logo
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಮನೆಯವರಿಗಾಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ ಶ್ರೀವಲ್ಲಿ; ಶ್ರಾವಣಿಗೆ ಅಪ್ಪನ ಪ್ರೀತಿ ಸಿಗುವ ಸೂಚನೆ; ಶ್ರಾವಣಿ ಸುಬ್ರಹ್ಮಣ್ಯ

ಸುಬ್ಬು ಮನೆಯವರಿಗಾಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ ಶ್ರೀವಲ್ಲಿ; ಶ್ರಾವಣಿಗೆ ಅಪ್ಪನ ಪ್ರೀತಿ ಸಿಗುವ ಸೂಚನೆ; ಶ್ರಾವಣಿ ಸುಬ್ರಹ್ಮಣ್ಯ

Reshma HT Kannada

Jul 24, 2024 11:11 AM IST

google News

ಸುಬ್ಬು ಮನೆಯವರಿಗಾಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ ಶ್ರೀವಲ್ಲಿ; ಶ್ರಾವಣಿಗೆ ಅಪ್ಪನ ಪ್ರೀತಿ ಸಿಗುವ ಸೂಚನೆ; ಶ್ರಾವಣಿ ಸುಬ್ರಹ್ಮಣ್ಯ

    • Shravani Subramanya Kannada Serial Today Episode July 24th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಸುಬ್ಬು ಮನೆಯವರಿಗಾಗಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟ ಶ್ರೀವಲ್ಲಿ. ತನ್ನ ಮಕ್ಕಳ ವಿಚಾರಕ್ಕೆ ಬರ್ಬೇಡಿ ಎಂದು ಖಡಕ್‌ ವಾರ್ನಿಂಗ್‌ ಕೊಟ್ರು ಇಂದ್ರಮ್ಮ.
ಸುಬ್ಬು ಮನೆಯವರಿಗಾಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ ಶ್ರೀವಲ್ಲಿ; ಶ್ರಾವಣಿಗೆ ಅಪ್ಪನ ಪ್ರೀತಿ ಸಿಗುವ ಸೂಚನೆ; ಶ್ರಾವಣಿ ಸುಬ್ರಹ್ಮಣ್ಯ
ಸುಬ್ಬು ಮನೆಯವರಿಗಾಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ ಶ್ರೀವಲ್ಲಿ; ಶ್ರಾವಣಿಗೆ ಅಪ್ಪನ ಪ್ರೀತಿ ಸಿಗುವ ಸೂಚನೆ; ಶ್ರಾವಣಿ ಸುಬ್ರಹ್ಮಣ್ಯ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 23ರ) ಸಂಚಿಕೆಯಲ್ಲಿ ಶ್ರೀವಲ್ಲಿಯನ್ನು ಚಿಕ್ಕಮ್ಮ, ಪಿಂಕಿ ಇರುವ ಕಡೆ ಕರೆದುಕೊಂಡು ಬರುವ ಶ್ರಾವಣಿ ಅವಳನ್ನು ಅವರಿಗೆ ಪರಿಚಯ ಮಾಡಿಸುತ್ತಾಳೆ. ಶ್ರೀವಲ್ಲಿ ಸುಬ್ಬು ಪಕ್ಕದ ಮನೆಯವಳು, ಆದರೆ ಇವಳಿಗೆ ಕೆಲಸ ಕೊಟ್ಟಿದ್ದು ನಮ್ಮ ವಿಜಯಾ ಅತ್ತೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ವಂದನಾ ಗೊಂದಕ್ಕೆ ಒಳಗಾಗುತ್ತಾಳೆ. ಏನೋ ಮಿಸ್‌ ಹೊಡಿತಾ ಇದೆ ಎಂದು ವಂದನಾಗೆ ಅನ್ನಿಸಲು ಶುರುವಾಗುತ್ತದೆ. ಅಷ್ಟೊತ್ತಿಗೆ ಅಕ್ಕನಿಂದ ಪದೇ ಪದೇ ಫೋನ್‌ ಬರುವ ಕಾರಣ ಗಡಿಬಿಡಿಯಲ್ಲಿ ಮನೆಗೆ ಹೊರಡುತ್ತಾನೆ ಸುಬ್ಬು. ಅವನ ಜೊತೆಗೆ ಶ್ರೀವಲ್ಲಿಯನ್ನೂ ಕಳುಹಿಸುತ್ತಾಳೆ ಶ್ರಾವಣಿ. ಅವರಿಬ್ಬರೂ ಬೈಕ್‌ನಲ್ಲಿ ಹೋಗುವುದು ನೋಡಿ ಶ್ರಾವಣಿಗೆ ಬೇಸರ ಆವರಿಸುತ್ತದೆ.

ಸುಬ್ಬು ಮನೆ ಉಳಿಸಲು ತನ್ನ ಕೈ ಕುಯ್ದುಕೊಂಡ ಶ್ರೀವಲ್ಲಿ

ವರಲಕ್ಷ್ಮೀ ಮಗನ ಸಹವಾಸ ಮಾಡಿದ ತಪ್ಪಿಗೆ ಸುಬ್ಬು ಮನೆಯವರನ್ನ ಹೊರ ಹಾಕುವ ನಿರ್ಧಾರಕ್ಕೆ ಬಂದಿರುತ್ತಾರೆ ಇಂದ್ರಮ್ಮ. ಶ್ರಾವಣಿ ಮನೆಯಿಂದ ಶ್ರೀವಲ್ಲಿ ಜೊತೆ ಬೈಕ್‌ನಲ್ಲಿ ಮನೆಗೆ ಬರುವ ಸುಬ್ಬುವನ್ನು ನೋಡಿ ಇಂದ್ರಮ್ಮ ಇನ್ನಷ್ಟು ಉರಿದು ಬೀಳುತ್ತಾರೆ. ಸುಬ್ಬು ಮನೆಯವರಿಗೆಲ್ಲಾ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆ ಹೊತ್ತಿಗೆ ಸುಬ್ಬು ವರ-ವರದನ ವಿಚಾರ ತನಗೆ ಮುಂಚೆ ಗೊತ್ತಿತ್ತು ಎಂದು ಹೇಳಿದ್ದೇ ತಡ ಇಂದ್ರಮ್ಮನ ಕೋಪದ ಮೇಲೆ ಬಿಸಿನೀರು ಬಿಟ್ಟಂತೆ ಆಗುತ್ತದೆ. ಇದ್ದಕ್ಕಿದ್ದಂತೆ ಇಂದ್ರಮ್ಮ ಉರಿದು ಬೀಳುತ್ತಾರೆ. ಮಾತ್ರವಲ್ಲ ಮನೆ ಬೀಗ ಹಾಕಿ ನೀವ್ಯಾರು, ಒಳಗಡೆ ಹೋಗುವಂತಿಲ್ಲ ಎಂದು ತಾಕೀತು ಮಾಡುತ್ತಾರೆ. ಯಾರೂ ಎಷ್ಟೇ ಕೇಳಿಕೊಂಡ್ರು ಆಕೆ ಒಗ್ಗುವುದಿಲ್ಲ. ಸ್ವಲ್ಪ ಹೊತ್ತು ಸುಮ್ಮನಿರುವ ಶ್ರೀವಲ್ಲಿ ಇದ್ದಕ್ಕಿದ್ದಂತೆ ರೋಷಗೊಳ್ಳುತ್ತಾಳೆ. ಅಮ್ಮನ ಬಳಿ ಮನೆ ಬೀಗ ತೆಗೆಯದಿದ್ದರೆ ತಾನು ಸಾಯುತ್ತೇನೆ ಎಂದು ಹೆದರಿಸುತ್ತಾಳೆ, ಅದಕ್ಕೆ ಇಂದ್ರಮ್ಮ ಜಗ್ಗದಿದ್ದಾಗ ತನ್ನ ಕೈ ಕುಯ್ದುಕೊಳ್ಳುತ್ತಾಳೆ. ತಕ್ಷಣಕ್ಕೆ ಇಂದ್ರಮ್ಮ, ವರದ, ಸುಬ್ಬು ಶ್ರೀವಲ್ಲಿಯನ್ನು ಕರೆದುಕೊಂಡು ಆಸ್ಪತ್ರೆ ಹೋಗುತ್ತಾರೆ. ಸಣ್ಣ ಗಾಯವಾಗಿರುವ ಕಾರಣ ಕೂಡಲೇ ಆಸ್ಪತ್ರೆಯಿಂದ ಅವಳನ್ನು ಡಿಸ್ಚಾರ್ಜ್‌ ಮಾಡುತ್ತಾರೆ. ಕೋಪದಲ್ಲೇ ಮನೆಗೆ ಬರುವ ಇಂದ್ರಮ್ಮ ಬೀಗವನ್ನು ಎಸೆದು ಇನ್ನು ಮುಂದೆ ನಿಮ್ಮ ಮಕ್ಕಳು ನಮ್ಮ ಮನೆ ಮಕ್ಕಳ ಸುದ್ದಿಗೆ ಬರಬಾರದು, ನನ್ನ ಮಗಳಿಗೋಸ್ಕರ ಇಂದು ನಿಮ್ಮನ್ನು ಬಿಡ್ತಾ ಇದೀನಿ ಎಂದು ಕೋಪದಲ್ಲಿ ಹೇಳಿ ಹೋಗುತ್ತಾಳೆ.

ಅಪ್ಪ-ಮಗಳನ್ನು ಇನ್ನಷ್ಟು ದೂರ ಮಾಡುವ ಪ್ಲಾನ್‌ನಲ್ಲಿ ವಿಜಯಾ

ಶ್ರೀವಲ್ಲಿ ಮುಂದಿಟ್ಟುಕೊಂಡು ಶ್ರಾವಣಿ ಹಾಗೂ ವೀರೇಂದ್ರ ಅವರನ್ನು ಇನ್ನಷ್ಟು ದೂರ ಮಾಡಲು ಯೋಚಿಸಿರುತ್ತಾಳೆ ವಿಜಯಾಂಬಿಕಾ. ಮದನ್‌ ಶ್ರೀವಲ್ಲಿಯನ್ನು ಯಾವ ಕಾರಣಕ್ಕೆ ಕೆಲಸಕ್ಕೆ ಸೇರಿಸಿಕೊಂಡೆ ಎಂದಾಗ ವಿಜಯಾಂಬಿಕಾ ತನ್ನ ಪ್ಲಾನ್‌ ಅನ್ನು ಮಗನಿಗೆ ವಿವರಿಸುತ್ತಾಳೆ. ಆದರೆ ದೇವರು ಇಚ್ಛಿಸಿದ್ದೇ ಬೇರೆ ಆಗಿರುತ್ತೆ. ಅಪ್ಪ-ಮಗಳು ಹತ್ತಿರವಾಗುವ ಸೂಚನೆಯನ್ನು ದೇವರೇ ನೀಡಿರುತ್ತಾರೆ.

ವರದ ಹಾಗೂ ಶ್ರೀವಲ್ಲಿ ಸುಬ್ಬು ಮನೆಯವರಿಂದ ದೂರವಾಗ್ತಾರಾ, ವಿಜಯಾಂಬಿಕಾ ಅಂದುಕೊಂಡಂತೆ ಶ್ರೀವಲ್ಲಿ ಕಾರಣದಿಂದ ವೀರೇಂದ್ರ ಶ್ರಾವಣಿ ಇನ್ನಷ್ಟು ದೂರಾಗ್ತಾರಾ, ತಂಗಿಗೆ ನೀಡಿದ ಭಾಷೆ ಮುರಿತಾನಾ ಸುಬ್ಬ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ