logo
ಕನ್ನಡ ಸುದ್ದಿ  /  ಮನರಂಜನೆ  /  ಪುಟ್ಟಕ್ಕನ ಮಕ್ಕಳು ಅಂತ್ಯ!? ಹೊಸ ಸೀರಿಯಲ್‌ ಅಣ್ಣಯ್ಯನಿಗೆ ಸ್ಲಾಟ್‌ ಬಿಟ್ಟು ಕೊಟ್ಟ ಕನ್ನಡದ ನಂ 1 ಧಾರಾವಾಹಿ

ಪುಟ್ಟಕ್ಕನ ಮಕ್ಕಳು ಅಂತ್ಯ!? ಹೊಸ ಸೀರಿಯಲ್‌ ಅಣ್ಣಯ್ಯನಿಗೆ ಸ್ಲಾಟ್‌ ಬಿಟ್ಟು ಕೊಟ್ಟ ಕನ್ನಡದ ನಂ 1 ಧಾರಾವಾಹಿ

Aug 01, 2024 03:59 PM IST

google News

ಪುಟ್ಟಕ್ಕನ ಮಕ್ಕಳು ಅಂತ್ಯ!? ಹೊಸ ಸೀರಿಯಲ್‌ ಅಣ್ಣಯ್ಯನಿಗೆ ಸ್ಲಾಟ್‌ ಬಿಟ್ಟು ಕೊಟ್ಟ ಕನ್ನಡದ ನಂ 1 ಧಾರಾವಾಹಿ

    • ಜೀ ಕನ್ನಡದಲ್ಲಿ ಹೊಸ ಸೀರಿಯಲ್‌ ಅಣ್ಣಯ್ಯ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ಈ ವರೆಗೂ ಪ್ರೋಮೋಗಳಿಂದಲೇ ಕುತೂಹಲ ಮೂಡಿಸಿದ್ದ ಈ ಧಾರಾವಾಹಿ ಎರಡೇ ವಾರದಿಂದ ಪ್ರಸಾರ ಆರಂಭಿಸಲಿದೆ. 
ಪುಟ್ಟಕ್ಕನ ಮಕ್ಕಳು ಅಂತ್ಯ!? ಹೊಸ ಸೀರಿಯಲ್‌ ಅಣ್ಣಯ್ಯನಿಗೆ ಸ್ಲಾಟ್‌ ಬಿಟ್ಟು ಕೊಟ್ಟ ಕನ್ನಡದ ನಂ 1 ಧಾರಾವಾಹಿ
ಪುಟ್ಟಕ್ಕನ ಮಕ್ಕಳು ಅಂತ್ಯ!? ಹೊಸ ಸೀರಿಯಲ್‌ ಅಣ್ಣಯ್ಯನಿಗೆ ಸ್ಲಾಟ್‌ ಬಿಟ್ಟು ಕೊಟ್ಟ ಕನ್ನಡದ ನಂ 1 ಧಾರಾವಾಹಿ (Zee5)

Annayya Serial: ಜೀ ಕನ್ನಡದಲ್ಲಿ ಬ್ಯಾಕ್‌ ಟು ಬ್ಯಾಕ್‌ ಎರಡು ಹೊಸ ಸೀರಿಯಲ್‌ಗಳ ಪ್ರೋಮೋಗಳು ನೋಡುಗರ ಗಮನ ಸೆಳೆದಿದ್ದವು. ಹೊಸ ಧಾರಾವಾಹಿಗಳ ಪ್ರೋಮೋ ಹರಿದಾಡ್ತಿದೆ ಅಂದರೆ, ಈಗಾಗಲೇ ಪ್ರಸಾರ ಕಾಣ್ತಿರುವ ಯಾವುದಾದರೊಂದು ಸೀರಿಯಲ್‌ ಕೊನೆಯಾಗ್ತಿದೆ ಅಂತಾನೇ ಅರ್ಥ. ಅದರಂತೆ ಇದೀಗ ಹಾಗೇ ಪ್ರೋಮೋ ಮೂಲಕವೇ ಕುತೂಹಲ ಮೂಡಿಸಿದ್ದ, ಅದ್ಯಾವಾಗ ಈ ಸೀರಿಯಲ್‌ ಶುರು ಎಂದು ಕಾದು ಕುಳಿತಿದ್ದವರಿಗೆ ಕೊನೆಗೂ ಉತ್ತರ ಕೊಟ್ಟಿದೆ ಜೀ ಕನ್ನಡ ವಾಹಿನಿ. ಅಣ್ಣಯ್ಯ ಧಾರಾವಾಹಿಯ ಆರಂಭಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ.

ಏನಿದು ಕಥೆ?

ಬಹುತಾರಾಗಣದ ಮತ್ತು ತಂಗಿಯರ ಪ್ರೀತಿಯ ಅಣ್ಣನ ಕಥೆ ಹೇಳಲು ಅಣ್ಣಯ್ಯ ಸೀರಿಯಲ್‌ ಪ್ರಸಾರ ಆರಂಭಿಸಲಿದೆ. ನಾಲ್ವರು ತಂಗಿಯರ ಮುದ್ದಿನ ಅಣ್ಣ ಶಿವ. ತಂಗಿಯರ ಪಾಲಿಗೆ ಅವನೇ ಶ್ರೀರಕ್ಷೆ. ತನ್ನ ತಂಗಿಯರ ಮೇಲೆ ಕೆಟ್ಟವರ ಕಣ್ಣೂ ಬೀಳದಂತೆ ಅವರ ಜತೆ ನಿಂತ ಶಿವನ ಕಥೆಯಿದು. ಈ ಶಿವನಿಗೆ ಪಾರ್ವತಿಯೂ ಇರಬೇಕಲ್ಲವೇ? ಇದೀಗ ಆ ಪಾರ್ವತಿ ಯಾರು ಎಂಬ ಕುತೂಹಲಕ್ಕೂ ತೆರೆಬಿದ್ದಿದ್ದು, ಆ ಪಾರ್ವತಿಯ ಪಾತ್ರ ಹೇಗಿರಲಿದೆ? ಅಣ್ಣಯ್ಯನಿಗೂ ಪಾರ್ವತಿಗೂ ಇರುವ ಸಂಬಂಧ ಎಂಥದ್ದು ಎಂಬುದನ್ನು ಹೊಸ ಪ್ರೋಮೋ ಮೂಲಕ ಅನಾವರಣ ಮಾಡಲಾಗಿದೆ. ಪ್ರಸಾರ ದಿನವನ್ನೂ ನಿಗದಿ ಮಾಡಿದೆ.

ಗಟ್ಟಿಮೇಳ ನಿಶಾ ಕಂಬ್ಯಾಕ್‌

ಕಳೆದ ವರ್ಷವೇ ಗಟ್ಟಿಮೇಳ ಸೀರಿಯಲ್‌ ಮುಕ್ತಾಯವಾಗಿತ್ತು. ಆ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ನಿಶಾ ರವಿಕೃಷ್ಣನ್‌ ಇದೀಗ ಅಣ್ಣಯ್ಯ ಸೀರಿಯಲ್‌ ಮೂಲಕ ಆಗಮಿಸುತ್ತಿದ್ದಾರೆ. ಕಿರುತೆರೆಯಲ್ಲಿ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿರುವ ನಿಶಾ, ಪಾರ್ವತಿಯ ಪಾತ್ರದಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಅಂತ್ಯ?

ಸದ್ಯ ಟಿಆರ್‌ಪಿಯಲ್ಲಿ ಕನ್ನಡದ ನಂಬರ್‌ 1 ಧಾರಾವಾಹಿ ಎಂದರೆ ಅದು ಪುಟ್ಟಕ್ಕನ ಮಕ್ಕಳು. ಉಮಾಶ್ರೀ, ಮಂಜು ಭಾಷಿಣಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಸೀರಿಯಲ್‌ ಕಳೆದ ಎರಡೂವರೆ ವರ್ಷದಿಂದ ಮೊದಲ ಸ್ಥಾನದಲ್ಲಿಯೇ ಗಟ್ಟಿಯಾಗಿ ನಿಂತಿದೆ. ಆಗೊಮ್ಮೆ ಈಗೊಮ್ಮೆ ಮಾತ್ರ ಚೂರು ಅಲುಗಾಡಿದರೂ, ಬಹುಪಾಲು ಮೊದಲ ಸ್ಥಾನದಲ್ಲಿ ಕಂಡಿದ್ದೇ ಹೆಚ್ಚು. ಈ ಸೀರಿಯಲ್‌ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ. ಆದರೆ, ಇದೀಗ ಅದೇ 7:30ರ ಸ್ಲಾಟ್‌ಗೆ ಹೊಸದಾಗಿ ಶುರುವಾಗಲಿರುವ ಅಣ್ಣಯ್ಯ ಸೀರಿಯಲ್‌ ಆಗಸ್ಟ್‌ 12ರಿಂದ ಎಂಟ್ರಿಕೊಡಲಿದೆ. ಹಾಗಾದರೆ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಮುಗಿಯುತ್ತಾ?

ಒಂದು ಸೀರಿಯಲ್‌ ಅನ್ನು ಮುಕ್ತಾಯಗೊಳಿಸಿಯೇ ಇನ್ನೊಂದು ಹೊಸ ಧಾರಾವಾಹಿಯ ಪ್ರಸಾರ ಆರಂಭಿಸುವುದು ಸದ್ಯ ನಡೆದುಕೊಂಡು ಬಂದ ವಾಡಿಕೆ. ಇತ್ತೀಚೆಗೆ ಬಂದಿದ್ದ ಬ್ರಹ್ಮಗಂಟು ಸೀರಿಯಲ್‌ ಅನ್ನು ರಾತ್ರಿ 10ಕ್ಕೆ ಶಿಫ್ಟ್‌ ಮಾಡಿ, ಆ ಸ್ಲಾಟ್‌ನಲ್ಲಿದ್ದ ಭೂಮಿಗೆ ಬಂದ ಭಗವಂತ ಸೀರಿಯಲ್‌ಅನ್ನು ವಾರಾಂತ್ಯದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದೀಗ ಅಣ್ಣಯ್ಯನಿಂದಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮುಗಿಯುತ್ತಾ? ಈ ಬಗ್ಗೆ ವಾಹಿನಿ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

ಹೀಗೂ ಆಗಬಹುದು?

ಟಿಆರ್‌ಪಿಯಲ್ಲಿ ಭರ್ಜರಿ ಊಟಕ್ಕಿಳಿದಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಅಂತ್ಯ ಮಾಡುವ ಸಾಧ್ಯತೆ ಕಡಿಮೆ. ಅದರ ಬದಲು, ಈಗಾಗಲೇ ರಾತ್ರಿ 8ಗಂಟೆಯಿಂದ 9ರ ವರೆಗೆ ಪ್ರಸಾರ ಕಂಡು ವೀಕ್ಷಣೆ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿರುವ ಲಕ್ಷ್ಮೀ ನಿವಾಸವನ್ನು ಅರ್ಧಗಂಟೆಗೆ ಇಳಿಸುವ ಸಾಧ್ಯತೆ ಇದೆ. ಆಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ 8ಕ್ಕೆ ಅಥವಾ 8:30ಕ್ಕೆ ಪ್ರಸಾರವಾಗಬಹುದು. ಇನ್ನೇನು ಶೀಘ್ರದಲ್ಲಿಯೂ ಆ ಬಗ್ಗೆಯೂ ವಾಹಿನಿ ಖಚಿತಪಡಿಸಬೇಕಿದೆ.

ಕರಣ್ ಅನಂತ್ ನಿರ್ದೇಶನದ ಅಣ್ಣಯ್ಯ ಸೀರಿಯಲ್‌ಗೆ ಸ್ಕಂದ ಅವರ ಛಾಯಾಗ್ರಹಣವಿದೆ. ನಿತಿನ್ ಕೃಷ್ಣಮೂರ್ತಿ ಅವರ ಪರಿಕಲ್ಪನೆ, ಸುನಾದ್ ಗೌತಮ್ ಅವರ ಸಂಗೀತ, ಹಾಡಿಗೆ ಚೇತನ್ ಸೊಲಗಿ ಸಾಹಿತ್ಯ ಬರೆದಿದ್ದಾರೆ. ರಜತ್ ಹೆಗಡೆ ಶೀರ್ಷಿಕೆ ಗೀತೆಗೆ ಧ್ವನಿಯಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ