ಶ್ರಾವಣಿಗೆ ಸಿಕ್ತು ಅಪ್ಪನ ಆದರ, ಆರೈಕೆ; ಉರಿದು ಹೋದ್ಲು ವಿಜಯಾಂಬಿಕಾ, ಇಕ್ಕಟ್ಟಿನಲ್ಲಿ ವರಲಕ್ಷ್ಮೀ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Jul 25, 2024 09:39 AM IST
ಶ್ರಾವಣಿಗೆ ಸಿಕ್ತು ಅಪ್ಪನ ಆದರ, ಆರೈಕೆ; ಉರಿದು ಹೋದ್ಲು ವಿಜಯಾಂಬಿಕಾ, ಇಕ್ಕಟ್ಟಿನಲ್ಲಿ ವರಲಕ್ಷ್ಮೀ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
- Shravani Subramanya Kannada Serial Today Episode July 24th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್ನಲ್ಲಿ ಜ್ವರದಿಂದ ಬಳಲಿ, ತಲೆಸುತ್ತಿ ಬೀಳುವ ಮಗಳ ಆರೈಕೆ ಮಾಡುತ್ತಾರೆ ವೀರೇಂದ್ರ. ಶ್ರಾವಣಿ-ವೀರೇಂದ್ರ ನಡುವೆ ನಡೆದ ಘಟನೆ ಕೇಳಿ ವಿಜಯಾಂಬಿಕಾ ಶಾಕ್. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ವರದ-ವರಲಕ್ಷ್ಮಿ. ಮುಂದೇನು ಮಾಡ್ತಾನೆ ಸುಬ್ಬು?
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 24ರ) ಸಂಚಿಕೆಯಲ್ಲಿ ವತ್ರ ಮಾಡುವ ಶ್ರಾವಣಿ ಜ್ವರ ಸುಸ್ತಿನಿಂದ ಅಪ್ಪ ಎದುರ ತಲೆ ತಿರುಗಿ ಬೀಳುತ್ತಾಳೆ. ಮಗಳನ್ನು ಎಂದೂ ಮುಟ್ಟದ ವೀರೇಂದ್ರ ಸಹಾಯಕ್ಕಾಗಿ ತಮ್ಮಾ ಸುರೇಂದ್ರ ಅವರನ್ನು ಕರೆಯುತ್ತಾರೆ. ಆದರೆ ಶ್ರಾವಣಿ-ವೀರೇಂದ್ರ ಹತ್ತಿರವಾಗಲಿ ಎಂದುಕೊಂಡು ಶ್ರಾವಣಿ ಚಿಕ್ಕಪ್ಪ ಸುರೇಂದ್ರ ಶ್ರಾವಣಿಯ ಹತ್ತಿರಕ್ಕೆ ಬರುವುದಿಲ್ಲ. ಸುರೇಂದ್ರ ಮಲಗಿರಬಹುದು ಎಂದು ಭಾವಿಸಿ ವೀರೇಂದ್ರ ಬೇರೆ ದಾರಿ ಕಾಣದೇ ಶ್ರಾವಣಿಯನ್ನು ಎತ್ತಿಕೊಂಡು ಬಂದು ತಮ್ಮ ಕೋಣೆಯಲ್ಲಿ ಮಲಗಿಸುತ್ತಾರೆ. ಶ್ರಾವಣಿಗೆ ಜ್ವರ ಸುಡುತ್ತಿರುವುದು ಗಮನಿಸಿ ಡಾಕ್ಟರ್ಗೆ ಕಾಲ್ ಮಾಡುವ ವೀರೇಂದ್ರ ಡಾಕ್ಟರ್ ಸಲಹೆಯಂತೆ ಆರೈಕೆ ಮಾಡುತ್ತಾರೆ.
ವೀರು ಮಾತು ಕೇಳಿ ವಿಜಯಾಂಬಿಕಾ ಶಾಕ್
ಮರುದಿನ ಶ್ರಾವಣಿಗೆ ಕಾಣದೇ ಗಾಬರಿಯಲ್ಲಿ ಹುಡುಕಾಡುತ್ತಿರುವ ವಂದನಾಳನ್ನು ನೋಡಿ ವ್ಯಂಗ್ಯ ಮಾಡುತ್ತಾರೆ ವಿಜಯಾಂಬಿಕಾ ಮದನ್, ಅಷ್ಟೊತ್ತಿಗೆ ಅಲ್ಲಿಗೆ ಬರುವ ವೀರೇಂದ್ರ ವಂದನಾ ಗಾಬರಿಯಾಗಿರುವುದು ನೋಡಿ ಏನು ಎಂದು ಪ್ರಶ್ನೆ ಮಾಡುತ್ತಾರೆ. ಶ್ರಾವಣಿ ಕಾಣುತ್ತಿಲ್ಲ ಎಂದು ವಂದನಾ ಹೇಳಿದಾಗ ʼಗಾಬರಿಯಾಗಬೇಡ, ಅವಳು ನನ್ನ ಕೋಣೆಯಲ್ಲಿ ಇದ್ದಾಳೆʼ ಎಂದು ಹೇಳಿ ಎಲ್ಲರಿಗೂ ಶಾಕ್ ನೀಡುತ್ತಾರೆ. ವೀರೇಂದ್ರ ಮಾತು ಕೇಳಿ ವಿಜಯಾಂಬಿಕಾ ಗರಬಡಿದವಳಂತೆ ನಿಲ್ಲುತ್ತಾಳೆ. ಮಾತ್ರವಲ್ಲ ʼಆ ಶ್ರಾವಣಿಗೆ ಇತ್ತೀಚೆಗೆ ಬಾಳ ಹೆಚ್ಚಿಕೊಂಡಿದ್ದಾಳೆ, ನಿನ್ನ ಎದುರು ನಿಲ್ಲಲ್ಲು ಭಯ ಪಡುತ್ತಿದ್ದವಳು, ನಿನ್ನ ರೂಮ್ಗೆ ಹೋಗಿ ಮಗಲಿದ್ದಾಳಾ. ಅವಳಿಗೆ ನಾನು ಬುದ್ಧಿ ಹೇಳ್ತೀನಿʼ ಎಂದು ರೂಮ್ನತ್ತ ಹೊರಡುತ್ತಾಳೆ. ಅಷ್ಟೊತ್ತಿಗೆ ವೀರೇಂದ್ರ ʼಅವಳನ್ನು ರೂಮ್ನಲ್ಲಿ ಮಲಗಿಸಿದ್ದೇ ನಾನುʼ ಎಂದು ಹೇಳಿ ವಿಜಯಾಂಬಿಕಾ ಮಾತೇ ಆಡದಂತೆ ಮಾಡಿ ಬಿಡುತ್ತಾರೆ. ಅಲ್ಲದೇ ರಾತ್ರಿ ನಡೆದ ಘಟನೆಯನ್ನು ವಿವರಿಸುತ್ತಾರೆ. ರಾತ್ರಿಯೆಲ್ಲಾ ತಾನು ಶ್ರಾವಣಿ ಆರೈಕೆ ಮಾಡಿದ್ದನ್ನೂ ಹೇಳುತ್ತಾರೆ. ಇದನ್ನೆಲ್ಲಾ ಕೇಳಿ ವಿಜಯಾಂಬಿಕಾ ಕೋಪದಲ್ಲಿ ನಡುಗಿದ್ರೆ ವಂದನಾ, ಪಿಂಕಿ ಹಾಗೂ ಸುರೇಂದ್ರ ಸಂಭ್ರಮಿಸುತ್ತಾರೆ.
ಅಣ್ಣನ ಪ್ರೀತಿಗೆ ಸಾಥ್ ಕೊಡ್ತೀನಿ ಎಂದ ಶ್ರೀವಲ್ಲಿ
ಮನೆಯಲ್ಲಿ ಶ್ರೀವಲ್ಲಿ ಹಾಗೂ ವರದನಿಗೆ ತಂದೆ-ತಾಯಿ ಕ್ಲಾಸ್ ತಗೊಂಡ್ರೆ ಶ್ರೀವಲ್ಲಿ ಪ್ರೀತಿ ಮಾಡೋದು ತಪ್ಪೇ ಅಲ್ಲಾ ಎಂದು ವಾದ ಮಾಡುತ್ತಾಳೆ. ನಾನು ಸುಬ್ಬುವನ್ನು ಪ್ರೀತಿಸಿದ್ದು ಅವನ ಮನಸ್ಸು ನೋಡಿ ಹೊರತು ಅಂತಸ್ತು ನೋಡಿ ಅಲ್ಲ. ಅಣ್ಣ ಕೂಡ ವರಲಕ್ಷ್ಮೀಯನ್ನು ಪ್ರೀತಿಸಿದ್ದು ಮನಸ್ಸು ನೋಡಿʼ ಎಂದು ಅಪ್ಪ-ಅಮ್ಮನಿಗೆ ಜೋರು ಮಾಡುತ್ತಾಳೆ, ಅಣ್ಣನ ಬಳಿ ನಾನು ನಿನ್ನ ಪ್ರೀತಿಗೆ ಸಹಾಯ ಮಾಡುತ್ತೇನೆ, ನೀನು ಹೆದರಬೇಡ ಎಂದು ಧೈರ್ಯ ಹೇಳುತ್ತಾಳೆ. ಇತ್ತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ವರಲಕ್ಷ್ಮೀಗೆ ಧೈರ್ಯ ತುಂಬುತ್ತಾನೆ ಸುಬ್ಬು.
ಸುಬ್ಬು ನೋವು ಏನೆಂದು ಶ್ರಾವಣಿಗೆ ತಿಳಿಯುತ್ತಾ?
ಶ್ರಾವಣಿಯನ್ನು ಆರೈಕೆ ಮಾಡುವಂತೆ ವಂದನಾ ಹೇಳಿ ಹೊರಡುತ್ತಾರೆ ವೀರೇಂದ್ರ. ವಂದನಾ ತಿಂಡಿ ಕೊಡಲು ಹೋದ್ರೆ ಶ್ರಾವಣಿ ತಿನ್ನುವುದಿಲ್ಲ. ಇದರಿಂದ ವ್ರತ ಭಂಗ ಆಗುತ್ತೆ ಅನ್ನುತ್ತಿರುತ್ತಾಳೆ. ಅಷ್ಟೊತ್ತಿಗೆ ಸುಬ್ಬು ಅಲ್ಲಿಗೆ ಬರುತ್ತಾನೆ. ಸುಬ್ಬು ಶ್ರಾವಣಿಗೆ ಏನೋ ಒಂದು ಹೇಳಿ ತಿಂಡಿ ತಿನ್ನುವಂತೆ ಮಾಡುತ್ತಾನೆ. ಅಷ್ಟೊತ್ತಿಗೆ ಪಿಂಕಿ ಸುಬ್ಬು ನಿಂಗೂ ಹುಷಾರಿಲ್ವಾ, ನೀನ್ಯಾಕೆ ಹೀಗಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಉತ್ತರಿಸುವ ಸುಬ್ಬು ʼನಂಗೇನು ಆಗಿಲ್ಲ ಪಿಂಕಿ, ನಾನು ಚೆನ್ನಾಗೇ ಇದೀನಿʼ ಎಂದು ಮುಖದ ಮೇಲೆ ನಗುವಿನ ಮುಖವಾಡ ಹಾಕಿ ಹೊರ ಹೋಗುತ್ತಾನೆ. ಆದರೆ ಶ್ರಾವಣಿಗೆ ಸುಬ್ಬುಗೆ ಏನೋ ಆಗಿದೆ ಎಂಬುದು ಅರ್ಥವಾಗುತ್ತದೆ.
ಸುಬ್ಬು ಮನದ ನೋವು ಏನು ಎಂಬುದನ್ನು ಶ್ರಾವಣಿ ಅರ್ಥ ಮಾಡಿಕೊಳ್ಳುತ್ತಾಳಾ, ವರಲಕ್ಷ್ಮೀ-ವರದ ಒಂದಾಗುತ್ತಾರಾ, ಶ್ರಾವಣಿಗೆ ನಿಜಕ್ಕೂ ಅಪ್ಪನ ಪ್ರೀತಿ ಸಿಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.