Kannada Serial TRP: ಟಿಆರ್‌ಪಿಯಲ್ಲಿ ಪುಟಿದೆದ್ದ ಪುಟ್ಟಕ್ಕನ ಮಕ್ಕಳು, ಮುನ್ನಡೆ ಸಾಧಿಸಿದ ಲಕ್ಷ್ಮೀಯರು; ಈ ವಾರದ ಟಾಪ್ 10 ಸೀರಿಯಲ್‌ಗಳಿವು
Sep 13, 2024 12:59 PM IST
ಈ ವಾರದ ಟಿಆರ್‌ಪಿಯಲ್ಲಿ ಯಾವ ಸೀರಿಯಲ್‌ಗಳು ಟಾಪ್ 10ರಲ್ಲಿವೆ? ಇಲ್ಲಿದೆ ನೋಡಿ ವಿವರ
- Kannada Serial TRP September 2024: ಲಕ್ಷ್ಮೀ ನಿವಾಸ, ಲಕ್ಷ್ಮೀ ಬಾರಮ್ಮ ಸೀರಿಯಲ್‌ಗಳು ಟಿಆರ್‌ಪಿಯಲ್ಲಿ ಮುಂದಡಿ ಇರಿಸಿವೆ. ಅದೇ ರೀತಿ ಕನ್ನಡದಲ್ಲಿ ಈ ವಾರ ಯಾವೆಲ್ಲ ಧಾರಾವಾಹಿಗಳ ಟಿಆರ್‌ಪಿ ಏರಿಕೆ ಕಂಡಿದೆ, ಟಾಪ್ 10ರಲ್ಲಿ ಇರುವ ಸೀರಿಯಲ್‌ಗಳಾವವು ಇಲ್ಲಿದೆ ಮಾಹಿತಿ.
Kannada Serial TRP september 2024: ಕನ್ನಡದ ಕಿರುತೆರೆಯಲ್ಲಿ ಧಾರಾವಾಹಿಗಳ ನಡುವೆ ದೊಡ್ಡ ಮಟ್ಟದ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಟಿಆರ್‌ಪಿ ವಿಚಾರದಲ್ಲಿ ಶತಾಯ ಗತಾಯ ಮುನ್ನಡೆ ಸಾಧಿಸಬೇಕು ಎಂದು ಪಣ ತೊಟ್ಟಂತಿವೆ. ಅದರಂತೆ, ಈ ವಾರ ಯಾವೆಲ್ಲ ಸೀರಿಯಲ್‌ಗಳು, ಎಷ್ಟೆಷ್ಟು ಟಿಆರ್‌ಪಿ ಪಡೆದುಕೊಂಡಿವೆ, ಟಾಪ್ 10 ಕನ್ನಡ ಸೀರಿಯಲ್‌ಗಳು ಯಾವವು? ಎಂಬುದನ್ನು ನೋಡೋಣ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್ ಈ ವಾರವೂ ಮುನ್ನಡೆ ಸಾಧಿಸಿದೆ. ಟಿಆರ್‌ಪಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಈ ವಾರದ ಕನ್ನಡ ಸೀರಿಯಲ್ ಸಾಲಿನಲ್ಲಿ ಮೊದಲಿಗಿದೆ. ಅಂದಹಾಗೆ ಈ ಸೀರಿಯಲ್ 8.1 ಟಿಆರ್‌ಪಿ ಪಡೆದಿದೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಜೀ ಕನ್ನಡದ ಮತ್ತೊಂದು ಸೀರಿಯಲ್ ಶ್ರಾವಣಿ ಸುಬ್ರಮಣ್ಯ. ಈ ಸೀರಿಯಲ್, ಸಹ ನೋಡುಗರನ್ನು ಸೆಳೆಯುತ್ತಿದೆ. ವಾರದಿಂದ ವಾರಕ್ಕೆ ವೀಕ್ಷಕ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಸೀರಿಯಲ್, ಈ ವಾರ 7.7 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಗಟ್ಟಿ ಕಥೆ ಮತ್ತು ರೋಚಕ ಟ್ವಿಸ್ಟ್‌ಗಳ ಮೂಲಕ ನೋಡುಗರನ್ನು ಸೆಳೆದಿದೆ. ಆ ಹಿನ್ನೆಲೆಯಲ್ಲಿ ಈ ವಾರ ಈ ಧಾರಾವಾಹಿ ಟಾಪ್ ಐದರಲ್ಲಿ ಸ್ಥಾನ ಪಡೆದು, 7.6 ಟಿಆರ್‌ಪಿ ಸಾಧಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ.
ಅಮೃತಧಾರೆ ಧಾರಾವಾಹಿ
ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವನ ಕಳ್ಳಾಟ ಮುಂದುವರಿದಿದೆ. ಅಪೇಕ್ಷಾ ಬದಲಾಗಿದ್ದಾಳೆ. ಒಟ್ಟಿನಲ್ಲಿ ಧಾರಾವಾಹಿ ವೀಕ್ಷಕರನ್ನು ಅಮೃತಧಾರೆ ಹಿಡಿದಿಟ್ಟುಕೊಳ್ಳುತ್ತಿದೆ. ಈ ವಾರ ಈ ಸೀರಿಯಲ್ 7.5 ಟಿಆರ್‌ಪಿ ಪಡೆದು ಮುಂದಡಿ ಇರಿಸಿ ನಾಲ್ಕನೇ ಸ್ಥಾನದಲ್ಲಿದೆ.
ಅಣ್ಣಯ್ಯ ಧಾರಾವಾಹಿ
ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ಶುರುವಾದ ಅಣ್ಣಯ್ಯ ಸೀರಿಯಲ್, ನೋಡುಗರ ಪ್ರೀತಿ ಸಂಪಾದಿಸುತ್ತಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಸ್ಲಾಟ್ ಪಡೆದ ಈ ಸೀರಿಯಲ್ 7.3 ಟಿಆರ್‌ಪಿ ಪಡೆದುಕೊಂಡು, ಐದನೇ ಸ್ಥಾನದಲ್ಲಿದೆ.
ರಾಮಾಚಾರಿ ಧಾರಾವಾಹಿ
ಕಲರ್ಸ್ ಕನ್ನಡದ ರಾಮಾಚಾರಿ ಸೀರಿಯಲ್‌ನಲ್ಲಿಯೂ ಇದೀಗ ಒಂದಾದ ಮೇಲೋಂದು ಟ್ವಿಸ್ಟ್ ಎದುರಾಗುತ್ತಿವೆ. ಇದೀಗ ವಾರದ ಟಿಆರ್‌ಪಿ ಪಟ್ಟಿ ಹೊರಬಿದ್ದಿದ್ದು, ಕಳೆದ ವಾರ ಟಾಪ್ ಇದ್ದ ಈ ಸೀರಿಯಲ್ ಈ ವಾರ 7.3 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ.
ಸೀತಾರಾಮ ಧಾರಾವಾಹಿ
ಅದೇ ರೀತಿ ಜೀ ಕನ್ನಡದ ಸೀತಾರಾಮ ಸೀರಿಯಲ್ ಸಹ ನೋಡುಗರ ಗಮನ ಸೆಳೆಯುತ್ತಿದೆ. ಸಿಹಿಯ ಜನ್ಮ ರಹಸ್ಯದ ಹಿಂದೆ ಕಥೆ ಸಾಗುತ್ತಿದ್ದು, ಸೀತಾಳನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಸೀರಿಯಲ್ ಈ ವಾರ 7.2 ಟಿಆರ್‌ಪಿ ಪಡೆದುಕೊಂಡು, ಏಳನೇ ಸ್ಥಾನದಲ್ಲಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ
ಟಿಆರ್‌ಪಿಯಲ್ಲಿ ಕಳೆದ ಎರಡು ವರ್ಷಗಳಿಂದ ಮೊದಲ ಸ್ಥಾನದಲ್ಲಿ ಇರುತ್ತಿದ್ದ ಪುಟ್ಟಕ್ಕನ ಮಕ್ಕಳು ಈ ವಾರ ಕೊಂಚ ಚೇತರಿಕೆ ಕಂಡಿದೆ. ಕಳೆದ ಎರಡು ವಾರ 6ಕ್ಕಿಂತ ಕಡಿಮೆ ಇದ್ದ ಟಿಆರ್‌ಪಿ ಈ ವಾರ 7.1 ಪಡೆದು ಎಂಟನೇ ಸ್ಥಾನದಲ್ಲಿದೆ.
ಭಾಗ್ಯಲಕ್ಷ್ಮೀ, ನಿನಗಾಗಿ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಮತ್ತು ನಿನಗಾಗಿ ಸೀರಿಯಲ್ ಸಹ ನೋಡುಗರನ್ನು ಸೆಳೆದಿವೆ. ಈ ಎರಡೂ ಸೀರಿಯಲ್‌ಗಳು ಸಮವಾಗಿ 6.5 ಟಿಆರ್‌ಪಿ ಪಡೆಯುವ ಮೂಲಕ ಒಂಭತ್ತನೇ ಸ್ಥಾನದಲ್ಲಿವೆ.
ಕರಿಮಣಿ ಧಾರಾವಾಹಿ
ಕಲರ್ಸ್ ಕನ್ನಡದ ಕರಿಮಣಿ ಸೀರಿಯಲ್ ಈ ವಾರ 5.9 ಟಿಆರ್‌ಪಿ ಪಡೆಯುವ ಮೂಲಕ 10ನೇ ಸ್ಥಾನದಲ್ಲಿದೆ.