logo
ಕನ್ನಡ ಸುದ್ದಿ  /  ಮನರಂಜನೆ  /  ಬೃಂದಾವನ ಸೀರಿಯಲ್‌: ಪುಷ್ಪಾಳ ಬಳಿ ಅತ್ತಿಗೆಯ ಮೊಸಳೆ ಕಣ್ಣೀರು; ಆಕಾಶ್‌ ಪ್ರಶ್ನೆಗಳಿಂದ ತಬ್ಬಿಬ್ಬಾದ ಗಿರಿಜಾ ಸತ್ಯ ಒಪ್ಕೋತಾಳ

ಬೃಂದಾವನ ಸೀರಿಯಲ್‌: ಪುಷ್ಪಾಳ ಬಳಿ ಅತ್ತಿಗೆಯ ಮೊಸಳೆ ಕಣ್ಣೀರು; ಆಕಾಶ್‌ ಪ್ರಶ್ನೆಗಳಿಂದ ತಬ್ಬಿಬ್ಬಾದ ಗಿರಿಜಾ ಸತ್ಯ ಒಪ್ಕೋತಾಳ

Reshma HT Kannada

Feb 14, 2024 09:00 AM IST

google News

ಬೃಂದಾವನ ಸೀರಿಯಲ್‌: ಪುಷ್ಪಾಳ ಬಳಿ ಅತ್ತಿಗೆಯ ಮೊಸಳೆ ಕಣ್ಣೀರು; ಆಕಾಶ್‌ ಪ್ರಶ್ನೆಗಳಿಂದ ತಬ್ಬಿಬ್ಬಾದ ಗಿರಿಜಾ ಸತ್ಯ ಒಪ್ಕೋತಾಳ

    • Brindavana Kannada Serial Today Episode Feb 13: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಗಿರಿಜಾ ಪುಷ್ಪಾಳ ಬಳಿ ಮನೆಯ ಕಷ್ಟಗಳನ್ನೆಲ್ಲಾ ಹೇಳಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಾಳೆ. ಇತ್ತ ಕಡೆ ವಧುದಕ್ಷಿಣೆ ವಿಚಾರವಾಗಿ ಗಿರಿಜಾಳನ್ನು ನೇರವಾಗಿ ಪ್ರಶ್ನಿಸುತ್ತಾನೆ ಆಕಾಶ್‌.
ಬೃಂದಾವನ ಸೀರಿಯಲ್‌: ಪುಷ್ಪಾಳ ಬಳಿ ಅತ್ತಿಗೆಯ ಮೊಸಳೆ ಕಣ್ಣೀರು; ಆಕಾಶ್‌ ಪ್ರಶ್ನೆಗಳಿಂದ ತಬ್ಬಿಬ್ಬಾದ ಗಿರಿಜಾ ಸತ್ಯ ಒಪ್ಕೋತಾಳ
ಬೃಂದಾವನ ಸೀರಿಯಲ್‌: ಪುಷ್ಪಾಳ ಬಳಿ ಅತ್ತಿಗೆಯ ಮೊಸಳೆ ಕಣ್ಣೀರು; ಆಕಾಶ್‌ ಪ್ರಶ್ನೆಗಳಿಂದ ತಬ್ಬಿಬ್ಬಾದ ಗಿರಿಜಾ ಸತ್ಯ ಒಪ್ಕೋತಾಳ

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.12) ಸಂಚಿಕೆಯಲ್ಲಿ ಬೃಂದಾವನದಲ್ಲಿ ಪೂಜೆ ಮುಗಿದು, ಬಂದವರಿಗೆ ಊಟ ಬಡಿಸುವ ಗಡಿಬಿಡಿಯಲ್ಲಿ ಪುಷ್ಪಾಳಿದ್ದರೆ, ಆಕೆಯನ್ನು ಕೋಣೆಗೆ ಎಳೆದು ಬಾಗಿಲು ಹಾಕಿಕೊಳ್ಳುವ ಗಿರಿಜಾ ತನ್ನ ನಾಟಕ ಶುರು ಮಾಡಿಕೊಳ್ಳುತ್ತಾಳೆ. ಮೊದಲು ಪುಷ್ಪಾ ಧರಿಸಿರುವ ಒಡವೆಗಳ ಬಗ್ಗೆ ಕೇಳುವ ಆಕೆ, ನಂತರ ತನ್ನ ಮನೆಯಲ್ಲಿ ಹೊತ್ತಿನ ಊಟಕ್ಕೂ ಗತಿಯಿಲ್ಲ ಎಂದೆಲ್ಲಾ ಕಣ್ಣೀರು ಸುರಿಸುತ್ತಾಳೆ. ಒಂದು ಹೊತ್ತಿನ ಊಟವಿದ್ದರೆ, ಇನ್ನೊಂದು ಹೊತ್ತು ಉಪವಾಸ ಮಲಗಬೇಕು ಎಂದೆಲ್ಲಾ ಹೇಳಿ ಪುಷ್ಪಾಳ ಮನ ಕರಗುವಂತೆ ಮಾಡುತ್ತಾಳೆ. ಜೊತೆಗೆ ಬರುವಾಗ ಪೇಟೆಯಿಂದ ಕದ್ದು ತಂದ ಸೀಬೆ ಹಣ್ಣುಗಳನ್ನು ನೀಡಿ ʼನಿಮ್ಮ ಅಣ್ಣ ಇದನ್ನು ನಿನಗೆಂದು ಕೊಟ್ಟಿದ್ದಾರೆʼ ಎಂದು ಸುಳ್ಳು ಹೇಳಿ ಪುಷ್ಪಾ ಬಳಿ ಸಿಕ್ಕಿ ಹಾಕಿಕೊಳ್ಳುತ್ತಾಳೆ. ʼಏನು ಇದನ್ನು ಅಣ್ಣಾ ಕೊಟ್ಟಿದ್ದಾ, ಆದ್ರೆ ಅಣ್ಣಂಗೆ ನೀವು ಇಲ್ಲಿಗೆ ಬರೋದು ಗೊತ್ತೆ ಇರ್ಲಿಲ್ಲಾ ಅಂತ ಹೇಳಿದ್ರಿʼ ಅಂತ ಪುಷ್ಪಾ ಮರು ಪ್ರಶ್ನಿಸಿದಾಗ ಸಾವರಿಸಿಕೊಂಡ ಗಿರಿಜಾ ʼನಾನೇ ನಿನಗೊಸ್ಕರ ತಂದೆʼ ಎಂದು ಒಂದು ಸುಳ್ಳನ್ನು ಇನ್ನೊಂದು ಸುಳ್ಳಿನಿಂದ ಮುಚ್ಚಿ ಹಾಕುತ್ತಾಳೆ. ತನ್ನ ಕಷ್ಟಗಳನ್ನೆಲ್ಲಾ ಪುಷ್ಪಾ ಮುಂದೆ ಹೇಳಿ ದುಡ್ಡು ಕೀಳುವ ಯೋಚನೆ ಮಾಡಿಕೊಂಡೇ ಬಂದ ಗಿರಿಜಾ ನಾಟಕದ ಮೇಲೆ ನಾಟಕ ಮಾಡುತ್ತಲೇ ಹೋಗುತ್ತಾಳೆ.

ಆಕಾಶ್‌ ಮನಸ್ಸು ಸರಿಯಲ್ಲ ಅನ್ನೋದ್ಯಾರಿಗೆ

ಇತ್ತ ಪುಷ್ಪಾಳ ಅಕ್ಕ, ಆಕಾಶ್‌ ಬಳಿ ʼನೀನ್ಯಾಕೆ ಪೂಜೆಗೆ ಕುಳಿತುಕೊಂಡಿಲ್ಲ, ನೀನು ಪುಷ್ಪಾ ಪೂಜೆಗೆ ಕುಳಿತುಕೊಳ್ಳೋದು ಅಂತ ಮೊದ್ಲೇ ಫಿಕ್ಸ್‌ ಆಗಿತ್ತು ಅಲ್ವಾ, ಕೊನೆ ಕ್ಷಣದಲ್ಲಿ ನೀನ್ಯಾಕೆ ನಿರ್ಧಾರ ಬದಲಿಸಿದ್ದುʼ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಉತ್ತರಿಸುವ ಆಕಾಶ್‌ ʼಅಜ್ಜಿ-ತಾತ ಕೂತು ಪೂಜೆ ಮಾಡಿದ್ರೆ ಎಲ್ರಿಗೂ ಶ್ರೇಯಸ್ಸು, ಅವರು ಮನೆಯ ಹಿರಿಯರು ಅದಕ್ಕೆ ಅವರಿಗೆ ಹೇಳಿದೆʼ ಅಂತಾನೆ. ಅದಕ್ಕೆ ಆಕಾಶ್‌ ಅಕ್ಕ ʼಅವರು ಈಗಾಗಲೇ ತುಂಬಾ ಸಲ ಪೂಜೆ ಮಾಡಿದಾರೆ, ನೀವು ಹೊಸತಾಗಿ ಮದುವೆ ಆದವ್ರು, ನಿನಗೆ ಬೇಡ ಅಂದ್ರು ಪುಷ್ಪಾಗೆ ಆಸೆ ಇರುತ್ತೆ ಅಲ್ವಾ, ಅವಳ ಮನಸ್ಸಿಗೆ ಯಾಕೆ ಬೇಜಾರ್‌ ಮಾಡ್ತೀಯಾ, ಒಳ್ಳೆ ಮನಸ್ಸಿರೋ ಹುಡುಗಿ ಅವ್ಳು ಅಂತಾರೆʼ. ಅಕ್ಕನ ಮಾತಿಗೆ ಕೋಪಗೊಳ್ಳುವ ಆಕಾಶ್‌ ನಾಟಕ ಮನಸ್ಸು ಯಾರಿಗೂ ಅರ್ಥ ಆಗೊಲ್ಲ. ಮನಸ್ಸು ಸರಿ ಇದ್ರೆ ಎಲ್ಲಾ ಸರಿʼ ಅಂತೆಲ್ಲಾ ಕೋಪದಲ್ಲಿ ಅಂದು ಬಿಡುತ್ತಾನೆ. ತಕ್ಷಣಕ್ಕೆ ಸಾವರಿಸಿಕೊಳ್ಳುವ ಆಕಾಶ್‌ ಅಕ್ಕನ ಮಾತನ್ನು ತೇಲಿಸಿ, ಬೇರೆ ಮಾತನಾಡುವಂತೆ ಮಾಡಿ ಅಲ್ಲಿಂದ ಹೊರಟು ಹೋಗುತ್ತಾನೆ. ಆದರೆ ಆಕಾಶ್‌ ಆಡಿದ ಮಾತು ಮಾತ್ರ ಅಕ್ಕನ ತಲೆಯಲ್ಲಿ ಕೊರೆಯುತ್ತಿರುತ್ತದೆ.

ಗಿರಿಜಾಳನ್ನು ನೇರವಾಗಿ ಪ್ರಶ್ನಿಸುವ ಆಕಾಶ್‌

ಇತ್ತ ಮನೆಯಲ್ಲಿ ಮಳ್ಳಿಯಂತೆ ವರ್ತಿಸುವ ಗಿರಿಜಾ ಪುಷ್ಪಾಳ ಗಂಡನ ಮನೆಯ ವೈಭೋಗವನ್ನು ಗೆಳತಿ ಲಲಿತಾಗೆ ತಿಳಿಸುವ ಉದ್ದೇಶದಿಂದ ಅವಳಿಗೆ ಕರೆ ಮಾಡುತ್ತಾಳೆ. ಮನೆಯ ಅಂದ-ಚೆಂದವನ್ನು ಲಲಿತಾಳ ಬಳಿ ಹಾಡಿ ಹೊಗಳುತ್ತಿರುವಾಗ ಆಕಾಶ್‌ ಗಿರಿಜಾಳೆದುರು ಒಂದು ನಿಲ್ಲುತ್ತಾನೆ. ಆಕಾಶ್‌ ದಿಟ್ಟಿಸಿ ನೋಡುವ ನೋಟಕ್ಕೆ ಬೆದರಿದ ಗಿರಿಜಾ ʼಇವನ್ಯಾಕೆ ನನ್ನನ್ನು ಹೀಗೆ ನೋಡುತ್ತಿದ್ದಾನೆʼ ಎಂದುಕೊಳ್ಳುತ್ತಾ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿರುತ್ತಾಳೆ. ಆಗ ಆಕೆಯ ಬಳಿ ನೇರವಾಗಿ ವಧುದಕ್ಷಿಣೆ ಬಗ್ಗೆ ಕೇಳುವ ಆಕಾಶ್‌ ʼಮನೆಯಲ್ಲಿ ಎಲ್ರೂ ಆರಾಮ, ಎಷ್ಟು ಎಕರೆ ಹೊಲ ಗದ್ದೆ ತಗೊಂಡ್ರಿ?, ಹೊಸ ಮನೆ ಕಟ್ಟಿಸ್ತಾ ಇರ್ಬೇಕು ಅಲ್ವಾʼ ಎಂದು ಕೇಳುತ್ತಾನೆ. ವಿಷ್ಯಾ ತಿಳಿದ್ರೂ ತಿಳಿಯದಂತೆ ವರ್ತಿಸುವ ಗಿರಿಜಾ ʼಏನ್‌ ಆಕಾಶಪ್ಪ ಹೀಗೆ ಕೇಳ್ತಾ ಇದೀರಾ, ನಮ್‌ ಮನೇಲಿ ಒಂದ್‌ ಹೊತ್ತಿನ ಊಟಕ್ಕೂ ಪರದಾಡ್ತಾ ಇದೀವಿ, ನೀವು ನೋಡಿದ್ರೆ ಹೀಗ್‌ ಹೇಳ್ತಾ ಇದೀರಾʼ ಅಂತ ಅಮಾಯಕಳಂತೆ ಪ್ರಶ್ನಿಸುತ್ತಾಳೆ. ಅದರಿಂದ ಇನ್ನಷ್ಟು ಕೆರಳುವ ಆಕಾಶ್‌ ನಿಮ್ಮ ನಾಟಕ ಎಲ್ಲ ನಂಗೆ ಗೊತ್ತಿದೆ. ಸುಮ್ಮನೆ ಡ್ರಾಮಾ ಮಾಡ್ಬೇಡಿ, ನಮ್‌ ದುಡ್ಡು ನೀವ್‌ ತಗೊಂಡ್‌ ಇರೋದು ಗೊತ್ತುʼ ಅಂತಾನೆ. ಪುಷ್ಪಾಳಿಂದ ದುಡ್ಡು ವಸೂಲಿಗೆ ಬಂದ ಗಿರಿಜಾ ಆಕಾಶ್‌ ಬಳಿ ಸರಿಯಾಗಿ ತಗ್ಲಾಕೊಂಡಿದಾಳೆ, ಇನ್ನಾದ್ರೂ ಆಕಾಶ್‌ಗೆ ಸತ್ಯ ತಿಳಿಯುತ್ತಾ, ಗಿರಿಜಾ ಏನ್‌ ಹೇಳಿ ತಪ್ಪಿಸಿಕೊಳ್ತಾಳೆ, ದುಡ್‌ ತಗೊಂಡಿದ್ದು ಸತ್ಯ ಅಂತ ಒಪ್‌ಕೊಳ್ತಾಳಾ? ನಾಳಿನ ಸಂಚಿಕೆಯಲ್ಲಿ ನೋಡೋಣ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ