logo
ಕನ್ನಡ ಸುದ್ದಿ  /  ಮನರಂಜನೆ  /  Bbk 10: ನನ್ನ ಆಸೆ ಈಡೇರ್ಸು ಮಗನೇ.. ಕೈಲಿ ಬುತ್ತಿಗಂಟು ಹಿಡಿದು ಬಿಗ್‌ಬಾಸ್‌ ಮನೆಗೆ ಬಂದ ವರ್ತೂರು ಸಂತೋಷ್‌ ತಾಯಿ!

BBK 10: ನನ್ನ ಆಸೆ ಈಡೇರ್ಸು ಮಗನೇ.. ಕೈಲಿ ಬುತ್ತಿಗಂಟು ಹಿಡಿದು ಬಿಗ್‌ಬಾಸ್‌ ಮನೆಗೆ ಬಂದ ವರ್ತೂರು ಸಂತೋಷ್‌ ತಾಯಿ!

Nov 13, 2023 02:36 PM IST

google News

BBK 10: ನನ್ನ ಆಸೆ ಈಡೇರ್ಸು ಮಗನೇ.. ಕೈಲಿ ಬುತ್ತಿಗಂಟು ಹಿಡಿದು ಬಿಗ್‌ ಬಾಸ್‌ ಮನೆಗೆ ಬಂದ ವರ್ತೂರು ಸಂತೋಷ್‌ ತಾಯಿ!

    • ನಾನು ಹೊರಹೋಗಲೇಬೇಕು ಎಂದು ಹಟ ಹಿಡಿದು ಕೂತಿದ್ದ ವರ್ತೂರು ಸಂತೋಷ್‌ಗೆ ಮನವೊಲಿಸಲು ಅವರ ತಾಯಿಯೇ ಬರಬೇಕಾಯಿತು. ಹಾಗಾದರೆ ಅಮ್ಮನ ಮಾತನ್ನಾದರೂ ಕೇಳುತ್ತಾನಾ ವರ್ತೂರು? ಇಂದಿನ ಏಪಿಸೋಡ್‌ನಲ್ಲಿ ಇದಕ್ಕೆ ಉತ್ತರ ಸಿಗಲಿದೆ. 
BBK 10: ನನ್ನ ಆಸೆ ಈಡೇರ್ಸು ಮಗನೇ.. ಕೈಲಿ ಬುತ್ತಿಗಂಟು ಹಿಡಿದು ಬಿಗ್‌ ಬಾಸ್‌ ಮನೆಗೆ ಬಂದ ವರ್ತೂರು ಸಂತೋಷ್‌ ತಾಯಿ!
BBK 10: ನನ್ನ ಆಸೆ ಈಡೇರ್ಸು ಮಗನೇ.. ಕೈಲಿ ಬುತ್ತಿಗಂಟು ಹಿಡಿದು ಬಿಗ್‌ ಬಾಸ್‌ ಮನೆಗೆ ಬಂದ ವರ್ತೂರು ಸಂತೋಷ್‌ ತಾಯಿ!

BBK 10: ಬಿಗ್‌ಬಾಸ್‌ ಮನೆಯಲ್ಲಿ ಕಳೆದ ಎರಡು ದಿನಗಳಿಂದ ಹೈಡ್ರಾಮಾ ನಡೆಯುತ್ತಿದೆ. ವೀಕ್ಷಕ ಮೆಚ್ಚಿ ಲಕ್ಷಾಂತರ ವೋಟ್‌ ಪಡೆದು ನಾಮಿನೇಷನ್‌ನಿಂದ ಪಾರಾದರೂ, ನಾನು ಮನೆಗೆ ಹೋಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ ವರ್ತೂರು ಸಂತೋಷ್‌. ಇಡೀ ಬಿಗ್‌ ಮನೆ ಮಂದಿ ಸೇರಿ ಅವರನ್ನು ಮನವೊಲಿಸಲು ಯತ್ನಿಸಿದರೂ, ಅದು ಸಾಧ್ಯವಾಗಿರಲಿಲ್ಲ. ಭಾಗ್ಯಲಕ್ಷೀ ಧಾರಾವಾಹಿಯ ಭಾಗ್ಯಾ ಬಂದರೂ ವರ್ತೂರು ಮನ ಕರಗಲಿಲ್ಲ. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಸಂತೋಷ್‌ ಅವರ ತಾಯಿಯೇ ಬಿಗ್‌ಬಾಸ್‌ ಮನೆಗೆ ಆಗಮಿಸಿದ್ದಾರೆ.

ಹೌದು. ದೀಪಾವಳಿ ಪ್ರಯುಕ್ತ ಬಿಗ್‌ಬಾಸ್ ಮನೆಯವರಿಗೆಲ್ಲ ಒಂದು ಭಾವುಕ ಸರ್ಪೈಸ್ ನೀಡಿದ್ದಾರೆ. ಮನೆಮಂದಿಗೆಲ್ಲರಿಗೂ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸನ್ನು ತರಿಸಿ ಕೊಡಲಾಗಿದೆ. ಬಾಕ್ಸ್‌ನಲ್ಲಿ ಬಂದ ತಮ್ಮಿಷ್ಟದ ತಿನಿಸನ್ನು ಮಾಡಿ ಕಳಿಸಿದ ಕುಟುಂಬದವರನ್ನು ನೆನಪಿಸಿಕೊಂಡು ಸ್ಪರ್ಧಿಗಳೆಲ್ಲ ಭಾವುಕರಾಗಿದ್ದಾರೆ. ಎಲ್ಲರ ಮನೆಯಿಂದ ತಿಂಡಿ ಬಂದರೂ ಒಬ್ಬ ಸ್ಪರ್ಧಿಯ ಮನೆಯಿಂದ ಮಾತ್ರ ಬಾಕ್ಸ್ ಬಂದಿರಲಿಲ್ಲ. ಅದು ವರ್ತೂರ್ ಸಂತೋಷ್ ಮನೆಯಿಂದ. ಇದನ್ನು ನೋಡಿ ವರ್ತೂರ್ ಅವರು ದುಃಖದಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಆಗಲೇ ಇಡೀ ಮನೆಯವರೆಲ್ಲರೂ ದಂಗಾಗಿಬಿಡುವ ಆ ಘಟನೆ ನಡೆಯಿತು. ಈ ಘಟನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ. ತೆರೆದ ಬಿಗ್‌ಬಾಸ್ ಮನೆಯ ಬಾಗಿಲಿಂದ ವರ್ತೂರ್ ಸಂತೋಷ್ ಅವರ ಅಮ್ಮನೇ ಬುತ್ತಿ ಹಿಡಿದು ನಡೆದುಕೊಂಡು ಬರುತ್ತಿದ್ದರು! ಅವರ ಬಾಯಿಂದ ‘ಕಂದಾ’ ಅಂದಾಗಲಂತೂ ಸ್ಪರ್ಧಿಗಳೆಲ್ಲರಿಗೂ ತಮ್ಮ ಅಮ್ಮನೇ ಕರೆದ ಅನುಭವ.

ವರ್ತೂರ್ ಸಂತೋಷ್‌ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ನಿನ್ನೆಯಿಂದಲೂ ಹೇಳುತ್ತಿದ್ದಾರೆ. ನಿರ್ಧಾರವನ್ನು ಅವರಿಗೇ ಬಿಟ್ಟು ಕಿಚ್ಚ ಸುದೀಪ್‌, ವೀಕೆಂಡ್‌ ಎಪಿಸೋಡ್ ಮುಗಿಸಿದ್ದಾರೆ. ಇಂದು ಅವರನ್ನು ಮನೆಯವರೆಲ್ಲ ಕನ್ವಿನ್ಸ್ ಮಾಡುತ್ತಿದ್ದಾರೆ ಕೂಡ. ಜೊತೆಗೆ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯ ನಟಿ ಸುಷ್ಮಾ ಕೆ. ರಾವ್ ಕೂಡ ಬಂದು ವರ್ತೂರ್ ಅವರ ಜೊತೆಗೆ ಮಾತನಾಡಿ ಹೋಗಿದ್ದಾರೆ. ಆದರೆ ವರ್ತೂರ್ ಅವರ ನಿರ್ಧಾರ ಏನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

ಈ ನಡುವೆಯೇ ಅವರ ಅಮ್ಮನೇ ಬಿಗ್‌ಬಾಸ್ ಮನೆಯೊಳಗೆ ಬಂದಿರುವುದು ಕುತೂಹಲ ಹೆಚ್ಚಿಸಿದೆ. ಜೊತೆಗೆ ಅವರು, ‘ನನ್ನ ಆಸೆ ನೆರವೇರಿಸ್ತಾನೆ ನನ್ ಮಗ. ನಾನು ಇದೊಂದು ರಿಕ್ವೆಸ್ಟ್ ಮಾಡ್ಕೊಳ್ತಿದ್ದೀನಿ ನನ್ ಮಗನಲ್ಲಿ’ ಎಂದು ನಡುಗುವ ಧ್ವನಿಯಲ್ಲಿ ಹೇಳಿರುವುದೂ ಪ್ರೋಮೊದಲ್ಲಿ ಸೆರೆಯಾಗಿದೆ. ವರ್ತೂರ್ ಅವರ ಅಮ್ಮ, ಮಗನಲ್ಲಿ ಮಾಡಿಕೊಂಡ ವಿನಂತಿ ಏನು? ಅದನ್ನು ನೇರವೇರಿಸುವುದಕ್ಕೆ ವರ್ತೂರ್ ಸಿದ್ಧರಾಗ್ತಾರಾ? ಈ ಎಲ್ಲದಕ್ಕೂ ಇಂದಿನ ಏಪಿಸೋಡ್‌ನಲ್ಲಿ ಉತ್ತರ ಸಿಗಲಿದೆ. ಬಿಗ್‌ಬಾಸ್‌ ಲೈವ್‌ಗೆ ಜೀಯೋ ಸಿನಿಮಾ ವೀಕ್ಷಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ