʼ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸುವ ಪುಷ್ಪಾ ಸೀರೆ ಚೆನ್ನಾಗಿಲ್ವಾ ಎಂದು ಎಂದಿನ ತನ್ನ ಮುಗ್ಧ ಧ್ವನಿಯಲ್ಲೇ ಕೇಳುತ್ತಾಳೆ. ಆಗ ಅವರೆಲ್ಲರೂ ಸೇರಿ ʼನಾವು ನಿನ್ನನ್ನು ರೆಡಿ ಮಾಡ್ತೇವೆʼ ಎಂದು ಕರೆದುಕೊಂಡು ಹೋಗಿ ಬೇರೆ ಸೀರೆ, ಆಭರಣ ಎಲ್ಲಾ ತೊಡಿಸಿ ಮಧುಮಗಳಂತೆ ಸಿಂಗಾರ ಮಾಡುತ್ತಾರೆ. ಅಲ್ಲದೆ ʼನೀನು ಈ ಮನೆಯ ಮಹಾಲಕ್ಷ್ಮೀʼ ಎಂದು ಹಾಡಿ ಕೊಂಡಾಡುತ್ತಾರೆ.
ಪೂಜೆ ಆರಂಭ
ಈ ಎಲ್ಲದರ ನಡುವೆ ಬೃಂದಾವನದಲ್ಲಿ ಪೂಜೆ ಆರಂಭವಾಗುತ್ತದೆ. ದೇವರ ಮುಂದೆ ಇರಿಸಿರುವ ದೀಪಕ್ಕೆ ಪುಷ್ಪಾಳ ಬಳಿಯೇ ದೀಪ ಬೆಳಗಿಸಲು ಹೇಳುತ್ತಾರೆ ಮನೆ ಮಂದಿ. ನಂತರ ಪೂಜೆಗೆ ಯಾರು ಕುಳಿತುಕೊಳ್ಳುವುದು ಎಂಬ ವಿಚಾರ ಬಂದಾಗ ಪುಷ್ಪಾ ಆಕಾಶ್ ಕುಳಿತುಕೊಳ್ಳುತ್ತಾರೆ ಅಂತ ಸುಧಾಮೂರ್ತಿ ಹೇಳುತ್ತಾರೆ. ಇತ್ತ ಪುಷ್ಪಾ ಜೊತೆ ಪೂಜೆಗೆ ಕುಳಿತುಕೊಳ್ಳಲು ಇಷ್ಟವಿಲ್ಲದ ಆಕಾಶ್ ಪೂಜೆ ಮಾಡುವಾಗ ಪುಷ್ಪಾ ಕೈಯಿಂದ ಕಲಶ ಬೀಳುವಂತೆ ಮಾಡಬೇಕು ಎಂದುಕೊಳ್ಳುತ್ತಾನೆ. ಅದೇ ಯೋಚನೆಯಲ್ಲಿ ಮುಳುಗಿರುವ ಆಕಾಶ್‌ಗೆ ಮನೆಯವರು ಪೂಜೆಗೆ ಕೂರುವಂತೆ ಒತ್ತಾಯಿಸುತ್ತಾರೆ. ಆದರೆ ಪೂಜೆ ಕುಳಿತುಕೊಳ್ಳಲು ಆಕಾಶ್ ಹಿಂದೇಟು ಹಾಕುತ್ತಾನೆ. ಆಗ ಮನೆಯವರೆಲ್ಲರೂ ಸೇರಿ ಆಕಾಶ್‌ಗೆ ತಮಾಷೆ ಮಾಡುತ್ತಾರೆ. ಹೆಂಡತಿ ಕರೆದರೆ ಮಾತ್ರ ಅವನು ಪೂಜೆಗೆ ಕುಳಿತುಕೊಳ್ಳುವುದು ಅನ್ನಿಸುತ್ತದೆ. ನಾವೆಲ್ಲಾ ಹೇಳಿದರೆ ಕೇಳುವುದಿಲ್ಲ ಅಂತೆಲ್ಲಾ ರೇಗಿಸುತ್ತಿರುತ್ತಾರೆ. ಇತ್ತ ಆಕಾಶ್ ಮನದಲ್ಲೇ ʼಪುಷ್ಪಾ ನಿಮ್ಮನ್ನು ನಾನು ಹೆಂಡತಿಯಂತ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನೀವು 2 ಕೋಟಿ ಪಡೆದು ನನ್ನನ್ನು ಮದುವೆಯಾಗಿದ್ದೀರಿʼ ಅಂತೆಲ್ಲಾ ಯೋಚಿಸುತ್ತಿರುತ್ತಾನೆ.
ಶಿವಪೂಜೆಯ ಕರಡಿಯಂತೆ ಎಂಟ್ರಿ ಕೊಡಲಿದ್ದಾಳೆ ಗಿರಿಜಾ
ಇತ್ತ ಮೈಸೂರಿಗೆ ಬಂದಿರುವ ಗಿರಿಜಾ ಬೃಂದಾವನದತ್ತ ಹೊರಟಿದ್ದಾಳೆ. ದಾರಿಯಲ್ಲಿ ಸಿಕ್ಕ ಸಿಕ್ಕ ಗಾಡಿಯನ್ನು ಅಡ್ಡ ಹಾಕಿದ್ರೂ ನಿಲ್ಲಿಸದ ಕಾರಣ ನಡೆದುಕೊಂಡೇ ಹೊರಟಿರುತ್ತಾಳೆ. ಅಲ್ಲದೇ ಹೀಗೆ ದಾರಿಯಲ್ಲಿ ಬರುವಾಗ ಸಿಕ್ಕ ದೇವರ ಗುಡಿಯ ಮುಂದೆ ನಿಂತು ನಾನು ಪುಷ್ಪಾ ಮನೆಯಲ್ಲಿ ಹೋಗಿ ಹಣ ಕೇಳುತ್ತೇನೆ. ನನಗೆ ಸಿಕ್ಕ ಹಣದಲ್ಲಿ ನಿನ್ನ ಹುಂಡಿಗೂ ಹಾಕುತ್ತೇನೆ ಅಂತೆಲ್ಲಾ ಬೇಡಿಕೊಳ್ಳುತ್ತಿರುತ್ತಾಳೆ. ಮೊದಲೇ ಮದುವೆಗೆ ಹಣ ಪಡೆದಿದ್ದಾರೆ ಎಂಬ ಸಿಟ್ಟಿನಲ್ಲಿರುವ ಆಕಾಶ್, ಇದೀಗ ಗಿರಿಜಾ ಪುಷ್ಪಾಳ ಬಳಿ ಬಂದು ಹಣ ಕೇಳುವುದನ್ನು ನೋಡಿದ್ರೆ ಏನಾಗ್ಬಹುದು, ಪುಷ್ಪಾ-ಆಕಾಶ್ ಜೀವನದ ಹಾಳು ಮಾಡಲೆಂದೇ ಬರುತ್ತಿದ್ದಾಳಾ ಗಿರಿಜಾ, ಗಿರಿಜಾ ಅಂದುಕೊಂಡಿದ್ದು ನಡೆಯುತ್ತಾ, ಪುಷ್ಪಾ ಆಕಾಶ್ ಜೊತೆಯಾಗಿ ಪೂಜೆ ಮಾಡ್ತಾರಾ ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಯನ್ನು ಕಾದು ನೋಡಿ.