logo
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ನಂ 1 ಸ್ಥಾನಕ್ಕೆ ಸೀರಿಯಲ್‌ಗಳ ಸೆಣಸಾಟ; ಟಿಆರ್‌ಪಿಯಲ್ಲಿ ಈ ವಾರ ಯಾವ ಧಾರಾವಾಹಿಗೆ ಸಿಕ್ತು ಮೇಲುಗೈ?

Kannada Serial TRP: ನಂ 1 ಸ್ಥಾನಕ್ಕೆ ಸೀರಿಯಲ್‌ಗಳ ಸೆಣಸಾಟ; ಟಿಆರ್‌ಪಿಯಲ್ಲಿ ಈ ವಾರ ಯಾವ ಧಾರಾವಾಹಿಗೆ ಸಿಕ್ತು ಮೇಲುಗೈ?

Aug 02, 2024 05:49 PM IST

google News

Kannada Serial TRP: ನಂ 1 ಸ್ಥಾನಕ್ಕೆ ಸೀರಿಯಲ್‌ಗಳ ಸೆಣಸಾಟ; ಟಿಆರ್‌ಪಿಯಲ್ಲಿ ಈ ವಾರ ಯಾವ ಧಾರಾವಾಹಿಗೆ ಸಿಕ್ತು ಮೇಲುಗೈ?

    • ಕನ್ನಡ ಕಿರುತೆರೆಯಲ್ಲಿ ಟಿಆರ್‌ಪಿ ವಿಚಾರದಲ್ಲಿ ಹಳೇ ಸೀರಿಯಲ್‌ಗಳೇ ಮುಂದಿವೆ. ಹೊಸಬರೂ ಪೈಪೋಟಿ ನೀಡುತ್ತಿದ್ದಾರೆ. ಇದೀಗ 30ನೇ ವಾರದ ಟಿಆರ್‌ಪಿ ಹೊರಬಿದ್ದಿದೆ. ಮೊದಲ ಸ್ಥಾನದಲ್ಲಿ ಯಾರಿದ್ದಾರೆ? ಇಲ್ಲಿದೆ ನೋಡಿ ವಿವರ. 
Kannada Serial TRP: ನಂ 1 ಸ್ಥಾನಕ್ಕೆ ಸೀರಿಯಲ್‌ಗಳ ಸೆಣಸಾಟ; ಟಿಆರ್‌ಪಿಯಲ್ಲಿ ಈ ವಾರ ಯಾವ ಧಾರಾವಾಹಿಗೆ ಸಿಕ್ತು ಮೇಲುಗೈ?
Kannada Serial TRP: ನಂ 1 ಸ್ಥಾನಕ್ಕೆ ಸೀರಿಯಲ್‌ಗಳ ಸೆಣಸಾಟ; ಟಿಆರ್‌ಪಿಯಲ್ಲಿ ಈ ವಾರ ಯಾವ ಧಾರಾವಾಹಿಗೆ ಸಿಕ್ತು ಮೇಲುಗೈ?

Kannada Serial TRP: ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ವಿಚಾರದಲ್ಲಿ ಪೈಪೋಟಿ ತೀವ್ರವಾಗುತ್ತಿದೆ. ಅದರಲ್ಲೂ ಹಳೇ ಸೀರಿಯಲ್‌ಗಳೇ  ಟಿಆರ್‌ಪಿಯಲ್ಲಿ ಮುಂದಿವೆ. ಹೊಸಬರೂ ಪೈಪೋಟಿ ನೀಡುತ್ತಿದ್ದಾರೆ. ಇದೀಗ 30ನೇ ವಾರದ ಟಿಆರ್‌ಪಿ ಹೊರಬಿದ್ದಿದೆ. ಆ ಪೈಕಿ ಯಾವೆಲ್ಲ ಸೀರಿಯಲ್‌ಗಳು ಮೊದಲ ಸ್ಥಾನದಲ್ಲಿವೆ? ಇಲ್ಲಿ ನೋಡೋಣ.

ಪುಟ್ಟಕ್ಕನ ಮಕ್ಕಳು

ಹಿರಿಯ ನಟಿ ಉಮಾಶ್ರೀ ಮತ್ತು ಮಂಜು ಭಾಷಿಣಿ ಮುಖ್ಯಭೂಮಿಕೆಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಬಂಗಾರಮ್ಮನ ಬದಲು ಸಿಂಗಾರಮ್ಮನ ವರಸೆ ಜೋರಾಗಿದೆ. ಈ ಕಾರಣದಿಂದಲೂ ನೋಡುಗನ ಗಮನ ಸೆಳೆದಿದೆ ಪುಟ್ಟಕ್ಕನ ಮಕ್ಕಳು. ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರಿದೆ.

ಲಕ್ಷ್ಮೀ ನಿವಾಸ

ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಪ್ರತಿಸ್ಪರ್ಧಿ ಎಂದರೆ ಅದು ಲಕ್ಷ್ಮೀ ನಿವಾಸ ಮಾತ್ರ ಅನ್ನೋ ಮಾತಿದೆ. ಪೈಪೋಟಿ ಅಂದಾಕ್ಷಣ ಈ ಎರಡು ಸೀರಿಯಲ್‌ಗಳೇ ತೀವ್ರ ಪ್ರತಿಸ್ಪರ್ಧಿಗಳು. ಅದರಂತೆ ಕಳೆದ ವಾರ ಪುಟ್ಟಕ್ಕನ ಜತೆಗೆ ಮೊದಲ ಸ್ಥಾನದಲ್ಲಿದ್ದ ಈ ಧಾರಾವಾಹಿ ಇದೀಗ ಎರಡನೇ ಸ್ಥಾನದಲ್ಲಿದೆ.

ಶ್ರಾವಣಿ ಸುಬ್ರಮಣ್ಯ

ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ವೀಕ್ಷಕರನ್ನು ಸಂಪಾದಿಸುತ್ತಿದೆ. ಅದರಂತೆ ಈ ವಾರ ಈ ಸೀರಿಯಲ್‌ ಮೂರಲೇ ಸ್ಥಾನದಲ್ಲಿದೆ. ಕಳೆದ ವಾರ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿತ್ತು.

ಸೀತಾ ರಾಮ

ಸೀತಾ ರಾಮ ಸೀರಿಯಲ್‌ನಲ್ಲೀಗ ದೇಸಾಯಿ ಮನೆಯಲ್ಲಿ ಭಾರ್ಗವಿ ಜತೆಗೆ ವಿಶ್ವನೂ ರಾಮನ ಕುಟುಂಬದ ವಿರುದ್ಧ ರೊಚ್ಚಿಗೆದ್ದಿದ್ದಾನೆ. ಮತ್ತೊಂದು ಕಡೆ ಸೀತಾ ಮತ್ತು ರಾಮನಿಂದ ಸಿಹಿಯನ್ನು ದೂರ ಮಾಡಲು ಪ್ಲಾನ್‌ ಮಾಡುತ್ತಿದ್ದಾಳೆ ಭಾರ್ಗವಿ. ಹೀಗೆ ಸಾಗುತ್ತಿರುವ ಈ ಸೀರಿಯಲ್‌ ಈ ವಾರ ನಾಲ್ಕನೇ ಸ್ಥಾನದಲ್ಲಿದೆ.

ಲಕ್ಷ್ಮೀ ಬಾರಮ್ಮ

ಕಲರ್ಸ್‌ ಕನ್ನಡದ ಮತ್ತೊಂದು ಧಾರಾವಾಹಿ ಲಕ್ಷ್ಮೀ ಬಾರಮ್ಮ ಈ ವಾರ 5.7 ರೇಟಿಂಗ್‌ ಪಡೆದು ಐದನೇ ಸ್ಥಾನದಲ್ಲಿದೆ. ಇದಾದ ಮೇಲೆ ಭಾಗ್ಯಲಕ್ಷ್ಮೀ ಆರನೇ ಸ್ಥಾನದಲ್ಲಿದೆ.

ಭಾಗ್ಯಲಕ್ಷ್ಮೀ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸಹ ನೋಡುಗರರಿಗೆ ಅಚ್ಚರಿಗಳ ಗುಚ್ಛವನ್ನೇ ಉಣಬಡಿಸುತ್ತಿದೆ. ಅತ್ತೆ ಸೊಸೆ ಜಂಟಿಯಾಗಿ ತಾಂಡವ್‌ ವಿರುದ್ಧ ಸೆಣಸುವ ಕಥೆ ಈ ಸೀರಿಯಲ್‌ನದ್ದು. ಈ ಧಾರಾವಾಹಿ ಈ ವಾರ ಆರನೇ ಸ್ಥಾನದಲ್ಲಿದೆ.

ರಾಮಾಚಾರಿ: ಕಲರ್ಸ್‌ ಕನ್ನಡದ ರಾಮಾಚಾರಿ ಸೀರಿಯಲ್‌ ಟಿಆರ್‌ಪಿಯಲ್ಲಿ ಏಳನೇ ಸ್ಥಾನದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ